ತಾಯಂದಿರ ಮರಣ ದರ: ಪಾಕಿಸ್ತಾನಕ್ಕಿಂತ ಭಾರತದಲ್ಲಿ 2 ಪಟ್ಟು ಹೆಚ್ಚು: ಲ್ಯಾನ್ಸೆಟ್

Date:

ಹೆರಿಗೆಯ ಸಮಯದಲ್ಲಿ ತಾಯಂದಿರ ಮರಣ ದರವು ದಕ್ಷಿಣ ಏಷ್ಯಾದ ದೇಶಗಳ ಪೈಕಿ ಭಾರತವು ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿನ ತಾಯಂದಿರ ಮರಣ ದರವು ಪಾಕಿಸ್ತಾನದ ತಾಯಂದಿರ ಮರಣ ದರಕ್ಕಿಂತ ದುಪ್ಪಟ್ಟಿದೆ ಎಂದು ಲ್ಯಾನ್ಸೆಟ್ ವರದಿ ಬಹಿರಂಗಪಡಿಸಿದೆ.

- Advertisement -

‘ದ ಲ್ಯಾನ್ಸೆಟ್ ಅಬ್ಸ್ಟೆಟ್ರಿಕ್ಸ್, ಗೈನೆಕಾಲಜಿ ಮತ್ತು ವುಮೆನ್ಸ್ ಹೆಲ್ತ್’ ಜರ್ನಲ್‌ನಲ್ಲಿ 2023ರಲ್ಲಿನ ತಾಯಂದಿರ ಮರಣ ದರವನ್ನು ವಿಶ್ಲೇಷಿಸಿ, ವರದಿ ಪ್ರಕಟಿಸಲಾಗಿದೆ. ವರದಿ ಪ್ರಕಾರ, 2023ರಲ್ಲಿನ ಪ್ರತಿ ಒಂದು ಲಕ್ಷ ಜೀವಂತ ಜನನಗಳಲ್ಲಿ ಭಾರತದಲ್ಲಿ 24,700ರಷ್ಟು ತಾಯಂದಿರು ಸಾವನ್ನಪ್ಪಿದ್ದಾರೆ. ಅದೇ ವರ್ಷ ಪಾಕಿಸ್ತಾನದಲ್ಲಿ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 10,300 ಮಾತೃ ಮರಣಗಳು ಸಂಭವಿಸಿವೆ. ಇನ್ನು, ಆಫ್ರಿಕನ್ ದೇಶಗಳಾದ ಇಥಿಯೋಪಿಯಾ ಮತ್ತು ನೈಜೀರಿಯಾಗಳಲ್ಲಿ ಕ್ರಮವಾಗಿ 11,900 ಮತ್ತು 32,900 ತಾಯಂದಿರ ಮರಣಗಳು ಸಂಭವಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯೂಯೇಶನ್ (IHME) ಸಂಶೋಧಕರು ಈ ವಿಶ್ಲೇಷಣೆ ನಡೆಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ತಾಯಂದಿರ ಮರಣಗಳು ಕಡಿಮೆಯಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಾಯಂದಿರ ಮರಣಗಳ ಪ್ರಮಾಣದ ಇಳಿಕೆಯು ತೀರಾ ನಿಧಾನವಾಗಿದೆ ಮತ್ತು ದೇಶಗಳ ನಡುವೆ ಅಸಮಾನವಾಗಿ ಉಳಿದಿದೆ ಎಂದು ಗಮನಿದ್ದಾರೆ.

ಸಂಶೋಧಕರ ಅಂದಾಜಿನ ಪ್ರಕಾರ, 2023ರಲ್ಲಿ ಜಗತ್ತಿನಾದ್ಯಂತ ಒಟ್ಟು 2.4 ಲಕ್ಷ ತಾಯಂದಿರ ಮರಣಗಳು ಸಂಭವಿಸಿವೆ. ಇದು ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 190.5ರಷ್ಟು ಜಾಗತಿಕ ಮಾತೃ ಮರಣವನ್ನು ಸೂಚಿಸುತ್ತದೆ. ಇದು 1990ರಲ್ಲಿ 321ರಷ್ಟಿತ್ತು. ಪ್ರಸ್ತುತ, ಮೂರನೇ ಒಂದಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ.

ಆದಾಗ್ಯೂ, 204 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 104 ದೇಶಗಳು ಇನ್ನೂ ಸುಸ್ಥಿರ ಅಭಿವೃದ್ಧಿ ಗುರಿಯಾದ (SDG) ‘ಪ್ರತಿ ಲಕ್ಷ ಜನನಗಳಿಗೆ 70ಕ್ಕಿಂತ ಕಡಿಮೆ ಮಾತೃ ಮರಣ’ದ ಗುರಿಯನ್ನು ತಲುಪಬೇಕಿದೆ ಎಂದು ತಂಡವು ತಿಳಿಸಿದೆ.

ಈ ಲೇಖನ ಓದಿದ್ದೀರಾ?: ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು

ಸ್ಥಳಕ್ಕೆ ಅನುಗುಣವಾಗಿ ಮಾತೃ ಮರಣದ ಪ್ರಮುಖ ಕಾರಣಗಳು ಬದಲಾಗುತ್ತವೆಯಾದರೂ, ಜಾಗತಿಕವಾಗಿ ಹೆರಿಗೆಯ ಸಮಯದ ರಕ್ತಸ್ರಾವ ಮತ್ತು ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡದ ತೊಂದರೆಗಳು ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. ಪ್ರಸವಪೂರ್ವ ಆರೈಕೆ, ಸುರಕ್ಷಿತ ಹೆರಿಗೆ ಸೇವೆಗಳು, ತುರ್ತು ಪ್ರಸೂತಿ ಆರೈಕೆ ಹಾಗೂ ಹೆರಿಗೆಯ ನಂತರದ ಮೇಲ್ವಿಚಾರಣೆಯ ಲಭ್ಯತೆಯು ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

SDG ಗುರಿಯನ್ನು ತಲುಪಲು ಐದು ವರ್ಷಗಳಿಗಿಂತ ಕಡಿಮೆ ಸಮಯ ಉಳಿದಿದೆ. ಪ್ರಗತಿಯನ್ನು ವೇಗಗೊಳಿಸಲು, ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಹಾಗೂ ಮಾತೃ ಮರಣವನ್ನು ಮೇಲ್ವಿಚಾರಣೆ ಮಾಡುವ ಹಾಗೂ ಕಡಿಮೆ ಮಾಡಲು ದೇಶಗಳ ಸಾಮರ್ಥ್ಯವನ್ನು ಸುಧಾರಿಸಲು ನವೀಕೃತ ಜಾಗತಿಕ ಕ್ರಮ ಮತ್ತು ಸುಸ್ಥಿರ ಹೂಡಿಕೆಯ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ವಿಜಯನ್ ವಿರುದ್ಧ ಸಿಎಂಆರ್‌ಎಲ್ ಪ್ರಕರಣ: ಇಡಿ ಹೇಳಿದ ತಕ್ಷಣ ಎಫ್‌ಐಆರ್ ದಾಖಲಿಸಲಾಗದು ಎಂದು ಕೇರಳ ಗೃಹ ಸಚಿವ

ಜಾರಿ ನಿರ್ದೇಶನಾಲಯ (ಇಡಿ) ಕೋರಿದೆ ಎಂದಮಾತ್ರಕ್ಕೆ ತಕ್ಷಣವೇ ಎಫ್‌ಐಆರ್ ನೋಂದಾಯಿಸಲು ಸಾಧ್ಯವಿಲ್ಲ....

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...