‘ಫುನ್‌ಸುಖ್ ವಾಂಗ್ಡು ಸಾಯುವುದು ಇಷ್ಟವಿಲ್ಲ’: ಸೋನಮ್ ಬೆಂಬಲಿಸಿದ ‘3 ಈಡಿಯಟ್ಸ್’ ಚಿತ್ರದ ಚತುರ್

Date:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣ ತಜ್ಞ, ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರಿಗೆ ಹಿರಿಯ ಬಾಲಿವುಡ್ ನಟಿ ಜೀನತ್ ಅಮಾನ್ ಮತ್ತು ನಟ ಓಮಿ ವೈದ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಹಿಸಿದೆ. “ಸೋನಮ್ ವಾಂಗ್ಜುಕ್ ಅವರು ಉಪವಾಸ ಆರಂಭಿಸಿದ ಬಳಿಕ ಅವರ ದೇಹದ ತೂಕ ಸುಮಾರು 9 ಕೆ.ಜಿಯಷ್ಟು ಕಡಿಮೆಯಾಗಿದೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ” ಎಂದು ಸಿಪಿಜೆ ಹೇಳಿದೆ. ಈ ಹೇಳಿಕೆ ಬಂದ ಕೆಲವೇ ದಿನಗಳ ಬಳಿಕ ಇಬ್ಬರು ಕಲಾವಿದರು ಸೋನಮ್ ವಾಂಗ್ಚುಕ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಓಮಿ ವೈದ್ಯ ಅವರು ‘3 ಈಡಿಯಟ್ಸ್’ ಸಿನಿಮಾದ ಜನಪ್ರಿಯ ಪಾತ್ರ ‘ಫುನ್‌ಸುಖ್ ವಾಂಗ್ಡು’ವನ್ನು ಉಲ್ಲೇಖಿಸಿದ್ದಾರೆ. ಅಮೀರ್ ಖಾನ್ ಅಭಿನಯಿಸಿದ್ದ ಫುನ್‌ಸುಖ್ ವಾಂಗ್ಡು ಪಾತ್ರವು ಸೋನಂ ವಾಂಗ್ಚುಕ್ ಅವರಿಂದ ಸ್ಫೂರ್ತಿ ಪಡೆದಿದೆ ಎಂಬುದನ್ನು ಅವರು ಪ್ರೇಕ್ಷಕರಿಗೆ ನೆನಪಿಸಿದ್ದಾರೆ.

 “ಫುನ್‌ಸುಖ್ ವಾಂಗ್ಡು ಸಾಯುವುದು ನನಗೆ ಇಷ್ಟವಿಲ್ಲ. ಹಲೋ ಈಡಿಯಟ್ಸ್, ನನ್ನ ಗುರುತು ಸಿಕ್ಕಿತೇ? ನಾನು ಓಮಿ ವೈದ್ಯ. ‘3 ಈಡಿಯಟ್ಸ್’ ಸಿನಿಮಾದ ಚತುರ್ ಮತ್ತು ‘ದಿ ಆಫೀಸ್’ನ ಸಾದಿಕ್. ನಿಮಗೆ ಒಂದು ಮುಖ್ಯ ಸಂದೇಶ ಹೇಳಬೇಕಿದೆ. ನಾನು ಸಾಮಾನ್ಯವಾಗಿ ಇಂತಹ ವಿಡಿಯೊಗಳನ್ನು ಮಾಡುವುದಿಲ್ಲ. ಆದ್ದರಿಂದ ದಯವಿಟ್ಟು ಗಮನವಿಟ್ಟು ಕೇಳಿ” ಎಂದು ಓಮಿ ವೈದ್ಯ ಹೇಳಿದ್ದಾರೆ.

“‘3 ಈಡಿಯಟ್ಸ್’ ಚಿತ್ರದ ಫುನ್‌ಸುಖ್ ವಾಂಗ್ಡು ಪಾತ್ರವು ಲಡಾಖ್‌ನ ನೈಜ ಜೀವನದ ಎಂಜಿನಿಯರ್, ಆವಿಷ್ಕಾರಕ, ಶಿಕ್ಷಣ ತಜ್ಞ ಹಾಗೂ ಸುಧಾರಕ ಸೋನಮ್ ವಾಂಗ್ಚುಕ್ ಅವರ ಹೋರಾಟವನ್ನು ಆಧರಿಸಿದೆ ಎಂಬುದು ನಿಮಗೆ ಗೊತ್ತಿದೆಯೇ? ನಾನು ಅವರನ್ನು ಭೇಟಿಯಾಗಿದ್ದೇನೆ. ಅವರು ಬಹಳ ಆಸಕ್ತಿದಾಯಕ ವ್ಯಕ್ತಿ” ಎಂದು ಓಮಿ ವೈದ್ಯ ಹೇಳಿದ್ದಾರೆ.

ಸೋನಮ್ ವಾಂಗ್ಚುಕ್ ಅವರನ್ನು ‘ವಿನಮ್ರ’ ಮತ್ತು ‘ಅತ್ಯಂತ ಪ್ರಭಾವಶಾಲಿ ವ್ಯಕ್ತಿ’ ಎಂದು ಬಣ್ಣಿಸಿರುವ ಓಮಿ ವೈದ್ಯ, “ಸೋನಮ್ ಅವರು ಹಲವು ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಅವರ ಅವರ ಕುರಿತು ಜನರು ಇನ್ನಷ್ಟು ತಿಳಿದುಕೊಳ್ಳಬೇಕು” ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

“ಪ್ರಸ್ತುತ ಸೋನಮ್ ಅವರು ಬಹಳ ದೀರ್ಘಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಈ ವಿಷಯದ ಬಗ್ಗೆ ನೀವು ಕೇಳಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ. ಮಾಧ್ಯಮಗಳು ಈ ಕುರಿತು ವರದಿ ಮಾಡುತ್ತಿವೆಯೇ ಎಂಬುದೂ ತಿಳಿದಿಲ್ಲ. ಆದರೆ ಇದು ಅತ್ಯಂತ ಪ್ರಮುಖ ವಿಷಯ” ಎಂದು ಅವರು ಹೇಳಿದ್ದಾರೆ.

ಶಿಕ್ಷಣ, ಲಡಾಖ್‌ನ ಸ್ವಾಯತ್ತತೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸೋನಂ ವಾಂಗ್ಚುಕ್ ಧ್ವನಿ ಎತ್ತುತ್ತಿದ್ದಾರೆ ಎಂದು ಓಮಿ ವೈದ್ಯ ತಿಳಿಸಿದ್ದಾರೆ.

“ನೀವು ಅವರ ಅಭಿಪ್ರಾಯಗಳನ್ನು ಒಪ್ಪುತ್ತೀರೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ಅವರು ಸಾಯುವುದು ನನಗೆ ಇಷ್ಟವಿಲ್ಲ. ಜನರು ತಮ್ಮ ದೈನಂದಿನ ಬದುಕಿನಿಂದ ಸ್ವಲ್ಪ ಸಮಯ ತೆಗೆದುಕೊಂಡು, ಸೋನಮ್ ವಾಂಗ್ಚುಕ್ ಎತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಇನ್ನು, ಹಿರಿಯ ನಟಿ ಜೀನತ್ ಅಮಾನ್ ಕೂಡ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಸೋನಮ್ ವಾಂಗ್ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಇಂದು ನನ್ನ ಆಲೋಚನೆಗಳು ದೇಶದ ರಾಜಧಾನಿಯತ್ತ ನೆಟ್ಟಿವೆ. ಅಲ್ಲಿ ಸೋನಮ್ ವಾಂಗ್ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ 17ನೇ ದಿನಕ್ಕೆ ಕಾಲಿಡುತ್ತಿದ್ದಾರೆ. ವಾಂಗ್ಚುಕ್ ಅವರ ದೇಹದ ಸ್ನಾಯುಗಳು ಕ್ಷೀಣಿಸಲು ಆರಂಭಿಸಿದ್ದು, ಅವರು ತೀವ್ರ ನೋವು ಅನುಭವಿಸುತ್ತಿದ್ದಾರೆ ಎಂಬುದನ್ನು ಸುದ್ದಿಯೊಂದರಲ್ಲಿ ಓದಿದ್ದೇನೆ” ಎಂದು ಜೀನತ್ ಅಮಾನ್ ಬರೆದಿದ್ದಾರೆ.

“ಉಪವಾಸ ಕೊನೆಗೊಳಿಸುವಂತೆ ಕೇಳಿದಾಗ, ‘ನನ್ನ ಉಪವಾಸವನ್ನು ಕೊನೆಗೊಳಿಸುವಂತೆ ಕೇಳಬೇಡಿ. ಸರ್ಕಾರ ಕನಿಷ್ಠ ಮಾತುಕತೆಯನ್ನೂ ಏಕೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿ’ ಎಂಬುದಾಗಿ ಅವರು ಉತ್ತರಿಸಿದ್ದಾರೆ” ಎಂದು ಜೀನತ್ ಅಮಾನ್ ಉಲ್ಲೇಖಿಸಿದ್ದಾರೆ.

ಸೋನಮ್ ವಾಂಗ್ಚುಕ್ ಅವರ ಆಶಯವನ್ನು ಗೌರವಿಸಿ, ಈ ವಿಷಯದಲ್ಲಿ ಮಾತುಕತೆ ಆರಂಭಿಸುವಂತೆ ಭಾರತ ಸರ್ಕಾರವನ್ನು ಜೀನತ್ ಅಮಾನ್ ಒತ್ತಾಯಿಸಿದ್ದಾರೆ.

“ಇದು ಇಡೀ ಭಾರತದ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ಈ ಕುರಿತು ಮಾತುಕತೆ ಆರಂಭಿಸುವಂತೆ ಭಾರತ ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ. ನಮ್ಮ ದೇಶದ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರು ಬಲಿಯಾಗುವುದನ್ನು ಸುಮ್ಮನೆ ಕುಳಿತು ನೋಡುವ ಸಮಾಜವಾಗಿ ನಾವು ಬದಲಾಗಬಾರದು” ಎಂದು ಅವರು ಹೇಳಿದ್ದಾರೆ.

“ಭಾರತವು ಶಾಂತಿಯುತ ಪ್ರತಿಭಟನೆಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಧಿಕಾರದಲ್ಲಿರುವವರು ಇಂತಹ ಶಾಂತಿಯುತ ಪ್ರತಿಭಟನೆಗಳಿಗೆ ಶಾಂತಿಯುತ ಮಾತುಕತೆಯ ಮೂಲಕ ಪ್ರತಿಕ್ರಿಯಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ” ಎಂದು ಜೀನತ್ ಅಮಾನ್ ಅಭಿಪ್ರಾಯಪಟ್ಟಿದ್ದಾರೆ.

16ನೇ ದಿನಕ್ಕೆ ಕಾಲಿಟ್ಟ ವಾಂಗ್ಚುಕ್ ಉಪವಾಸ

ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ 16ನೇ ದಿನಕ್ಕೆ ಕಾಲಿಟ್ಟಿದೆ. ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ 24ನೇ ದಿನಕ್ಕೆ ಕಾಲಿಟ್ಟಿತ್ತು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಮತ್ತು ನೀಟ್ ವಿವಾದದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ನೀಟ್ ಪರೀಕ್ಷಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ಲೇಖನ ಓದಿದ್ದೀರಾ?: ಹಾರ್ಮುಜ್‌ನಲ್ಲಿ ಟ್ರಂಪ್ ‘ದಾದಾಗಿರಿ’: ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ಯನ್ನು ಇರಾನ್ ವಶಕ್ಕೆ ಪಡೆದರೆ ಹೇಗಿರುತ್ತದೆ?

ಜೂನ್ 20ರಂದು ಪ್ರತಿಭಟನೆ ಆರಂಭವಾಗಿದ್ದು, ಸೋನಂ ವಾಂಗ್ಚುಕ್ ಜೂನ್ 28ರಂದು ಪ್ರತಿಭಟನೆಗೆ ಸೇರ್ಪಡೆಯಾಗಿದ್ದರು. ಅಂದಿನಿಂದ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 20ರಂದು ಸಂಸತ್ತಿನತ್ತ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಘೋಷಿಸಿದೆ.

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿರೋಧ ಪಕ್ಷಗಳ ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...