ಸಶಸ್ತ್ರ ಪಡೆಗಳಿಗೆ 2.12 ಲಕ್ಷ ಕೋಟಿ ರೂ. ವೆಚ್ಚದ ಶಸ್ತ್ರಾಸ್ತ್ರ ಖರೀದಿ: ರಕ್ಷಣಾ ಮಂಡಳಿ ಅನುಮೋದನೆ

Date:

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗಾಗಿ ಒಟ್ಟು 2.12 ಲಕ್ಷ ಕೋಟಿ ರೂ. ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರ ಹಾಗೂ ವಿವಿಧ ಉಪಕರಣಗಳ ಖರೀದಿಗೆ ಇಂದು (ಅಕ್ಟೋಬರ್ 26) ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ ರಕ್ಷಣಾ ಪಡೆಗಳಿಗೆ ಅತ್ಯಗತ್ಯವಿರುವ ಉಪಕರಣಗಳ ಪೂರೈಕೆಗೆ ಚಾಲನೆ ಸಿಕ್ಕಿದೆ.

- Advertisement -

ಈ ಒಟ್ಟು ಮೊತ್ತದ ಖರೀದಿ ಪ್ರಸ್ತಾವನೆಯಲ್ಲಿ (AoN) ಶೇಕಡಾ 82 ರಷ್ಟು ಮಿಲಿಟರಿ ವೇದಿಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಭಾರತೀಯ ಕೈಗಾರಿಕೆಗಳಿಂದಲೇ (ದೇಶೀಯ ಕಂಪನಿಗಳು) ಖರೀದಿಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಖರೀದಿಗೆ ಪ್ರಾಥಮಿಕ ಒಪ್ಪಿಗೆ ಮಾತ್ರ ಸಿಕ್ಕಿದ್ದು, ಮುಂದಿನ ಬಿಡ್ಡಿಂಗ್ ಹಾಗೂ ಟೆಂಡರ್ ಪ್ರಕ್ರಿಯೆಗಳ ಬಳಿಕವಷ್ಟೇ ಯಾವ ನಿರ್ದಿಷ್ಟ ಕಂಪನಿಗೆ ಈ ಗುತ್ತಿಗೆಗಳು ಸಿಗಲಿವೆ ಎಂಬುದು ಅಂತಿಮವಾಗಿ ನಿರ್ಧಾರವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಭಾರತೀಯ ಭೂಸೇನೆಗೆ ಹಲವು ಅಗತ್ಯ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಪ್ರಮುಖವಾಗಿ ಯೋಧರ ಮತ್ತು ಸರಕುಗಳ ತ್ವರಿತ ಸಾಗಾಟಕ್ಕಾಗಿ ಹೈ ಮೊಬಿಲಿಟಿ ವಾಹನಗಳು, ಸೆಲ್ಫ್-ಪ್ರೊಪೆಲ್ಡ್ ಟ್ರ್ಯಾಕ್ಡ್ ಗನ್ ಸಿಸ್ಟಮ್ ಹಾಗೂ ಲೈಟ್ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳ (LMRH) ಖರೀದಿಗೆ ರಕ್ಷಣಾ ಮಂಡಳಿ ಒಪ್ಪಿಗೆ ನೀಡಿದೆ.
ವಾಯು ಮಾರ್ಗದಿಂದ ಎದುರಾಗುವ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಅತಿ ಕಡಿಮೆ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಯನ್ನು (VSHORAD) ಭೂಸೇನೆಗೆ ನೀಡಲಾಗುತ್ತಿದೆ. ಜೊತೆಗೆ, ಶತ್ರುಗಳ ಡ್ರೋನ್ ದಾಳಿಗಳನ್ನು ತಡೆಯುವ ಕೌಂಟರ್-ಅನ್‌ಮ್ಯಾನ್ಡ್ ಏರಿಯಲ್ ಸಿಸ್ಟಮ್ (C-UAS) ಗಳ ಖರೀದಿಗೆ ಸಭೆಯಲ್ಲಿ ಹಸಿರು ನಿಶಾನೆ ತೋರಲಾಗಿದೆ.

Advertisements

ಆಧುನಿಕ ಯುದ್ಧತಂತ್ರದ ಭಾಗವಾಗಿ ಡ್ರೋನ್‌ಗಳ ಖರೀದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಣ್ಗಾವಲು ಯುಎವಿ (UAV), ಇಂಟಿಗ್ರೇಟೆಡ್ ಸರ್ವೈಲೆನ್ಸ್ ಅಂಡ್ ಸ್ಟ್ರೈಕ್ ಸಿಸ್ಟಮ್ ಹಾಗೂ ನಿಖರ ಗುರಿಯಿಟ್ಟು ದಾಳಿ ನಡೆಸಬಲ್ಲ ಅತ್ಯಾಧುನಿಕ ದೂರಗಾಮಿ ಕಾಮಿಕೇಜ್ (Kamikaze) ಡ್ರೋನ್‌ಗಳನ್ನು ಭೂಸೇನೆಗಾಗಿ ಖರೀದಿಸಲಾಗುತ್ತಿದೆ.
ಸಮುದ್ರದಲ್ಲಿನ ಕಾರ್ಯಾಚರಣೆಗಳಿಗಾಗಿ ಭಾರತೀಯ ನೌಕಾಪಡೆಗೆ ಅತ್ಯಗತ್ಯವಾಗಿರುವ ‘ಆಕ್ಟಿವ್ ಆಫ್‌ಬೋರ್ಡ್ ಡಿಕಾಯ್ ಸಿಸ್ಟಮ್’ (AODS) ಖರೀದಿಗೆ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಇದರ ಜೊತೆಗೆ ನೌಕಾಪಡೆಯ ದಿನನಿತ್ಯದ ಬಳಕೆಗೆ ಅಗತ್ಯವಿರುವ ಇತರ ಕೆಲವು ಪ್ರಮುಖ ನೌಕಾ ವೇದಿಕೆಗಳನ್ನು ಸಹ ಇದೇ ಅನುದಾನದಡಿ ಖರೀದಿಸಲಾಗುತ್ತದೆ.

ಇನ್ನು ಭಾರತೀಯ ವಾಯುಪಡೆಯ ಅಗತ್ಯತೆಗಳನ್ನು ಪೂರೈಸಲು ನೂತನ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ವಾಯು ಭದ್ರತೆಗಾಗಿ ಏರ್ ಡಿಫೆನ್ಸ್ ಸಿಸ್ಟಮ್ (ವಾಯು ರಕ್ಷಣಾ ವ್ಯವಸ್ಥೆ) ಮತ್ತು ಗಡಿ ಭಾಗಗಳಲ್ಲಿ ನಿಖರ ಹವಾಮಾನ ಮಾಹಿತಿಯನ್ನು ಕಲೆಹಾಕಲು ಮೊಬೈಲ್ ಎಕ್ಸ್-ಬ್ಯಾಂಡ್ ಡಾಪ್ಲರ್ ವೆದರ್ ರೇಡಾರ್‌ಗಳ ಖರೀದಿಗೆ (Mobile X-Band Doppler Weather Radar Systems) ಮಂಡಳಿ ಒಪ್ಪಿಗೆ ಸೂಚಿಸಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ವಜಾಗೊಂಡರೆ, 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ: ರಾಹುಲ್‌ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಪ್ರಧಾನಿ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...

ಬೀದರ್‌ | ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ʼಬೆಂಕಿʼ ಪಾಲು, ಆರ್ಥಿಕ ಸಂಕಷ್ಟದಲ್ಲಿ ರೈತರು

ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಂದಾಗಿ ಕೈಗೆ ಬಂದಿದ್ದ ಕಬ್ಬು ಸುಟ್ಟು...

ಕಠಿಣ ಹಾದಿಯಾದರೂ WTC ಫೈನಲ್ ತಲುಪಬಲ್ಲೆವು: ದಕ್ಷಿಣ ಆಫ್ರಿಕಾ ಆಟಗಾರ ಏಡೆನ್ ಮಾರ್ಕ್ರಮ್

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (WTC) ಸತತ ಎರಡನೇ ಬಾರಿ ಫೈನಲ್ ತಲುಪುವ...