ದೂರದ ನಡಿಗೆ, ಪ್ರಾಣಿ ದಾಳಿಯ ಆತಂಕ; 40 ಅಡಿ ಆಳದ ಬಾವಿ ತೋಡಿ ಊರಿಗೆ ನೆರವಾದ ಮಹಿಳೆ

Date:

ಎರಡು ವರ್ಷಗಳ ಹಿಂದೆ, 35 ವರ್ಷದ ಶಕುಂತಲಾ ಚಟರ್ ಎಂಬುವವರು ಕುಡಿಯಲು ಯೋಗ್ಯವಲ್ಲದ ನೀರನ್ನು ತರಲು ಒಡಿಶಾದ ಚಂದಕಾ-ದಂಪಾಡ ವನ್ಯಜೀವಿ ಅಭಯಾರಣ್ಯದ ಒಳಗೆ ಕನಿಷ್ಠ ಒಂದು ಗಂಟೆಯ ಕಾಲ ನಡೆಯಬೇಕಿತ್ತು. ಕಾಡು ಪ್ರಾಣಿಗಳು, ಅದರಲ್ಲೂ ಮುಖ್ಯವಾಗಿ ಆನೆಗಳ ತಾಣವಾಗಿದ್ದ ಕಾಡಿನ ಹಾದಿಯಲ್ಲಿ ಅವರು ಪ್ರತಿದಿನ ಎರಡು ಬಾರಿ, ಕೆಲವೊಮ್ಮೆ ರಾತ್ರಿಯ ವೇಳೆಯೂ ನೀರಿಗಾಗಿ ಅಲೆಯಬೇಕಿತ್ತು. ಆದರೆ, ಈ ಸವಾಲಿಗೆ ಪರಿಹಾರ ಹುಡುಕುತ್ತಿದ್ದ ಶಕುಂತಲಾ ಅವರು ತಾವೇ ಖುದ್ದು ಬಾವಿ ತೋಡಿದ್ದಾರೆ. ಊರಿಗೆ ನೆರವಾಗಿದ್ದಾರೆ. ಇದು ನಡೆದದ್ದು 2024ರಲ್ಲಿ.

- Advertisement -

ಶಕುಂತಲಾ ಅವರು ಒಡಿಶಾದ ಭುವನೇಶ್ವರ ಬಳಿಯ ಕಂದೇಲಿ ಮುಂಡಾ ಸಾಹಿ ಗ್ರಾಮದವರು. ಅವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿದ್ದಾರೆ. ಅವರ ಗ್ರಾಮದಲ್ಲಿದ್ದ ಕೊಳವೆಬಾವಿಗಳು ಕೆಟ್ಟುಹೋಗಿ, ವರ್ಷಗಳ ಕಾಲ ದುರಸ್ತಿ ಮಾಡಿರಲಿಲ್ಲ. ಅವರು ದಿನನಿತ್ಯ ನೀರು ತರಲು ಅಭಯಾರಣ್ಯಕ್ಕೆ ಹೋಗುತ್ತಿದ್ದರು. ಪ್ರಾಣಿ ಭಯ, ದೀರ್ಘ ನಡಿಗೆಯಿಂದ ಬೇಸತ್ತಿದ್ದರು. ತಮ್ಮ ಮತ್ತು ಗ್ರಾಮದ ನೀರಿನ ಅಭಾವಕ್ಕೆ ಪರಿಹಾರ ಕಂಡುಕೊಳ್ಳಲು ತಮ್ಮದೇ ಜಮೀನಿನಲ್ಲಿ ಬಾವಿ ತೋಡಲು ನಿರ್ಧರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಸುಮಾರು 60 ದಿನಗಳ ಕಾಲ ಅವರು ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಸತತವಾಗಿ ಗುಂಡಿ ತೋಡುತ್ತಲೇ ಇದ್ದರು. ಅಂತಿಮವಾಗಿ, 40 ಅಡಿ ಆಳ ತಲುಪಿದಾಗ ಅವರಿಗೆ ನೀರು ಸಿಕ್ಕಿತು. ಈ ಕೆಲಸದಲ್ಲಿ ಅವರ ಪತಿ ಲಾದುರಾಮ್ ಚಟರ್ ಮತ್ತು ನೆರೆಯ ಕಾರ್ಮಿಕ ಜಗನ್ನಾಥ್ ತಿಂಗುವಾ ಅವರು ಆಗೊಮ್ಮೆ ಈಗೊಮ್ಮೆ ಸಹಾಯ ಮಾಡಿದ್ದರು. ಶಕುಂತಲಾ ಅವರು ಸುಮಾರು 60-70 ದಿನಗಳ ಬಾವಿ ತೋಡಿದ್ದು, ಗ್ರಾಮಕ್ಕೆ ನೀರು ದೊರೆತಿದೆ.

“ಆನೆಗಳ ಭಯದಿಂದಾಗಿ ನಾವು ಅಭಯಾರಣ್ಯದಲ್ಲಿ ನೀರು ತರಲು ಪದೇ ಪದೇ ಹೋಗಲು ಹೆದರುತ್ತಿದ್ದೆವು. ಅದಕ್ಕಾಗಿಯೇ ನಾನು ಬಾವಿ ತೋಡಲು ನಿರ್ಧರಿಸಿದೆ. ಈ ಬಾವಿ ಈಗ ನಮ್ಮ ಕುಟುಂಬದ ನೀರಿನ ಅಗತ್ಯವನ್ನು ಮಾತ್ರವಲ್ಲದೆ, ನೆರೆಹೊರೆಯ ಮನೆಗಳಿಗೂ ಆಸರೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು, ಬಹಳ ದೊಡ್ಡದು ಏಕೆಂದರೆ…

“ಕಾಡಿನ ಸಣ್ಣ ಜಲಪಾತಗಳಿಂದ ತರುತ್ತಿದ್ದ ನೀರಿಗಿಂತ ಈ ಬಾವಿಯ ನೀರು ತುಂಬಾ ಶುದ್ಧವಾಗಿದೆ” ಎಂದು ಶಕುಂತಲಾ ಅವರ ನೆರೆಮನೆಯ ಆಶ್ರಿತಾ ಚಟರ್ (30) ತಿಳಿಸಿದ್ದಾರೆ.

ಶಕುಂತಲಾ ಅವರು ಈಗ ಅದೇ ನೀರನ್ನು ಬಳಸಿಕೊಂಡು ತಮ್ಮ ಮನೆಯ ಕೈತೋಟದಲ್ಲಿ ಸೊಪ್ಪುಗಳ ಜೊತೆಗೆ ಬದನೆ, ಟೊಮೆಟೊ ಹಾಗೂ ಮೂಲಂಗಿಯಂತಹ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ವಿಶೇಷವೆಂದರೆ, ಬಾವಿ ತೋಡುವಾಗ ಹೊರತೆಗೆದ ಮಣ್ಣನ್ನು ಅವರು ತಮ್ಮ ಮನೆಯ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ.

“ಶಕುಂತಲಾ ಅವರ ಕಠಿಣ ಪರಿಶ್ರಮ ಮತ್ತು ನಿರ್ಧಾರವು ಅವರ ಕುಟುಂಬವು ಹಳ್ಳಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ” ಎಂದು ಸರ್ಪಂಚ್ ಬಿಷ್ಣು ಪ್ರಸಾದ್ ಡೆಂಗಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...