ಸಾವಿರಾರು ಮಂದಿಗೆ ಅನ್ನ-ನೀರು ಕೊಟ್ಟಿದ್ದು ಅಪರಾಧವೇ: ಪೊಲೀಸರ ಕಿರುಕುಳ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಜುನೈದ್

Date:

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಿಜೆಪಿ (CJP) ಪ್ರತಿಭಟನೆಯಲ್ಲಿ ಸಾವಿರಾರು ಮಂದಿಗೆ ಅನ್ನ-ನೀರು ನೀಡಿ ಮಾನವೀಯತೆ ಮೆರೆದಿದ್ದ ಆಹಾರ ವಿತರಣಾ ಸ್ವಯಂಸೇವಕ ಜುನೈದ್ ಮಲಿಕ್, ಇದೀಗ ದೆಹಲಿ ಪೊಲೀಸರ ಅತಿರೇಕದ ವರ್ತನೆ ಹಾಗೂ ಕಿರುಕುಳದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮನ್ನು ಯಾವುದೇ ಕಾರಣವಿಲ್ಲದೆ ಅಕ್ರಮವಾಗಿ ಬಂಧಿಸಿ ಬೆದರಿಕೆ ಹಾಕಿದ್ದಲ್ಲದೆ, ತಮ್ಮ ಕುಟುಂಬದವರ ಮೇಲೂ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಕಾನೂನು ಪದವೀಧರ ಹಾಗೂ ಸಮಾಜ ಸೇವಕರಾಗಿರುವ ಜುನೈದ್, 2026ರ ಜೂನ್ 20ರಿಂದ ಸತತ 35 ದಿನಗಳ ಕಾಲ ದೆಹಲಿಯಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದರು. ಅವರು ಯಾವುದೇ ನಾಯಕತ್ವ ವಹಿಸಿರಲಿಲ್ಲ. ಆದರೆ, ಅವರ ಸಮಾಜ ಸೇವೆಗೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಕ್ಕಿದ್ದೇ ಪೊಲೀಸರ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಯಿತು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಜುಲೈ 24ರ ಮಧ್ಯರಾತ್ರಿ, ಆರ್‌ಎಂಎಲ್ (RML) ಆಸ್ಪತ್ರೆಯಲ್ಲಿ ರೇಬಿಸ್ ನಿರೋಧಕ ಚುಚ್ಚುಮದ್ದು ಪಡೆದು ಹಿಂದಿರುಗುತ್ತಿದ್ದಾಗ ದೆಹಲಿ ಪೊಲೀಸರು ಅವರನ್ನು ಏಕಾಏಕಿ ವಶಕ್ಕೆ ಪಡೆದರು. ಸುಮಾರು 5 ರಿಂದ 6 ಗಂಟೆಗಳ ಕಾಲ ವಾಹನದಲ್ಲೇ ಕೂಡಿಹಾಕಿ, ಬಲವಂತವಾಗಿ ಮೊಬೈಲ್ ಅನ್‌ಲಾಕ್ ಮಾಡಿಸಿ ಪರಿಶೀಲಿಸಿದ್ದಾರೆ. ಮರುದಿನ (ಜುಲೈ 25) ಬೆಳಿಗ್ಗೆ ವಿಚಾರಣಾ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ‘ಆಹಾರ ವಿತರಣೆಗೆ ಹಣ ಎಲ್ಲಿಂದ ಬಂತು?’ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರತಿಭಟನೆಗೆ ಯಾರು ಹಣ ನೀಡುತ್ತಿದ್ದಾರೆಂದು ಬಾಯ್ಬಿಡದಿದ್ದರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಜುನೈದ್ ಆರೋಪಿಸಿದ್ದಾರೆ.

ವಿಚಾರಣೆಯ ಬಳಿಕ ಜುನೈದ್ ಹಾಗೂ ಅವರ ಸ್ನೇಹಿತನನ್ನು ಮನೆಗೆ ಕಳುಹಿಸುವ ಬದಲು, ಮತ್ತೆ 5-6 ಗಂಟೆಗಳ ಕಾಲ ವಶದಲ್ಲಿಟ್ಟುಕೊಂಡು ನಂತರ ಡೆಹ್ರಾಡೂನ್-ಮಸ್ಸೂರಿ ರಸ್ತೆಯಿಂದ ಸುಮಾರು 16 ಕಿ.ಮೀ ದೂರದ ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಈ ವೇಳೆ ಮೊಬೈಲ್ ಹಿಂದಿರುಗಿಸಿದ ಪೊಲೀಸರು, ಒಂದು ಗಂಟೆಯವರೆಗೆ ಫೋನ್ ಆನ್ ಮಾಡದಂತೆ ತಾಕೀತು ಮಾಡಿದ್ದರು. ಬಳಿಕ ತಾವು ಡೆಹ್ರಾಡೂನ್‌ನಿಂದ ಕ್ಯಾಬ್ ಮೂಲಕ ದೆಹಲಿಗೆ ಮರಳಿದ್ದಾಗಿ ಜುನೈದ್ ಹೇಳಿದ್ದಾರೆ.

ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರಲು ಪೊಲೀಸರು ತಮ್ಮ ಕುಟುಂಬದವರನ್ನೂ ಗುರಿಯಾಗಿಸಿದ್ದಾರೆ ಎಂದು ಜುನೈದ್ ದೂರಿದ್ದಾರೆ. ಜುಲೈ 23ರಂದು ಗಾಜಿಯಾಬಾದ್‌ನಲ್ಲಿರುವ ನಿವಾಸದಿಂದ ತಂದೆಯನ್ನು ವಶಕ್ಕೆ ಪಡೆದ ಪೊಲೀಸರು, ಬ್ಯಾಂಕ್ ಖಾತೆ ಹಾಗೂ ಜುನೈದ್ ಎಲ್ಲಿದ್ದಾರೆ ಎಂಬ ಬಗ್ಗೆ ಗಂಟೆಗಟ್ಟಲೆ ವಿಚಾರಣೆ ನಡೆಸಿದ್ದಾರೆ. ಜುಲೈ 24ರಂದು 10-12 ಪೊಲೀಸರ ತಂಡ ಮನೆ ಮೇಲೆ ದಾಳಿ ಮಾಡಿ, ಶೋಧ ಕಾರ್ಯದ ಹೆಸರಿನಲ್ಲಿ ಪೀಠೋಪಕರಣಗಳನ್ನು ಜಖಂಗೊಳಿಸಿದೆ. ಅಲ್ಲದೆ, ಕುಟುಂಬ ಸದಸ್ಯರ ಗುರುತಿನ ಚೀಟಿ ಮತ್ತು ಬ್ಯಾಂಕ್ ವಿವರಗಳನ್ನು ಕೇಳಿದ್ದಾರೆ ಎಂದು ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಮೀರತ್‌ನಲ್ಲಿ ಜುನೈದ್ ಅವರ ಭಾವ ಹಾಗೂ ಮಾವನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಕೀಲರು ಮಧ್ಯಪ್ರವೇಶಿಸಿದ ನಂತರವಷ್ಟೇ ಬಿಡುಗಡೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಯಾವುದೇ ಲಿಖಿತ ದಾಖಲೆಗಳು ಅಥವಾ ಕಾನೂನು ಪ್ರಕ್ರಿಯೆಗಳಿಲ್ಲದೆ ಪೊಲೀಸರು ಈ ಬಲವಂತದ ಕ್ರಮಗಳನ್ನು ಕೈಗೊಂಡಿದ್ದಾರೆ. ಇದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಕ್ರಮಗಳನ್ನು ಪೊಲೀಸ್ ಅಧಿಕಾರದ ನ್ಯಾಯಸಮ್ಮತ ಚಲಾವಣೆ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಹೀಗಾಗಿ, ತಮ್ಮ ಕುಟುಂಬದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ಬಂಧ ವಿಧಿಸಬೇಕು ಹಾಗೂ ಪ್ರಕರಣದ ಯಾವುದೇ ತನಿಖೆಯು ಕಟ್ಟುನಿಟ್ಟಾಗಿ ಕಾನೂನುಬದ್ಧವಾಗಿ ನಡೆಯುವಂತೆ ಆದೇಶಿಸಬೇಕು ಎಂದು ಜುನೈದ್ ಮಲಿಕ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆರ್‌ಜೆಡಿ ಸಂಸದರೊಬ್ಬರು ಸಲ್ಲಿಸಿರುವ ರಿಟ್ ಅರ್ಜಿಯ ಜೊತೆಯಲ್ಲೇ ಈ ಅರ್ಜಿಯನ್ನು ದಾಖಲಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಮೆರಾ ಆಫ್ ಆಗಿದೆ ಎಂದುಕೊಂಡು ಇಸ್ರೇಲ್ ನೀತಿ ಟೀಕೆ; ಲೈವ್ ಪ್ರಸಾರ ತಿಳಿದು ದಂಗಾದ ನಟಿ!

ದೇಶದ ನೀತಿಗಳ ಬಗ್ಗೆ ಸ್ವತಃ ಇಸ್ರೇಲ್‌ನಲ್ಲೇ ವಿರೋಧಿ ಧ್ವನಿಗಳು ಕೇಳಿಬರುತ್ತಿರುವುದು ತಿಳಿದೇ...

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...