ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ 13ರ ಬಾಲಕ ಪೊಲೀಸ್ ವಶಕ್ಕೆ

Date:

ಟೊರೊಂಟೊಗೆ ತೆರಳುತ್ತಿದ್ದ ಏರ್ ಕೆನಡಾ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬೆದರಿಕೆ ಮೇಲ್ ಕಳುಹಿಸಿದ ಆರೋಪದಲ್ಲಿ 13 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಉತ್ತರ ಪ್ರದೇಶದ ಮೀರತ್‌ನ ಬಾಲಕ ಕಳೆದ ಮಂಗಳವಾರ ‘ಕೇವಲ ಮೋಜಿಗಾಗಿ’ ಬೆದರಿಕೆ ಮೇಲ್ ಕಳುಹಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇತ್ತೀಚೆಗೆ ವಿವಿಧ ಶಾಲೆಗಳಲ್ಲಿ ಇದೇ ರೀತಿಯ ಬೆದರಿಕೆ ಕರೆ ಬಂದಿರುವುದನ್ನು ನೋಡಿ ತಾನು ಮೋಜಿಗಾಗಿ ಈ ರೀತಿ ನಕಲಿ ಬೆದರಿಕೆ ಮೇಲ್ ಮಾಡಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ.

ತಾನು ನಕಲಿ ಬೆದರಿಕೆ ಇಮೇಲ್ ಮಾಡಿದ ಬಳಿಕ ಅಧಿಕಾರಿಗಳು ತನ್ನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆಯೇ ಎಂದು ತಿಳಿಯುವ ನಿಟ್ಟಿನಲ್ಲಿ ಬಾಂಬ್ ಬೆದರಿಕೆ ಇಮೇಲ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು ಈ ಬಾಲಕ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲು ನಕಲಿ ಇಮೇಲ್ ಐಡಿಯನ್ನು ರಚಿಸಿದ್ದರು. “ಅವನು ತನ್ನ ಫೋನ್‌ನಿಂದ ಮೇಲ್ ಕಳುಹಿಸಿದನು, ಅದಕ್ಕಾಗಿ ತನ್ನ ತಾಯಿಯ ವೈಫೈ ಬಳಸಿಕೊಂಡಿದ್ದಾನೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?  ದೆಹಲಿ ನಂತರ ಜೈಪುರ ಶಾಲೆಗಳಿಗೆ ಬಾಂಬ್ ಬೆದರಿಕೆ

ಬಾಂಬೆ ಬೆದರಿಕೆಯ ಇಮೇಲ್ ಕಳುಹಿಸಿದ ಕೂಡಲೇ ಬಾಲಕ ತಕ್ಷಣವೇ ಇಮೇಲ್ ಐಡಿಯನ್ನು ಡಿಲೀಟ್ ಮಾಡಿದ್ದಾನೆ ಎಂದು ವರದಿಯಾಗಿದೆ.

“ಮರುದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ನಕಲಿ ಬಾಂಬ್ ಬೆದರಿಕೆ ಸುದ್ದಿಯನ್ನು ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡಿದ ಬಾಲಕ ಉತ್ಸುಕರಾಗಿದ್ದಾಗ ನಮಗೆ ತಿಳಿಸಿದ್ದಾನೆ. ಆದರೆ ಆತನಿಗೆ ಭಯವೂ ಇತ್ತು ಅದರಿಂದಾಗಿ ಭಯದಿಂದ ತನ್ನ ಪೋಷಕರಿಗೆ ಯಾವುದೇ ಮಾಹಿತಿಯನ್ನು ಬಾಲಕ ನೀಡಿಲ್ಲ” ಎಂದು ಉಪ ಆಯುಕ್ತೆ ಉಷಾ ರಂಗನಾನಿ ಹೇಳಿದರು.

ಇದನ್ನು ಓದಿದ್ದೀರಾ?  ಪ್ಯಾರಿಸ್- ಮುಂಬೈ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ

ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಎಲ್) ಕಚೇರಿಗೆ ಕಳೆದ ಮಂಗಳವಾರ (ಜೂನ್ 12) ರಾತ್ರಿ 10.50ಕ್ಕೆ ಇಮೇಲ್ ಬಂದಿದ್ದು, ಇದರಿಂದಾಗಿ ವಿಮಾನವು ಸುಮಾರು 12 ಗಂಟೆಗಳ ಕಾಲ ವಿಳಂಬವಾಗಿತ್ತು. ಸಂಪೂರ್ಣ ತಪಾಸಣೆಯ ನಂತರ, ವಿಮಾನದಲ್ಲಿ ಏನೂ ಪತ್ತೆಯಾಗದ ಬಳಿಕ ಇದು ಸುಳ್ಳು ಬೆದರಿಕೆ ಎಂದು ಘೋಷಿಸಲಾಗಿತ್ತು.

ತನಿಖೆಯ ಸಮಯದಲ್ಲಿ, ಇಮೇಲ್ ಮೀರತ್‌ನಲ್ಲಿ ಪತ್ತೆಯಾಗಿದೆ. ನಂತರ ದೆಹಲಿ ಪೊಲೀಸರ ತಂಡ ಅಲ್ಲಿಗೆ ಹೋಗಿ ಬಾಲಕನ ವಿಚಾರಣೆ ಮಾಡಿದ್ದಾರೆ. ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಬಾಲಕನ ಕೌನ್ಸಿಲಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಡುಗೆಮನೆಯಲ್ಲಿ ಪುರುಷ, ಫುಟ್‌ಬಾಲ್ ಮೈದಾನದಲ್ಲಿ ಬಾಲಕಿ; ಪಿತೃಪ್ರಭುತ್ವವನ್ನು ಛಿದ್ರಗೊಳಿಸುವ ಕೇರಳದ ಶಾಲಾ ಪಠ್ಯಗಳು

ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ....

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...

ಯುಎಸ್‌ನ ಪ್ರತಿ ಐವರು ವಲಸಿಗ ವೈದ್ಯರಲ್ಲಿ ಒಬ್ಬರು ಭಾರತೀಯರು!

ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ವಲಸಿಗ ವೈದ್ಯರು, ಶಸ್ತ್ರಚಿಕಿತ್ಸಕರ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನವನ್ನು...

ಎನ್‌ಟಿಎ ಸಮಗ್ರತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾಗಿದೆ: ನೀಟ್ ಬಗ್ಗೆ ಕಾಂಗ್ರೆಸ್ ಕಳವಳ

ನೀಟ್‌ – ಯುಜಿ 2024ರ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ...