ಗುಜರಾತ್‌ನ ವಾಡಿಯಾ ಗ್ರಾಮದ ಕರಾಳ ವಾಸ್ತವ: ವೇಶ್ಯಾವಾಟಿಕೆಯಿಂದ ಪಾರಾಗಲು ‘ಬಾಲ್ಯವಿವಾಹ’ವೇ ರಕ್ಷಾಕವಚ

Date:

ಅಹಮದಾಬಾದ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಗುಜರಾತ್‌ನ ವಾಡಿಯಾ ಗ್ರಾಮದ ಹೆಣ್ಣುಮಕ್ಕಳ ಪಾಲಿಗಿರುವುದು ಎರಡೇ ಆಯ್ಕೆ; ಇಂದಲ್ಲಾ ನಾಳೆ ವೇಶ್ಯಾವಾಟಿಕೆಯ ಕೂಪಕ್ಕೆ ಬೀಳುವುದು ಅಥವಾ ಕೇವಲ ಏಳನೇ ವಯಸ್ಸಿಗೆ ಬಾಲ್ಯವಿವಾಹದ ಬಂಧನಕ್ಕೆ ಒಳಗಾಗುವುದು. ಹೌದು, ‘ವೇಶ್ಯಾವಾಟಿಕೆ ಗ್ರಾಮ’ ಎಂದೇ ಕುಖ್ಯಾತಿ ಪಡೆದಿರುವ ಈ ಹಳ್ಳಿಯ ಹೆಣ್ಣುಮಕ್ಕಳು, ತಲೆಮಾರುಗಳಿಂದ ಅಂಟಿಕೊಂಡಿರುವ ಕರಾಳ ವೃತ್ತಿಯಿಂದ ತಪ್ಪಿಸಿಕೊಳ್ಳಲು ಇದೀಗ ‘ಬಾಲ್ಯದಲ್ಲೇ ನಿಶ್ಚಿತಾರ್ಥ’ ಎಂಬ ಹೊಸ, ಆದರೆ ಅನಿವಾರ್ಯ ಮಾರ್ಗವನ್ನು ಕಂಡುಕೊಂಡಿದ್ದಾರೆ.

- Advertisement -

​ಬನಾಸಕಾಂಠಾ ಜಿಲ್ಲೆಯ ವ್ಯಾಪ್ತಿಗೆ ಬರುವ ವಾಡಿಯಾ, ಕೇವಲ 750 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ. ಇಲ್ಲಿ ಪ್ರಧಾನವಾಗಿ ಅಲೆಮಾರಿ ಸಮುದಾಯದ ಕುಟುಂಬಗಳು ನೆಲೆಸಿವೆ. ಆದರೆ, ಈ ಗ್ರಾಮದ ಇತಿಹಾಸವೇ ಒಂದು ಕರಾಳ ಅಧ್ಯಾಯ. ಇಲ್ಲಿನ ಮಹಿಳೆಯರನ್ನು ತಲೆಮಾರುಗಳಿಂದಲೂ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದ್ದು, ಅದನ್ನೇ ಒಂದು ‘ಕುಲವೃತ್ತಿ’ಯಂತೆ ಆಚರಿಸಿಕೊಂಡು ಬರಲಾಗುತ್ತಿದೆ. ದಶಕಗಳು ಕಳೆದರೂ, ಇತಿಹಾಸವು ತಮ್ಮ ಮೇಲೆ ಬಲವಂತವಾಗಿ ಹೇರಿರುವ ಈ ಅನಿಷ್ಟ ಪದ್ಧತಿಯಿಂದ ಸಂಪೂರ್ಣವಾಗಿ ಹೊರಬರಲು ಈ ಸಮುದಾಯಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

​ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಈ ವೇಶ್ಯಾವಾಟಿಕೆ ಜಾಲದಲ್ಲಿ ಪರಪುರುಷರಿಗಿಂತ ಹೆಚ್ಚಾಗಿ ಆಯಾ ಕುಟುಂಬದ ಪುರುಷರೇ ದಲ್ಲಾಳಿಗಳಾಗಿ (ಏಜೆಂಟ್) ಕಾರ್ಯನಿರ್ವಹಿಸುತ್ತಾರೆ. ಪ್ರತಿದಿನ ಬೆಳಗಾಗುತ್ತಲೇ ಗ್ರಾಮದ ಗಂಡಸರು ಪಾಲನ್‌ಪುರ-ಥರಾದ್ ಹೆದ್ದಾರಿಯತ್ತ ಮುಖ ಮಾಡುತ್ತಾರೆ. ಇವರು ಅಲ್ಲಿಗೆ ಹೋಗುವುದು ಕೂಲಿ ಕೆಲಸಕ್ಕಲ್ಲ, ಬದಲಾಗಿ ತಮ್ಮ ಮನೆಯ ಹಾಗೂ ಗ್ರಾಮದ ಮಹಿಳೆಯರಿಗಾಗಿ ‘ಗ್ರಾಹಕರನ್ನು’ ಹುಡುಕಿ ತರಲು! ಹೆದ್ದಾರಿಯಲ್ಲಿ ಸಾಗುವ ಟ್ರಕ್ ಚಾಲಕರು, ದಾರಿಹೋಕರು ಹಾಗೂ ಸುತ್ತಮುತ್ತಲಿನ ಹಳ್ಳಿ-ಪಟ್ಟಣಗಳ ಪುರುಷರನ್ನು ಆಕರ್ಷಿಸಿ ಕರೆತರುವ ಕೆಲಸವನ್ನು ಈ ಪುರುಷರೇ ಮಾಡುತ್ತಾರೆ ಮತ್ತು ಈ ಪದ್ಧತಿ ಇಂದಿಗೂ ಎಗ್ಗಿಲ್ಲದೆ ಸಾಗಿದೆ.

​ಈ ನರಕಸದೃಶ ಬದುಕಿನಿಂದ ತಮ್ಮ ಮುಂದಿನ ಪೀಳಿಗೆಯನ್ನಾದರೂ ಪಾರು ಮಾಡಬೇಕು ಎಂಬ ತುಡಿತ ಇತ್ತೀಚಿನ ವರ್ಷಗಳಲ್ಲಿ ಕೆಲವು ಕುಟುಂಬಗಳಲ್ಲಿ ಮೂಡಲಾರಂಭಿಸಿದೆ. ಹೀಗಾಗಿ, ಹೆಣ್ಣುಮಕ್ಕಳನ್ನು ದೀರ್ಘಕಾಲದ ಈ ಶಾಪಗ್ರಸ್ತ ವೃತ್ತಿಯಿಂದ ದೂರವಿಡಲು ಪಾಲಕರು ಕಂಡುಕೊಂಡಿರುವ ಏಕೈಕ ರಕ್ಷಾಕವಚವೇ ಬಾಲ್ಯವಿವಾಹ. ಹೆಣ್ಣುಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳುವ ಮುನ್ನವೇ, ಎಂದರೆ ಬಾಲಕಿಯರಿಗೆ ಕೇವಲ ಏಳು ವರ್ಷ ತುಂಬುವಾಗಲೇ ಅವರಿಗೆ ಗಂಡು ನೋಡಿ ಮದುವೆ ಅಥವಾ ನಿಶ್ಚಿತಾರ್ಥ ಮಾಡಲಾಗುತ್ತಿದೆ.

Advertisements

​ಈ ಬದಲಾವಣೆಯ ಗಾಳಿಗೆ ಸಾಕ್ಷಿಯಾಗಿ, ಇದೇ ಗ್ರಾಮದ 19 ವರ್ಷದ ಯುವತಿಯೊಬ್ಬಳು ಇದೀಗ ಈ ಕರಾಳ ಛಾಯೆಯಿಂದ ಹೊರಬಂದು, ದೂರದ ಊರಿನ ಕಾಲೇಜೊಂದರಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಶೈಕ್ಷಣಿಕ ಸಾಧನೆಯಂತೆ ಕಂಡರೂ, ಆಕೆಯ ಹಿನ್ನೆಲೆ ಕೇಳಿದರೆ ವಾಡಿಯಾ ಗ್ರಾಮದ ನೈಜ ಚಿತ್ರಣ ಅರ್ಥವಾಗುತ್ತದೆ. ಏಕೆಂದರೆ, ಆಕೆಯ ತಾಯಿ ಹಾಗೂ ಅಜ್ಜಿ ಇಬ್ಬರೂ ಇದೇ ವೇಶ್ಯಾವೃತ್ತಿಯಲ್ಲಿ ಜೀವನ ಸವೆಸಿದವರು. ಈ ಯುವತಿಯನ್ನು ರಕ್ಷಿಸುವ ಸಲುವಾಗಿ, ಆಕೆಗೆ 11 ವರ್ಷವಿದ್ದಾಗಲೇ ನಿಶ್ಚಿತಾರ್ಥ ಮಾಡಿ, ವಿವಾಹ ಮಾಡಿಕೊಡಲಾಗಿತ್ತು.

​ತನ್ನ ಕುಟುಂಬದ ಕರಾಳ ವಾಸ್ತವವನ್ನು ಬಿಚ್ಚಿಡುವ ಆ ಯುವತಿ, “ಗ್ರಾಹಕರ ಬಯಕೆಗಳನ್ನು ಪೂರೈಸಲು ವಯಸ್ಸಾಗುವವರೆಗೂ (ಅನರ್ಹರಾಗುವವರೆಗೂ) ನನ್ನ ತಾಯಿ ಮತ್ತು ಅಜ್ಜಿ ವೇಶ್ಯಾವೃತ್ತಿ ಮಾಡುತ್ತಿದ್ದರು. ನನ್ನ ತಂದೆ ಮತ್ತು ಚಿಕ್ಕಪ್ಪನೇ ಅವರಿಗೆ ಗ್ರಾಹಕರನ್ನು ಹುಡುಕಿ ತರುತ್ತಿದ್ದರು. ದುರಂತವೆಂದರೆ, ನನ್ನ ತಂದೆ ಎಂದು ನಾನು ಕರೆಯುವ ವ್ಯಕ್ತಿ ನಿಜಕ್ಕೂ ನನ್ನ ಜೈವಿಕ ತಂದೆಯೋ ಅಲ್ಲವೋ ಎಂಬ ಕನಿಷ್ಠ ಖಚಿತತೆಯೂ ನನ್ನ ತಾಯಿಗೆ ಇಲ್ಲ,” ಎಂದು ನೋವಿನಿಂದ ಹೇಳುತ್ತಾಳೆ. ಇದು ಆ ಗ್ರಾಮದ ಬಹುಪಾಲು ಮಹಿಳೆಯರ ಪ್ರಾತಿನಿಧಿಕ ಧ್ವನಿಯಾಗಿದೆ.

​ ವಾಡಿಯಾ ಗ್ರಾಮದ ಹೆಣ್ಣುಮಕ್ಕಳ ಬದುಕು ‘ಅತ್ತ ದರಿ, ಇತ್ತ ಪುಲಿ’ ಎಂಬಂತಾಗಿದೆ. ಸಮಾಜದ ಮುಖ್ಯವಾಹಿನಿಗೆ ಬರಲು ಅವರು ಒಂದು ಅಮಾನವೀಯ ಕೃತ್ಯದಿಂದ (ವೇಶ್ಯಾವೃತ್ತಿ) ತಪ್ಪಿಸಿಕೊಳ್ಳಲು, ಮತ್ತೊಂದು ಕಾನೂನುಬಾಹಿರ ಕೃತ್ಯದ (ಬಾಲ್ಯವಿವಾಹ) ಮೊರೆಹೋಗುವುದು ಇಲ್ಲಿ ಅನಿವಾರ್ಯವಾಗಿದೆ. ಸರ್ಕಾರದ ಕಠಿಣ ಕಾನೂನುಗಳು ಹಾಗೂ ವ್ಯವಸ್ಥೆಯ ಕಣ್ಗಾವಲಿನ ನಡುವೆಯೂ, ಜೀವನಾಧಾರವಾಗಿರುವ ಒಂದು ಶೋಷಿತ ವ್ಯವಸ್ಥೆಯಿಂದ ಮಹಿಳೆಯರನ್ನು ಪಾರು ಮಾಡುವುದು ಎಷ್ಟು ಕಠಿಣ ಎಂಬುದನ್ನೇ ವಾಡಿಯಾ ಗ್ರಾಮದ ಇಂದಿನ ಪರಿಸ್ಥಿತಿ ಸಾರಿ ಹೇಳುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಸೆ. 23ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ BWSSB ಕಾರ್ಮಿಕರ ಬೃಹತ್ ಹೋರಾಟ

ಬೆಂಗಳೂರು ನಗರದ ಕೋಟ್ಯಂತರ ಜನರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ...

ಬೀದರ್ | ಸೆ.29ಕ್ಕೆ ರೈತರಿಂದ ‘ಹುಬ್ಬಳ್ಳಿ ಚಲೋ’; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಎದುರು ಪ್ರತಿಭಟನೆ

ರೈತರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 29ರಂದು ಸಾವಿರಾರು...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು ಸಾಕಣೆದಾರರಿಗೂ ಸಂಕಷ್ಟ

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ...