ಚಿನ್ನದ ನಾಣ್ಯ, ಸ್ಟಾರ್ ಹೋಟೆಲ್ ಪಾರ್ಟಿ, ಮುಜ್ರಾ ನೃತ್ಯ: ಹರಿಯಾಣ IAS ಅಧಿಕಾರಿಗಳ ಲಂಚದ ಪುರಾಣ ಬಿಚ್ಚಿಟ್ಟ ಸಿಬಿಐ

Date:

ಹರಿಯಾಣ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ವಿವಿಧ ಸಂಸ್ಥೆಗಳ ಸುಮಾರು ₹504 ಕೋಟಿಗೂ ಅಧಿಕ ಹಣವನ್ನು ಖಾಸಗಿ ಬ್ಯಾಂಕ್‌ಗೆ ವರ್ಗಾಯಿಸಿ, ದುರ್ಬಳಕೆ ಮಾಡಿಕೊಂಡಿರುವ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ಹರಿಯಾಣ ಕೆಡರ್‌ನ ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧ ದಂಗುಬಡಿಸುವಂತಹ ಗಂಭೀರ ಭ್ರಷ್ಟಾಚಾರದ ಆರೋಪಗಳು ಹೊರಬಿದ್ದಿವೆ.

- Advertisement -

ಸರ್ಕಾರಿ ಹಣವನ್ನು ನಿಯಮಬಾಹಿರವಾಗಿ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಪ್ರತಿಯಾಗಿ ಅಧಿಕಾರಿಗಳು ಲಂಚದ ರೂಪದಲ್ಲಿ ಚಿನ್ನದ ನಾಣ್ಯಗಳು, ಪಂಚತಾರಾ ಹೋಟೆಲ್‌ಗಳ ಪಾರ್ಟಿ ಬಿಲ್‌ಗಳು, ಹವಾಲಾ ಹಣ ಹಾಗೂ ಮುಜ್ರಾ (ಸಾಂಪ್ರದಾಯಿಕ ನೃತ್ಯ) ಕೂಟಗಳ ಆತಿಥ್ಯವನ್ನು ಸ್ವೀಕರಿಸಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ವಿನೀತ್ ಗಾರ್ಗ್ ಅವರಿಗೆ ಬ್ಯಾಂಕಿನ ಮಾಜಿ ಮ್ಯಾನೇಜರ್ ರಿಭವ್ ಋಷಿ (ಹಗರಣದ ಪ್ರಮುಖ ಸೂತ್ರಧಾರ) ಚಿನ್ನದ ನಾಣ್ಯಗಳನ್ನು ತಲುಪಿಸಿದ್ದಾನೆ. ಈ ಚಿನ್ನ ಸಾಗಿಸುವ ಕೆಲಸ ಮಾಡುತ್ತಿದ್ದ ಅಮೃತ್‌ಪಾಲ್ ಎಂಬ ವ್ಯಕ್ತಿಯ ಸಾಕ್ಷ್ಯಾಧಾರದ ಪ್ರಕಾರ, 2025ರ ದೀಪಾವಳಿಗೆ ಕೆಲವು ದಿನಗಳ ಮೊದಲು ಚಂಡೀಗಢದ ‘ಸಾವನ್ ಜ್ಯುವೆಲರ್ಸ್’ನಿಂದ ತಲಾ 50 ಗ್ರಾಂ ತೂಕದ ಎರಡು ಚಿನ್ನದ ನಾಣ್ಯಗಳನ್ನು ತಂದು, ಸೆಕ್ಟರ್-7A ನಲ್ಲಿರುವ ಐಎಎಸ್ ಅಧಿಕಾರಿಯ ಸರ್ಕಾರಿ ಬಂಗಲೆಗೆ ತಲುಪಿಸಲಾಗಿತ್ತು. ರಿಭವ್ ಋಷಿ ನೇರವಾಗಿ ವಿನೀತ್ ಗಾರ್ಗ್ ಅವರಿಗೆ ಈ ಚಿನ್ನವನ್ನು ಹಸ್ತಾಂತರಿಸಿದ್ದು, ಕರೆ ವಿವರ ದಾಖಲೆಗಳ (CDR) ತಾಂತ್ರಿಕ ವಿಶ್ಲೇಷಣೆಯಿಂದಲೂ ಈ ಸ್ಥಳದಲ್ಲಿದ್ದ ಅವರ ಉಪಸ್ಥಿತಿ ದೃಢಪಟ್ಟಿದೆ ಎಂದು ಸಿಬಿಐ ಹೇಳಿದೆ.

ಇದನ್ನೂ ಓದಿ: ಹರಿಯಾಣ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ವಂಚನೆ ಪ್ರಕರಣ; 5 ಐಎಎಸ್ ಅಧಿಕಾರಿಗಳ ವಿರುದ್ಧ ಮೊಕದ್ದಮೆ

Advertisements

ಲಕ್ಷಾಂತರ ರೂಪಾಯಿ ಹೋಟೆಲ್ ಹಾಗೂ ಪಾರ್ಟಿ ಬಿಲ್ ಪಾವತಿ

ಹರಿಯಾಣ ಪವರ್ ಜನರೇಷನ್ ಕಾರ್ಪೊರೇಷನ್ ಲಿಮಿಟೆಡ್ (HPGCL) ಮಾಜಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ಶಾಯಿನ್ ಮತ್ತು ಅವರ ಕುಟುಂಬಸ್ಥರು ನಡೆಸಿದ ಪಾರ್ಟಿಗಳ ವೆಚ್ಚವನ್ನು ಬ್ಯಾಂಕರ್ ರಿಭವ್ ಋಷಿ ಭರಿಸಿದ್ದಾನೆ. ಚಂಡೀಗಢದ ಹಯಾತ್ ಸೆಂಟ್ರಿಕ್‌ನಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ₹35,629, ₹58,399 (ಆಹಾರ ಮತ್ತು ಮದ್ಯದ ಬಿಲ್) ಹಾಗೂ ₹73,073 ರಷ್ಟು ಮೊತ್ತದ ಹೋಟೆಲ್ ಬಿಲ್‌ಗಳನ್ನು ಶಾಯಿನ್ ಹೆಸರಿನಲ್ಲಿ ಪಡೆಯಲಾಗಿತ್ತು. ಆದರೆ ಇವೆಲ್ಲದರ ನಗದು ಪಾವತಿಯನ್ನು ರಿಭವ್ ಋಷಿ ಮಾಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ವಾಟ್ಸಾಪ್ ಸಂಭಾಷಣೆಗಳು ಹಾಗೂ ಹೋಟೆಲ್ ಸಿಬ್ಬಂದಿಯ ಹೇಳಿಕೆಗಳನ್ನು ಸಿಬಿಐ ಸಾಕ್ಷಿಯಾಗಿ ಉಲ್ಲೇಖಿಸಿದೆ.

ಇಷ್ಟು ಮಾತ್ರವಲ್ಲದೆ ಪಂಚಕುಲ ಮುನ್ಸಿಪಲ್ ಕಾರ್ಪೊರೇಶನ್ ಮಾಜಿ ಕಮಿಷನರ್ ರಾಮ್ ಕುಮಾರ್ ಸಿಂಗ್ ಸೇರಿದಂತೆ ಇತರ ಅಧಿಕಾರಿಗಳಿಗೆ ಹವಾಲಾ ಮಾರ್ಗದ ಮೂಲಕ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ. ಹರಿಯಾಣ ಮತ್ತು ಚಂಡೀಗಢದ ಮುನ್ಸಿಪಲ್ ಹಾಗೂ ಸರ್ಕಾರಿ ನಿಧಿಯನ್ನು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗೆ ವರ್ಗಾಯಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅಧಿಕಾರಿಗಳಿಗೆ ‘ಖಾಸಗಿ ಮನರಂಜನೆ’ ಹಾಗೂ ‘ಮುಜ್ರಾ’ ನೃತ್ಯ ಕೂಟಗಳ ಆಯೋಜನೆ ಸೇರಿದಂತೆ ಹಲವು ಅಕ್ರಮ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದು ಸಿಬಿಐ ವಿವರಿಸಿದೆ. ಚಂಡೀಗಢದ ಒಂದೇ ನಿವಾಸದಲ್ಲೇ ₹50 ಲಕ್ಷ ನಗದನ್ನು ಹಸ್ತಾಂತರಿಸಲಾಗಿತ್ತು.

ಹಗರಣ ನಡೆದದ್ದು ಹೇಗೆ?

ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ರಿಭವ್ ಋಷಿ ಈ ಅಕ್ರಮದ ಪ್ರಮುಖ ರೂವಾರಿಯಾಗಿದ್ದ. ಸರ್ಕಾರಿ ಇಲಾಖೆಗಳು ಹಾಗೂ ನಿಗಮಗಳಲ್ಲಿದ್ದ ಠೇವಣಿ ನಿಧಿಯನ್ನು (Government Funds) ಹೆಚ್ಚಿನ ಬಡ್ಡಿ ದರದ ಆಮಿಷವೊಡ್ಡಿ ನಿಯಮಬಾಹಿರವಾಗಿ ಬ್ಯಾಂಕ್ ಖಾತೆಗಳಿಗೆ ಸೆಳೆಯಲಾಗಿತ್ತು. ತದನಂತರ ಈ ಹಣವನ್ನು ಸರ್ಕಾರಿ ಯೋಜನೆಗಳಿಗೆ ಬಳಸುವ ಬದಲು, ಥರ್ಡ್ ಪಾರ್ಟಿ ಶೆಲ್ ಕಂಪನಿಗಳು, ದುಬೈ ಆಸ್ತಿ ಖರೀದಿ ಹಾಗೂ ಚಿನ್ನದ ವ್ಯಾಪಾರಿಗಳ ಖಾತೆಗಳಿಗೆ ವರ್ಗಾಯಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ ಪಂಕಜ್ ಅಗರ್ವಾಲ್, ಪ್ರದೀಪ್ ಕುಮಾರ್, ರಾಮ್ ಕುಮಾರ್ ಸಿಂಗ್ ಸೇರಿದಂತೆ ಒಟ್ಟು 26 ಜನರನ್ನು ಬಂಧಿಸಿದೆ. ಸೆಪ್ಟೆಂಬರ್‌ನಲ್ಲಿ ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ವಿನೀತ್ ಗಾರ್ಗ್, ಪಂಕಜ್ ಅಗರ್ವಾಲ್, ಮೊಹಮ್ಮದ್ ಶಾಯಿನ್ ಸೇರಿದಂತೆ ಆರು ಜನ ಐಎಎಸ್ ಅಧಿಕಾರಿಗಳನ್ನು ಹೆಸರಿಸಲಾಗಿದೆ. ಹಗರಣ ಹೊರಬೀಳುತ್ತಿದ್ದಂತೆ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹರಿಯಾಣ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹583 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಿದೆ. ಜಾರಿ ನಿರ್ದೇಶನಾಲಯವೂ (ಇಡಿ) ಕೂಡ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ₹211 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಮತ್ತು ಚಂಡೀಗಢ ಹಾಗೂ ಮೊಹಾಲಿಯ ವಿವಿಧ ಜ್ಯುವೆಲರ್ಸ್ ಮೇಲೆ ದಾಳಿ ನಡೆಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಗ್ಗತ್ತಲು, ಅಪರಾಧಗಳ ತಾಣವಾಯ್ತಾ ದೆಹಲಿಯ ಪಾರ್ಕ್‌ಗಳು; 736ರ ಪೈಕಿ 16 ಉದ್ಯಾನಗಳಲ್ಲಷ್ಟೇ ಸಿಸಿಟಿವಿ ಕಣ್ಗಾವಲು!

ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನಿರ್ವಹಿಸುವ ಒಟ್ಟು 736 ಉದ್ಯಾನವನಗಳ ಪೈಕಿ...

ಹವಾಮಾನ ವರದಿ: ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ 10 ದಿನ ಭಾರೀ ಮಳೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ...