ಸಾಲದ ಆಮಿಷ, ವೈಯಕ್ತಿಕ ಮಾಹಿತಿ ಕಳವು; 3 ನಕಲಿ ಲೋನ್ ಆ್ಯಪ್‌ಗಳಿಗೆ ಗೂಗಲ್ ಕತ್ತರಿ

Date:

ಕಡಿಮೆ ಬಡ್ಡಿಗೆ ತ್ವರಿತ ಸಾಲ ನೀಡುವುದಾಗಿ ಆಮಿಷವೊಡ್ಡಿ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡಿ, ಬಳಿಕ ಅಧಿಕ ಬಡ್ಡಿ ಹಾಗೂ ದಂಡದ ಹೆಸರಿನಲ್ಲಿ ಹಣ ವಸೂಲಿ ಮಾಡುವ ನಕಲಿ ಸಾಲದ ಆ್ಯಪ್‌ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಮುಂದುವರಿಸಿದೆ. ಗೃಹ ಸಚಿವಾಲಯದ ದೂರಿನ ಮೇರೆಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಮತ್ತೆ ಮೂರು ನಕಲಿ ಸಾಲದ ಆ್ಯಪ್‌ಗಳನ್ನು ತೆಗೆದುಹಾಕಲಾಗಿದೆ.

- Advertisement -

ಈ ತಿಂಗಳಲ್ಲೇ ಇದುವರೆಗೆ ಒಟ್ಟು 9 ನಕಲಿ ಸಾಲದ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಈ ಆ್ಯಪ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡುವುದಲ್ಲದೆ, ಸಾಲ ಪಡೆದ ಬಳಿಕ ಅತಿಯಾದ ಬಡ್ಡಿ ಮತ್ತು ದಂಡ ವಿಧಿಸಿ ಕಿರುಕುಳ ನೀಡುತ್ತಿದ್ದವು ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಗೃಹ ಸಚಿವಾಲಯದ ಸೈಬರ್‌ ಭದ್ರತಾ ವಿಭಾಗವಾದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಆಗಸ್ಟ್ 19ರಂದು ಗೂಗಲ್‌ಗೆ ನೋಟಿಸ್ ನೀಡಿ ಮೂರು ನಕಲಿ ಸಾಲದ ಆ್ಯಪ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ಸೂಚಿಸಿತ್ತು. Horizon Cash Service, Money Score Monitor, JellyCredit ಎಂಬ ಮೂರು ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಆ್ಯಪ್‌ಗಳು ಐದು ನಿಮಿಷದಲ್ಲಿ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಜನರನ್ನು ಸೆಳೆಯುತ್ತಿದ್ದವು. ಬಳಿಕ ಸಾಲದ ಮೇಲೆ ಭಾರಿ ಬಡ್ಡಿ ಮತ್ತು ದಂಡ ವಿಧಿಸಿ ಹಣ ವಸೂಲಿ ಮಾಡುತ್ತಿದ್ದವು ಎಂಬ ಆರೋಪವಿದೆ.

ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿದ ಬಳಿಕ ಬಳಕೆದಾರರ ಹಲವು ವೈಯಕ್ತಿಕ ಮಾಹಿತಿಯನ್ನು ರಹಸ್ಯವಾಗಿ ಕಳವು ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಗುರುತಿನ ದಾಖಲೆಗಳು, ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ, ಮೊಬೈಲ್‌ನಲ್ಲಿರುವ ಸಂಬಂಧಿಕರು ಹಾಗೂ ಸ್ನೇಹಿತರ ಸಂಪರ್ಕ ಸಂಖ್ಯೆಗಳು, ಫೋಟೋ ಗ್ಯಾಲರಿ ಮತ್ತು ಕ್ಯಾಮೆರಾ ಪ್ರವೇಶ ಸೇರಿದಂತೆ ಹಲವು ಮಾಹಿತಿಯನ್ನು ಪಡೆಯಲಾಗುತ್ತಿತ್ತು. ಬಳಿಕ ಇದೇ ಮಾಹಿತಿಯನ್ನು ಬಳಸಿಕೊಂಡು ಬಳಕೆದಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು.

ಸರ್ಕಾರದ ನೋಟಿಸ್‌ ಸ್ವೀಕರಿಸಿದ ಕೇವಲ ಮೂರು ಗಂಟೆಗಳೊಳಗೆ ಗೂಗಲ್ ಈ ಮೂರು ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದಕ್ಕೂ ಮೊದಲು ಆಗಸ್ಟ್ 7ರಂದು ಸರ್ಕಾರವು ಮತ್ತಷ್ಟು ಆರು ನಕಲಿ ಸಾಲದ ಆ್ಯಪ್‌ಗಳನ್ನು ತೆಗೆದುಹಾಕುವಂತೆ ಗೂಗಲ್‌ಗೆ ಸೂಚಿಸಿತ್ತು. Loan Orbit, Hisab, Nexx Loan, One Fund, Credit Factor, Mobile Credit ಗಳನ್ನು ಆಗ ತೆಗೆದುಹಾಕಲಾಗಿತ್ತು. ಇದರಿಂದ ಆಗಸ್ಟ್‌ನಲ್ಲಿ ಒಟ್ಟು 9 ನಕಲಿ ಸಾಲದ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಂಡಂತಾಗಿದೆ.

ಈ ಆಪ್‌ಗಳ ಬಲೆಗೆ ಬಿದ್ದೀರಿ ಎಚ್ಚರ!

ಗೂಗಲ್ ಪ್ಲೇ ಸ್ಟೋರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಆ್ಯಪ್‌ಗಳ ಜಾಹೀರಾತುಗಳನ್ನು ನೀಡಲಾಗುತ್ತದೆ. “ಯಾವುದೇ ದಾಖಲೆಗಳಿಲ್ಲದೆ, ಸಿಬಿಲ್ ಸ್ಕೋರ್ ಅಗತ್ಯವಿಲ್ಲದೆ ಐದು ನಿಮಿಷದಲ್ಲಿ ₹50 ಸಾವಿರ ಸಾಲ” ಎಂಬಂತಹ ಆಮಿಷಗಳನ್ನು ಒಡ್ಡಲಾಗುತ್ತದೆ. ತುರ್ತಾಗಿ ಹಣದ ಅಗತ್ಯವಿರುವವರು ಇಂತಹ ಜಾಹೀರಾತುಗಳನ್ನು ನಂಬಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ.

ಸಾಲದ ಆ್ಯಪ್‌ಗಳಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೆಬ್‌ಸೈಟ್‌ಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ತಿಂಗಳು ಗೂಗಲ್‌ನ ಫೈರ್‌ಬೇಸ್ ಸರ್ವರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 57 ನಕಲಿ ವೆಬ್‌ಸೈಟ್‌ಗಳು ಮತ್ತು ಡೇಟಾಬೇಸ್‌ಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈ ವೆಬ್‌ಸೈಟ್‌ಗಳು ಮೊಬೈಲ್‌ಗಳಲ್ಲಿ ವೈರಸ್‌ಗಳನ್ನು ಹರಡಿ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಳವು ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ.

ಸಾಲದ ಆ್ಯಪ್ ನಿಜವೋ, ನಕಲಿಯೋ ತಿಳಿಯುವುದು ಹೇಗೆ?

ಆನ್‌ಲೈನ್‌ನಲ್ಲಿ ಸಾಲ ಪಡೆಯುವ ಮುನ್ನ ಕೆಲವು ಅಂಶಗಳನ್ನು ಪರಿಶೀಲಿಸುವುದು ಅಗತ್ಯ. ನಿಜವಾದ ಸಾಲದ ಆ್ಯಪ್‌ಗಳು ಸಾಮಾನ್ಯವಾಗಿ ಆರ್‌ಬಿಐನಲ್ಲಿ ನೋಂದಾಯಿತ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯೊಂದಿಗೆ ಸಂಪರ್ಕ ಹೊಂದಿರುತ್ತವೆ. ಆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಹೆಸರು ಆ್ಯಪ್‌ನ ವಿವರಗಳಲ್ಲಿ ನಮೂದಾಗಿರುತ್ತದೆ. ಸಾಲ ನೀಡುತ್ತಿರುವ ಸಂಸ್ಥೆ ಆರ್‌ಬಿಐನಲ್ಲಿ ನೋಂದಾಯಿತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನೈಜ ಸಂಸ್ಥೆಗಳಿಗೆ ಸಾಮಾನ್ಯವಾಗಿ ಅಧಿಕೃತ ಕಚೇರಿ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ಸೇರಿದಂತೆ ಸಂಪರ್ಕ ವಿವರಗಳಿರುತ್ತವೆ.

ಆ್ಯಪ್ ಡೌನ್‌ಲೋಡ್ ಮಾಡುವಾಗ ಈ 4 ಅಂಶ ನೆನಪಿಡಿ

ಸಾಲ ನೀಡುವ ಆ್ಯಪ್ ನಿಮ್ಮ ಸಂಪರ್ಕ ಪಟ್ಟಿ ಅಥವಾ ಫೋಟೋ ಗ್ಯಾಲರಿಗೆ ಪ್ರವೇಶ ಕೇಳಿದರೆ ಎಚ್ಚರಿಕೆ ವಹಿಸಿ. ಇಂತಹ ಅನುಮತಿಗಳು ಸಾಲ ನೀಡಲು ಅಗತ್ಯವಿಲ್ಲ. ಸಾಲ ನೀಡುವ ಮುನ್ನ ಪ್ರೊಸೆಸಿಂಗ್ ಶುಲ್ಕ ಅಥವಾ ಫೈಲ್ ಚಾರ್ಜ್ ಹೆಸರಿನಲ್ಲಿ ಹಣ ಕೇಳಿದರೆ ಅದು ವಂಚನೆಯಾಗಿರುವ ಸಾಧ್ಯತೆಯಿದೆ. ನೈಜ ಸಂಸ್ಥೆಗಳು ಸಾಮಾನ್ಯವಾಗಿ ಶುಲ್ಕವನ್ನು ಸಾಲದ ಮೊತ್ತದಿಂದಲೇ ಕಡಿತಗೊಳಿಸುತ್ತವೆ. ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ವಿಶೇಷವಾಗಿ ನಕಾರಾತ್ಮಕ ಹಾಗೂ ಒಂದು ಸ್ಟಾರ್ ವಿಮರ್ಶೆಗಳನ್ನು ಓದಿ. ವಾಟ್ಸ್‌ಆ್ಯಪ್ ಅಥವಾ ಅಪರಿಚಿತ ಸಂದೇಶಗಳ ಮೂಲಕ ಬರುವ ಲಿಂಕ್‌ಗಳಿಂದ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಅಧಿಕೃತ ಆ್ಯಪ್ ಸ್ಟೋರ್‌ಗಳಿಂದ ಮಾತ್ರ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಸುರಕ್ಷಿತ.

ನಕಲಿ ಆ್ಯಪ್‌ನ ಬಲೆಗೆ ಬಿದ್ದರೆ ಏನು ಮಾಡಬೇಕು?

ನಕಲಿ ಸಾಲದ ಆ್ಯಪ್‌ನಿಂದ ಕಿರುಕುಳ ಎದುರಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು.

  • 1930 ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ.
  • cybercrime.gov.in ಮೂಲಕ ಆನ್‌ಲೈನ್ ದೂರು ದಾಖಲಿಸಿ.
  • ಸಮೀಪದ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ.
  • ನಕಲಿ ಆ್ಯಪ್‌ ಅನ್ನು ಮೊಬೈಲ್‌ನಿಂದ ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿ.
  • ಆ್ಯಪ್‌ಗೆ ನೀಡಿರುವ ಅನಗತ್ಯ ಅನುಮತಿಗಳನ್ನು ಹಿಂಪಡೆಯಿರಿ.

I4C ಎಂದರೇನು?

ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೈಬರ್ ಭದ್ರತಾ ವ್ಯವಸ್ಥೆಯಾಗಿದ್ದು, ದೇಶದಲ್ಲಿ ನಡೆಯುವ ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನೆನಪಿಡಿ: ಹಣದ ಆಮಿಷಕ್ಕೆ ಒಳಗಾಗಿ ಯಾವುದೇ ಅಪರಿಚಿತ ಆ್ಯಪ್‌ಗೆ ನಿಮ್ಮ ಮೊಬೈಲ್‌ನ ಕಾಂಟ್ಯಾಕ್ಟ್‌ಗಳು, ಫೋಟೋ ಗ್ಯಾಲರಿ, ಕ್ಯಾಮೆರಾ ಅಥವಾ ಇತರ ವೈಯಕ್ತಿಕ ಮಾಹಿತಿಗೆ ಪ್ರವೇಶ ನೀಡಬೇಡಿ. ತ್ವರಿತ ಸಾಲದ ಆಮಿಷಕ್ಕಿಂತ ಮೊದಲು ಆ್ಯಪ್ ಮತ್ತು ಸಾಲ ನೀಡುವ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...