ಕೇರಳದಲ್ಲಿ ಕರ್ನಾಟಕ ವಿರೋಧ, ಕರ್ನಾಟಕದಲ್ಲಿ ಕೇರಳ ವಿರೋಧ! BJPಯ ಡಬಲ್ ಗೇಮ್ ಹುನ್ನಾರ ಕಾಣಿರಿ!

Date:

‘ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ’ – ಈ ಮಾತು ಸೂಕ್ತವಾಗಿ ಅನ್ವಯವಾಗುವುದು ಬಿಜೆಪಿಗೆ. ತಾವು ಏಕತೆಯ ಪ್ರತಿಪಾದಕರು, ತಮ್ಮ ನಡೆ-ನುಡಿ ಎಲ್ಲವೂ ಏಕತೆಯ ಕಡೆಗೆ, ‘ಸಬ್‌ಕಾ ಸಾಥ್-ಸಬ್‌ಕಾ ವಿಕಾಸ್’ ನಮ್ಮ ಧ್ಯೇಯವೆಂದು ಬಿಜೆಪಿಗರು ಬಡಾಯಿಬಿಡುತ್ತಾರೆ. ಆದರೆ, ಅವರು ವಾಸ್ತವದಲ್ಲಿ ಅನುಸರಿಸುತ್ತಿರುವುದು ‘ಒಡೆದು ಆಳುವ ನೀತಿ’. ಇದು ಬಿಜೆಪಿಯ ಹಿಡನ್ ಅಜೆಂಡಾ ಕೂಡ ಆಗಿದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹಲವು ರಾಜ್ಯಗಳಲ್ಲಿ ಜನರನ್ನು ಭಾಷೆ, ಪ್ರದೇಶ ಹಾಗೂ ಸಮುದಾಯದ ಆಧಾರದಲ್ಲಿ ಒಡೆದು ರಾಜಕೀಯ ಲಾಭ ಪಡೆಯುವ ತಂತ್ರವನ್ನು ಅನುಸರಿಸುತ್ತದೆ. ಅದು, ಈಗ ಚರ್ಚೆಯಲ್ಲಿರುವ ಕರ್ನಾಟಕ ಮತ್ತು ಕೇರಳ ನಡುವಿನ ಸಂಬಂಧದ ವಿಚಾರದಲ್ಲಿ ಮತ್ತೆ ಬಟಾಬಯಲಾಗಿದೆ. ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಬಿಜೆಪಿಗರು, ಎರಡೂ ರಾಜ್ಯಗಳ ನಡುವೆ ವಿವಾದ ಹುಟ್ಟುಹಾಕುತ್ತಿದ್ದಾರೆ.

- Advertisement -

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಫಕೀರ್ ಕಾಲೋನಿ ಪ್ರದೇಶವು ಸರ್ಕಾರಿ ಜಮೀನು. ಆ ಭೂಮಿಯನ್ನು ಅತಿಕ್ರಮಣ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಆರೋಪಿಸಿ, ಅಲ್ಲಿನ ಸುಮಾರು ೨00 ಮನೆಗಳನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಅಧಿಕಾರಿಗಳು ಇತ್ತೀಚೆಗೆ ಧ್ವಂಸಗೊಳಿಸಿದರು. ಯಾವುದೇ ನೋಟಿಸ್‌ ನೀಡದೆ ನಡೆದ ಧ್ವಂಸ ಕೃತ್ಯದಿಂದ ಸಾವಿರಾರು ಜನರು ಬೀದಿ ಪಾಲಾದರು. ತಾವು ಅಲ್ಲಿನ ದೀರ್ಘಕಾಲದ ನಿವಾಸಿಗಳೆಂದು ಸಂತ್ರಸ್ತರು ತಮ್ಮ ದಾಖಲೆಗಳನ್ನು ತೋರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಸರ್ಕಾರದ ಕಾರ್ಯಾಚರಣೆಯ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಯಿತು. ಸರ್ಕಾರದ ಕ್ರಮವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‘ಬುಲ್ಡೋಜರ್ ಕ್ರಮ’ವೆಂದು ಟೀಕಿಸಿದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಸಂತ್ರಸ್ತರಿಗೆ ಸರ್ಕಾರ ನೆರವು ನೀಡಬೇಕೆಂದು ಆಗ್ರಹಿಸಿದರು. ಇದೆಲ್ಲದರ ನಡುವೆ, ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯವನ್ನೂ, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಶಾಶ್ವತ ಮನೆಗಳನ್ನೂ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಪಿಣರಾಯಿ ವಿಜಯನ್ ಅವರ ಟೀಕೆ ಮತ್ತು ಸಿದ್ದರಾಮಯ್ಯ ಅವರ ನೆರವಿನ ಘೋಷಣೆಯನ್ನು ತಳುಕು ಹಾಕಿಕೊಂಡ ಬಿಜೆಪಿಗರು, ತಮ್ಮ ರಾಜಕೀಯಕ್ಕೆ ದಾಳವಾಗಿ ಬಳಸುತ್ತಿದ್ದಾರೆ. ಕರ್ನಾಟಕ ಬಿಜೆಪಿಯ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ, “ಕರ್ನಾಟಕದಲ್ಲಿ ಕೇರಳ ದರ್ಬಾರ್ ನಡೆಯುತ್ತಿದೆ!! ಅಕ್ರಮ ಮನೆ ಕಟ್ಟಿಕೊಂಡಿದ್ದವರಿಗೆ ಕಾಂಗ್ರೆಸ್ ಸರ್ಕಾರ ‘ಪುನರ್ವಸತಿ’ ನೀಡುತ್ತಿದೆ! ಕನ್ನಡೇತರರಿಗೆ ರಾಜೋಪಚಾರ ನೀಡಿ, ಕಾನೂನು ಉಲ್ಲಂಘಿಸುವವರಿಗೆ ನಮ್ಮ ಭೂಮಿಯನ್ನು ವೋಟ್ ಬ್ಯಾಂಕ್‌ಗಾಗಿ ಕೊಡುತ್ತಿದ್ದಾರೆ” ಎಂದು ಆರೋಪಿಸಿದೆ.

ಬಿಜೆಪಿ ತನ್ನ ಈ ಒಂದೇ ಪೋಸ್ಟ್‌ನಲ್ಲಿ, ಒಂದೆಡೆ – ಮುಸ್ಲಿಮರ ವಿರುದ್ಧವೂ, ಮತ್ತೊಂದೆಡೆ – ಕೇರಳಿಗರ ವಿರುದ್ಧವೂ ಕನ್ನಡಿಗರನ್ನು ಪ್ರಚೋದಿಸಲು ಯತ್ನಿಸಿದೆ. ಕೇರಳದ ಪ್ರಭಾವದಡಿ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿದೆ ಎಂದು ದೂಷಿಸಿದೆ. ಪ್ರಾದೇಶಿಕ ಬಿರುಕು ಮೂಡಿಸುವ ತಂತ್ರ ಹೆಣೆದಿದೆ.

ಇನ್ನು, ‘ಕೇರಳಿಗರ ಸಲಹೆ ನಮಗೆ ಬೇಡ’ವೆಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದ ಹೇಳಿಕೆಯನ್ನು ಬಳಸಿಕೊಂಡಿರುವ ಕೇರಳ ಬಿಜೆಪಿ, ಕನ್ನಡಿಗರ ವಿರುದ್ಧ ಕೇರಳಿಗರನ್ನು ಪ್ರಚೋದಿಸಲು ಯತ್ನಿಸಿದೆ.

ಈ ಲೇಖನ ಓದಿದ್ದೀರಾ?: ಶರದ್ ಪವಾರ್ – ಅದಾನಿ ಸ್ನೇಹವೂ, ಪೊಲಿಟಿಕಲ್-ಕಾರ್ಪೊರೇಟ್ ಸಂಬಂಧವೂ!

ಆದರೆ, ಇದೇ ಕರ್ನಾಟಕ ಬಿಜೆಪಿಗರು ಮಹಾರಾಷ್ಟ್ರ ಅಥವಾ ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆದಾಗ ಖಂಡಿಸುವುದು, ಟೀಕಿಸುವುದನ್ನೂ ಮಾಡುತ್ತಾರೆ. ಅಂದಮೇಲೆ, ದೇಶದ ಯಾವುದೇ ಮೂಲೆಯಲ್ಲಿ ಯಾರೇ ದೌರ್ಜನ್ಯ ಎಸಗಿದರೂ, ಖಂಡಿಸುವುದು, ಟೀಕಿಸುವುದು, ಸಲಹೆ ನೀಡುವುದು ಸಾಮಾನ್ಯ. ಇದೇ ಏಕತೆ, ಸಹಕಾರ, ಬಹುತ್ವದ ಆಶಯ. ಆದರೆ, ಕೇರಳ-ಕರ್ನಾಟಕದ ವಿಚಾರದಲ್ಲಿ ಬಿಜೆಪಿ, ಪ್ರದೇಶಿಕತೆ ಆಧಾರದ ಮೇಲೆ ಎರಡೂ ರಾಜ್ಯಗಳ ಜನರನ್ನು ಪ್ರಚೋದಿಸುವ ಮೂಲಕ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದೆ.

ಬಿಜೆಪಿಯ ಈ ಒಡೆದು ಆಳುವ ತಂತ್ರ-ಕುತಂತ್ರಗಳು ಇದೇ ಮೊದಲೇನೂ ಅಲ್ಲ. ಮುಲ್ಲಪೆರಿಯಾರ್ ಅಣೆಕಟ್ಟು ವಿವಾದದಲ್ಲಿಯೂ ಬಿಜೆಪಿಗರು ಕೇರಳದಲ್ಲಿ ಮಲೆಯಾಳಿಗರನ್ನೂ, ಕರ್ನಾಟಕದಲ್ಲಿ ಕನ್ನಡಗರನ್ನೂ, ತಮಿಳುನಾಡಿನಲ್ಲಿ ತಮಿಳರನ್ನೂ ಪ್ರಚೋದಿಸುವ ಪ್ರಯತ್ನ ಮಾಡಿದ್ದಾರೆ. ಅಂತೆಯೇ, ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಜನರನ್ನು ತಮ್ಮತ್ತ ಸೆಳೆಯಲು ಬೇಕಾದ ರೀತಿಯಲ್ಲಿ ಬಿಜೆಪಿಗರು ವಿಭಿನ್ನ ರೀತಿಯ ನಿಲುವುಗಳನ್ನು ತೆಗೆದುಕೊಂಡಿರುವ ಉದಾಹರಣೆಗಳೂ ಇವೆ. ಇದು, ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಏಕತೆಯ ಬಗ್ಗೆ ಮಾತನಾಡಿದರೂ, ಸ್ಥಳೀಯ ಮಟ್ಟದಲ್ಲಿ ಪ್ರಾದೇಶಿಕ ಭಾವನೆಗಳನ್ನು ಉದ್ವಿಗ್ನಗೊಳಿಸುವುದನ್ನು ಸ್ಪಷ್ಟವಾಗಿ ಎತ್ತಿತೋರುತ್ತದೆ.

ಹೀಗಾಗಿ, ಬಿಜೆಪಿಯು ಬ್ರಿಟಿಷರ ಒಡೆದು ಆಳುವ ತಂತ್ರವನ್ನು ಅಳವಡಿಸಿಕೊಂಡಿದೆ ಎಂಬ ಗಂಭೀರ ಆರೋಪಗಳಿವೆ. ರಾಷ್ಟ್ರಮಟ್ಟದಲ್ಲಿ ಕೋಮು ಧ್ರುವೀಕರಣವನ್ನು ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ಹಿಂದು-ಮುಸ್ಲಿಮರ ನಡುವೆ ಕೋಮುಭಾವನೆಯನ್ನು ಪ್ರಚೋದಿಸಿ ರಾಜಕೀಯ ಮಾಡುತ್ತಿದೆ.

ರಾಜ್ಯಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ಪರೋಕ್ಷವಾಗಿ ವಿರೋಧಿಸುತ್ತಲೇ, ಸಮುದಾಯಗಳ ನಡುವೆ ದ್ವೇಷದ ವಿಷಬಿತ್ತಿ, ಮತಬ್ಯಾಂಕ್‌ ಕಟ್ಟಿಕೊಳ್ಳುವ ನಿರಂತರ ಪ್ರಯತ್ನ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಒಬಿಸಿ ಮತ್ತು ಎಸ್‌ಸಿ/ಎಸ್‌ಟಿ ಮತಗಳಿಗಾಗಿ ಮೀಸಲಾತಿ ಪರವಾಗಿ ಮಾತನಾಡುವ ಬಿಜೆಪಿ, ಕರ್ನಾಟಕದಲ್ಲಿ ಪ್ರಬಲ ಜಾತಿಗಳನ್ನು ಸೆಳೆಯಲು ಮೀಸಲಾತಿ ವಿರೋಧಿ ಧೋರಣೆಯನ್ನು ಮುನ್ನೆಲೆಗೆ ತರುತ್ತದೆ. ಇದು, ಸ್ಥಳೀಯವಾಗಿ ಸಮುದಾಯಗಳನ್ನು ಒಡೆಯುವುದು, ಪ್ರಬಲರನ್ನು ಸೆಳೆಯುವ ತಂತ್ರವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಅಂತೆಯೇ, ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ವಿಭಜನೆಯನ್ನು ಬಿಜೆಪಿ ಉತ್ತೇಜಿಸುತ್ತಿದೆ. ಲೋಕಸಭಾ ಕ್ಷೇತ್ರಗಳ ಮರುಹಂಚಿಕೆಯಲ್ಲಿ ಉತ್ತರ ಸ್ಥಾನಗಳನ್ನು ಹೆಚ್ಚಿಸಿ, ದಕ್ಷಿಣ ಭಾರತದ ಸ್ಥಾನಗಳನ್ನು ಕಡಿಮೆಯಲ್ಲಿಯೇ ಇರಿಸಿ, ಕೇಂದ್ರ ಸರ್ಕಾರದ ಆಡಳಿತದಲ್ಲಿ ಉತ್ತರ ಭಾರತವು ಮೇಲುಗೈ ಸಾಧಿಸುವಂತೆ ಮಾಡುತ್ತಿದೆ. ಆ ಮೂಲಕ ದಕ್ಷಿಣ ಭಾರತದ ಮೇಲೆ ಉತ್ತರ ಭಾರತದ ಧೋರಣೆಗಳನ್ನು ಹೇರಲು ಬಿಜೆಪಿ ಮುಂದಾಗಿದೆ ಎಂಬ ಆರೋಪಗಳೂ ಇವೆ. ಇದು ಸತ್ಯವೂ ಹೌದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...