ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ 24 ಗಂಟೆಗಳ ಗಡುವು; ಇಲ್ಲದಿದ್ದರೆ ಗಾಂಧಿ ಜಯಂತಿಯಂದು ರಾಷ್ಟ್ರವ್ಯಾಪಿ ಪ್ರತಿಭಟನೆ

Date:

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಮುಂದಿನ 24 ಗಂಟೆಗಳ ಒಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮುಂಬೈನಿಂದ ಆರಂಭಿಸಿ ದೇಶಾದ್ಯಂತ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಗಡುವು ನೀಡಿದೆ.

- Advertisement -

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಗ್ಯಾನೇಶ್ ಕುಮಾರ್ ನಾಳೆಯೊಳಗೆ (24 ಗಂಟೆಗಳಲ್ಲಿ) ರಾಜೀನಾಮೆ ನೀಡದಿದ್ದರೆ, ಸಿಜೆಪಿ ಅಕ್ಟೋಬರ್ 2ರಿಂದ ಮುಂಬೈನಿಂದ ತನ್ನ ದೇಶವ್ಯಾಪಿ ಪ್ರತಿಭಟನೆಯನ್ನು ಪ್ರಾರಂಭಿಸಲಿದೆ ಮತ್ತು ಅದನ್ನು ದೇಶಾದ್ಯಂತ ವಿವಿಧ ನಗರಗಳಿಗೆ ವಿಸ್ತರಿಸಲಿದೆ. ಈ ಗಾಂಧಿ ಜಯಂತಿಯಂದು ದೇಶವನ್ನು ಮರಳಿ ಪಡೆಯೋಣ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರತಿಜ್ಞೆ ಮಾಡೋಣ” ಎಂದು ಕರೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್‌; ಸ್ವಾಗತಕ್ಕೆ ಖುದ್ದು...

ಬರೋಬ್ಬರಿ 11 ವರ್ಷಗಳ ಬಳಿಕ ಅಮೆರಿಕಕ್ಕೆ ಕಾಲಿಟ್ಟಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಖುದ್ದು ತೆರಳಿ ಸ್ವಾಗತಿಸಿದ ಟ್ರಂಪ್‌, ಶ್ವೇತಭವನದಲ್ಲಿ ಅದ್ದೂರಿ ಸರ್ಕಾರಿ ಔತಣ ಆಯೋಜಿಸಿದ್ದಾರೆ. AI, ಅತ್ಯಾಧುನಿಕ ಚಿಪ್‌ಗಳು, ರೇರ್‌...

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಇದನ್ನೂ ಓದಿ: ಏಕಪಕ್ಷೀಯ ನಿರ್ಧಾರ; ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಬಿ ಕೆ ಹರಿಪ್ರಸಾದ್ ಆಗ್ರಹ: ನಾಳೆ ಪ್ರತಿಭಟನೆ

ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಜೆಪಿ ಈ ರಾಜೀನಾಮೆಗೆ ಪಟ್ಟು ಹಿಡಿದಿದೆ.

ಆಯೋಗದ ನಿರ್ಧಾರಗಳ ಬಗ್ಗೆ ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳ ತನಿಖಾ ವರದಿಗಳನ್ನು ಉಲ್ಲೇಖಿಸಿ ಸಿಜೆಪಿ ಆರೋಪಿಸಿದೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸುಮಾರು 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಿಜೆಪಿ ಆರೋಪಿಸಿದೆ. ಈ ಮೂಲಕ ಪ್ರಜೆಗಳ ಮೂಲಭೂತ ಹಕ್ಕಾದ ‘ಮತದಾನದ ಹಕ್ಕು’ ಕಸಿಯಲಾಗುತ್ತಿದೆ ಎಂದು ಹೇಳಿದೆ.

ಆನ್‌ಲೈನ್‌ನಲ್ಲಿ ಫಾರ್ಮ್ 6 ಸಲ್ಲಿಸುವಾಗ ಹೊಸ ಮತದಾರರಿಗೆ ಅನಗತ್ಯ ಮತ್ತು ಕಠಿಣ ಸಾಕ್ಷ್ಯಾಧಾರಗಳ ನಿಬಂಧನೆಗಳನ್ನು ಹೇರುವ ಮೂಲಕ ಮೊದಲ ಬಾರಿಗೆ ಮತದಾನ ಮಾಡುವವರನ್ನು ಹೊರಗಿಡಲಾಗುತ್ತಿದೆ ಎಂಬುದು ಸಿಜೆಪಿ ಆರೋಪವಾಗಿದೆ.

“ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮಗಳ ಕುರಿತು ಸ್ವತಂತ್ರ ಹಾಗೂ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯಾಗಬೇಕು. ಚುನಾವಣಾ ಆಯುಕ್ತರ ನೇಮಕಾತಿ ಕುರಿತಾದ 2023ರ ಕಾಯಿದೆಯನ್ನು ರದ್ದುಗೊಳಿಸಿ, ನಾಗರಿಕ ಸಮಾಜವನ್ನು ಒಳಗೊಂಡ ಹೊಸ ಕಾಯಿದೆ ತರಬೇಕು” ಎಂದು ಸಿಜೆಪಿ ಆಗ್ರಹಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

OBC ಕೆನೆಪದರ ನೀತಿ ರೂಪಿಸಲು ಕಾಲಾವಕಾಶ ಕೇಳಿದ ಕೇಂದ್ರ; ತೀರ್ಪು ಕಾಯ್ದಿರಿಸಿ ಸುಪ್ರೀಂ

OBC ಕ್ರೀಮಿ ಲೇಯರ್‌ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾರ್ಚ್‌ 11ರಂದು ನೀಡಿದ್ದ ತೀರ್ಪನ್ನು...

ಮೀಸಲಾತಿ ದೇಶಕ್ಕೆ ಅತ್ಯಗತ್ಯ, ಅದು ಮುಂದುವರಿಯಲೇಬೇಕು: ಎಬಿವಿಪಿ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸಿಂಗ್ ಸೋಲಂಕಿ

ಸಂವಿಧಾನ ಒದಗಿಸಿರುವ ಮೀಸಲಾತಿ ವ್ಯವಸ್ಥೆಯು ಭಾರತದಂತಹ ದೇಶಕ್ಕೆ ಅತ್ಯಗತ್ಯವಾಗಿದ್ದು, ಅದು ಖಂಡಿತವಾಗಿಯೂ...

ಗುಳೇದಗುಡ್ಡ | ಎರಡು ತಿಂಗಳಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕು ಕೇಂದ್ರವಾಗಿರುವ ಗುಳೇದಗುಡ್ಡದಲ್ಲಿ ತುರ್ತು ಚಿಕಿತ್ಸೆಗೆ ಪ್ರಮುಖ...

ಐಹೊಳೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು; ಆರು ಮಂದಿ ಗಾಯ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಐಹೊಳೆ ಗ್ರಾಮದಲ್ಲಿ ಗುರುವಾರ ಸಂಜೆ ಕೃಷಿ...