ಅಲ್ಲಮನ ಅನನ್ಯ ಪದಪ್ರಯೋಗಗಳು | ತಂದೆ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ತಂದೆ
ಸಕಲ ಭುವನಾದಿ
ಭುವನಂಗಳಿಗೆ ತಂದೆ.
ಸಕಲದೇವಾದಿ
ದೇವರ್ಕಳಿಗೆ ತಂದೆ.
ಭವಭವದಲ್ಲಿ
ನೀನೆನ್ನ ತಂದೆ.
ಗುಹೇಶ್ವರಲಿಂಗ,
ನಿರಾಳದಲ್ಲಿ ನೀನೆನ್ನ ತಂದೆ.

- Advertisement -

ವಚನಾರ್ಥ:
ಸತ್ಯಲೋಕ, ತಪೋಲೋಕ, ಜನಲೋಕ ಮಹರ್ಲೋಕ, ಸ್ವರ್ಗಲೋಕ, ಭುವರ್ಲೋಕ, ಭೂಲೋಕ ಇವು ಸಕಲ ಭುವನಾದಿ ಭುವನಂಗಳು. ಇವನ್ನು ಸೃಷ್ಟಿಸಿ ನಿರ್ವಹಿಸುತ್ತಿರುವವನು ಅವನೊಬ್ಬನೇ ಸೃಷ್ಟಿಕರ್ತ. ಅವನೇ ಎಲ್ಲಾ ಭುವನಗಳಿಗೂ ತಂದೆ. ಇನ್ನು ದೇವಾದಿ ದೇವತೆಗಳು. ಅವರ ಸಂಖ್ಯೆ ಮುಕ್ಕೋಟಿ ಎಂದು ಒಂದು ಅಂದಾಜು. ಅಂತಹ ಸಕಲ ದೇವಾದಿ ದೇವರ್ಕಳಿಗೆ ಸೃಷ್ಟಿಕರ್ತನೇ ತಂದೆ. ನಾವು ಈ ಭೂಲೋಕದಲ್ಲಿ ಅಂದರೆ ಭವಭವದಲ್ಲಿ ಜನಿಸುವುದಕ್ಕೆ ಕಾರಣನಾದವನು ಅದೇ ಸೃಷ್ಟಿಕರ್ತನೇ. ಅವನೇ ನಮ್ಮನ್ನು ಇಲ್ಲಿ ತಂದವನು, ನಮ್ಮ ತಂದೆ. ಈ ಭವದ ಜಂಜಡದಲ್ಲಿ ಹುಟ್ಟು ಸಾವುಗಳ ಮಧ್ಯೆ ನಡೆಯುವ ಜೀವನ ನಾಟಕದಲ್ಲಿ ನಿರಾಳತೆಯನ್ನು ಕರುಣಿಸಿ ಮುನ್ನಡೆಯಿಸುವ ತಂದೆ ಅವನೇ. ನಿರಾಳತೆಯನ್ನು ತಂದವನು ಅವನೇ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪದಪ್ರಯೋಗಾರ್ಥ:
ತಂದೆ ಎಂಬ ಪದ ಈ ವಚನದ ಕೇಂದ್ರ ಬಿಂದು. ನಾಲ್ಕು ವಾಕ್ಯಗಳ ವಚನದಲ್ಲಿ ತಂದೆ ನಾಲ್ಕು ಸಲ ಬಳಕೆ ಆಗಿದೆ. ಮೊದಲ ಎರಡು ಸಲ ನಾಮಪದವಾಗಿ, ಕೊನೆಯ ಎರಡು ಸಲ ನಾಮಪದ ಮತ್ತು ಕ್ರಿಯಾಪದ ಎರಡೂ ಅರ್ಥದಲ್ಲಿ. ತಂದೆ ಅಂದರೆ ಅಪ್ಪ ಎಂಬ ಅರ್ಥದಲ್ಲಿ. ತಂದೆ ಅಂದರೆ ತರುವುದು, ತಂದವನು ಎಂಬ ಅರ್ಥದಲ್ಲಿ. ತಂದೆ ನಾಮಪದ. ತರುವುದು ಕ್ರಿಯಾಪದ. ತರುವವನು ತಂದವನು. ಭವಭವದಲ್ಲಿ ನೀನೆನ್ನ ತಂದೆ ಎನ್ನುವಲ್ಲಿ ತಂದೆ ಮತ್ತು ತರುವುದು ಎರಡೂ ಅರ್ಥಗಳಿವೆ. ನಿರಾಳದಲ್ಲಿ ನೀನೆನ್ನ ತಂದೆ ಎನ್ನುವಲ್ಲಿಯೂ ಕೂಡಾ ಎರಡು ಅರ್ಥಗಳಿವೆ. ಇದೊಂದು ಬಗೆಯ ಭಾಷಾ ಪದ ಚಮತ್ಕಾರ. ಇದೇ ತರವಾದ ಪದ ಚಮತ್ಕಾರವನ್ನು ಚಿ. ಉದಯಶಂಕರ್ ಅವರು ರಾಘವೇಂದ್ರ ಸ್ವಾಮಿಗಳ ಕುರಿತು ಬರೆದು ರಾಜಕುಮಾರ್ ಹಾಡಿರುವ ಭಕ್ತಿಗೀತೆಯಲ್ಲಿ ಮಾಡಿದ್ದಾರೆ. “ನೀ ತಂದೆ ನಾ ಕಂದ ಇದು ನಮ್ಮ ಅನುಬಂಧ, ನೀ ತಂದೆ ನಾ ಬಂದೆ”. ಅಪ್ಪ ಎಂದು ಅರ್ಥ ಕೊಡುವ ತಂದೆ ಎಂಬ ಸರಳ ಪದವನ್ನು ನಾಮಪದವಾಗಿ ಮತ್ತು ಕ್ರಿಯಾಪದವಾಗಿ ಬಳಸಿ ಅಲ್ಲಮ ಮಾಡಿರುವ ಪದಪ್ರಯೋಗ ಅತ್ಯಂತ ಆಪ್ತವಾದದ್ದು ಅನನ್ಯವಾದದ್ದು.

Advertisements

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

ಕೃಷಿರಂಗ | ಬರ ಪೀಡಿತ ಜಿಲ್ಲೆಗಳಿಗೆ ವರದಾನ- ಸಮಗ್ರ ಕೃಷಿ

ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ...

ದಿಲ್ಲಿ ಮಾತು | ಬೆಳಕಿನ ಬೆನ್ನೇರಿ ಹೋದ ಕತ್ತಲು, ಮತ್ತೆ ಮರಳದಂತೆ ಮುಚ್ಚಿದ ಕಬ್ಬಿಣದ ಬಾಗಿಲುಗಳು…

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್...