ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ವೆಚ್ಚ ಜಿಡಿಪಿಯ ಶೇ.2ಕ್ಕಿಂತ ಕಡಿಮೆ: ವರದಿ

Date:

ದೇಶದ ಆರ್ಥಿಕತೆ ಬೆಳವಣಿಗೆ ಕಾಣುತ್ತಿದ್ದರೂ, ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಮಾಡುತ್ತಿರುವ ವೆಚ್ಚ ಮಾತ್ರ ಜಿಡಿಪಿಯ ಶೇ. 2ಕ್ಕಿಂತ ಕಡಿಮೆಯೇ ಇದೆ ಎಂದು ರಾಷ್ಟ್ರೀಯ ಆರೋಗ್ಯ ಖಾತೆಗಳ 2023-24ನೇ ಅಂದಾಜು ವರದಿಯಲ್ಲಿ ತಿಳಿಸಿದೆ.

- Advertisement -

ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ವೆಚ್ಚವನ್ನು 2025ರ ವೇಳೆಗೆ ಜಿಡಿಪಿಯ ಶೇ.2.5ಕ್ಕೆ ಹೆಚ್ಚಿಸುವ ಗುರಿಯನ್ನು 2017ರ ರಾಷ್ಟ್ರೀಯ ಆರೋಗ್ಯ ನೀತಿ ಹೊಂದಿತ್ತು. ಆದರೆ, ಸರ್ಕಾರದ ವೆಚ್ಚ, ವಿಮಾ ಪಾವತಿಗಳು ಹಾಗೂ ಜನರ ಸ್ವಂತ ವೆಚ್ಚ ಸೇರಿದಂತೆ ಆರೋಗ್ಯ ಕ್ಷೇತ್ರದ ಒಟ್ಟು ವೆಚ್ಚವು 2023-24ರಲ್ಲಿ ಜಿಡಿಪಿಯ ಶೇ. 3.3ರಷ್ಟಿತ್ತು. ಇದು ಕೋವಿಡ್‌ ಅವಧಿಯ 2021-2022ರಲ್ಲಿ ದಾಖಲಾಗಿದ್ದ ಶೇ. 3.8ಕ್ಕಿಂತ ಕಡಿಮೆಯಾಗಿದೆ.

ಜಿಡಿಪಿಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಕಡಿಮೆಯೇ ಇದೆ. ಆದರೆ, ವ್ಯಕ್ತಿಯೊಬ್ಬರ ಆರೋಗ್ಯ ವೆಚ್ಚದ ಸರಾಸರಿ ಮೊತ್ತ ಹೆಚ್ಚಾಗಿದೆ. ಅಂದರೆ, ದೇಶದ ಆರ್ಥಿಕತೆಯ ಬೆಳವಣಿಗೆಗೆ ಅನುಗುಣವಾಗಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಹೆಚ್ಚಳವಾಗಿಲ್ಲ. ಭಾನುವಾರ ಬಿಡುಗಡೆಯಾದ ವರದಿಯ ಪ್ರಕಾರ, 2023-24ರಲ್ಲಿ ಒಬ್ಬ ವ್ಯಕ್ತಿಯ ಆರೋಗ್ಯಕ್ಕಾಗಿ ಸರಾಸರಿ 6,801ರೂ ವೆಚ್ಚ ಮಾಡಲಾಗಿದೆ. ಹಿಂದಿನ ಎರಡು ವರ್ಷಗಳಲ್ಲಿ ಈ ಮೊತ್ತ ಕ್ರಮವಾಗಿ 6,373 ಮತ್ತು 6,602 ರೂ. ಆಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈಲ್ವೆ ಪ್ಲಾಟ್‌ಫಾರ್ಮ್‌ನಿಂದ ಜಾಗತಿಕ ಪಯಣ: ಸಣ್ಣ ಊರಿನ ಕನಸುಗಳಿಗೆ...

"ಧೋನಿ ಬರುವ ಮುನ್ನ ರಾಂಚಿಯ ಪೋಷಕರು ಮಕ್ಕಳ ವೈದ್ಯರು, ಎಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದರು. ಅವರು ಬಂದ ಮೇಲೆ ಎಲ್ಲರೂ ಧೋನಿಯಾಗಲು, ವಿಕೆಟ್‌ಕೀಪರ್ ಆಗಲು ಬಯಸಿದರು" ಎನ್ನುತ್ತಾರೆ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ. ಸೌರಭ್...

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಆರೋಗ್ಯ ವೆಚ್ಚದಲ್ಲಿ ಸರ್ಕಾರದ ಪಾಲು ಹೆಚ್ಚಾಗುತ್ತಿದೆಯಾದರೂ, ಕೋವಿಡ್‌ ಅವದಿಯಲ್ಲಿ ದಾಖಲಾಗಿದ್ದ ಗರಿಷ್ಠ ಮಟ್ಟದಿಂದ ಸ್ವಲ್ಪ ಇಳಿಕೆಯಾಗಿದೆ. 2023-24ರಲ್ಲಿ ಒಟ್ಟು ಆರೋಗ್ಯ ವೆಚ್ಚದಲ್ಲಿ ಸರ್ಕಾರದ ಪಾಲು ಶೇ 43.5ರಷ್ಟಿದ್ದರೆ, ಜನರು ತಮ್ಮ ಸ್ವಂತ ಹಣದಿಂದ ಭರಿಸಿದ ವೆಚ್ಚದ ಪ್ರಮಾಣ ಶೇ. 42.7ರಷ್ಟಿದೆ.
ಒಳ್ಳೆಯ ಬೆಳವಣಿಗೆಯೆಂದರೆ, ಕಳೆದ ಮೂರು ವರ್ಷಗಳಿಂದ ಆರೋಗ್ಯ ಕ್ಷೇತ್ರದ ಮೇಲಿನ ಸರ್ಕಾರದ ವೆಚ್ಚವುಉ ಜನರ ಸ್ವಂತ ವೆಚ್ಚಕ್ಕಿಂತ ಹೆಚ್ಚಾಗಿದೆ. ಕೋವಿಡ್‌ ಪೂರ್ವದಲ್ಲಿ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡುತ್ತಿದ್ದ ಆರೋಗ್ಯದ ವೆಚ್ಚದ ಪ್ರಮಾಣ ಶೇ. 47.1ರಷ್ಟಿತ್ತು. ಅದೇ ಅವಧಿಯಲ್ಲಿ ಸರ್ಕಾರದ ಪಾಲು ಶೇ. 41.1ರಷ್ಟಿತ್ತು. ಇದೀಗ ಜನರ ಸ್ವಂತ ವೆಚ್ಚದ ಪ್ರಮಾಣ ಕಡಿಮೆಯಾಗಿದ್ದು, ಸರ್ಕಾರದ ಪಾಲು ಹೆಚ್ಚಾಗಿದೆ.

ವಿಮಾ ಸೌಲಭ್ಯಗಳ ಮೇಲಿನ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2019-20ರಲ್ಲಿ ಒಟ್ಟು ಆರೋಗ್ಯ ವೆಚ್ಚದಲ್ಲಿ ಖಾಸಗಿ ಆರೋಗ್ಯ ವಿಮೆಯ ಪಾಲು ಶೇ. 7ರಷ್ಟಿದ್ದರೆ, ಇದೀಗ ಶೇ 10.2ಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಆಯುಷ್ಮಾನ್‌ ಭಾರತ್‌ನಂತಹ ಯೋಜನೆಗಳ ಮೂಲಕ ಮಾಡಲಾಗುವ ಸಾಮಾಜಿಕ ಭದ್ರತಾ ವೆಚ್ಚವು ಒಟ್ಟು ಆರೋಗ್ಯ ವೆಚ್ಚದ ಶೇ. 11ರಷ್ಟಿದೆ. 2019-20ರಲ್ಲಿ ಈ ಪ್ರಮಾಣ ಶೇ. 9.3ರಷ್ಟಿತ್ತು.

ಭಾರತದಲ್ಲಿ ಜನರು ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ಎರಡು ಪಟ್ಟು ಹೆಚ್ಚು ಹಣ ವೆಚ್ಚ ಮಾಡುತ್ತಿದ್ದಾರೆ ಎಂಬದನ್ನೂ ವರದಿ ಬಹಿರಂಗಪಡಿಸಿದೆ. ಒಟ್ಟು ಪ್ರಸ್ತುತ ಆರೋಗ್ಯ ವೆಚ್ಚದಲ್ಲಿ ಖಾಸಗಿ ಆರೋಗ್ಯ ಸೇವಾ ಸಂಸ್ಥೆಗಳ ಪಾಲು ಶೇ. 31.8ರಷ್ಟಿದೆ

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೃಹಲಕ್ಷ್ಮಿ | ಹಳ್ಳಿ ಮಹಿಳೆಯರ ಬದುಕು ಬದಲಿಸುತ್ತಿದೆ ‘ಗ್ರಾಮೀಣ ಮೈಕ್ರೋ-ಉದ್ಯಮ’!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಜೀವನದಲ್ಲಿ...

ಹಾಸ್ಟೆಲ್‌ನಿಂದ ಪರಾರಿ ಪ್ರಯತ್ನ: ವಿದ್ಯುತ್ ತಂತಿ ತಗುಲಿ 11ರ ಬಾಲಕಿ ದುರ್ಮರಣ

ಸರ್ಕಾರಿ ಶಾಲಾ ಆವರಣದಲ್ಲಿರುವ ಬಾಲಕಿಯರ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಂಡು ಹೊರಗೆ ಹೋಗಲು...

‘ರೀಲ್ಸ್ ಮಾಡುವವರಿಗೆ ಪತ್ರಕರ್ತರ ರಕ್ಷಣೆ ಅನ್ವಯಿಸದು’: ಸುಪ್ರೀಂ ಕೋರ್ಟ್‌ಗೆ ದೆಹಲಿ ಪೊಲೀಸ್ ಅಫಿಡವಿಟ್‌!

 ಪ್ರತಿಭಟನೆಗಳನ್ನು ವರದಿ ಮಾಡಲು ಪತ್ರಕರ್ತರಿಗೆ ಯಾವುದೇ ಅಡ್ಡಿಯಾಗದಂತೆ ಸುಪ್ರೀಂ ಕೋರ್ಟ್ ನೀಡಿರುವ...