ನನ್ನ ಬೆಡ್‌ರೂಮ್ ಕನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ತಿರುಗೇಟು

Date:

ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತು ಬಾಬಾ ರಾಮ್‌ದೇವ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ಯುವಜನರ ಕುರಿತು ಕಂಗನಾ ನೀಡಿದ್ದ ಹೇಳಿಕೆಯನ್ನು ರಾಮ್‌ದೇವ್ ವಿರೋಧಿಸಿದ ಬೆನ್ನಲ್ಲೇ, ಕಂಗನಾ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ರಾಮ್‌ದೇವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಬೆಡ್‌ರೂಮ್ ಕನಸು ಕಾಣಬೇಡಿ” ಎಂದು ಬಾಬಾ ರಾಮ್‌ದೇವ್‌ಗೆ ಕಂಗನಾ ತಿರುಗೇಟು ನೀಡಿದ್ದಾರೆ.

- Advertisement -

ಇತ್ತೀಚೆಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಯುವಜನರನ್ನು (Gen Z) ಕಂಗನಾ ರಣಾವತ್ ‘ಜನರೇಷನ್ ಗಟರ್’ (Gutter Generation) ಎಂದು ಕರೆದಿದ್ದರು. ಈ ಹೇಳಿಕೆಗೆ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ್ದ ಬಾಬಾ ರಾಮ್‌ದೇವ್, “ದೇಶದ ಯುವಕರನ್ನು ಗಟರ್ ಎಂದು ಕರೆಯುವುದು ಹಾಳಾದ ಮಾನಸಿಕತೆಯ ಸಂಕೇತ. ಅವರ ಬಾಲ್ಯ, ಹರೆಯ ಹೇಗಿತ್ತು? ಈ ಹಿಂದಿನ ಸಾಧನೆಗಳು ಹೇಗಿದ್ದವು? ಅವರ ರಾಜಕೀಯ ಪಕ್ಷವೇ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಟೀಕಿಸಿದ್ದರು. ಇದೇ ವೇಳೆ, ಕಂಗನಾ ಪ್ರತಿನಿಧಿಸುವ ಬಿಜೆಪಿ ಪಕ್ಷವು ಅವರ ಈ ಹೇಳಿಕೆಯ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನೂ ಓದಿ: ‘ಎಮರ್ಜೆನ್ಸಿ’ ವೀಕ್ಷಿಸಲು ಕಂಗನಾ ಆಹ್ವಾನ: ಪ್ರಿಯಾಂಕಾ ಕೊಟ್ಟ ಉತ್ತರವೇನು?

ಇನ್ನು ಮಾಧ್ಯಮದವರು ಕಂಗನಾ ಅವರು ನಿಮ್ಮ ಯೋಗವನ್ನು ಬೆಂಬಲಿಸುತ್ತಾರೆ ಮತ್ತು ಸನಾತನಿ ಎಂದು ಹೇಳಿಕೊಳ್ಳುತ್ತಾರಲ್ಲವೇ ಎಂದಾಗ, “ಯಾರಾದರೂ ನನ್ನ ಯೋಗವನ್ನು ಹೊಗಳಿದರೆಂದ ಮಾತ್ರಕ್ಕೆ ನಾನು ಅವರ ತಪ್ಪುಗಳನ್ನು ಅಥವಾ ಪಾಪಗಳನ್ನು ಮುಚ್ಚಿಹಾಕಲು ಸಾಧ್ಯವೇ?” ಎಂದು ಮರುಪ್ರಶ್ನಿಸಿದ್ದರು.

ಇದೀಗ ಬಾಬಾ ರಾಮ್‌ದೇವ್ ಅವರ ಈ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಕಂಗನಾ ರಣಾವತ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. “ಬಾಬಾ ಜಿ, ನನ್ನ ಹರೆಯ ಅಥವಾ ಬೆಡ್‌ರೂಮ್ ಬಗ್ಗೆ ನೀವು ಹಗಲುಗನಸು ಕಾಣಬೇಡಿ. ವದಂತಿ ಮತ್ತು ಗಾಸಿಪ್‌ಗಳ ಆಧಾರದ ಮೇಲಷ್ಟೇ ಯಾರನ್ನಾದರೂ ಅಳೆಯಲು ಸಾಧ್ಯ” ಎಂದು ಬರೆದುಕೊಂಡಿದ್ದಾರೆ.

ಹಾಗೆಯೇ ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ ವಿರುದ್ಧ ಇರುವ ಪ್ರಕರಣಗಳತ್ತವೂ ಕಂಗನಾ ಬೊಟ್ಟು ಮಾಡಿದ್ದಾರೆ. 2024ರಲ್ಲಿ ಪತಂಜಲಿ ಸಂಸ್ಥೆಯ ದಾರಿ ತಪ್ಪಿಸುವ ಜಾಹೀರಾತುಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಾಬಾ ರಾಮ್‌ದೇವ್ ಅವರು ಎದುರಿಸಿದ್ದ ಕಾನೂನು ತಗಾದೆಯನ್ನು ಕಂಗನಾ ನೆನಪಿಸಿದ್ದಾರೆ. “ಕನಿಷ್ಠ ಸುಳ್ಳು ಹಾಗೂ ವಂಚನೆಯ ಔಷಧೀಯ ಕ್ಲೇಮ್‌ಗಳಿಗಾಗಿ ಸುಪ್ರೀಂ ಕೋರ್ಟ್‌ನಿಂದ ನನಗೆ ಎಂದೂ ಛೀಮಾರಿ ಸಿಕ್ಕಿಲ್ಲ. ಆದ್ದರಿಂದ ನನಗೆ ಚಾರಿತ್ರ್ಯದ ಪಾಠ ಕಲಿಸಲು ಬರಬೇಡಿ. ನನ್ನ ಚಾರಿತ್ರ್ಯ ನಿಮ್ಮಗಿಂತ ಎಷ್ಟೋ ಉತ್ತಮವಾಗಿದೆ” ಎಂದು ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಸಂಸತ್‍ನಲ್ಲಿ ಮಹತ್ವದ ಚರ್ಚೆ

ಬೀದರ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶನಿವಾರ...

‘ದಾಖಲೆ ತೋರಿಸಿ, ಜಮೀನನ್ನು ನಿಮ್ಮ ಕುಟುಂಬಕ್ಕೇ ಬರೆದುಕೊಡ್ತೀನಿ!’: ಹೆಚ್‌ಡಿಕೆಗೆ ಬಾಲಕೃಷ್ಣ ಸವಾಲು

"ನನ್ನ ಹೆಸರಿನಲ್ಲಿ ನೈಸ್ ರಸ್ತೆ ಯೋಜನಾ ವ್ಯಾಪ್ತಿಯಲ್ಲಿ ಜಮೀನಿದ್ದರೆ ದಾಖಲೆ ಬಿಡುಗಡೆ...

ಬೀದರ್‌ | ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮನ್ನಣೆ

ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರದ...

ದೇಹದ ಅಪಹಾಸ್ಯ, ನಿಂದನೆ ಮಾತ್ರವೇ ಮಹಿಳೆಯ ಮರ್ಯಾದೆ ಭಂಗದ ಅಪರಾಧವಲ್ಲ: ಹೈಕೋರ್ಟ್

ಕೇವಲ ದೇಹದ ಅಪಹಾಸ್ಯ (ಬಾಡಿ ಶೇಮಿಂಗ್‌) ಮತ್ತು ಅವಾಚ್ಯವಾಗಿ ನಿಂದಿಸುವುದು ಐಪಿಸಿ...