ಬಲವಂತವಾಗಿ ‘ಗೋಮೂತ್ರ’ ಕುಡಿಸಿದರು: ಮಹಾರಾಷ್ಟ್ರ ಮಾಜಿ ಸಂಸದನ ವಿರುದ್ದ ವಾಮಾಚಾರದ ದೂರು ನೀಡಿದ ಸೊಸೆ

Date:

ಮಹಾರಾಷ್ಟ್ರದ ಥಾಣೆಯ ಪ್ರಭಾವಿ ರಾಜಕೀಯ ಕುಟುಂಬವೊಂದರ ಕೌಟುಂಬಿಕ ಕಲಹ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಹಿರಿಯ ನಾಯಕ, ಮಾಜಿ ಸಂಸದ ವಿನಾಯಕ್ ರಾವತ್ ಮತ್ತು ಅವರ ಕುಟುಂಬದವರು ಬಲವಂತವಾಗಿ ‘ಗೋಮೂತ್ರ’ ಕುಡಿಸಿದರು, ವಾಮಾಚಾರ ಮಾಡುತ್ತಾರೆ ಎಂದು ಸೊಸೆ ಗಿರಿಜಾ ರಾವತ್ ದೂರು ನೀಡಿದ್ದಾರೆ.

- Advertisement -

ಈ ಸಂಬಂಧ ಕೌಟುಂಬಿಕ ದೌರ್ಜನ್ಯ ಹಾಗೂ ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಮಗೆ ಬಲವಂತವಾಗಿ ಗೋಮೂತ್ರ ಕುಡಿಸಲಾಗಿದೆ ಮತ್ತು ಮಾಟಮಂತ್ರ, ವಾಮಾಚಾರದ ಭಾಗವಾಗಿ ತಲೆಯ ಕೂದಲು ಕೀಳಲಾಗಿದೆ ಎಂದು ಗಿರಿಜಾ ರಾವತ್ ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದನ್ನೂ ಓದಿ: ವಾಮಾಚಾರ ಆರೋಪ; ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ

ಸದ್ಯ ಮಾಜಿ ಸಂಸದ ವಿನಾಯಕ್ ರಾವತ್, ಅವರ ಪತ್ನಿ, ಮತ್ತು ಕೌನ್ಸಿಲರ್ ಆಗಿರುವ ಮಗ ಗಿತೇಶ್ ರಾವತ್ ವಿರುದ್ಧ ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಫಿರೋಜ್ ಮತ್ತು ಖಾಜಿ ಎಂಬ ಇಬ್ಬರು ಕಪಟ ಮಾಂತ್ರಿಕರ ಹೆಸರನ್ನೂ ಸೇರಿಸಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಗಿರಿಜಾ ರಾವತ್, “ಕಳೆದ ಏಳು ವರ್ಷಗಳಿಂದ ನಾನು ಸಾಮಾಜಿಕ, ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಅನುಭವಿಸುತ್ತಿದ್ದೇನೆ. ಅವರು ಅತ್ಯಂತ ಪ್ರಭಾವಿ ಮತ್ತು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದವರು. ಆದ್ದರಿಂದ ಈ ಮುನ್ನ ದೂರು ನೀಡಲು ನನಗೆ ಧೈರ್ಯ ಬಂದಿರಲಿಲ್ಲ” ಎಂದು ಹೇಳಿದ್ದಾರೆ.

ತಮ್ಮ ಪತಿಯ ಲೈಂಗಿಕ ದೌರ್ಬಲ್ಯ ಮತ್ತು ಸಂತಾನಹೀನತೆಯ ಸಮಸ್ಯೆಯನ್ನು ಮರೆಮಾಚಲು, ಅತ್ತೆ-ಮಾವ ತನ್ನನ್ನು ಮಾಟಮಂತ್ರ ಮಾಡುವವರ ಬಳಿ ಕರೆದೊಯ್ಯುತ್ತಿದ್ದರು. ಕುಟುಂಬದ ಮುಖ್ಯಸ್ಥರಾಗಿದ್ದರೂ ವಿನಾಯಕ್ ರಾವತ್ ಅವರು ಎಂದಿಗೂ ನನ್ನ ಪರವಾಗಿ ನಿಲ್ಲಲಿಲ್ಲ. ನನಗೆ ಸರಿಯಾಗಿ ಊಟ ನೀಡದೆ ಉಪವಾಸ ಕೆಡವಲಾಗುತ್ತಿತ್ತು ಎಂದು ಗಿರಿಜಾ ಆರೋಪಿಸಿದ್ದಾರೆ.

“ಹನಿಮೂನ್ ಸಂದರ್ಭದಲ್ಲಿ ಊಟಿಯಲ್ಲಿ ನನ್ನ ಪತಿ ದೈಹಿಕ ಸಂಬಂಧಕ್ಕೆ ನಿರಾಕರಿಸಿದ್ದರು. ಭಾರತದಲ್ಲಿ ತಮಗೆ ದೈಹಿಕ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಿಲ್ಲ, ವಿದೇಶಕ್ಕೆ ಹೋದರೆ ಮಾತ್ರ ಸಾಧ್ಯ ಎಂದು ಅವರು ಹೇಳುತ್ತಿದ್ದರು. 2018ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗಲೂ ಅವರು ನನ್ನನ್ನು ನಿರ್ಲಕ್ಷಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿ, ನಾವು ದೈಹಿಕವಾಗಿ ಒಂದಾದರೆ ತಾನು ಸತ್ತುಹೋಗುವುದಾಗಿ ಹೆದರಿಸಿದ್ದರು” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಎಲ್ಲರ ಎದುರೇ ಪತಿ ತಮಗೆ ನಿಂದಿಸುತ್ತಿದ್ದರು. ಈ ಎಲ್ಲಾ ವಿಷಯಗಳು ಅತ್ತೆಗೆ ತಿಳಿದಿದ್ದರೂ ಅವರು ಸುಮ್ಮನಿದ್ದರು ಎಂದು ಗಿರಿಜಾ ಹೇಳಿದ್ದಾರೆ.

ಪ್ರಸ್ತುತ ಗಿರಿಜಾ ರಾವತ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿನಾಯಕ್ ರಾವತ್ ಅವರು ಉದ್ಧವ್ ಠಾಕ್ರೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಾಯಕರಾಗಿದ್ದು, ಈ ಆರೋಪಗಳ ಕುರಿತು ರಾವತ್ ಕುಟುಂಬದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಶಕ್ತಿಯಿಂದ ಶೀಘ್ರದಲ್ಲೇ ದೊಡ್ಡ ಬದಲಾವಣೆಯಾಗಲಿದೆ: ಅಂಬೇಡ್ಕರ್‌ ಮರಿಮೊಮ್ಮಗ ಅಮನ್‌

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ...

ಬೀದರ್‌ | ಬರದಲ್ಲೂ ಪಪ್ಪಾಯಿ ಬೆಳೆದು ₹25 ಲಕ್ಷ ಗಳಿಕೆ: ರೈತ ವೆಂಕಟರೆಡ್ಡಿ ತೋಟಕ್ಕೆ ಶಾಸಕರ ಭೇಟಿ

ಬರ ಪರಿಸ್ಥಿತಿಯ ನಡುವೆಯೂ ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...