ಸೇವಾ ಅವಧಿಯಲ್ಲಾದ ದೈಹಿಕ ಸಮಸ್ಯೆಯು ‘ಸೇವಾ ಸಂಬಂಧಿ’ ಎಂದೇ ಪರಿಗಣಿತ: ಸುಪ್ರೀಂ ಕೋರ್ಟ್

Date:

ಸೇನಾ ಪಡೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಯಾವುದೇ ದೈಹಿಕ ಅಥವಾ ಮಾನಸಿಕ ಅನಾರೋಗ್ಯ ದಾಖಲಾಗಿರದಿದ್ದರೆ, ತದನಂತರದ ಅವಧಿಯಲ್ಲಿ ಎದುರಾಗುವ ವೈಕಲ್ಯ ಅಥವಾ ಅನಾರೋಗ್ಯವನ್ನು ‘ಸೇವಾ ಸಂಬಂಧಿ’ ಎಂದೇ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಯೋಧರಿಗೆ ವೈಕಲ್ಯ ಪಿಂಚಣಿ ನಿರಾಕರಿಸುವ ರಕ್ಷಣಾ ಸಚಿವಾಲಯದ ಧೋರಣೆಯನ್ನು ನ್ಯಾಯಾಲಯ ಕಟು ಶಬ್ದಗಳಲ್ಲಿ ಟೀಕಿಸಿದೆ.

- Advertisement -

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಪಿ. ಎಸ್ ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿದೆ. “ಯೋಧರು ಸೇವೆಗೆ ಸೇರುವಾಗ ಸಂಪೂರ್ಣ ಆರೋಗ್ಯವಂತರಾಗಿದ್ದರು ಎಂಬುದನ್ನು ಕಾನೂನುಬದ್ಧವಾಗಿ ಗ್ರಹಿಸಬೇಕು. ಒಂದು ವೇಳೆ, ಅವರ ವೈಕಲ್ಯವು ಸೇವಾ ವಾತಾವರಣದಿಂದ ಉಂಟಾಗಿದ್ದಲ್ಲ ಎಂದು ವಾದಿಸುವುದಾದರೆ, ಅದನ್ನು ಸಾಬೀತುಪಡಿಸುವ ಸಂಪೂರ್ಣ ಹೊಣೆಗಾರಿಕೆ ಉದ್ಯೋಗದಾತರ ಮೇಲಿದೆಯೇ ಹೊರತು, ಯೋಧರು ತಮ್ಮ ಹಕ್ಕನ್ನು ಸಾಬೀತುಪಡಿಸಲು ಅಲೆಯಬೇಕಿಲ್ಲ” ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ...

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ...

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

“ಎಂಟೈಟಲ್‌ಮೆಂಟ್ ನಿಯಮಗಳು-2008ರ ಅಡಿಯಲ್ಲಿ ಸೇನಾ ಸಿಬ್ಬಂದಿಯ ಹಕ್ಕುಗಳನ್ನು ರಕ್ಷಿಸುವ ನಿಯಮಗಳು ಯಥಾವತ್ತಾಗಿರುತ್ತವೆ. ವೈದ್ಯಕೀಯ ಮಂಡಳಿಯ ಶಿಫಾರಸುಗಳನ್ನು ಯಾಂತ್ರಿಕವಾಗಿ ತಿರಸ್ಕರಿಸುವ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ನಿವೃತ್ತ ಯೋಧರ ನ್ಯಾಯಯುತ ಹಕ್ಕುಗಳ ವಿಚಾರದಲ್ಲಿ ಯಾವುದೇ ಅಪಾರದರ್ಶಕತೆ ಅಥವಾ ಅನುಮಾನಗಳಿಗೆ ಆಸ್ಪದವಿರಬಾರದು” ಎಂದು ಆಡಳಿತ ವ್ಯವಸ್ಥೆಗೆ ಆದೇಶಿಸಿದೆ.

ವೈಕಲ್ಯ ಪಿಂಚಣಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಸಲ್ಲಿಸಿದ್ದ ನೂರಾರು ಅರ್ಜಿಗಳನ್ನು ಕಾಲಮಿತಿ ಮತ್ತು ವಿಚಾರಣಾರ್ಹತೆಯ ಆಧಾರದ ಮೇಲೆ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, “2015ರ ರಕ್ಷಣಾ ಸಚಿವಾಲಯದ ವರದಿಯ ಶಿಫಾರಸಿನಂತೆ ಯೋಧರ ವಿರುದ್ಧ ಸಲ್ಲಿಸಲಾಗಿರುವ ಅನಗತ್ಯ ಮೇಲ್ಮನವಿಗಳನ್ನು ವಾಪಸ್ ಪಡೆಯಬೇಕು” ಎಂದು ಸೂಚಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎನ್‌ಡಿಎ ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ಯತ್ನಕ್ಕೆ ಮೈತ್ರಿ ಪಕ್ಷಗಳಲ್ಲಿ ತೀವ್ರ ವಿರೋಧ

​ಮುಂಬರುವ 2029ರ ಲೋಕಸಭಾ ಚುನಾವಣೆಯೊಳಗೆ ದೇಶದ 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ...

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ...

ಬಾಗಲಕೋಟೆ | ಕುರಿ ಸಂಗೋಪನೆ ಸಂಘಗಳಿಗೂ ಶೂನ್ಯ ಬಡ್ಡಿದರ ಸಾಲಕ್ಕೆ ಆಗ್ರಹ

ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಸೇರಿದಂತೆ...

ಜಾಗತಿಕ ತೈಲ ಸಂಕಟ: ಪಾಕ್‌ನಲ್ಲಿ ಇಂಧನ ಅಭಾವ; ಭಾರತಕ್ಕೂ ಎಚ್ಚರಿಕೆ ಗಂಟೆ

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧ ವಾತಾವರಣ ಮತ್ತು ಜಾಗತಿಕ ಇಂಧನ ಪೂರೈಕೆಯಲ್ಲಿ...