ಕೊಲ್ಲಿಯಲ್ಲಿ ಹಡಗು ಸಂಚಾರಕ್ಕೆ ಜಿ7 ಬೆಂಗಾವಲು

Date:

ಪಶ್ಚಿಮ ಏಷ್ಯಾ ಸಂಘರ್ಷದ ಬೆನ್ನಲ್ಲೇ ಕೊಲ್ಲಿ ರಾಷ್ಟ್ರಗಳಲ್ಲಿ ಹಡಗುಗಳು ನಿರ್ಭೀತವಾಗಿ ಸಂಚರಿಸಲು ಬೆಂಗಾವಲಿಗೆ ನಿಲ್ಲಲು ಬೇಕಾಗಿರುವ ಪರಿಶೀಲನೆ ನಡೆಸುವುದಾಗಿ ಜಿ7 ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಇರಾನ್‌ ಜೊತೆಗಿನ ಅಮೆರಿಕ ಇಸ್ರೇಲ್‌ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯ ಕುರಿತು ಫೋನ್‌ ಕರೆಯ ಮೂಲಕ ಜಿ7 ನಾಯಕರು ಚರ್ಚಿಸಿದ್ದು, ಫ್ರೆಂಚ್‌ ಅಧ್ಯಕ್ಷ ಎಮಾನ್ಯುಯೆಲ್‌ ಏಳು ದೇಶದ ನಾಯಕರ ಜೊತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ನಂತರ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

- Advertisement -

ಭದ್ರತಾ ವ್ಯವಸ್ಥೆ ಕಟ್ಟುನಿಟ್ಟಾಗಿ ಇರುವ ಸಂದರ್ಭ ಪರಿಶೀಲಿಸಿ ಹಡಗುಗಳ ಸಂಚಾರಕ್ಕೆ ತೊಂದರೆಯಾಗದಂತೆ ಕಾಯಲು ಬೆಂಗಾವಲು ಪಡೆ ನಿಯೋಜಿಸುವುದಾಗಿ ಹೇಳಿದ್ದಾರೆ. ಇದು ಹಡಗು ಸೇರಿದಂತೆ ಸಾರಿಗೆ ಕಂಪನಿದಾರರಿಗೆ ಮತ್ತು ವಿಮಾದಾರರಿಗೆ ಸಹ ಅನುವಾಗುವ ಹಾಗೆ ಕಾರ್ಯ ನಿರ್ವಹಿಸುತ್ತದೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಏನಿದು ಜಿ7?:  ವಿಶ್ವದ  ಪ್ರಬಲ ರಾಷ್ಟ್ರಗಳೆಂದು ಕರೆಯಲಾಗುವ 7 ದೇಶಗಳು ರಚಿಸಿಕೊಂಡಿರುವ ಅಂತರಾಷ್ಟ್ರೀಯ ರಾಜಕೀಯ, ಆರ್ಥಿಕ  ಭದ್ರತೆ, ಇಂಧನ ನೀತಿಗಳನ್ನು ಸಂಘಟಿಸಲು ರಚನೆಯಾದ ಜಾಗತಿಕ ವೇದಿಕೆ. 1957ರಲ್ಲಿ ಸ್ಥಾಪನೆಯಾದ ಈ ವೇದಿಕೆ ಆರ್ಥಿಕ ಸ್ಥಿರತೆ, ಭದ್ರತೆ, ಇಂಧನ ಬಿಕ್ಕಟ್ಟು, ಹವಾಮಾನ ಬದಲಾವಣೆ, ಅಂತರಾಷ್ಟ್ರೀಯ ವ್ಯಾಪಾರ ಸೇರಿದಂತೆ  ಜಾಗತಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಪ್ರಸ್ತುತ ಜಿ7 ಸಂಘಟಿತ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಯುರೋಪಿಯನ್‌ ಒಕ್ಕೂಟ, ಫ್ರಾನ್ಸ್‌, ಕೆನಡ, ಜಪಾನ್‌, ಜರ್ಮನಿ, ಇಟಲಿ ಸದಸ್ಯತ್ವ ಪಡೆದಿವೆ. ವರ್ಷಕ್ಕೊಮ್ಮೆ ಅಧ್ಯಕ್ಷ ರಾಷ್ಟ್ರಗಳ ಸರದಿ ಬದಲಾಗುತ್ತದೆ, ಈಗ ಫ್ರಾನ್ಸ್‌ ಅಧ್ಯಕ್ಷ ರಾಷ್ಟ್ರವಾಗಿದೆ.

ಸೋಮವಾರ ಸಭೆ ನಡೆಸಿದ ಜಿ7 ರಾಷ್ಟ್ರಗಳು ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ. ಜಾಗತಿಕ ಇಂಧನ ಪೂರೈಕೆಗೆ ಒದಗಿರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುತ್ತದೆ ಎಂದು ಘೋಷಿಸಿತ್ತು.

ಸೋಮವಾರ ನಡೆದ ಈ ಸಭೆಯಲ್ಲಿ ತಮ್ಮಲ್ಲಿ ತುರ್ತು ಸಂದರ್ಭಗಳಿಗೆ ಉಪಯುಕ್ತವಾಗಲು ದಾಸ್ತಾನು ಮಾಡಲಾದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಮ್ಮತದ ನಿರ್ಧಾರಕ್ಕೆ ಬಂದಿರಲಿಲ್ಲ.

ಸಧ್ಯ ಮೂವತ್ತರಿಂದ ನಲವತ್ತು ಕೋಟಿ ಬ್ಯಾರಲ್‌ ತೈಲ ತಮ್ಮ ಬಳಿ ಶೇಖರಣೆಯಿದ್ದು ಈಗಿನ ಇಂಧನ ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ದಾಸ್ತಾನಗಿರುವ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದವು.

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಕೊನೆಗಾಣದ ಹಿನ್ನೆಲೆಯಲ್ಲಿ ಜಾಗತಿಕ ವಲಯದಲ್ಲಿ ಇಂಧನ ಕೊರತೆ ಸಂಭವಿದ್ದು ಪ್ರತಿ ಬ್ಯಾರಲ್‌ ತೈಲದ ಬೆಲೆ 10,620 ರೂ. ದಾಟಿತ್ತು. ಜಿ7 ತನ್ನ ದಾಸ್ತಾನಿನಲ್ಲಿರುವ ತೈಲವನ್ನು ಮಾರಲು ನಿರ್ಧರಿಸಿ ಘೋಷಿಸಿದ ನಂತರ ಪ್ರತಿ ಬ್ಯಾರೆಲ್‌ ತೈಲ ಬೆಲೆ 9,880 ರೂ.ಗಳಿಗೆ ಇಳಿಕೆ ಕಂಡಿತ್ತು.

gulf ship g7

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಭಕ್ತ ಬಚ್ಚನ್‌ಗೆ ಇದೆಂತಾ ಸ್ಥಿತಿ; ಬುಲೆಟ್ ಪ್ರೂಫ್ ಕವಚದ ಹಿಂದೆ ‘ಅಮೃತಕಾಲ’!

ಮುಂಬೈನ ಜುಹು ಪ್ರದೇಶದಲ್ಲಿರುವ ‘ಜಲ್ಸಾ’ ನಿವಾಸದ ಹೊರಗೆ ಪ್ರತಿ ಭಾನುವಾರ ಜಮಾಯಿಸುವ...

ತುಷಾರ್ ಕಪೂರ್ ಬೆನ್ನಲ್ಲೇ ಆಯುಷ್ಮಾನ್ ಖುರಾನಾಗೆ ಬೆದರಿಕೆ: ‘ಬಿಷ್ಣೋಯ್ ಗ್ಯಾಂಗ್’ ಹೆಸರಲ್ಲಿ ಹಫ್ತಾಗೆ ಬೇಡಿಕೆ

ಬಾಲಿವುಡ್‌ ತಾರೆಯರಿಗೆ ಬೆದರಿಕೆ ಕರೆಗಳ ಸರಮಾಲೆ ಮುಂದುವರಿದಿದ್ದು, ನಟ ತುಷಾರ್ ಕಪೂರ್...

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’; ಗ್ರಾಮೀಣ ಶಾಲೆ ದತ್ತು ಪಡೆಯಲು ಡಿ.ಕೆ ಶಿವಕುಮಾರ್ ಕರೆ!

ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ...

ಅನಿಲ್ ಅಂಬಾನಿಯ ₹23,100 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ!

ಸಾಲದ ಸುಳಿಗೆ ಸಿಲುಕಿ ವಿವಾದಗಳ ಕೇಂದ್ರಬಿಂದುವಾಗಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್...