ಸುದ್ದಿ ನೋಡಿದ ತಕ್ಷಣ ಪಿಐಎಲ್ ಹಾಕ್ತೀರಾ? – ನಕಲಿ ವೈದ್ಯಕೀಯ ಪದವಿ ಕುರಿತ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Date:

ದೇಶದಲ್ಲಿ ಚರ್ಚೆಯಾಗುವ ಸುದ್ದಿಗಳ ಆಧಾರದ ನಿಯಮಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಸಲ್ಲಿಸುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಕಲಿ ಹಾಗೂ ತಿದ್ದುಪಡಿ ಮಾಡಿದ ವೈದ್ಯಕೀಯ ಪದವಿಗಳ ಹಾವಳಿ ತಡೆಯಲು ಮತ್ತು ವೈದ್ಯರ ನೋಂದಣಿ ಪ್ರಕ್ರಿಯೆಯ ಆಡಿಟ್ ಮಾಡಲು ಸ್ವತಂತ್ರ ಸಮಿತಿ ರಚಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

- Advertisement -

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಆಲೋಕ್ ಅರಾಧೆ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರ ವಕೀಲ ನರೇಂದ್ರ ಕುಮಾರ್ ಗೋಸ್ವಾಮಿ ಅವರು ತಾವೇ ಸ್ವತಃ ವಾದ ಮಂಡಿಸುತ್ತಾ, “ದೇಶದಲ್ಲಿ ಪ್ರತಿ ನಾಲ್ವರು ವೈದ್ಯರಲ್ಲಿ ಒಬ್ಬರು ನಕಲಿ ಅಥವಾ ತಿದ್ದುಪಡಿ ಮಾಡಿದ ಪದವಿ ಹೊಂದಿದ್ದಾರೆ. ಇದು ರೋಗಿಗಳ ಪ್ರಾಣ ಹಾಗೂ ಸುರಕ್ಷತೆಯ ಮೇಲಿನ ದಾಳಿಯಾಗಿದೆ” ಎಂದು ಸುಪ್ರೀಂ ಕೋರ್ಟ್‌ಗೆ ಅಂಕಿ-ಅಂಶಗಳನ್ನು ನೀಡಲು ಯತ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು...

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ...

ಬಿಆರ್ ಚೋಪ್ರಾ ʼಮಹಾಭಾರತʼಕ್ಕೆ ಜೀವ ನೀಡಿದ್ದ ಮುಸ್ಲಿಂ ಪಂಡಿತ:...

ಇಂದು ಡಾ. ರಾಹೀ ಮಾಸೂಮ್ ರೇಜಾ ಅವರ ನೂರನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ನಾವು ಕೇವಲ ಒಬ್ಬ ಮಹಾನ್ ಲೇಖಕರನ್ನು ನೆನಪಿಸಿಕೊಳ್ಳುತ್ತಿಲ್ಲ; ಬದಲಿಗೆ ಭಾರತೀಯ ಸಮಾಜಕ್ಕೆ ಅತ್ಯಗತ್ಯವಾಗಿರುವ ಸಹಬಾಳ್ವೆಯ ಮೌಲ್ಯಗಳನ್ನು ಪುನರುಚ್ಚರಿಸಿಕೊಳ್ಳುತ್ತಿದ್ದೇವೆ. ಮಹಾಭಾರತ...

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ...

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ...

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮತ್ತೊಬ್ಬ ‘ನಕಲಿ ವೈದ್ಯ’ ಪತ್ತೆ; ಬಿಜೆಪಿ ವೈದ್ಯಕೀಯ ಸೆಲ್‌ನಲ್ಲಿದ್ದ ಆರೋಪಿ

ಆದಾಗ್ಯೂ ಅರ್ಜಿದಾರರ ಈ ವಾದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು, “ನೀವು ಪ್ರತಿ ವಾರಕ್ಕೊಂದು ಪಿಐಎಲ್ ಸಲ್ಲಿಸುತ್ತಿದ್ದೀರಿ. ಇದನ್ನು ನೀವು ಒಂದು ರೀತಿಯ ಫ್ಯಾಕ್ಟರಿ ಮಾಡಿಬಿಟ್ಟಿದ್ದೀರಾ? ಅರ್ಜಿಯಲ್ಲಿ ನೀವು ಕೋರಿರುವ ಪರಿಹಾರಗಳ ಕುರಿತು ಎಂದಾದರೂ ಯೋಚಿಸಿದ್ದೀರಾ? ಪ್ರಚಾರ ಅಥವಾ ಜನಪ್ರಿಯತೆ ಪಡೆಯಲು ರಿಟ್ ಅರ್ಜಿಗಳನ್ನು ಸಲ್ಲಿಸುವುದು ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರಾ? ಸುದ್ದಿ ನೋಡಿದ ತಕ್ಷಣ ಅರ್ಜಿ ಡ್ರಾಫ್ಟ್ ಮಾಡಿ ನ್ಯಾಯಾಲಯದ ಮುಂದೆ ತರಬೇಡಿ. ಇಂತಹ ಅರ್ಜಿಗಳಿಂದ ಕೋರ್ಟ್‌ಗೆ ಹೊರೆಯಾಗಿಸಬೇಡಿ” ಎಂದು ಹೇಳಿದರು.

ಅರ್ಜಿದಾರರು ಈ ಹಿಂದೆ ಫೆಬ್ರವರಿ ಹಾಗೂ ಮೇ ತಿಂಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿಸಿದರಾದರೂ, ಅರ್ಜಿ ಸಲ್ಲಿಕೆಯ ಸ್ವರೂಪ ಮತ್ತು ಉದ್ದೇಶವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಅದನ್ನು ವಜಾಗೊಳಿಸಿ ಆದೇಶಿಸಿತು.

ದೇಶದಲ್ಲಿ ನಕಲಿ ವೈದ್ಯರು, ನಕಲಿ ಪ್ರಮಾಣಪತ್ರಗಳು ಮತ್ತು ತಿದ್ದುಪಡಿ ಮಾಡಿದ ವೈದ್ಯಕೀಯ ಪದವಿಗಳ ಹಾವಳಿ

ದೇಶದಲ್ಲಿ ನಕಲಿ ವೈದ್ಯರು, ನಕಲಿ ಪ್ರಮಾಣಪತ್ರಗಳು ಮತ್ತು ತಿದ್ದುಪಡಿ ಮಾಡಿದ ವೈದ್ಯಕೀಯ ಪದವಿಗಳ ಹಾವಳಿ ಹೆಚ್ಚುತ್ತಿರುವ ಕುರಿತು ಈ ಹಿಂದೆ ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ವರ್ಷದ ಜೂನ್‌ನಲ್ಲಿ ಮಧ್ಯಪ್ರದೇಶದ ‘ಸಂಜೀವನಿ ಕ್ಲಿನಿಕ್’ ಹಾಗೂ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಇತರ ವೈದ್ಯರ ನೋಂದಣಿ ಸಂಖ್ಯೆಯನ್ನು ತಿದ್ದುಪಡಿ ಮಾಡಿ, 8 ರಿಂದ 10 ಲಕ್ಷ ರೂಪಾಯಿಗೆ ನಕಲಿ MBBS ಪದವಿ ಖರೀದಿಸಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದರು. ತನಿಖೆಯ ವೇಳೆ ನಕಲಿ ದಾಖಲೆ ಸೃಷ್ಟಿಸಿ ತಿಂಗಳಿಗೆ 70,000 ರಿಂದ 80,000 ರೂ. ಸಂಬಳ ಪಡೆಯುತ್ತಿದ್ದವರನ್ನು ಬಂಧಿಸಲಾಗಿದ್ದು, ರಾಜ್ಯದ 2,000ಕ್ಕೂ ಹೆಚ್ಚು ಒಪ್ಪಂದ ಆಧಾರಿತ ವೈದ್ಯರ ದಾಖಲೆಗಳ ಮರು-ಪರಿಶೀಲನೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿ : ನಕಲಿ ವೈದ್ಯ ವಿಧ್ಯಾರ್ಥಿನಿಯಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇನ್ನು ಉತ್ತರ ಪ್ರದೇಶದಲ್ಲಿ ವಿಶೇಷ ಕಾರ್ಯಪಡೆ ಹಾಪೂಡ್‌ನ ‘ಮೊನಾಡ್ ಯುನಿವರ್ಸಿಟಿ’ ಮೇಲೆ ದಾಳಿ ನಡೆಸಿದಾಗ 1,300ಕ್ಕೂ ಹೆಚ್ಚು ನಕಲಿ ಪದವಿ ಹಾಗೂ 260ಕ್ಕೂ ಹೆಚ್ಚು ನಕಲಿ ಪ್ರಮಾಣಪತ್ರಗಳು ಸಿಕ್ಕಿಬಿದ್ದಿದ್ದವು. 2024ರಲ್ಲಿ ಸೂರತ್ ಪೊಲೀಸರು ಸುಮಾರು 20 ವರ್ಷಗಳಿಂದ ಸಕ್ರಿಯವಾಗಿದ್ದ ಜಾಲವನ್ನು ಭೇದಿಸಿದ್ದರು. 1,500ಕ್ಕೂ ಹೆಚ್ಚು ಅನರ್ಹ ವ್ಯಕ್ತಿಗಳಿಗೆ ತಲಾ 75,000 ರೂ.ಗೆ ನಕಲಿ ಮೆಡಿಕಲ್ ಸರ್ಟಿಫಿಕೇಟ್ (BEMS) ನೀಡಿ ವಂಚಿಸಿರುವುದನ್ನು ಪತ್ತೆಹಚ್ಚಿದ್ದರು.

ಇನ್ನು 2023ರಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯ್ದೆ’ ಅಡಿಯಲ್ಲಿ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ, ಅಗತ್ಯ ಅರ್ಹತೆ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದ 1,436 (ಸುಮಾರು 1,500) ನಕಲಿ ವೈದ್ಯರು ಹಾಗೂ ಅವರ ಕ್ಲಿನಿಕ್/ಲ್ಯಾಬ್‌ಗಳನ್ನು ಸೀಲ್ ಮಾಡಿತ್ತು. ಇವರಲ್ಲಿ ಹೆಚ್ಚಿನವರು ಹೊರರಾಜ್ಯಗಳ ನಕಲಿ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ (Correspondence) ಕೋರ್ಸ್ ಮೂಲಕ ನಕಲಿ ಪದವಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದರು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಕೊನೆಯ ಗಳಿಗೆಯ ಪ್ರಯೋಗಗಳು ಅಪಾಯಕಾರಿ’: ಟೀಮ್ ಇಂಡಿಯಾಗೆ ಯುವರಾಜ್ ಸಿಂಗ್ ಸಲಹೆ

ಮುಂಬರುವ 2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್ ತಂಡದಲ್ಲಿ...

ಅರಬ್ಬಿ ಸಮುದ್ರದಲ್ಲಿ ಭಾರತ-ಪಾಕ್ ನೌಕಾಪಡೆ ನೌಕೆಗಳ ಡಿಕ್ಕಿ: ಪಾಕಿಸ್ತಾನ ನಡವಳಿಕೆಗೆ ವಿದೇಶಾಂಗ ಸಚಿವಾಲಯ ಆಕ್ಷೇಪ

ಅಂತಾರಾಷ್ಟ್ರೀಯ ಜಲಪ್ರದೇಶವಾದ ಉತ್ತರ ಅರಬ್ಬಿ ಸಮುದ್ರದಲ್ಲಿ ಗಸ್ತು ಕಾರ್ಯದಲ್ಲಿದ್ದ ಭಾರತೀಯ ನೌಕಾಪಡೆಯ...

ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ಪುತ್ರಿಗೆ ನಕಲಿ ದಾಖಲೆ ನೀಡಿದ್ದ ಕಂದಾಯ ಅಧಿಕಾರಿಯ ಜಾಮೀನು ಅರ್ಜಿ ವಜಾ

ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿಗೆ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ...

ನಕಲಿ ಹಕ್ಕುಪತ್ರ ತಡೆಗೆ ಕ್ರಮ; ಮಾಲೀಕರ ಫೋಟೋವುಳ್ಳ ‘RTC’ ಜಾರಿಗೆ ಸರ್ಕಾರ ನಿರ್ಧಾರ!

ರಾಜ್ಯದ ಭೂ ಮಾಲೀಕರು ಮತ್ತು ರೈತರಿಗೆ ಭೂಮಿಯ ಹಕ್ಕುಸ್ವಾಮ್ಯ ಮತ್ತು ಮಾಲೀಕತ್ವದ...