2027ರ ಮಾರ್ಚ್‌‌ನಿಂದ ಎಲ್ಲ ಸಂಸ್ಥೆಗಳಿಗೂ ಭಾರತೀಯ ಕಾಲಮಾನ IST ಬಳಸುವುದು ಕಡ್ಡಾಯ

Date:

2027ರ ಮಾರ್ಚ್ ತಿಂಗಳಿನಿಂದ ದೇಶದ ಎಲ್ಲಾ ಸರ್ಕಾರಿ, ಕಾನೂನು, ವಾಣಿಜ್ಯ ಹಾಗೂ ಡಿಜಿಟಲ್ ಸಂಸ್ಥೆಗಳಿಗೆ ‘ಭಾರತೀಯ ಪ್ರಮಾಣಿತ ಸಮಯ’ವನ್ನು (Indian Standard Time – IST) ಬಳಸುವುದು ಕಡ್ಡಾಯವಾಗಲಿದೆ. ದೇಶದ್ಯಾಂತ ಏಕರೂಪದ ಕಾಲಮಾನ ಹಾಗೂ ಡಿಜಿಟಲ್ ಮೂಲಸೌಕರ್ಯಗಳ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

- Advertisement -

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಲೀಗಲ್ ಮೆಟ್ರಾಲಜಿ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಿಯಮಗಳು, 2026 ಅನ್ನು ಅಧಿಸೂಚಿಸಿದ್ದು, ಈ ನಿಯಮಗಳು ಗೆಜೆಟ್‌ನಲ್ಲಿ ಪ್ರಕಟಗೊಂಡ 180 ದಿನಗಳ ನಂತರ ಅಂದರೆ 2027ರ ಮಾರ್ಚ್ ವೇಳೆಗೆ ಅಧಿಕೃತವಾಗಿ ಜಾರಿಗೆ ಬರಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನೂ ಓದಿ: ಕಾಲಮಾನ | ಇರಾನ್‌ ಮೇಲಿನ ಇಸ್ರೇಲ್, ಅಮೆರಿಕ ಯುದ್ಧ- ಈ ಮೌನ ಭಾರತಕ್ಕೆ ಶೋಭೆಯಲ್ಲ

ಪ್ರಸ್ತುತ ದೇಶದ ಹಲವು ಟೆಲಿಕಾಂ ಸಂಸ್ಥೆಗಳು, ಇಂಟರ್ನೆಟ್ ಸೇವಾದಾತರು, ಬ್ಯಾಂಕಿಂಗ್ ಜಾಲಗಳು ಮತ್ತು ಡೇಟಾ ಸೆಂಟರ್‌ಗಳು ಜಿಪಿಎಸ್ (GPS) ನಂತಹ ವಿದೇಶಿ ಸಮಯ ಮೂಲಗಳನ್ನು ಅವಲಂಬಿಸಿವೆ. ಹೊಸ ನಿಯಮ ಜಾರಿಯಾದ ನಂತರ ಎಲ್ಲಾ ಸಂಸ್ಥೆಗಳ ಸಿಸ್ಟಮ್ ಹಾಗೂ ನೆಟ್‌ವರ್ಕ್‌ಗಳು ಕಡ್ಡಾಯವಾಗಿ ಐಎಸ್‌ಟಿ ಸಮಯಕ್ಕೇ ಸಿಂಕ್ ಆಗಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.

ಆನ್‌ಲೈನ್ ಪಾವತಿಗಳು, ಷೇರು ಮಾರುಕಟ್ಟೆ ವಹಿವಾಟು, 5G ನೆಟ್‌ವರ್ಕ್ ಮತ್ತು ಪವರ್ ಗ್ರಿಡ್‌ಗಳಲ್ಲಿ ಮೈಕ್ರೋಸೆಕೆಂಡ್ ಮಟ್ಟದ ಸಮಯದ ವ್ಯತ್ಯಾಸವೂ ಸೈಬರ್ ದಾಳಿ ಅಥವಾ ತಾಂತ್ರಿಕ ದೋಷಗಳಿಗೆ ಕಾರಣವಾಗಬಹುದು. ಕಡ್ಡಾಯ ಐಎಸ್‌ಟಿ ಬಳಕೆಯಿಂದ ಸಮಯದ ವ್ಯತ್ಯಾಸ (Time Discrepancy) ಇಲ್ಲವಾಗಿ ಆನ್‌ಲೈನ್ ವಂಚನೆಗಳನ್ನು ತಡೆಯಲು ಮತ್ತು ಡಿಜಿಟಲ್ ಭದ್ರತೆ ಹೆಚ್ಚಿಸಲು ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ – ನ್ಯಾಷನಲ್ ಫಿಜಿಕಲ್ ಲ್ಯಾಬೊರೇಟರಿ (CSIR-NPL) ನಿರ್ವಹಿಸುವ UTC(NPLI) ಸಮಯ ಶ್ರೇಣಿ ಮತ್ತು ಇಸ್ರೋದ ‘ನಾವಿಕ್’ (NavIC) ಉಪಗ್ರಹ ವ್ಯವಸ್ಥೆಗಳ ಮೂಲಕ ಅಧಿಕೃತ ಐಎಸ್‌ಟಿ ಸಮಯವನ್ನು ಪ್ರಸಾರ ಮಾಡಲಾಗುತ್ತದೆ.

ಅಧಿಕೃತ ಉದ್ದೇಶಗಳಿಗೆ ಐಎಸ್‌ಟಿ ಹೊರತುಪಡಿಸಿ ಬೇರೆ ಯಾವುದೇ ಸಮಯದ ಮೂಲಗಳನ್ನು ಬಳಸುವುದು, ದಾಖಲಿಸುವುದು ಅಥವಾ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ (ವಿದೇಶಿ ಸಮಯದ ವಲಯಗಳನ್ನು ಸ್ಪಷ್ಟವಾಗಿ ನಮೂದಿಸುವ ಹಾಗೂ ವೈಜ್ಞಾನಿಕ ಸಂಶೋಧನೆಗಳಿಗೆ ವಿನಾಯಿತಿ ನೀಡಲಾಗಿದೆ). ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ‘ಲೀಗಲ್ ಮೆಟ್ರಾಲಜಿ ಕಾಯ್ದೆ’ಯಡಿ ದಂಡ ವಿಧಿಸಲಾಗುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...