ಬ್ರಿಕ್ಸ್‌ ಗೈರುಹಾಜರಿಗೆ ಬಾಂಗ್ಲಾದ ಅದಾನಿ ವಿದ್ಯುತ್‌ ಸ್ಥಾವರ ಸ್ಥಗಿತ; ಬಿಎನ್‌ಪಿ ಗಂಭೀರ ಆರೋಪ

Date:

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶದ ಪ್ರಧಾನಿ ತಾರಿಖ್ ರೆಹಮಾನ್ ನಿರಾಕರಿಸಿದ್ದೇ ಝಾರ್ಖಂಡ್‌ನಲ್ಲಿರುವ ಅದಾನಿ ಪವರ್‌ನ ‘ಗೊಡ್ಡಾ’ ಉಷ್ಣ ವಿದ್ಯುತ್ ಸ್ಥಾವರ ಸ್ಥಗಿತಗೊಳ್ಳಲು ಕಾರಣ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಗಂಭೀರ ಆರೋಪ ಮಾಡಿದೆ. ಬಿಎನ್‌ಪಿಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ರುಹುಲ್ ಕಬೀರ್ ರಿಜ್ವಿ ಈ ಆರೋಪ ಮಾಡಿದ್ದು, ಶೃಂಗಸಭೆಗೆ ಗೈರಾಗುವ ಮೂಲಕ ಪ್ರಧಾನಿ ರೆಹಮಾನ್ ಅವರು ಬಾಂಗ್ಲಾದೇಶದ ‘ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವ’ವನ್ನು ಎತ್ತಿಹಿಡಿದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

- Advertisement -

​ಢಾಕಾದ ಜಾತೀಯ ಪ್ರೆಸ್ ಕ್ಲಬ್ ಹೊರಗಡೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಿಜ್ವಿ, ಪದಚ್ಯುತ ‘ಸರ್ವಾಧಿಕಾರಿ ಹಾಗೂ ಹಂತಕಿ’ ಶೇಖ್ ಹಸೀನಾ ಅವರ ಪ್ರಚೋದನೆಯ ಮೇರೆಗೆ ಭಾರತವು ಬಾಂಗ್ಲಾದೇಶದ ವಿರುದ್ಧ ‘ಸಂಚಿನ ಬಲೆ’ ಹೆಣೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾ ಅಧ್ಯಕ್ಷರಾಗಿ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಅವರು ಕಳೆದ ಆಗಸ್ಟ್‌ನಲ್ಲಿ ಆಯ್ಕೆಯಾದ ಬಳಿಕ, ಪಕ್ಷದ ಅಧ್ಯಕ್ಷರೂ ಆಗಿರುವ ಪ್ರಧಾನಿ ತಾರಿಖ್ ರೆಹಮಾನ್ ಅವರ ನಂತರದ ಅತ್ಯುನ್ನತ ಹುದ್ದೆಯಾದ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ರಿಜ್ವಿ ಪ್ರಸ್ತುತ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

​ಝಾರ್ಖಂಡ್‌ನ ಗೊಡ್ಡಾದಲ್ಲಿರುವ ಅದಾನಿ ಪವರ್‌ನ 1,600 ಮೆಗಾವ್ಯಾಟ್ ಸಾಮರ್ಥ್ಯದ ಘಟಕವು ಸೆಪ್ಟೆಂಬರ್ 10ರಂದು ಬಾಯ್ಲರ್ ದೋಷದಿಂದಾಗಿ ಸ್ಥಗಿತಗೊಂಡು, ಬಾಂಗ್ಲಾಕ್ಕೆ ಪೂರೈಕೆಯಾಗುತ್ತಿದ್ದ 1,496 ಮೆಗಾವ್ಯಾಟ್ ವಿದ್ಯುತ್ ಪ್ರಮಾಣವು 800 ಮೆಗಾವ್ಯಾಟ್‌ಗಿಂತಲೂ ಕೆಳಕ್ಕೆ ಕುಸಿದಿತ್ತು. ಬಳಿಕ ಸೆಪ್ಟೆಂಬರ್ 13ರಂದು ದುರಸ್ತಿ ಕಾರ್ಯ ಪೂರ್ಣಗೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಜ್ವಿ, “ಪ್ರಧಾನಿ ತಾರಿಖ್ ದೆಹಲಿಗೆ ಹೋಗದಿರಲು ನಿರ್ಧರಿಸಿದ ಮರುದಿನವೇ ಸ್ಥಾವರವನ್ನು ಮುಚ್ಚಲಾಗಿದೆ. ಬಾಂಗ್ಲಾಕ್ಕೆ ವಿದ್ಯುತ್ ಪೂರೈಸುವ ಸ್ವಿಚ್ ಭಾರತದ ಝಾರ್ಖಂಡ್‌ನಲ್ಲಿದೆ, ಹಾಗಾಗಿ ಅವರು ಯಾವಾಗ ಬೇಕಾದರೂ ಅದನ್ನು ಆಫ್ ಮಾಡಬಹುದು, ಇದರ ಹಿಂದಿನ ಕಾರಣ ಅರ್ಥಮಾಡಿಕೊಳ್ಳಲು ಪಿಎಚ್‌ಡಿ ಮಾಡುವ ಅಗತ್ಯವಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

​ಕೇವಲ ವಿದ್ಯುತ್ ಸ್ಥಾವರ ಮಾತ್ರವಲ್ಲದೆ, ಮಹೇಶ್ಖಾಲಿ ಎಲ್‌ಎನ್‌ಜಿ (LNG) ಟರ್ಮಿನಲ್‌ನಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷಗಳ ಹಿಂದೆಯೂ ‘ವಿಧ್ವಂಸಕ ಕೃತ್ಯ’ದ ಅನುಮಾನವಿದೆ ಎಂದು ರಿಜ್ವಿ ಶಂಕೆ ವ್ಯಕ್ತಪಡಿಸಿದ್ದಾರೆ. ಜುಲೈ 21ರಂದು ಬೆಂಕಿಯ ಅವಘಡದಿಂದಾಗಿ ಬಾಂಗ್ಲಾದ ರಾಷ್ಟ್ರೀಯ ಗ್ರಿಡ್‌ಗೆ ಅನಿಲ ಪೂರೈಕೆ ಸ್ಥಗಿತಗೊಂಡಿತ್ತು. ಬಳಿಕ ಆಗಸ್ಟ್‌ನಲ್ಲಿಯೂ ಇದೇ ರೀತಿಯ ದೋಷಗಳು ಮರುಕಳಿಸಿದ್ದವು ಎಂದು ಅವರು ಆರೋಪಿಸಿದ್ದಾರೆ. ಇದೇ ರಿಜ್ವಿ, 2024ರ ಡಿಸೆಂಬರ್‌ನಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿ, ತಮ್ಮ ಪತ್ನಿಯ ಭಾರತೀಯ ಸೀರೆಯನ್ನು ಸಾರ್ವಜನಿಕವಾಗಿ ಸುಟ್ಟುಹಾಕುವ ಮೂಲಕ ತಮ್ಮ ತೀವ್ರ ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದರು.

​ಆದರೆ, ಬಾಂಗ್ಲಾದೇಶದ ಈ ಎಲ್ಲ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪ್ರಧಾನಿ ತಾರಿಖ್ ರೆಹಮಾನ್ ಅವರಿಗೆ ಭಾರತ ಎರಡು ಬಾರಿ ಆಹ್ವಾನ ನೀಡಿತ್ತು ಎಂಬುದನ್ನು ಖಚಿತಪಡಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆಗಾಗಿ ಒಂದು ಆಹ್ವಾನ ಹಾಗೂ ಬಿಮ್‌ಸ್ಟೆಕ್ (BIMSTEC) ಒಕ್ಕೂಟದ ಪ್ರಸ್ತುತ ಅಧ್ಯಕ್ಷರಾಗಿರುವ ನೆಲೆಯಲ್ಲಿ ಬ್ರಿಕ್ಸ್ ಔಟ್‌ರೀಚ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮತ್ತೊಂದು ಆಹ್ವಾನವನ್ನು ಅಧಿಕೃತವಾಗಿ ನೀಡಲಾಗಿತ್ತು ಎಂದು ಜೈಸ್ವಾಲ್ ಸೆಪ್ಟೆಂಬರ್ 15ರಂದು ಸ್ಪಷ್ಟಪಡಿಸಿದ್ದಾರೆ.

​ರುಹುಲ್ ಕಬೀರ್ ರಿಜ್ವಿ ಅವರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭಾರತದ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದರೂ, ಗೊಡ್ಡಾ ವಿದ್ಯುತ್ ಸ್ಥಾವರ ಹಾಗೂ ಮಹೇಶ್ಖಾಲಿ ಎಲ್‌ಎನ್‌ಜಿ ಟರ್ಮಿನಲ್‌ನಲ್ಲಿ ಉಂಟಾದ ವ್ಯತ್ಯಯಗಳು ಕೇವಲ ‘ತಾಂತ್ರಿಕ ದೋಷ’ಗಳಷ್ಟೇ ಎಂದು ಭಾರತ ಸ್ಪಷ್ಟಪಡಿಸಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧವು ಉಭಯ ದೇಶಗಳ ನಾಗರಿಕರ ಹಿತಾಸಕ್ತಿಗಳ ಮೇಲೆ ಆಧಾರಿತವಾಗಿದೆ ಹಾಗೂ ಜನಕೇಂದ್ರಿತವಾಗಿದೆ ಎಂದು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಛತ್ತೀಸ್‌ಗಢ | 29 ಜನರ ಹತ್ಯೆಗೆ ಕಾರಣವಾದ 2013ರ ದಾಳಿ; 13 ವರ್ಷಗಳ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆ!

ದೇಶವನ್ನೇ ಬೆಚ್ಚಿಬೀಳಿಸಿದ್ದ ಛತ್ತೀಸ್‌ಗಢದ 2013ರ ಝೀರಂ ಕಣಿವೆ ನಕ್ಸಲ್‌ ದಾಳಿ ಪ್ರಕರಣಕ್ಕೆ...

ವಿಜಯಪುರ | ಸಮಾಜದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ ಪಾತ್ರ ಮಹತ್ವದ್ದು: ರಾಕೇಶ್ ಗೋಪಾಲ್ ಜೋಶಿ

ಸಮಾಜದ ಅಭಿವೃದ್ಧಿ, ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ...

ಮೋದಿಯ ಮೋಸದ UPI ಶುಲ್ಕ ನೀತಿ; ತೀವ್ರ ವಿರೋಧದ ನಡುವೆಯೂ ಜಾರಿಗೆ ಮುಂದಾದ ಕೇಂದ್ರ

₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ ಪ್ರಸ್ತಾಪಿಸಿರುವ ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್...