‘ಹಸಿವಾಗಿದೆಯೆ ಎಂದು ಕೇಳಿದರೆ ನಾನು ಹೌದು ಎನ್ನುತ್ತೇನೆ’ ಭಾರತದ ಹಸಿವು ಸೂಚ್ಯಂಕದ ಬಗ್ಗೆ ಅಣಕವಾಡಿದ ಸ್ಮೃತಿ ಇರಾನಿ

Date:

ಭಾರತದ ಹಸಿವು ಸೂಚ್ಯಂಕದ ವರದಿಯ ಬಗ್ಗೆ ಅಣಕ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಇತ್ತೀಚಿಗೆ ಹೈದರಾಬಾದಿನಲ್ಲಿ ಎಫ್‌ಐಸಿಸಿಐ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸ್ಮೃತಿ ಇರಾನಿ, ಜಾಗತಿಕ ಸೂಚ್ಯಂಕ ವರದಿಯ ಮಾನದಂಡಗಳ ಬಗ್ಗೆ ಪ್ರಶ್ನಿಸಿದ್ದರು. ಭಾರತದ ಬಗ್ಗೆ ಜಾಗತಿಕ ಹಸಿವು ಸೂಚ್ಯಂಕ ನೀಡಿದ ವರದಿಗಳು ಉದ್ದೇಶಪೂರ್ವಕವಾಗಿ ಸುಳ್ಳಾಗಿದೆ. ಇದು ಭಾರತದ ಪ್ರಗತಿಯನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ಮೃತಿ ಇರಾನಿ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. “ಡಬ್ಲ್ಯೂಎಚ್‌ಎಚ್‌ ಸಂಸ್ಥೆ ಹಸಿವು ಸೂಚ್ಯಂಕವನ್ನು ಹೇಗೆ ತಯಾರಿಸುತ್ತದೆ? 140 ಕೋಟಿ ಜನಸಂಖ್ಯೆಯ ದೇಶದಲ್ಲಿ 30,000 ಜನರಿಗೆ ಫೋನ್ ಕರೆ ಮೂಲಕ ‘ಹಸಿದಿದೆಯೇ’ ಎಂದು ಕೇಳಿ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಈಗ ನನ್ನ ಬಗ್ಗೆಯೆ ನಂಬಿ, ನಾನು ದೆಹಲಿಯಲ್ಲಿರುವ ನನ್ನ ಮನೆಯಿಂದ ಬೆಳಗ್ಗೆ 4 ಗಂಟೆಗೆ ಹೊರಟಿದ್ದೇನೆ. ನಾನು ಕೊಚ್ಚಿಗೆ ಹೋಗಲು 5 ​​ಗಂಟೆಗೆ ವಿಮಾನವನ್ನು ಹಿಡಿಯುತ್ತೇನೆ. ವಿಮಾನದಿಂದ ಊಟದ ಸಮಯಕ್ಕೆ ಬರುವಷ್ಟರಲ್ಲಿ 10 ಗಂಟೆ ಆಗಿರುತ್ತದೆ. ನೀವು ಈ ದಿನದ ಯಾವುದೇ ಸಮಯದಲ್ಲಿ ನನಗೆ ಕರೆ ಮಾಡಿ ನಿಮಗೆ ಹಸಿವಾಗಿದೆಯೇ ಎಂದು ಕೇಳಿದರೆ, ನಾನು ಹೌದು, ಎಂದು ಹೇಳುತ್ತೇನೆ” ಎಂದು ಸೂಚ್ಯಂಕದ ಬಗ್ಗೆ ತಮಾಷೆ ಮಾಡಿದ್ದರು.

ಏತನ್ಮಧ್ಯೆ, ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ, ಇರಾನಿ ಅವರ ಹೇಳಿಕೆಗಳ ಬಗ್ಗೆ ವಾಗ್ದಾಳಿ ನಡೆಸಿ, “ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನೆಂದು ನನಗೆ ತಿಳಿದಿಲ್ಲ. ನಿಮ್ಮ ಅಜ್ಞಾನದ ಮಟ್ಟ ಅಥವಾ ನಿಮ್ಮ ಸಂವೇದನಾಶೀಲತೆಯನ್ನು ಸಭೆಯೊಂದರಲ್ಲಿ ಪ್ರದರ್ಶಿಸುತ್ತಿದ್ದೀರಾ? ನೀವು ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವುದಕ್ಕೆ ನಾಚಿಕೆಯಾಗಬೇಕು. ನಿಮ್ಮ ಮಾತುಗಳನ್ನು ಕೇಳಲು ಅಸಹ್ಯವಾಗುತ್ತದೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜಾಗತಿಕ ಹಸಿವು ಸೂಚ್ಯಂಕ | ಹಸಿದವರ ದೇಶವಾದ ಭಾರತ; ಪಾಕಿಸ್ತಾನಕ್ಕಿಂತ ಕೆಳಕ್ಕೆ ಕುಸಿತ

“ಮಾನ್ಯ ಸಚಿವರೆ, ದೇಶದ ಹಸಿವು ಸೂಚ್ಯಂಕವನ್ನು ಅಪೌಷ್ಟಿಕತೆ, ಮಕ್ಕಳ ಬೆಳವಣೆಗೆ ಕುಂಠಿತ, ಶಿಶುವಿನ ಮರಣ ಪ್ರಮಾಣ ಮುಂತಾದ ಅಂಶಗಳಿಂದ ನಿರ್ಧರಿಸಲಾಗಿದೆ. ದಯವಿಟ್ಟು ಹಸಿವಿನ ಬಗ್ಗೆ ಅಪಹಾಸ್ಯ ಮಾಡಬೇಡಿ. ನೀವು ಭಾರತ ಸರ್ಕಾರದ ಪ್ರಭಾವಶಾಲಿ ಮಂತ್ರಿ. ನೀವು ಭೇಟಿ ನೀಡುವ ಸ್ಥಳಗಳಲ್ಲಿ ಸಾಕಷ್ಟು ಮತ್ತು ಹೆಚ್ಚಿನ ಆಹಾರ ಸೇವೆ ಲಭ್ಯವಿರುತ್ತವೆ” ಎಂದು ಕುಟುಕಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 125 ದೇಶಗಳಲ್ಲಿ 111 ನೇ ಸ್ಥಾನದಲ್ಲಿತ್ತು. ಇದು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಕ್ಕಿಂತ ಕೆಳಗೆ ಕುಸಿದಿತ್ತು.

ಸೂಚ್ಯಂಕದಲ್ಲಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ 102ನೇ ಸ್ಥಾನ, ಬಾಂಗ್ಲಾದೇಶ 81ನೇ ಸ್ಥಾನ, ನೇಪಾಳ 69ನೇ ಸ್ಥಾನ ಮತ್ತು ಶ್ರೀಲಂಕಾ 60ನೇ ಸ್ಥಾನ ಪಡೆದಿವೆ.

ಹಸಿವು ಸೂಚ್ಯಂಕದಲ್ಲಿ ಭಾರತ 28.7 ಅಂಕ ಪಡೆದಿದೆ. ಇದು ಗಂಭೀರ ಮಟ್ಟದ ಹಸಿವನ್ನು ಸೂಚಿಸುತ್ತದೆ. ಇನ್ನು ದೇಶದಲ್ಲಿ ನ್ಯೂನಪೋಷಣೆ ಪ್ರಮಾಣ ಶೇ 16.6ರಷ್ಟಿದೆ. ಐದು ವರ್ಷಕ್ಕಿಂತ ಒಳಗಿನವರ ಮರಣ ಪ್ರಮಾಣ ಶೇ 3.1 ಇದೆ. 15 ರಿಂದ 24 ವರ್ಷದ ಒಳಗಿನ ಮಹಿಳೆಯರಲ್ಲಿನ ಅನೀಮಿಯಾ ಸಮಸ್ಯೆ ಶೇ 58.1ರಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.

ಜಾಗತಿಕ ಹಸಿವು ಸೂಚ್ಯಂಕ ಅಂಕಗಳ ಲೆಕ್ಕಾಚಾರದಲ್ಲಿ ಬಳಸುವ ಸೂಚಕಗಳಲ್ಲಿ ಒಂದಾದ ಅಪೌಷ್ಟಿಕತೆಯ ಹರಡುವಿಕೆಯು ಹೆಚ್ಚುತ್ತಿದೆ. ಅಪೌಷ್ಟಿಕತೆಯ ಸಂಖ್ಯೆಯು 572 ಮಿಲಿಯನ್‌ನಿಂದ ಸುಮಾರು 735 ಮಿಲಿಯನ್‌ಗೆ ಏರಿದೆ ಎಂದು ಸೂಚ್ಯಂಕ ವರದಿ ಹೇಳಿತ್ತು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...