ಮಧ್ಯಪ್ರಾಚ್ಯ ಸಂಘರ್ಷ: ಭಾರತೀಯರಿಗೆ ತುಟ್ಟಿಯಾಗಲಿರುವ ನೀರು ಮತ್ತು ಬಿಯರ್!

Date:

ಬಿರು ಬೇಸಿಗೆಯನ್ನು ಎದುರಿಸುತ್ತಿರುವ ಭಾರತೀಯರಿಗೆ ಪ್ಯಾಕೇಜ್ಡ್‌ ನೀರು, ತಂಪು ಪಾನೀಯಗಳು, ಬಿಯರ್‌ ಒಳಗೊಂಡಂತೆ ಮದ್ಯಪಾನ ತುಟ್ಟಿಯಾಗಲಿದೆ. ಕೊಲ್ಲಿ ಸಂಘರ್ಷ ಭಾರತದ ಎಲ್ಲಾ ವ್ಯಾಪಾರ ವಹಿವಾಟಿಗೆ ನೇರ ಬಿಸಿ ತಾಕಿಸಿದ ಬೆನ್ನಲ್ಲೇ ಈಗ ನೀರು ಹಾಗೂ ಬಿಯರ್‌ ಎರಡರ ಬೆಲೆಯೂ ಗಗನಕ್ಕೇರುವ ಸಾಧ್ಯತೆಗಳಿವೆ.

- Advertisement -

ಮಾರ್ಚ್‌ ತಿಂಗಳಿನಲ್ಲಿ ಬಿಸ್ಲೆರಿ 11% ಶೇಕಡ ಬೆಲೆ ಏರಿಸಿದೆ, ಬೈಲಿ, ಕ್ಲಿಯರ್‌ ಪ್ರೀಮಿಯಂ ಬಾಟೆಲ್ಡ್‌ ನೀರಿನ ಕಂಪನಿಗಳು ಬೆಲೆ ಹೆಚ್ಚು ಮಾಡಿವೆ ಎಂದು ರಿಯೂಟರ್‌ ವರದಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಭಾರತದ 15% ನಗರವಾಸಿಗಳು 6% ಗ್ರಾಮೀಣ ನಿವಾಸಿಗಳು ಕುಡಿಯುವ ನೀರಿಗೆ ಬಾಟಲ್‌ ನೀರನ್ನೇ ಅವಲಂಬಿಸಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಬಾಟಲ್‌ ನೀರಿಗೆ ಅವಲಂಬಿಸುವುದು ದುಬಾರಿಯಾದರೂ ಕೆಲ ಪ್ರದೇಶಗಳಲ್ಲಿ ಶುದ್ಧ ನೀರಿನ ಪೂರೈಕೆ ಅಲಭ್ಯವಾಗಿರುವುದರಿಂದ ಹಾಗೂ ಕ್ಷೀಣಿಸುತ್ತಿರುವ ಭಾರತದ ಅಂತರ್ಜಲ ಮಟ್ಟ ಮೊದಲಾದ ಸಮಸ್ಯೆಗಳು ನಗರ ಹಾಗೂ ಗ್ರಾಮೀಣ ಭಾಗದ ಜನರನ್ನು ಬಾಟಲ್‌ ನೀರಿನ ಬಳಕೆಯ ಅನಿವಾರ್ಯಕ್ಕೆ ಸಿಲುಕಿಸಿದೆ.

N6FIFYKAPJAORBTSGG4TZ7F2YU

ಕಂಪೆನಿಗಳು ಹಾಗೂ ಬಾಟಲ್‌ ಉತ್ಪಾದಕರ ಹೇಳಿಕೆಯಂತೆ ಯುದ್ಧವು ಕನಿಷ್ಠ ಬೇಡಿಕೆಯಾದ ನೀರು ಸಹ ಭಾರತೀಯರಿಗೆ ದುಬಾರಿಯಾಗಿಸುತ್ತದೆ. ಹಾರ್ಮುಜ್‌ ಜಲಮಾರ್ಗದ ಮೂಲಕ ಬರುವ ತೈಲ ಹಾಗೂ ಅನಿಲ ಹಡಗುಗಳ ಮೇಲಿನ ನಿರ್ಬಂಧ ಈ ಸಂಕಷ್ಟಕ್ಕೆ ಕಾರಣ.

ಕಚ್ಛಾ ತೈಲವನ್ನು ಬಾಟಲ್‌ ತಯಾರಿಕೆಗೆ ಬೇಕಾಗುವ ಪಿಇಟಿ ಉತ್ಪಾದನೆಗೆ ಬಳಸಲಾಗುತ್ತದೆ. ಪ್ಲಾಸ್ಟಿಕ್‌ ಟೆಸ್ಟ್‌ ಟ್ಯೂಬ್‌ನಂತೆ ಕಾಣುವ ಈ ಉಪಕರಣ ಬಳಸಿ ಕಂಪನಿಗಳು ತಮಗೆ ಬೇಕಾದ ಆಕಾರಕ್ಕೆ ಬಾಟಲ್‌ ಅಚ್ಚುಗಳನ್ನು ತಯಾರಿಸುತ್ತವೆ. ಈ ಪ್ರಿಫಾರ್ಮ್‌ನ ಬೆಲೆ ಕೆಜಿಗೆ 120 ರಿಂದ 180ರವರೆಗೂ ಇದ್ದು ಸದ್ಯ ಇವುಗಳ ಸರಬರಾಜು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಮಹರಾಷ್ಟ್ರದ 20% ಬಾಟಲ್‌ ತಯಾರಿಕ ಘಟಕಗಳು ಬಾಗಿಲು ಮುಚ್ಚಿವೆ.

ಪ್ಲಾಸ್ಟಿಕ್‌ ಬಾಟಲಿಗಳ ಜೊತೆಗೆ ಗಾಜಿನ ಸೀಸೆಗಳ ತಯಾರಿಕೆಗೂ ಯುದ್ಧದ ಬಿಸಿ ತಾಕಿದೆ. ವಿಟ್ರಮ್‌ ಗ್ಲಾಸ್‌ ಸಿಇಒ ವಿಟೋಬ್‌ ಸೇಟ್‌ ಮಾಧ್ಯಮದವರಿಗೆ ನೀಡಿದ ಹೇಳಿಕೆಯ ಪ್ರಕಾರ ಬಣ್ಣದ ಗಾಜಿನ ಬಾಟಲಿಗಳು ಹಾಗೂ ಕಂದು ಬಣ್ಣದ ಗಾಜಿನ ಬಾಟಲಿಗಳನ್ನು ಫಾರ್ಮ ಹಾಗೂ ಪಾನೀಯ ವಲಯದಲ್ಲಿ ಹೆಚ್ಚು ಬಳಸಲಾಗುತ್ತದೆ. ಗಾಜಿನ ಉತ್ಪಾದನೆಯಲ್ಲಿ ನೈಸರ್ಗಿಕ ಅನಿಲದ ಗಣನೀಯ ಪಾತ್ರವಿದೆ. ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಮರಳು, ಸೋಡ ಬೂದಿ, ಸುಣ್ಣದ ಕಲ್ಲುಗಳನ್ನು ಕರಗಿಸಲು ಸಮರ್ಪಕ ಇಂಧನ ಲಭ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಕಾರಣದಿಂದ ಮದ್ಯ ಬೆಲೆಯು ಏರಿಕೆಯಾಗುವ ಸಂಭವವಿದ್ದು, ಈಗಾಗಲೇ ಕೆಲವು ಕಂಪನಿಗಳು ಬೆಲೆ ಏರಿಕೆಗೆ ಮುಂದಾಗಿವೆ. ಕೆಲ ಕಂಪನಿಗಳು ಗ್ರಾಹಕರ ಮೇಲೆ ಉತ್ಪಾದನ ವೆಚ್ಚದ ಹೊರೆ ಹೊರಿಸುವ ನಿರ್ಧಾರದ ಕುರಿತು ಗೊಂದಲದಲ್ಲಿವೆ ಎಂದು ಬಾಟಲ್‌ ಉತ್ಪಾದಕರ ಸಂಘದ ಅಧ್ಯಕ್ಷ ದುಬ್ಬಲ್‌ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...