ಬಂಗಾಳ ಮತದಾರರ ಪಟ್ಟಿಯಿಂದ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಸಾಹಿದುಲ್ಲಾ ಮುನ್ಷಿ ಹೆಸರೇ ಡಿಲೀಟ್!

Date:

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿವಾದಾತ್ಮಕ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್ ) ಪ್ರಕ್ರಿಯೆಯ ಬಳಿಕ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಸಾಹಿದುಲ್ಲಾ ಮುನ್ಷಿ ಅವರು ಗುರುವಾರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳ ವಕ್ಫ್ ಮಂಡಳಿಯ ಅಧ್ಯಕ್ಷರಾಗಿರುವ ಅವರು, ಈ ಸಂಬಂಧ ಮೇಲ್ಮನವಿ ಪ್ರಾಧಿಕಾರದ (ಅಪೆಲೆಟ್ ಟ್ರಿಬ್ಯೂನಲ್) ಮೊರೆ ಹೋಗಲು ಕಾಯುತ್ತಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

- Advertisement -

​ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ, ನ್ಯಾಯಿಕ ಅಧಿಕಾರಿಗಳಿಂದ ಪರಿಶೀಲನೆಗೆ ಒಳಪಟ್ಟ ಮತದಾರರನ್ನೊಳಗೊಂಡ ಮೊದಲ ಪೂರಕ ಪಟ್ಟಿಯನ್ನು ಚುನಾವಣಾ ಆಯೋಗವು (ಇಸಿ) ಮಾರ್ಚ್ 23 ರಂದು ಪ್ರಕಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಮಾಜಿ ನ್ಯಾಯಮೂರ್ತಿಗಳ ಪತ್ನಿ ಸಹಾನಾ ಮತ್ತು ಹಿರಿಯ ಪುತ್ರ ಇಫ್ತೇಕರ್ ಅವರ ಪ್ರಕರಣಗಳು ಇನ್ನೂ ಪರಿಶೀಲನಾ ಹಂತದಲ್ಲಿವೆ. ಕಿರಿಯ ಪುತ್ರ ಇಬ್ತೇಹಾಜ್ ಹೊಸ ಮತದಾರರಾಗಿ ಅರ್ಜಿ ಸಲ್ಲಿಸಿದ್ದಾರೆ. “ಇಲ್ಲಿಯವರೆಗೆ, ಕೇವಲ ನನ್ನ ಹೆಸರನ್ನು ಮಾತ್ರ ಅಳಿಸಲಾಗಿದೆ. ನನ್ನ ಪತ್ನಿ ಮತ್ತು ಹಿರಿಯ ಮಗನ ಹೆಸರುಗಳು ಇನ್ನೂ ಪರಿಶೀಲನಾ ಪಟ್ಟಿಯಲ್ಲಿವೆ. ಇದು ಅತ್ಯಂತ ಅವಮಾನಕರ ಮತ್ತು ನೋವಿನ ಸಂಗತಿಯಾಗಿದ್ದು, ಇದು ಒಂದು ರೀತಿಯ ಕಿರುಕುಳ. ವಿಪರ್ಯಾಸವೆಂದರೆ, ಅಧಿಕಾರಿಗಳು ನಮ್ಮಿಂದ ದಾಖಲೆಗಳನ್ನು ಪಡೆದುಕೊಂಡು ಅಪ್ಲೋಡ್ ಮಾಡುವುದಾಗಿ ಹೇಳಿದರು, ಆದರೆ ಯಾವುದೇ ಸ್ವೀಕೃತಿ ರಸೀದಿ ನೀಡಲಿಲ್ಲ” ಎಂದು ಮುನ್ಷಿ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಪ್ರತಿಕ್ರಿಯಿಸಿದ್ದಾರೆ.

​ದಾಖಲೆ ಸಲ್ಲಿಸಿದರೂ ಅಚ್ಚರಿ
ಪಾಸ್‌ಪೋರ್ಟ್ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ ತಮ್ಮ ಹೆಸರನ್ನು ಕೈಬಿಟ್ಟಿರುವುದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅವರು ಹೇಗೆ ಪರಿಶೀಲಿಸಿದ್ದಾರೆ ಮತ್ತು ಹೇಗೆ ಅಳಿಸಿದ್ದಾರೆ ಎಂದು ನನಗೆ ತಿಳಿದಿಲ್ಲ. ನಮ್ಮನ್ನು ಕತ್ತಲೆಯಲ್ಲಿಡಲಾಗಿತ್ತು. ಹೆಚ್ಚಿನ ದಾಖಲೆಗಳು ಬೇಕು ಎಂದು ನಮಗೆ ಮೊದಲೇ ತಿಳಿಸಿದ್ದರೆ, ನಾವು ಅವುಗಳನ್ನು ಸಲ್ಲಿಸಬಹುದಿತ್ತು. ಒದಗಿಸಬೇಕಾದ ದಾಖಲೆಗಳ ಪಟ್ಟಿಯೊಂದು ಇತ್ತು, ಅದರಲ್ಲಿರುವ ಯಾವುದಾದರೂ ಒಂದು ದಾಖಲೆ ಇದ್ದರೂ ಸಾಕಾಗಿತ್ತು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

​ಸೆಪ್ಟೆಂಬರ್ 1958 ರಲ್ಲಿ ಜನಿಸಿದ ಮುನ್ಷಿ ಅವರು, 1986 ರಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು 27 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 2013 ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಅವರು, ಮಾರ್ಚ್ 2016 ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡು ಸೆಪ್ಟೆಂಬರ್ 2020 ರಲ್ಲಿ ನಿವೃತ್ತರಾದರು.

ಇದನ್ನು ಓದಿದ್ದೀರಾ? ಎಚ್ಚರಿಕೆ ನೀಡಿದ ಒಂದು ಗಂಟೆಯಲ್ಲೇ ಅಮೆರಿಕದ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಯುದ್ಧನೌಕೆಯತ್ತ ಕ್ಷಿಪಣಿ ಹಾರಿಸಿದ ಇರಾನ್

​ನ್ಯಾಯಮೂರ್ತಿಯಾಗುವ ಮೊದಲೇ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ತಾವು ಉನ್ನತ ಮಟ್ಟದಲ್ಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ಅವರು ಬೊಟ್ಟು ಮಾಡಿದರು. “ನನ್ನ ದಾಖಲೆಗಳ ಜೊತೆಗೆ, ಅವರು ಆಂತರಿಕ ವಿಚಾರಣೆಯನ್ನೂ ನಡೆಸುತ್ತಾರೆ. ಸೂಕ್ತ ಪರಿಶೀಲನೆಯ ನಂತರವಷ್ಟೇ ಸುಪ್ರೀಂ ಕೋರ್ಟ್ ಕೊಲಿಜಿಯಂ ಹೆಸರನ್ನು ಅನುಮೋದಿಸುತ್ತದೆ. ನಂತರ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ ಮತ್ತು ನೀವು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತೀರಿ” ಎಂದು ವಿವರಿಸಿದರು.

ಉದ್ದೇಶಪೂರ್ವಕವಾಗಿ ತಮ್ಮ ಹೆಸರನ್ನು ಅಳಿಸಲಾಗಿದೆ ಎಂದು ತಾವು ಭಾವಿಸಲಿಲ್ಲ ಎಂದ ಮುನ್ಷಿ ಅವರು, ಈ ಪರಿಶೀಲನಾ ಪ್ರಕ್ರಿಯೆಯು “ಯಾಂತ್ರಿ”ವಾಗಿದೆ ಎಂದು ಟೀಕಿಸಿದರು. ” ಯಾರೂ ತಮ್ಮ ವಿವೇಚನೆಯನ್ನು ಬಳಸುತ್ತಿಲ್ಲ. ಅಲ್ಪಾವಧಿಯಲ್ಲಿ 60 ಲಕ್ಷ ಅರ್ಜಿಗಳ ಪರಿಶೀಲನೆ ನಡೆಯಬೇಕಿದೆ.. ಏನಾಗಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಅಧಿಕಾರಿಗಳು ಇದನ್ನು ನ್ಯಾಯಿಕವಾಗಿ ಮಾಡುವ ಬದಲು ಯಾಂತ್ರಿಕವಾಗಿ ಮಾಡುತ್ತಿದ್ದಾರೆ” ಎಂದರು

​ತಾವು ಹಾಗೂ ಪತ್ನಿ ಈ ಹಿಂದೆ ಬೌಬಜಾರ್ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಿದ್ದೆವು ಎಂದ ಅವರು, “ಈಗ ನಾವು ಎಂಟಾಲಿ ಕ್ಷೇತ್ರಕ್ಕೆ ವಾಸ್ತವ್ಯ ಬದಲಾಯಿಸಿದ್ದೇವೆ… ಅವರು ಯಾವ ಆಧಾರದ ಮೇಲೆ ಲೆಕ್ಕಾಚಾರ ಹಾಕಿದ್ದಾರೋ ನನಗೆ ಅರ್ಥವಾಗುತ್ತಿಲ್ಲ… ಅದು ಕೇವಲ ಅವರ ಕಲ್ಪನೆಯಷ್ಟೇ” ಎಂದು ಹೇಳಿದರು.

​ಮೇಲ್ಮನವಿಗೆ ನಿರ್ಧಾರ
ತಮ್ಮ ಹೆಸರನ್ನು ಕೈಬಿಡಲು ಅಧಿಕೃತ ಕಾರಣ ತಿಳಿದ ನಂತರವೇ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. “ಕಾರಣ ತಿಳಿಯದೆ ನಾನು ಮೇಲ್ಮನವಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ಮೇಲ್ಮನವಿಯನ್ನು ಹೇಗೆ ಸಲ್ಲಿಸಬೇಕು ಅಥವಾ ಅದರ ನಿರ್ದಿಷ್ಟ ನಮೂನೆ ಏನು ಎಂಬುದರ ಬಗ್ಗೆ ಇನ್ನೂ ಏನನ್ನೂ ಘೋಷಿಸಿಲ್ಲ. ಅದರ ವಿವರ ಸಿಕ್ಕ ತಕ್ಷಣ, ನಾನು ಮೇಲ್ಮನವಿಯನ್ನು ದಾಖಲಿಸುತ್ತೇನೆ” ಎಂದರು.

ಎಸ್‌ಐಆರ್ ಪ್ರಕ್ರಿಯೆಯ ನಂತರ ವಿವಾದಿತವಾಗಿರುವ, ವಿಲೇವಾರಿಯಾಗದ 60 ಲಕ್ಷ ಪ್ರಕರಣಗಳ ಮೇಲ್ಮನವಿ ಆಲಿಸಲು ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ 19 ಮೇಲ್ಮನವಿ ನ್ಯಾಯಮಂಡಳಿಗಳನ್ನು ರಚಿಸಿದೆ. 23 ಜಿಲ್ಲೆಗಳಿಗಾಗಿ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಏಕ-ಸದಸ್ಯ ನ್ಯಾಯಮಂಡಳಿಗಳನ್ನು ರಚಿಸಲಾಗಿದೆ.
​ಪಶ್ಚಿಮ ಬಂಗಾಳದಲ್ಲಿ ಮುಂಬರುವ ಏಪ್ರಿಲ್ 23 ಮತ್ತು 29 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ ಜಿಲ್ಲೆಯಲ್ಲಿ 8 ಅನಧಿಕೃತ ಕ್ಲಿನಿಕ್‌ಗಳು ಬಂದ್, ಪ್ರಕರಣ ದಾಖಲು

ವೈದ್ಯಕೀಯ ಪದವಿ ಪಡೆಯದೆ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ)...

ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ: ಸಾಕ್ಷ್ಯ ಸಂಗ್ರಹಕ್ಕೆ ಸುಪ್ರೀಂ ಕೋರ್ಟ್ ಸಮಿತಿಯಿಂದ ವಿಶೇಷ ಪೋರ್ಟಲ್

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆ ವೇಳೆ ಪೆಲೆಟ್...