ಸಿಟಿ ಮಕ್ಕಳಿಗೆ ಹಳ್ಳಿ ಜೀವನದ ಅನುಭವ: ನವೆಂಬರ್ 1 ರಿಂದ ‘ಗ್ರಾಮಾನುಭವ’ ಯೋಜನೆಗೆ ಚಾಲನೆ!

Date:

ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಸಂಸ್ಕೃತಿ, ಕೃಷಿ ಮತ್ತು ನೈಜ ವಾತಾವರಣದ ಅನುಭವ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಗ್ರಾಮಾನುಭವ” ಯೋಜನೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಅಧಿಕೃತವಾಗಿ ಚಾಲನೆ ಸಿಗಲಿದೆ.

- Advertisement -

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8:00 ಗಂಟೆಗೆ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿನೂತನ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜಧಾನಿಯಲ್ಲಿ ಚಾಲನೆ ಸಿಗುತ್ತಿದ್ದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಯೋಜನೆಯ ವಿವರಗಳು ಹಾಗೂ ವೈಶಿಷ್ಟ್ಯಗಳು:-

  1. ನಗರ ಪ್ರದೇಶದ ಶಾಲೆಗಳಲ್ಲಿ 8, 9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

2. ಕೇವಲ ಪುಸ್ತಕದ ಕಲಿಕೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಗ್ರಾಮೀಣ ಸಮುದಾಯದ ಜೀವನಶೈಲಿಯನ್ನು ನೇರವಾಗಿ ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

3. ಶೈಕ್ಷಣಿಕ ಭೇಟಿಗಳ ಮೂಲಕ ವಿದ್ಯಾರ್ಥಿಗಳು ರೈತರು, ಸ್ಥಳೀಯ ಕುಶಲಕರ್ಮಿಗಳು, ಪಶುಸಂಗೋಪನೆದಾರರು ಹಾಗೂ ಗ್ರಾಮೀಣ ಉದ್ಯಮಿಗಳೊಂದಿಗೆ ನೇರ ಸಂವಾದ ನಡೆಸಿ, ಅವರ ಕಾರ್ಯವೈಖರಿಯನ್ನು ತಿಳಿದುಕೊಳ್ಳಲಿದ್ದಾರೆ.

4. ಮಕ್ಕಳಲ್ಲಿ ಶ್ರಮ, ರೈತರ ಬಗ್ಗೆ ಗೌರವ, ಸಾಂಪ್ರದಾಯಿಕ ಜ್ಞಾನ, ಸ್ಥಳೀಯ ಸಂಸ್ಕೃತಿ ಮತ್ತು ಸುಸ್ಥಿರ ಜೀವನಶೈಲಿಯ ಕುರಿತು ಅರಿವು ಮೂಡಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.

ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಹಳ್ಳಿಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯನ್ನು ಹೆಚ್ಚು ಅರ್ಥಪೂರ್ಣ ಮತ್ತು ಅನುಭವಾಧಾರಿತವಾಗಿಸಲು “ಗ್ರಾಮಾನುಭವ” ಯೋಜನೆ ಪೂರಕವಾಗಲಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಮಲನಗರ | ಗುಳೆ ಹೋಗಬೇಡಿ, ಊರಲ್ಲಿಯೇ ವಿಬಿ-ಜಿ ರಾಮ್‌ ಜಿ ಕೆಲಸ ಮಾಡಿ

ಕೂಲಿ ಕಾರ್ಮಿಕರು ಗುಳೆ ಹೋಗದೆ ತಮ್ಮ ಗ್ರಾಮದಲ್ಲಿಯೇ ವಿಬಿ-ಜಿ ರಾಮ್‌ ಜಿ...

ಶಿವಮೊಗ್ಗ | ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ; ಮನೆಗೆ ತೆರಳಿ ಅಭಿನಂದಿಸಿದ ಸಚಿವ ಮಧು ಬಂಗಾರಪ್ಪ

ಸರಳತೆ, ಜನಪರ ಕಾಳಜಿ ಮತ್ತು ಹೋರಾಟದ ಬದುಕಿನ ಪ್ರತೀಕವಾಗಿರುವ ಕಾಂಗ್ರೆಸ್‌ನ ಹಿರಿಯ...

ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ನ ‘ಕಾಯಿಸುವ ಧೋರಣೆ’ಗೆ ಆಕಾಶ್ ಚೋಪ್ರಾ ಕಿಡಿ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು...

ಈ ದಿನ ಸಂಪಾದಕೀಯ | ದಮನಕ್ಕೆ ಮಣಿಯದೆ ಪ್ರಜಾಪ್ರಭುತ್ವದ ಹಕ್ಕು ಗೆದ್ದ ಜಾಮಿಯಾ ಯುವಶಕ್ತಿ!

ಇಪ್ಪತ್ತು ವರ್ಷಗಳಿಂದ ಕಸಿದುಕೊಳ್ಳಲಾಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯ ಹಕ್ಕನ್ನು ಮರಳಿ ಪಡೆಯಲು...