ಆರಂಭದಲ್ಲೇ ಎಡವಿದ ವಿಜಯ್ ಸರ್ಕಾರ; ಸಂಪುಟದಲ್ಲಿ ಮುಸ್ಲಿಮರಿಗಿಲ್ಲ ಪ್ರಾತಿನಿಧ್ಯ!

Date:

ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದು ಬೀಗುತ್ತಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಈಗ ಪ್ರಾತಿನಿಧ್ಯದ ಪ್ರಶ್ನೆ ಎದುರಾಗಿದೆ. ಮೈತ್ರಿಕೂಟದಲ್ಲಿ ಸಾಕಷ್ಟು ಸಂಖ್ಯೆಯ ಮುಸ್ಲಿಂ ಶಾಸಕರಿದ್ದರೂ ಸಹ, ನೂತನ ಸಚಿವ ಸಂಪುಟದಲ್ಲಿ ಒಬ್ಬರಿಗೂ ಸ್ಥಾನ ನೀಡದಿರುವುದು ತಮಿಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ನಾಯಕರ ಆಸಮಾಧಾನಕ್ಕೆ ಗುರಿಯಾಗಿದೆ.

- Advertisement -

ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಇಲ್ಲದಿರುವುದನ್ನು ಮನಿತ್ನೇಯ ಮಕ್ಕಳ್ ಕಚ್ಚಿ (MMK) ಶಾಸಕ, ಹಿರಿಯ ರಾಜಕಾರಣಿ ಎಂ.ಎಚ್. ಜವಾಹಿರುಲ್ಲಾ ಪ್ರಶ್ನಿಸಿದ್ದಾರೆ. “ಟಿವಿಕೆಯಲ್ಲಿ ಐ. ತಾಹಿರಾ, ಮೊಹಮ್ಮದ್ ಫರ್ವಾಸ್ ಹಾಗೂ ಮಾಧರ್ ಬಧುರುದ್ದೀನ್ ಅವರಂತಹ ಸಮರ್ಥ ಶಾಸಕರಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್‌ನಲ್ಲಿ ಒಬ್ಬರು, ಐಯುಎಂಎಲ್ ಪಕ್ಷದಲ್ಲಿ ಇಬ್ಬರು ಮುಸ್ಲಿಂ ಶಾಸಕರಿದ್ದಾರೆ. ಆದರೂ, ಅವರೆಲ್ಲರನ್ನು ಸಂಪುಟದಿಂದ ಹೊರಗಿಟ್ಟಿರುವುದು ‘ದುರದೃಷ್ಟಕರ’. ಮುಸ್ಲಿಮರನ್ನು ಅಧಿಕಾರದಿಂದ ದೂರವಿಡುವ ಬಿಜೆಪಿಯ ರಾಜಕಾರಣಕ್ಕೂ ಮತ್ತು ಈ ನೂತನ ಸರ್ಕಾರದ ನಡೆಗೂ ವ್ಯತ್ಯಾಸವೇನಿದೆ” ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ನಾಗಪಟ್ಟಣಂ ಕ್ಷೇತ್ರದ ಶಾಸಕರಾಗಿರುವ ಜವಾಹಿರುಲ್ಲಾ ಅವರು ವಿಜಯ್ ಸರ್ಕಾರವು ವಿಶ್ವಾಸಮತ ಗೆದ್ದ ನಂತರ ‘ಮಕ್ತೂಬ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. “ತಮಿಳುನಾಡಿನ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುವುದು ನ್ಯಾಯಸಮ್ಮತವಾದದ್ದು. ರಾಜ್ಯದ ರಾಜಕೀಯ ಇತಿಹಾಸವನ್ನು ನೋಡಿ; ಕೆ. ಕಾಮರಾಜ್, ಎಂ. ಕರುಣಾನಿಧಿ, ಎಂ.ಜಿ. ರಾಮಚಂದ್ರನ್ ಹಾಗೂ ಎಂ.ಕೆ. ಸ್ಟಾಲಿನ್ ಅವರಂತಹ ನಾಯಕರ ಅವಧಿಯಲ್ಲಿ ಮುಸ್ಲಿಂ ಸಚಿವರಿದ್ದರು. ವಿಶೇಷವಾಗಿ ಎಂ.ಕೆ. ಸ್ಟಾಲಿನ್ ಅವರ ಹಿಂದಿನ ಸಂಪುಟದಲ್ಲಿ ಎಸ್.ಎಂ. ನಾಸರ್ ಮತ್ತು ಕೆ.ಎಸ್. ಮಸ್ತಾನ್ ಸಚಿವರಾಗಿದ್ದರು. ತಮಿಳುನಾಡು ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯವು ರಾಜ್ಯದ ರಾಜಕೀಯ ಸಂಪ್ರದಾಯದ ಭಾಗವಾಗಿದೆ” ಎಂದು ಗಮನ ಸೆಳೆದಿದ್ದಾರೆ.

“ಈ ಹಿಂದೆ, ಕಾಮರಾಜ್ ಸಂಪುಟದ ರಚನೆಯಾದ ಆರಂಭದಲ್ಲಿ ಮುಸ್ಲಿಂ ಸಚಿವರಿರಲಿಲ್ಲ. ಆಗ ಸಿ.ಎನ್. ಅಣ್ಣಾದೊರೈ ಅವರು ಕಡಯಾನಲ್ಲೂರು ಕ್ಷೇತ್ರದ ಎಸ್.ಎಂ. ಅಬ್ದುಲ್ ಮಜೀದ್ ಅವರನ್ನು ಏಕೆ ಸೇರಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ್ದರು. ತದನಂತರ ಕಾಮರಾಜ್ ಅವರು ಅಬ್ದುಲ್ ಮಜೀದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಅಂದಿನಿಂದ ಜಿ. ಜಯಲಲಿತಾ ಅವರ ಅಲ್ಪಾವಧಿಯ ಹೊರತುಪಡಿಸಿ, ತಮಿಳುನಾಡು ಸರ್ಕಾರಗಳು ಸಾಮಾನ್ಯವಾಗಿ ಸಂಪುಟದಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ಒಳಗೊಳ್ಳುತ್ತಲೇ ಬಂದಿವೆ. ಎಸ್.ಜೆ. ಸಾದಿಕ್ ಪಾಷಾ, ಟಿ.ಪಿ.ಎಂ. ಮೊಹಿದ್ದೀನ್ ಖಾನ್, ಎ. ಮೊಹಮ್ಮದ್ ಜಾನ್, ಅನ್ವರ್ ರಾಜಾ, ನಿಲೋಫರ್ ಕಫೀಲ್ ಮತ್ತು ಆರಿಫ್ ಅವರಂತಹ ನಾಯಕರು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ” ಎಂದು ವಿವರಿಸಿದ್ದಾರೆ.

“ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ತಮ್ಮ ಆಡಳಿತವನ್ನು ‘ಅಲ್ಪಸಂಖ್ಯಾತ ಸರ್ಕಾರ’ವೆಂದು ಕರೆದುಕೊಂಡಿದ್ದಾರೆ. ಆದರೆ, ಮೈತ್ರಿಕೂಟದಲ್ಲಿ ಮುಸ್ಲಿಂ ಶಾಸಕರಿದ್ದರೂ ಒಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ವ್ಯಂಗ್ಯದಂತೆ ತೋರುತ್ತದೆ. ಮುಸ್ಲಿಂ ಸಚಿವರ ಅನುಪಸ್ಥಿತಿಯು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ ಎಂಬ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿದೆ. ಈ ವಿಷಯವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಮುಸ್ಲಿಂ ಶಾಸಕರಲ್ಲೊಬ್ಬರನ್ನು ಸಂಪುಟಕ್ಕೆ ನೇಮಿಸುವ ಮೂಲಕ ಈ ಸಮಸ್ಯೆಯನ್ನು ಸರಿಪಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ತಮಿಳುನಾಡು | ವಿಜಯ್‌ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದಿದ್ದರಿಂದ, ಕಾಂಗ್ರೆಸ್‌ ಸೇರಿದಂತೆ ಕೆಲವು ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಿದೆ. ವಿಜಯ್ ನೇತೃತ್ವದ ಸಂಪುಟದಲ್ಲಿ ಹಿರಿಯ ರಾಜಕಾರಣಿಗಳು, ವೃತ್ತಿಪರರು, ಯುವ ನಾಯಕರಿದ್ದಾರೆ. ಇದರಲ್ಲಿ ಮಾಜಿ ಎಐಎಡಿಎಂಕೆ ನಾಯಕ ಕೆ.ಎ. ಸೆಂಗೊಟ್ಟೈಯನ್, ಮಾಜಿ ಐಆರ್‌ಎಸ್ ಅಧಿಕಾರಿ ಡಾ. ಕೆ.ಜಿ. ಅರುಣ್‌ರಾಜ್, ಕ್ರೀಡಾ ಸಂಘಟಕ ಆದವ್ ಅರ್ಜುನ, ವಕೀಲ ಪಿ. ವೆಂಕಟರಮಣನ್, ದಂತವೈದ್ಯ ಟಿ.ಕೆ. ಪ್ರಭು ಸೇರಿದಂತೆ ಎಸ್. ಕೀರ್ತನಾ, ಎನ್. ಆನಂದ್ ಮತ್ತು ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರಂತಹ ಯುವ ನಾಯಕರಿದ್ದಾರೆ. ದಲಿತ ಪ್ರಾತಿನಿಧ್ಯದ ವಿಷಯದಲ್ಲಿ, ಟಿವಿಕೆ 46 ಮೀಸಲು ಕ್ಷೇತ್ರಗಳ ಪೈಕಿ 24 ಸ್ಥಾನಗಳನ್ನು ಗೆದ್ದಿದ್ದು, ಸಂಪುಟದಲ್ಲಿ ಎ. ರಾಜಮೋಹನ್ ಎಂಬ ಒಬ್ಬ ಪರಿಶಿಷ್ಟ ಜಾತಿಯ ಸಚಿವರನ್ನು ಒಳಗೊಂಡಿದೆ. ಆದರೆ, ಮುಸ್ಲಿಂ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ.

ಭಾರತದಾದ್ಯಂತ ಕಳೆದ ಒಂದು ದಶಕದಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ 339 ರಿಂದ 255ಕ್ಕೆ ಇಳಿಕೆಯಾಗಿದೆ ಎಂಬ ಆತಂಕಕಾರಿ ವರದಿಗಳ ನಡುವೆ ತಮಿಳುನಾಡಿನಲ್ಲಿ ಮುಸ್ಲಿಂ ಪ್ರಾತಿನಿಧ್ಯವು ಏಳರಿಂದ ಒಂಬತ್ತಕ್ಕೆ ಏರಿಕೆಯಾಗಿರುವುದು ಗಮನಾರ್ಹ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ, ಟಿವಿಕೆ ಸರ್ಕಾರವು ಮುಸ್ಲಿಂ ಸಚಿವರನ್ನು ನೇಮಿಸದೇ ಇರುವುದು ಅಸಮಾಧಾನಕ್ಕೆ ಕಾರಣವೂ ಆಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...