TMC ಒಡೆದರೆ BJPಗೆ ಎಲ್ಲ ರೀತಿಯಲ್ಲೂ ಲಾಭ; ಮೋದಿ ಸರ್ಕಾರದ ಹುನ್ನಾರವೇನು?

Date:

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಒಂದಾದ ಮೇಲೊಂದರಂತೆ ಆಘಾತ ಎದುರಿಸುತ್ತಿದೆ. ಪಕ್ಷದೊಳಗೆ ಆಂತರಿಕ ಬಂಡಾಯ ಎದುರಾಗಿದ್ದು, ಬಣ ರಾಜಕಾರಣ ಹೆಚ್ಚು ಚರ್ಚೆಯಲ್ಲಿದೆ. ಟಿಎಂಸಿ 52 ಶಾಸಕರು ಬಂಡಾಯವೆದ್ದಿದ್ದಾರೆ. ಇದೇ ಸಮಯದಲ್ಲಿ ಟಿಎಂಸಿಯ ಲೋಕಸಭಾ ಸಂಸದರೂ ತಮ್ಮ ನಾಯಕರ ವಿರುದ್ಧ ಸಿಟ್ಟಿಗದ್ದಿದ್ದಾರೆ. ಗುಂಪುಕಟ್ಟಿಕೊಂಡು ಮೋದಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ರಾಜ್ಯಸಭಾ ಸದಸ್ಯರೂ ರಾಜೀನಾಮೆ ನೀಡುತ್ತಿದ್ದಾರೆ. ಸಂಸತ್ತಿ ಎರಡೂ ಮನೆಗಳಲ್ಲಿ ಟಿಎಂಸಿ ಸಂಸದರ ನಡೆ-ಧೋರಣೆಗಳ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ತನ್ನ ರಾಜಕೀಯ ಅಜೆಂಡಾಗಳನ್ನು ಪೂರೈಸಿಕೊಳ್ಳಲು ಟಿಎಂಸಿಯೊಳಗೆ ಬಿಜೆಪಿ ಬಂಡಾಯ-ಒಡಕಿನ ಕಿಡಿ ಹೊತ್ತಿಸಿದೆ.

- Advertisement -

ಸಂಸತ್ತಿನಲ್ಲಿ ಬಿಜೆಪಿಯ ಆಡಳಿತಾತ್ಮಕ ಶಕ್ತಿಯು ಟಿಎಂಸಿಯ ಬೆನ್ನೆಲುಬನ್ನೇ ಮುರಿಯುವ ಹಂತಕ್ಕೆ ತಲುಪಿದೆ. ಟಿಎಂಸಿಯ ಒಳಗೆ ಭುಗಾಲೆದ್ದಿರುವ ಭಿನ್ನಮತವು ಸಂಸತ್ತಿನ ಕೆಳಮನೆಯಲ್ಲಿ (ಲೋಕಸಭೆ) ಮಮತಾ ಬ್ಯಾನರ್ಜಿ ಅವರ ಶಕ್ತಿಯನ್ನು ಗಣನೀಯವಾಗಿ ಕುಗ್ಗಿಸುತ್ತಿದೆ. ಬಂಡಾಯ ಸಂಸದರ ನೇತೃತ್ವ ವಹಿಸಿರುವ ನಾಯಕರು ತಮಗೆ ಕನಿಷ್ಠ 20 ಸಂಸದರ ಬೆಂಬಲವಿದೆ ಎಂದು ಬಹಿರಂಗವಾಗಿಯೇ ಹಕ್ಕು ಮಂಡಿಸುತ್ತಿದ್ದಾರೆ. ಈ ಬಂಡಾಯಗಾರರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಮಗೆ ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಿ ಮಾನ್ಯತೆ ನೀಡಬೇಕು. ನಾವು ಕೇಂದ್ರದ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುತ್ತೇವ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಲೋಕಸಭೆಯಲ್ಲಿ 29 ಮಂದಿ ಟಿಎಂಸಿ ಸಂಸದರಿದ್ದಾರೆ. ಇವರಲ್ಲಿ 20 ಮಂದಿ ಬಂಡಾಯ ಎದ್ದಿದ್ದಾರೆ. ಸಂವಿಧಾನದ 10ನೇ ಅನುಸೂಚಿ ಅಥವಾ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಅಗತ್ಯವಿರುವ ಮೂರನೇ ಎರಡರಷ್ಟು ಸಂಖ್ಯಾಬಲವನ್ನು ಪ್ರದರ್ಶಿಸುತ್ತಿದ್ದಾರೆ. ಪರಿಣಾಮ, ಲೋಕಸಭೆಯಲ್ಲಿ ಟಿಎಂಸಿಯ ಅಧಿಕೃತ ಬಲವು ನಶಿಸಿಹೋತ್ತಿದೆ.

ಬಂಡಾಯ ಎದ್ದಿರುವ 20 ಸಂಸದರು ಎನ್‌ಡಿಎ ಮೈತ್ರಿಕೂಟದ ಪಾಲಾಗುವುದರಿಂದ, ಬಿಜೆಪಿಗೆ ಲೋಕಸಭೆಯಲ್ಲಿ ಬಲ ಹೆಚ್ಚಾಗಲಿದೆ. ಒಟ್ಟು 543 ಸಂಸದರ ಬಲ ಹೊಂದಿರುವ ಲೋಕಭೆಯಲ್ಲಿ ಎನ್‌ಡಿಎ 293 ಮಂದಿ ಸಂಸದರನ್ನು ಹೊಂದಿದೆ. ಅವರಲ್ಲಿ, 240 ಮಂದಿ ಬಿಜೆಪಿಗರು. ಇದೀಗ, ಈ 20 ಮಂದಿ ಬಿಜೆಪಿಯೊಂದಿಗೆ ವಿಲೀನಗೊಂಡರೆ, ಬಿಜೆಪಿಯ ಶಕ್ತಿ 262ಕ್ಕೆ ಹೆಚ್ಚಾಗಲಿದೆ. ಸ್ವತಂತ್ರ ಬಹುಮತಕ್ಕೆ ಕೇವಲ 10 ಸ್ಥಾನಗಳಷ್ಟೇ ಬಾಕಿ ಉಳಿಯುತ್ತವೆ.

ಆದಾಗ್ಯೂ, ಬಿಜೆಪಿಯ ಶಕ್ತಿ ಹೆಚ್ಚಳವು ಯಾವುದೇ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಬೇಕಾದ ಮ್ಯಾಜಿಕ್ ನಂಬರ್ ಪಡೆಯುವಲ್ಲಿ ಬಿಜೆಪಿ ಸಂಖ್ಯಾಬಲ ಬಹುಮತದ ಸನಿಹಕ್ಕೆ ಹೋಗುತ್ತದೆ. ಪರಿಣಾಮ, ಮಿತ್ರಪಕ್ಷಗಳ ಮುನಿಸಿಗೆ ಹೆದರುತ್ತಿದ್ದ ಬಿಜೆಪಿ, ಸ್ವತಂತ್ರವಾಗಿ ಮತ್ತು ದೃಢವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಂಸ್ಥಿಕ ಬಲವನ್ನು ಪಡೆದುಕೊಳ್ಳುತ್ತದೆ.

ಇನ್ನು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲೂ ಟಿಎಂಸಿಗೆ ಸರಣಿ ಆಘಾತಗಳು ಎದುರಾಗುತ್ತಿವೆ. ಇದು ನೇರವಾಗಿ ಬಿಜೆಪಿಯ ಹಾದಿಯನ್ನು ಸುಗಮಗೊಳಿಸುತ್ತಿದೆ. ಈಗಾಗಲೇ ಪಕ್ಷದ ಹಿರಿಯ ನಾಯಕರಾದ ಸುಖೇಂದು ಶೇಖರ್ ರಾಯ್, ಸುಸ್ಮಿತಾ ದೇವ್ ಹಾಗೂ ಕಾಶ್ ಚಿಕ್ ಬಾರೈಕ್ ಅವರಂತಹ ಪ್ರಭಾವಿ ರಾಜ್ಯಸಭಾ ಸಂಸದರು ತಮ್ಮ ಸ್ಥಾನ ಮತ್ತು ಟಿಎಂಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಇವರು ಕೇವಲ ರಾಜೀನಾಮೆ ನೀಡಿಲ್ಲ, ಬದಲಿಗೆ ಬಿಜೆಪಿಯ ಅಗ್ರ ನಾಯಕರೊಂದಿಗೆ ಮತ್ತು ಈಶಾನ್ಯ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ಬಿಜೆಪಿಗೆ ಇದುವರೆಗೆ ಪೂರ್ಣ ಬಹುಮತದ ಕೊರತೆ ಇತ್ತು. ಆದ್ದರಿಂದ, ಯಾವುದೇ ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಲು ಪ್ರಾದೇಶಿಕ ಪಕ್ಷಗಳ ದಯೆಯನ್ನು ಅವಲಂಬಿಸಬೇಕಾಗಿತ್ತು. ಆದರೆ, ಈಗ ರಾಜ್ಯಸಭೆಯಲ್ಲೂ ಬಿಜೆಪಿ ತನ್ನ ಸಂಖ್ಯಾಬಲವನ್ನು ಗಣನೀಯವಾಗಿ ವೃದ್ಧಿಸಿಕೊಳ್ಳಲು ಹವಣಿಸುತ್ತಿದೆ.

ಪ್ರಸ್ತುತ ರಾಜ್ಯಸಭೆಯ ಒಟ್ಟು ಬಲ 245 ಇದೆ. ಇದರಲ್ಲಿ, ಬಹುಮತಕ್ಕೆ 123 ಮಂದಿ ಸದಸ್ಯರ ಬಲ ಇರಬೇಕು. ಈವರೆಗೆ ಈ ಸಂಖ್ಯಾಬಲ ಬಿಜೆಪಿಗೆ ಇರಲಿಲ್ಲ. ಈಗ, ಇತ್ತೀಚೆಗೆ ನಡೆದ ಹಲವು ರಾಜ್ಯಗಳ ರಾಜ್ಯಸಭಾ ಚುನಾವಣೆಗಳಿಂದಾಗಿ ಎನ್‌ಡಿಎ ಬಲವು 137ಕ್ಕೆ ಏರಿಕೆಯಾಗಿದೆ. ಅದರಲ್ಲೂ, ಬಿಜೆಪಿಯ ಸ್ವಂತಬಲ 110ಕ್ಕೆ ಹೆಚ್ಚಾಗಿದೆ. ಬಿಜೆಪಿಗೆ ಸ್ವತಂತ್ರ ಬಹುಮತ ಪಡೆಯಲು ಕೇವಲ 13 ಸದಸ್ಯರಷ್ಟೇ ಬೇಕಾಗಿದ್ದಾರೆ.

ಈ ಲೇಖನ ಓದಿದ್ದೀರಾ?: ನೆಹರೂ ದಾಖಲೆ ಮುರಿದ ಮೋದಿ: ದೇಶ ಮುನ್ನಡೆಯಿತೋ, ಹಿಂದಕ್ಕೆ ಹೋಯಿತೋ?

ಅದಕ್ಕಾಗಿ, ವಿಪಕ್ಷಗಳ ಸದಸ್ಯರನ್ನು ಬೇಟೆಯಾಡಲು ಮೋದಿ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಬಂಗಾಳದಲ್ಲಿ ಅಲ್ಲೋಲ-ಕಲ್ಲೋಲಕ್ಕೆ ತುತ್ತಾಗಿರುವ ಟಿಎಂಸಿಯನ್ನು ಗುರಿಯಾಗಿಸಿಕೊಂಡಿದೆ. ಈಗಾಗಲೇ, ರಾಜ್ಯಸಭೆಗೆ ಮೂವರು ಟಿಎಂಸಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಗಳಿಗೆ ಬಿಜೆಪಿಗರೇ ಆಯ್ಕೆಯಾಗುವುದು ಖಚಿತ. ಅಂತೆಯೇ, ರಾಜ್ಯ ಸರ್ಕಾರಗಳಲ್ಲಿ ಬಿಜೆಪಿ ಬಲ ಹೆಚ್ಚಿರುವ ರಾಜ್ಯಗಳಲ್ಲಿ ವಿಪಕ್ಷಗಳ ಮತ್ತಷ್ಟು ಸದಸ್ಯರು ರಾಜೀನಾಮೆ ಕೊಡುವಂತೆ ಮಾಡಿ, ಆ ಸ್ಥಾನಗಳನ್ನು ಕಬಳಿಸುವ ಹುನ್ನಾರ ಬಿಜೆಪಿಯದ್ದು.

ಇದೆಲ್ಲವೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಂಸತ್ತಿನ ಎರಡೂ ಮನೆಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಾನೂನುಗಳನ್ನು ಜಾರಿಗೊಳಿಸುವ ಸಾರ್ವಭೌಮ ಶಕ್ತಿಯನ್ನು ತಂದುಕೊಡುತ್ತದೆ. ಅದರೊಂದಿಗೆ, ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಿಕೊಳ್ಳಲು ಮೋದಿ ಸರ್ಕಾರಕ್ಕೆ ಅನುಕೂಲವೂ ಆಗುತ್ತದೆ.

ಒಂದು ಕಡೆ ಸಂಸತ್ತಿನಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದಲ್ಲಿನ ಪ್ರಾದೇಶಕ ಪಕ್ಷಗಳು ಒಡೆದು ಚೂರಾಗುತ್ತಿವೆ. ಈಗಾಗಲೇ, ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆಗೊಂಡಿವೆ. ಈಗ, ಟಿಎಂಸಿಯನ್ನು ಒಡೆಯಲು ಬಿಜೆಪಿ ಎಲ್ಲ ರೀತಿಯಲ್ಲೂ ಕಸರತ್ತು ನಡೆಸಿದೆ. ಕಾಂಗ್ರೆಸ್‌ ಜೊತೆಗೆ ಮುನಿಸಿಕೊಂಡಿರುವ ಡಿಎಂಕೆ, ಮೈತ್ರಿಕೂಟದಿಂದ ಹೊರಗುಳಿದಿದೆ. ಎಎಪಿ ಈಗಾಗಲೇ ಹೊರಬಿದ್ದಿದೆ. ವಿಪಕ್ಷಗಳಲ್ಲಿನ ಈ ಒಡಕು ಮತ್ತು ಭಿನ್ನಾಭಿಪ್ರಾಯಗಳೂ ಬಿಜೆಪಿಗೆ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ನಿರಾತಂಕದ ಅಖಾಡವನ್ನು ಸಿದ್ದಗೊಳಿಸುತ್ತಿದೆ. ಜೊತೆಗೆ, ಎಸ್‌ಐಆರ್‌ ಎಂಬ ಪೆಡಂಭೂತವೂ ಬಿಜೆಪಿಯ ಹಾದಿಯನ್ನು ಸುಗಮಗೊಳಿಸುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ.1ರಂದು ʼದಿಲ್ಲಿ ಚಲೋʼ | ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಜೊತೆಗೂಡುವಂತೆ ರಾಹುಲ್ ಗಾಂಧಿ ಕರೆ

ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನವನ್ನು ತಡೆಯಲು ಹಾಗೂ ಸಂವಿಧಾನವನ್ನು ರಕ್ಷಿಸಲು ನವೆಂಬರ್...

SIR ಸಂಚು: 10 ಕೋಟಿ ಜನರಲ್ಲಿ ಸಿಕ್ಕಿದ್ದು ಬರಿ 1,600 ವಿದೇಶಿಯರು!

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ನಡೆಸುತ್ತಿರುವುದು ದೇಶದ...

ಅಪ್ರಾಪ್ತ ಪುತ್ರನಿಂದ ಕಾರು ಅಪಘಾತ: ಕೇರಳದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಕೊಚ್ಚಿಯಲ್ಲಿ 17 ವರ್ಷದ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್-ಬೆಂಜ್ ಕಾರು ಡಿಕ್ಕಿ...

ಯುಪಿಯಲ್ಲಿ ಮುಂದುವರೆದ ಮರ್ಯಾದೆಗೇಡು ಹತ್ಯೆ; ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ

ಪ್ರೀತಿಸಿ ಮದುವೆಯಾದನೆಂಬ ಕಾರಣಕ್ಕೆ ದಲಿತ ಯುವಕನನ್ನು ಪತ್ನಿಯ ಕುಟುಂಬದವರು ಕೊಲೆ ಮಾಡಿರುವ...