ಬಾಲ್ಯವನ್ನು ಕಸಿದ ಯುದ್ಧ : ಗಾಜಾದ ಕರಾಳತೆ ತೋರಿಸಿದ ವಿಡಿಯೋ

Date:

ಯುದ್ಧವೆಂದರೆ, ಭೀಕರತೆ ಅಷ್ಟೇ ಅಲ್ಲ, ಅದು ಮುಗ್ಧ ಮನಸ್ಸುಗಳ ಕಲ್ಪನೆಯನ್ನೇ ದಹಿಸಿಬಿಡುತ್ತದೆ ಎನ್ನುವುದಕ್ಕೆ ಗಾಜಾದ ಈ ವಿಡಿಯೋವೆ ಸಾಕ್ಷಿ. ಗಾಜಾದ ನಿರಾಶ್ರಿತರ ಶಿಬಿರವೊಂದರಲ್ಲಿ ಐವರು ಮಕ್ಕಳು ಸೇರಿ ಗೊಂಬೆಯೊಂದರ ಅಂತ್ಯಸಂಸ್ಕಾರದ ಮೆರವಣಿಗೆ ನಡೆಸುತ್ತಿರುವ ದೃಶ್ಯ ಜಗತ್ತಿನ ಕಣ್ಣುಗಳನ್ನು ತೇವಗೊಳಿಸಿದೆ. ಆಡಿ ನಲಿಯಬೇಕಾದ ವಯಸ್ಸಿನಲ್ಲಿ ಈ ಮಕ್ಕಳು ಸಾವನ್ನು ಸಂಭ್ರಮಿಸುವ ಆಟವನ್ನಾಗಿ ಮಾಡಿಕೊಂಡಿರುವುದು ಅಲ್ಲಿನ ಯುದ್ಧದ ಕರಾಳತೆಗೆ ಹಿಡಿದ ಕನ್ನಡಿ.

- Advertisement -

ಸಾಮಾನ್ಯವಾಗಿ ಮಕ್ಕಳು ಗೊಂಬೆಗಳ ಜೊತೆ ಕಳೆವ ಸಮಯವೇ ಬೇರೆ. ಗೊಂಬೆಗಳನ್ನೇ ತಮ್ಮ ಸಂಗಾತಿಯನ್ನಾಗಿಸಿಕೊಂಡು ಅವುಗಳನ್ನು ಮುದ್ದಾಡಿಕೊಂಡು ತಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಾರೆ. ಆದರೆ ಗಾಜಾದ ಈ ಮಕ್ಕಳು ಗೊಂಬೆಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ, ಅದನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯ ನೋಡಿದರೆ, ನಿಜಕ್ಕೂ ಮನಸ್ಸು ಭಾರ ಅನ್ನಿಸದೇ ಇರುವುದಿಲ್ಲ. ಅಲ್ಲಿರುವುದು ಪುಟ್ಟ ಕೈಗಳು, ಪುಟ್ಟ ಮನಸ್ಸುಗಳು ಮತ್ತು ಮೌನ ಮಾತ್ರ. ತಮಗಿಷ್ಟವಾದ ಆಟಿಕೆಗಳ ಬದಲಿಗೆ ಅಂತ್ಯಸಂಸ್ಕಾರದ ದೃಶ್ಯಗಳನ್ನು ಮಕ್ಕಳು ನಕಲು ಮಾಡುತ್ತಿರುವುದು, ಅವರು ಪ್ರತಿದಿನ ನೋಡುತ್ತಿರುವ ಸಾವು-ನೋವಿನ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಅವರ ಪಾಲಿಗೆ ಸಾವು ಎಂಬುದು ಕಲ್ಪನೆಯಲ್ಲ, ಅದು ದಿನನಿತ್ಯದ ಬದುಕಿನ ಭಾಗವಾಗಿಬಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಬಾಲ್ಯವನ್ನು ಕಸಿದ ಯುದ್ಧ:
ಯುನಿಸೆಫ್ (UNICEF) ವರದಿ ಹೇಳುವ ಪ್ರಕಾರ, ಗಾಜಾದ ಮಕ್ಕಳು ಕೇವಲ ಬಾಂಬ್ ದಾಳಿಯಿಂದ ಅಷ್ಟೇ ಅಲ್ಲದೆ, ತೀವ್ರ ಅಪೌಷ್ಟಿಕತೆ ಮತ್ತು ಮಾನಸಿಕ ಆಘಾತದಿಂದ ನಲುಗುತ್ತಿದ್ದಾರೆ. ಬದುಕಲು ಅಗತ್ಯವಿರುವ ಮೂಲಭೂತ ವ್ಯವಸ್ಥೆಗಳೇ ಧ್ವಂಸಗೊಂಡಿರುವುದರಿಂದ, ಅಲ್ಲಿನ ಮಕ್ಕಳ ಮಾನಸಿಕ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಶಾಲೆಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳು ಮಕ್ಕಳ ಶಿಕ್ಷಣವನ್ನು ಕಿತ್ತುಕೊಂಡಿವೆ. ಹಸಿವು ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಇಡೀ ತಲೆಮಾರು ಜೀವಮಾನವಿಡಿ ಸಾಲು ಸಾಲು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಭೀತಿ ಎದುರಿಸುತ್ತಿದೆ. ಮಕ್ಕಳು ಬಾಲ್ಯದಲ್ಲಿ ಆನಂದಿಸಬೇಕಾದ ಎಲ್ಲಾ ಘಳಿಗೆಗಳನ್ನು ಯುದ್ಧ ನುಂಗಿದೆ. ಮಕ್ಕಳು ಬಾಲ್ಯವನ್ನು ಅನುಭವಿಸದೇ, ಯುದ್ಧದ ಕರಾಳತೆಯನ್ನು ಅನುಭವಿಸುವಂತಾಗಿದೆ ಎನ್ನುವುದಕ್ಕೆ ಇದೊಂದು ಸಾಕ್ಷಿ.

ಇದನ್ನೂ ಓದಿ : Good Friday | ಶುಭವೆನಿತು ಶುಭ ಶುಕ್ರವಾರದಲ್ಲಿ?

ಬೆಚ್ಚಿ ಬೀಳಿಸಿದ ಅಂಕಿ ಅಂಶ
ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ 7, 2023ರಿಂದ ಜನವರಿ 5, 2025ರ ನಡುವೆ ಸುಮಾರು 42,200 ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಯುದ್ಧಕ್ಕೆ ಬಲಿಯಾಗಿದ್ದಾರೆ. ಇದು ಒಟ್ಟು ಸಾವುಗಳ ಶೇ.56ರಷ್ಟಾಗಿದೆ. ಇತ್ತೀಚಿನ ಸಂಶೋಧನೆಯೊಂದು ಗಾಜಾದಲ್ಲಿ ಜನರ ಸರಾಸರಿ ಜೀವಿತಾವಧಿ ಶೇ.47ರಷ್ಟು ಕುಸಿದಿದೆ ಎಂದು ತಿಳಿಸಿದೆ. ಕದನ ವಿರಾಮ ಜಾರಿಯಲ್ಲಿದ್ದರೂ ಸಹ, ಯುದ್ಧ ಅಲ್ಲಿನ ಮಕ್ಕಳ ಮನಸ್ಸಿನಲ್ಲಿ ಬಿತ್ತಿರುವ ಸಾವಿನ ಭಯ ಮತ್ತು ನೋವು ದಶಕಗಳ ಕಾಲ ಮಾಯದ ಗಾಯವಾಗಿ ಉಳಿಯುವ ಎಲ್ಲಾ ಸಾಧ್ಯತೆಗಳನ್ನು ಚಿತ್ರಿಸುತ್ತಿವೆ ಎನ್ನುವುದರಲ್ಲಿ ಅನುಮಾನವಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...

ಬಾಗಲಕೋಟೆ | ಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್‌ನಿಂದ ಸ್ವಚ್ಛತಾ ಅಭಿಯಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...