ಭಾರತದಲ್ಲಿ ಡಿಗ್ರಿ ಸರ್ಟಿಫಿಕೇಟ್‌ಗಳು ಕೇವಲ ಕಾಗದದ ಚೂರು: ರಾಹುಲ್ ಗಾಂಧಿ ಕಳವಳ

Date:

ಭಾರತದಲ್ಲಿಂದು ಉದ್ಯೋಗ ಸಿಗದ ಕಾರಣ ಪದವಿ ಪ್ರಮಾಣಪತ್ರಗಳಿಗೆ ಯಾವುದೇ ಬೆಲೆಯಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಇಂದು(ಆ.8) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ‘ಛಾತ್ರೋನ್ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

​ದೇಶದ 40 ಕೋಟಿ ಯುವಜನತೆ ಭಾರತದ ಅತಿದೊಡ್ಡ ಶಕ್ತಿ. ಅಮೆರಿಕ, ಚೀನಾ ಮತ್ತು ರಷ್ಯಾದ ಬಗ್ಗೆ ಜಾಗತಿಕವಾಗಿ ಸಾಕಷ್ಟು ಚರ್ಚೆಗಳಾಗುತ್ತವೆ. ಆದರೆ ಭಾರತದ ಯುವಜನತೆಗೆ ಜಗತ್ತಿನಲ್ಲಿ ಯಾರೂ ಸಾಟಿಯಿಲ್ಲ ಎಂದು ರಾಹುಲ್ ಬಣ್ಣಿಸಿದರು. “ಇಂದು ನಾನು ನಿಮ್ಮೊಂದಿಗೆ ದರ್ದ್ (ನೋವು), ಡೇಟಾ ಮತ್ತು ದೌಲತ್ (ಸಂಪತ್ತು) ಬಗ್ಗೆ ಮಾತನಾಡಲು ಬಯಸುತ್ತೇನೆ. ಡೇಟಾ ನಿಮ್ಮದು, ನೋವು ನಿಮ್ಮದು, ಆದರೆ ಸಂಪತ್ತು ಮಾತ್ರ ದೊಡ್ಡವರದು (ಕಾರ್ಪೊರೇಟ್‌ಗಳದ್ದು)” ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

​ದೇಶದಲ್ಲಿ ಶಿಕ್ಷಣದ ಮೌಲ್ಯ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಭಾರತದಲ್ಲಿಂದು ಉದ್ಯೋಗದ ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ಪದವಿ ಪ್ರಮಾಣಪತ್ರಗಳಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ. ಜನರ ಡೇಟಾವನ್ನು ಕಸಿದುಕೊಂಡು ದೊಡ್ಡ ಕಂಪನಿಗಳ ಪಾಲು ಮಾಡಲಾಗುತ್ತಿದೆ. ಯುವಕರಿಗೆ ಕೇವಲ ಕಂಟೆಂಟ್ ಹಾಗೂ ‘ರೀಲ್ಸ್’ ಮಾಡಲು ಹೇಳಲಾಗುತ್ತಿದೆ. ರೀಲ್ಸ್ ಎಂಬುದು 21ನೇ ಶತಮಾನದ ಹೊಸ ಚಟವಾಗಿದೆ ಎಂದು ಅವರು ಎಚ್ಚರಿಸಿದರು.

​”ಯುವಜನತೆಗೆ ಬ್ಲಿಂಕಿಟ್ ಹಾಗೂ ಉಬರ್‌ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಲು, ಕೂಲಿ ಮಾಡಲು ಮತ್ತು ರೀಲ್ಸ್ ಮಾಡಲು ಹೇಳಲಾಗುತ್ತಿದೆಯೇ ಹೊರತು, ಈ ದೇಶದಲ್ಲಿ ಅವರಿಗೆ ಸೂಕ್ತ ಉದ್ಯೋಗವಂತೂ ಸಿಗುತ್ತಿಲ್ಲ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಕಾರ್ಯಕ್ರಮ ನಡೆದ ಕಾಯಸ್ಥ ಪಾಠಶಾಲೆ (ಕೆಪಿ) ಮೈದಾನ ಸಂಪೂರ್ಣ ಜಲಾವೃತವಾಗಿ ಕೆಸರುಮಯವಾಗಿತ್ತು. ಆದರೂ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಜಮಾಯಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಬಕೆಟ್, ಜೆಸಿಬಿ ಹಾಗೂ ರೋಡ್ ರೋಲರ್ ಬಳಸಿ ಮೈದಾನದ ನೀರನ್ನು ಹೊರಹಾಕಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.

​ನಿರುದ್ಯೋಗ, ನೇಮಕಾತಿ ಪ್ರಕ್ರಿಯೆಗಳಲ್ಲಿನ ವಿಳಂಬ, ಪರೀಕ್ಷಾ ಪತ್ರಿಕೆ ಸೋರಿಕೆ (ಪೇಪರ್ ಲೀಕ್) ಮತ್ತು ವ್ಯವಸ್ಥೆಯಲ್ಲಿನ ಹೊಣೆಗಾರಿಕೆಯ ಕೊರತೆಯಿಂದ ಬೇಸತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ರಾಹುಲ್ ಗಾಂಧಿ ಈ ಭೇಟಿ ಕೈಗೊಂಡಿದ್ದರು. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯುವಕರು ಕಷ್ಟಪಟ್ಟು ಓದುತ್ತಿದ್ದಾರೆ, ಆದರೆ ದೋಷಪೂರಿತ ವ್ಯವಸ್ಥೆ ಅವರನ್ನು ಕೈಬಿಡುತ್ತಿದೆ ಎಂದು ರಾಹುಲ್ ಕಿಡಿಕಾರಿದರು. ಇದಕ್ಕೂ ಮುನ್ನ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಸಂಸದ ಉಜ್ವಲ್ ರಮಣ್ ಸಿಂಗ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ‘ಏಕವ್ಯಕ್ತಿ ಸರ್ವಾಧಿಕಾರಿ’: ಮುಖ್ಯ ಚುನಾವಣೆ ಆಯುಕ್ತರ ವಜಾಕ್ಕೆ ವಿಪಕ್ಷಗಳ ಆಗ್ರಹ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ...

ಕೊಪ್ಪಳ | ಡಿಜೆ, ಪಟಾಕಿಗೆ ಗುಡ್‌ ಬೈ: ರಸ್ತೆ, ಬಾವಿ, ಶಾಲೆ ಅಂದಗೊಳಿಸಿದ ಗಣೇಶ ಮಂಡಳಿ ಯುವಕರು!

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಎಂದಾಕ್ಷಣ ಡಿಜೆ ಸದ್ದು, ಪಟಾಕಿಗಳ...

ಚುನಾವಣಾ ಆಯುಕ್ತರ ನೇಮಕ ಕಾಯ್ದೆ: ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕುರಿತು ಸುಪ್ರೀಂ ಭಿನ್ನಮತದ ತೀರ್ಪು

ಚುನಾವಣಾ ಆಯುಕ್ತರ ನೇಮಕ ಕಾಯ್ದೆ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ...

ವಿಜಯಪುರ | ಬರ ಘೋಷಣೆ ಮಾಡದ್ದಕ್ಕೆ ಅಸಮಾಧಾನ: ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ...