ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

Date:

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪತ್ರಕರ್ತರ ಮೇಲೆ ಪೊಲೀಸರು ಕನಿಕರವಿಲ್ಲದೆ ಮೃಗಗಳಂತೆ ಎರಗಿಬೀಳುತ್ತಿದ್ದಾರೆ. ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸುತ್ತಿರುವ ಭೀಕರ ಹಿಂಸಾಚಾರವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪೊಲೀಸರ ದುಷ್ಕೃತ್ಯದ ದೃಶ್ಯಗಳು ಮಾನವೀಯತೆಯನ್ನೇ ಪ್ರಶ್ನಿಸುವಂತಿವೆ. ಬಸ್‌ನ ಕಿಟಕಿಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ನಿಂತು ಕಣ್ಣೀರಿಡುತ್ತಿರುವ ಯುವತಿ, ಮಹಿಳಾ ಪ್ರತಿಭಟನಾಕಾರರ ಬಟ್ಟೆ ಹರಿದು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ಪುರುಷ ಪೊಲೀಸರು, ಯಾವುದೇ ಕಾನೂನು ಆಧಾರವಿಲ್ಲದೆ ಬಂಧಿಸಲ್ಪಟ್ಟು ಪಂಜರದಂತಹ ವ್ಯಾನ್‌ಗಳಿಂದ ಹೊರಗೆ ಚೀರುತ್ತಿರುವ ಕಾಲೇಜು ವಿದ್ಯಾರ್ಥಿಗಳು — ಈ ಎಲ್ಲ ದೃಶ್ಯಗಳು ವ್ಯವಸ್ಥೆಯ ಕ್ರೂರತೆಯನ್ನು ಎತ್ತಿಹಿಡಿಯುತ್ತಿವೆ.

- Advertisement -

ಈ ರೀತಿಯ ಭೀಕರ ದಮನಕಾರಿ ವರ್ತನೆ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಸೋಮವಾರದಂದು ಬೆಂಗಳೂರಿನಲ್ಲೂ ನಡೆದ ಪ್ರತಿಭಟನೆಯ ವೇಳೆ ಕರ್ನಾಟಕ ಪೊಲೀಸರು ಪ್ರತಿಭಟನಾಕಾರರ ಮೇಲೆ ಅತ್ಯಂತ ದಬ್ಬಾಳಿಕೆಯಿಂದ ವರ್ತಿಸಿದ್ದಾರೆ. ಅದರ ವಿಡಿಯೋಗಳು ‘ಈದಿನ’ ಯೂಟ್ಯೂಬ್‌ ಚಾನೆಲ್‌ನಲ್ಲಿವೆ, ನೋಡಬಹುದು. ಆ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ, ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ನಿರ್ದಯವಾಗಿ, ಅಮಾನವೀಯವಾಗಿ ಎಳೆದೊಯ್ದು, ಬಲವಂತವಾಗಿ ವ್ಯಾನ್‌ಗಳಿಗೆ ತಳ್ಳುತ್ತಿದ್ದನ್ನು ಕಾಣಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ...

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ. ಶಿಕ್ಷಣದ ನಿಜವಾದ ಉದ್ದೇಶ ಮಗುವಿನ ಜ್ಞಾನ, ಚಿಂತನಾ ಶಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಪ್ರಜ್ಞೆ...

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ...

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ...

ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸಬೇಕಾದ ಪೋಲಿಸ್ ಪಡೆ, ಅಧಿಕಾರದಲ್ಲಿರುವವರ ಕೈಗೊಂಬೆಯಾಗಿ ದೇಶದ ಪ್ರಮುಖ ನಗರಗಳಲ್ಲೆಲ್ಲ ಜನರನ್ನು ಹತ್ತಿಕ್ಕಲು ಒಂದೇ ರೀತಿಯ ಅಮಾನವೀಯ ಮಾರ್ಗಗಳನ್ನು ಅನುಸರಿಸುತ್ತಿರುವುದು ಅತ್ಯಂತ ಕಳವಳಕಾರಿ.

ಮೋದಿ ಸರ್ಕಾರವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಯಾವುದೇ ಹಂತಕ್ಕಾದರೂ ಇಳಿಯುತ್ತದೆ. ಆದರೆ, ಇಲ್ಲಿರುವ ಪ್ರಶ್ನೆ: ಈ ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿಗಳೂ ಮೋದಿ ಸರ್ಕಾರದ ಸಿದ್ಧಾಂತವನ್ನು ಅವಾಹಿತವಾಗಿ ಮೈಗೂಡಿಸಿಕೊಂಡಿರುವುದು. ಅವರ ವರ್ತನೆಗಳನ್ನು ನೋಡಿದರೆ, ಕೇವಲ ನಿರ್ದಿಷ್ಟ ಸಿದ್ಧಾಂತ ಹೊಂದಿದವರನ್ನು ಮಾತ್ರ ಆಯ್ದು ಅವರಿಗೆ ಸಮವಸ್ತ್ರ ಮತ್ತು ಬ್ಯಾಡ್ಜ್‌ಗಳನ್ನು ನೀಡಲಾಗಿದೆಯೇ? ಎನ್ನಿಸುತ್ತದೆ. ಅವರಲ್ಲಿ ಯಾರೊಬ್ಬರೂ ಈ ಅಮಾನವೀಯ ದೌರ್ಜನ್ಯದ ಬಗ್ಗೆ ಸಣ್ಣದಾದ ‘ಅಳುಕು’ (ಗಿಲ್ಟ್‌) ತೋರುತ್ತಿಲ್ಲ. ಬದಲಾಗಿ, ತಾವೆಲ್ಲರೂ ಬಿಜೆಪಿ ಅಥವಾ ಮೋದಿ ಸರ್ಕಾರದ ಸೇವೆಗಾಗಿಯೇ ಒದ್ದೇವೆ ಎಂಬಂತೆ, ಬ್ರಿಟಿಷ್‌ ಕಾಲದಲ್ಲಿ ಸ್ವಾತಂತ್ರ ಹೋರಾಟಗಾರರ ಮೇಲೆ ಪರಕೀಯ ದೊರೆಗಳು ಹೇಗೆ ದೌರ್ಜನ್ಯ ಎಸಗುತ್ತಿದ್ದರೋ, ಆ ಮಟ್ಟಕ್ಕೆ ಇವರ ದಮನಗಳಿವೆ.

134864224

ಅಂದಹಾಗೆ, ಯಾವಾಗ ಒಂದು ಸರ್ಕಾರ ಅಥವಾ ಆಡಳಿತಕ್ಕೆ ಸೈದ್ಧಾಂತಿಕವಾಗಿ ಜನರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲವೋ, ಆಗ ಅದು ದೈಹಿಕ ದಮನಕಾಂಡಕ್ಕೆ ಇಳಿಯುತ್ತದೆ. ಈ ಕ್ರೂರ ಹಿಂಸಾಚಾರವು ವಾಸ್ತವವಾಗಿ ಆಡಳಿತದ ಒಳಗಿರುವ ಗಂಭೀರ ಭಯವನ್ನು ತೋರಿಸುತ್ತದೆ. ಪ್ರಸಿದ್ಧ ತತ್ವಜ್ಞಾನಿ ಲೂಯಿಸ್ ಅಲ್ಥುಸರ್ ಹೇಳಿದಂತೆ, ಆಳುವವರು ತಮ್ಮ ಸಿದ್ಧಾಂತಗಳನ್ನು ಕುಟುಂಬ, ಧರ್ಮ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಜನರ ತಲೆಗೆ ತುಂಬುವುದು ಯತ್ನಿಸುತ್ತಿವೆ. ಇದನ್ನು ಆಡಳಿತದ ‘ಮೃದು ಅಧಿಕಾರ’ ತಂತ್ರ ಎನ್ನಲಾಗುತ್ತದೆ. ಆದರೆ, ಜನರು ಆ ಸಿದ್ಧಾಂತವನ್ನು ತಿರಸ್ಕರಿಸಲು ಪ್ರಾರಂಭಿಸಿದಾಗ, ಸರ್ಕಾರವು ತನ್ನ ದಮನಕಾರಿ ಯಂತ್ರಗಳಾದ ಪೋಲಿಸ್, ಜೈಲು ಮತ್ತು ಸೇನೆಯನ್ನು ಅಂಗಳಕ್ಕಿಳಿಸುತ್ತದೆ.

ಕೊಲೊನಿಯಲ್ ಅಥವಾ ವಸಾಹತುಶಾಹಿ ಆಡಳಿತದ ಬಗ್ಗೆ ಕೀನ್ಯಾದ ಬರಹಗಾರ ನ್ಗುಗಿ ವಾ ಥಿಯಾಂಗೊ ಬರೆಯುವಾಗ; “ಕತ್ತಿ ಮತ್ತು ಗುಂಡುಗಳ ಕರಾಳ ರಾತ್ರಿಯ ನಂತರ ಸೀಮೆಸುಣ್ಣ ಮತ್ತು ಕಪ್ಪುಹಲಗೆಯ ಬೆಳಗು ಬಂದಿತು” ಎಂದಿದ್ದರು. ನಮ್ಮ ದೇಶದ ಆಡಳಿತವೂ ಕಳೆದ ಒಂದು ದಶಕದಿಂದ ಇದನ್ನೇ ಮಾಡುತ್ತಾ ಬಂದಿದೆ. ಆದರೆ, ಆರ್ಥಿಕ ಕುಸಿತ, ನಿರುದ್ಯೋಗ, ಶಿಕ್ಷಣ ಕ್ಷೇತ್ರದ ಅಕ್ರಮಗಳು ಹಾಗೂ ಪಠ್ಯಪುಸ್ತಕಗಳ ಬದಲಾವಣೆಯ ಹೊರತಾಗಿಯೂ ಯುವಜನತೆ ಜಾಗೃತರಾಗಿದ್ದಾರೆ. ಶಿಕ್ಷಣದ ಭವಿಷ್ಯ ಮತ್ತು ಮತದಾನದ ಹಕ್ಕಿನ ಮೇಲೆಯೇ ನಡೆಯುತ್ತಿರುವ ದಮನದ ವಿರುದ್ಧ ವಿದ್ಯಾರ್ಥಿ-ಯುವಜನರು ಈಗ ಬೀದಿಗಿಳಿದಿದ್ದಾರೆ. ಅವರ ಮೇಲೆ ಮೋದಿ ಸರ್ಕಾರವು ಲಾಠಿ ಬೀಸಿದಾಗ, ಆ ವಿದ್ಯಾರ್ಥಿಗಳ ಕುಟುಂಬಗಳು ಪ್ರತಿಭಟನೆಗಳಿಗೆ ಇಳಿದಿವೆ. ಈಗ ಸರ್ಕಾರದ ಬಳಿ ಉಳಿದಿರುವುದು ಕೇವಲ ದೈಹಿಕ ದಮನಕಾರಿ ಶಕ್ತಿ ಮಾತ್ರ.

ವಿಚಿತ್ರವೆಂದರೆ, ಈ ಬಿಕ್ಕಟ್ಟು ಆರಂಭವಾಗಿದ್ದೇ ಚುನಾವಣಾ ಆಯೋಗದ ಇಬ್ಬರು ಸದಸ್ಯರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದಾಗ. ಆ ಅಸಮ್ಮತಿಯನ್ನು ಹಿಂಪಡೆಯುವಂತೆ ಅವರ ಮೇಲೆ ಭಾರೀ ಒತ್ತಡ ಹೇರಲಾಯಿತಾದರೂ ಅವರು ಮಣಿಯಲಿಲ್ಲ. ಆದರೆ, ಬೀದಿಗಿಳಿದವರ ಮೇಲೆ ಕ್ರೂರವಾಗಿ ದಮನ ನಡೆಸಲು ಪೊಲೀಸರು ಎರಗಿದ್ದಾರೆ.

images 1 11

ಒಂದು ವಿಡಿಯೋದಲ್ಲಿ, ಮಹಿಳಾ ಪತ್ರಕರ್ತೆಯೊಬ್ಬರನ್ನು ಬಂಧಿಸಲು ಹತ್ತಾರು ಪೊಲೀಸರು ವೃತ್ತಾಕಾರವಾಗಿ ಸುತ್ತುವರೆದು ಅತ್ಯಂತ ಕ್ರೂರವಾಗಿ ಎಳೆದೊಯ್ಯುವ ದೃಶ್ಯವಿದೆ. ಅದು ಕೇವಲ ಕ್ರೌರ್ಯ ಮಾತ್ರವಲ್ಲ, ಒಂದು ಬಲಹೀನ ಪ್ರಾಣಿಯನ್ನು ಬೇಟೆಯಾಡಲು ಕಟುಕ ಮೃಗಗಳ ಹಿಂಡು ಒಟ್ಟಾಗಿ ದಾಳಿ ಮಾಡುವ ಶಿಕಾರಿ ಮನಸ್ಥಿತಿಯನ್ನು ನೆನಪಿಸುತ್ತದೆ. ಇರಾಕ್ ಯುದ್ಧದ ಸಮಯದಲ್ಲಿ ಅಬು ಗ್ರೈಬ್ ಜೈಲಿನಲ್ಲಿ ಯುದ್ಧ ಕೈದಿಗಳನ್ನು ಚಿತ್ರಹಿಂಸೆಗೊಳಪಡಿಸಿ ಆನಂದಿಸುತ್ತಿದ್ದ ಅಮೆರಿಕದ ಲಿಂಡಿ ಇಂಗ್ಲೆಂಡ್ ಎಂಬ ಮಹಿಳಾ ಸೈನಿಕಳಂತೆ, ಇಲ್ಲಿಯೂ ಸಮವಸ್ತ್ರಧಾರಿ ಪೊಲೀಸರು ಅಷ್ಟೇ ಕ್ರೂರ ಮನಸ್ಥಿತಿಯಿಂದ ಮಹಿಳಾ ಪ್ರತಿಭಟನಾಕಾರರ ಮೇಲೆ ಎರಗಿದ್ದರು.

ವಸಾಹತುಶಾಹಿ ಕಾಲದಲ್ಲಿ ಬ್ರಿಟಿಷರ ಬೂಟು ನೆಕ್ಕುತ್ತಿದ್ದ ಭಾರತೀಯ ಪೊಲೀಸರು ತಮ್ಮದೇ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹೊಡೆಯುತ್ತಿದ್ದ ದೃಶ್ಯಗಳಿಗೂ, ಇಂದಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಇಂದು ಪ್ರಜಾಪ್ರಭುತ್ವದ ಭಾರತದಲ್ಲೂ ಪೊಲೀಸರು ಪ್ರತಿಭಟನಾಕಾರರನ್ನು ತಮ್ಮಂತೆಯೇ ಸಮಾಜದ ಭಾಗವಾಗಿ ಏಕೆ ನೋಡುತ್ತಿಲ್ಲ ಎಂಬುದು ದುರಂತ.

ಈ ಲೇಖನ ಓದಿದ್ದೀರಾ?: ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?

ಅಂಬೇಡ್ಕರ್ ಅವರನ್ನು ಓದಿದ, ಸಂವಿಧಾನದ ಕುರಿತು ಮಾತನಾಡುವ ಈ ಯುವಜನರನ್ನು ರಸ್ತೆಯಲ್ಲಿ ಕಂಡಾಗ, ಸರ್ಕಾರದ ರಕ್ಷಣೆಯಲ್ಲಿರುವ ಸಮವಸ್ತ್ರಧಾರಿಗಳ ಮನಸ್ಸಿನಲ್ಲಿ ಒಂದು ರೀತಿಯ ಅಸೂಯೆ ಅಥವಾ ಆಕ್ರೋಶ ಹುಟ್ಟಿಕೊಳ್ಳುತ್ತದೆ. ಈ ಕಾರಣದಿಂದಲೇ ಮೇಲಧಿಕಾರಿಗಳ ಮತ್ತು ಸರ್ಕಾರದ ಆದೇಶಗಳನ್ನು ಪಾಲಿಸುವ ನೆಪದಲ್ಲಿ ಅವರು ಇಷ್ಟೊಂದು ಕ್ರೂರವಾಗಿ ಲಾಠಿ ಬೀಸಲು ಸಾಧ್ಯವಾಗುತ್ತಿದೆ ಎಂದರೂ ತಪ್ಪಾಗಲಾರದು.

ಪೊಲೀಸರು ತಮ್ಮ ಸ್ವಂತ ಮನಸ್ಸಾಕ್ಷಿಯನ್ನು ಬದಿಗೊತ್ತಿ ಇಷ್ಟೊಂದು ಭೀಕರವಾಗಿ ವರ್ತಿಸಲು ಪ್ರಮುಖ ಮಾನಸಿಕ ಕಾರಣವೆಂದರೆ ‘ಏಜೆಂಟಿಕ್ ಸ್ಟೇಟ್’ (Agentic State). ಪ್ರಸಿದ್ಧ ಮಾನಸಿಕ ತಜ್ಞ ಸ್ಟ್ಯಾನ್ಲಿ ಮಿಲ್ಗ್ರಾಮ್ ವ್ಯಾಖ್ಯಾನಿಸಿದ ಈ ಪರಿಕಲ್ಪನೆಯನ್ನು ತತ್ವಜ್ಞಾನಿ ಆಕಾಶ್ ಸಿಂಗ್ ರಾಥೋಡ್ ತಮ್ಮ ಅಧ್ಯಯನದಲ್ಲಿ ವಿವರಿಸಿದ್ದಾರೆ.

‘ಏಜೆಂಟಿಕ್ ಸ್ಟೇಟ್’ ಎಂದರೆ – “ಒಬ್ಬ ವ್ಯಕ್ತಿಯು ತನ್ನ ಕೃತ್ಯಗಳಿಗೆ ತಾನೇ ಜವಾಬ್ದಾರ ಎಂಬ ಭಾವನೆಯನ್ನು ಕಳೆದುಕೊಂಡು, ತಾನು ಕೇವಲ ಬೇರೊಬ್ಬರ (ಆಡಳಿತದ ಅಥವಾ ಅಧಿಕಾರಿಯ) ಇಚ್ಛೆಯನ್ನು ಈಡೇರಿಸುವ ಬರಿ ಉಪಕರಣ ಅಥವಾ ಅಸ್ತ್ರ ಎಂದು ಭಾವಿಸುವ ಮಾನಸಿಕ ಸ್ಥಿತಿ.”

images 2 6

ಯಹೂದಿಗಳ ಹತ್ಯಾಕಾಂಡದ ರೂವಾರಿ ಅಡಾಲ್ಫ್ ಐಕ್‌ಮನ್, ಲಕ್ಷಾಂತರ ಜನರನ್ನು ಗ್ಯಾಸ್ ಚೇಂಬರ್‌ಗೆ ತಳ್ಳಿ ಕೊಲ್ಲುತ್ತಿದ್ದ. ಆದರೆ, ಆತ ತನ್ನ ಕೃತ್ಯವನ್ನು ಅದೊಂದು ತಾನು ದುಡಿಯುವ ಆಫೀಸಿನ ‘ಕಡತದ ಕೆಲಸ’ ಎಂದು ಭಾವಿಸಿದ್ದನೇ ಹೊರತು, ತನ್ನನ್ನು ಕೊಲೆಗಾರ ಎಂದು ಭಾವಿಸಿರಲಿಲ್ಲ. ಇಂದಿನ ಪೊಲೀಸರ ಸ್ಥಿತಿಯೂ ಇದೇ ಆಗಿದೆ. ತಾವು ಮಾಡುತ್ತಿರುವ ದೌರ್ಜನ್ಯ, ಬಟ್ಟೆ ಹರಿಯುವುದು, ಜನರನ್ನು ರಸ್ತೆಯಲ್ಲಿ ಎಳೆದೊಯ್ಯುವುದು ತಮ್ಮ ಸ್ವಂತ ನಿರ್ಧಾರವಲ್ಲ, ತಾವು ಕೇವಲ ‘ಮೇಲಧಿಕಾರಿಗಳ ಆದೇಶ ಪಾಲಿಸುತ್ತಿದ್ದೇವೆ’ ಎಂಬ ಭಾವನೆ ಅವರಲ್ಲಿದೆ. ಬೃಹತ್ ವ್ಯವಸ್ಥೆಯಲ್ಲಿ ತಾವು ಆದೇಶ ಪಾಲಕರು ಎಂಬ ಭಾವನೆಯಲ್ಲಿರುವ ಈ ಪೊಲೀಸರಿಗೆ ತಮ್ಮ ಕೃತ್ಯ ಮತ್ತು ಕ್ರೌರ್ಯದ ಅರಿವಾಗುತ್ತಿಲ್ಲ.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಡ್ರೋನ್‌ಗಳು ಹೇಗೆ ಯಾವುದೇ ಭಾವನೆಯಿಲ್ಲದೆ ಗುಂಡು ಹಾರಿಸುತ್ತವೆಯೋ, ಮನುಷ್ಯರನ್ನು ಕೊಲ್ಲುತ್ತವೆಯೇ, ಹಾಗೆಯೇ ಸಂಪೂರ್ಣ ಆಡಳಿತ ವ್ಯವಸ್ಥೆಯು ಬಡ ಮತ್ತು ನಿರುದ್ಯೋಗಿ ವರ್ಗದ ಜನರನ್ನು ದಮನಿಸಲು ಪೊಲೀಸರನ್ನು ‘ಡ್ರೋನ್ ಯೋಧ’ರನ್ನಾಗಿ ಮಾಡಿಕೊಂಡಿವೆ. ಸ್ವತಂತ್ರ ದೇಶವೊಂದರಲ್ಲಿ ತಮ್ಮದೇ ದೇಶದ ಸಹನಾಗರಿಕರ ಮೇಲೆ ಈ ಮಟ್ಟದ ಭೀಕರ ದೌರ್ಜನ್ಯ ನಡೆಯುತ್ತಿರುವುದು, ನಮ್ಮ ದೇಶವಿನ್ನೂ ಸಂಪೂರ್ಣವಾಗಿ ಸ್ವತಂತ್ರವಾಗಿಲ್ಲ ಮತ್ತು ಪ್ರಜಾಪ್ರಭುತ್ವವು ತೀವ್ರ ಅಪಾಯದಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ಸಾರುತ್ತಿದೆ.

ಮಾಹಿತಿ ಮೂಲ: ದಿ ವೈರ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ | ಸಹಬಾಳ್ವೆಯಿಂದ ಉತ್ತಮ ಸಮಾಜ ನಿರ್ಮಾಣ : ಬಾಬುರಾವ್ ಮೂಡುಬಿ

ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದ ಬದುಕಿದಾಗ...

ದಿನಸಿ ಬೆಲೆ ಏರಿಕೆ ಬರೆ; ಗ್ರಾಮೀಣ ಕುಟುಂಬಗಳ ಬಜೆಟ್‌ಗೆ ಕತ್ತರಿ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆಯ...

ಬೀದರ್‌ | ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಲಿ ಕರೆ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ...

KPSC ಅಕ್ರಮ | ಫೋನ್ ಟ್ಯಾಪಿಂಗ್ ಆರೋಪದ ನೆರಳು; ಹೈಕೋರ್ಟ್ ಎಸ್‌ಐಟಿ ತಂಡಕ್ಕೆ ಸುಪ್ರೀಂ ಬ್ರೇಕ್

ಕರ್ನಾಟಕ ಲೋಕಸೇವಾ ಆಯೋಗದ (KPSC) ಗಂಭೀರ ಅಕ್ರಮ ಮತ್ತು ಭ್ರಷ್ಟಾಚಾರ ಪ್ರಕರಣಗಳ...