ಎಡಪಕ್ಷಗಳ ಪ್ರತಿಭಾವಂತರನ್ನ ಸೆಳೆದು ಬಲಪಂಥೀಯ ಸಿದ್ಧಾಂತಕ್ಕೆ ಬದ್ಧರನ್ನಾಗಿಸುವುದು ನನ್ನ ಗುರಿ: ಹಿಮಂತ್‌ ಬಿಸ್ವ ಸರ್ಮ

Date:

ಕಾಂಗ್ರೆಸ್, ಸಿಪಿಎಂ, ಸಿಪಿಐ ಸೇರಿದಂತೆ ಎಡಪಕ್ಷಗಳಲ್ಲಿರುವ ಪ್ರತಿಭಾವಂತರನ್ನು ಬಿಜೆಪಿಗೆ ಕರೆತಂದು, ಅವರನ್ನು ನಮ್ಮ ಬಲಪಂಥೀಯ ಸಿದ್ಧಾಂತಕ್ಕೆ ಹೆಚ್ಚು ಬದ್ಧರಾಗಿಸುವುದು ನನ್ನ ಕರ್ತವ್ಯ ಮತ್ತು ಗುರಿಯಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

- Advertisement -

ʼದ ಇಂಡಿಯನ್‌ ಎಕ್ಸ್‌ಪ್ರೆಸ್‌ʼನ ‘ಐಡಿಯಾ ಎಕ್ಸ್ಚೇಂಜ್’ ಸಂವಾದದಲ್ಲಿ ಮಾತನಾಡಿರುವ ಅವರು, “ಭಾರತದಲ್ಲಿ ಪ್ರತಿಯೊಬ್ಬರೂ ಬಿಜೆಪಿಯಲ್ಲೇ ಇರಬೇಕು ಎಂದು ನಾನು ಬಯಸುತ್ತೇನೆ. ಹಿಂದೂ ಧರ್ಮ ಮತ್ತು ಬಲಪಂಥೀಯ ಸಿದ್ಧಾಂತಗಳು ದೇಶದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುವುದು ನನ್ನ ಉದ್ದೇಶ. ಕಾಂಗ್ರೆಸ್ ಪಕ್ಷವು ಎಡಪಂಥೀಯ ಸಿದ್ಧಾಂತದತ್ತ ವಾಲುತ್ತಿರುವುದರಿಂದ ಅದು ಜನಸಂಖ್ಯೆಯ ದೃಷ್ಟಿಯಿಂದ ದುರ್ಬಲಗೊಳ್ಳುತ್ತಿದೆ. ರಾಹುಲ್ ಗಾಂಧಿಯವರ ನಾಯಕತ್ವವು ಕಾಂಗ್ರೆಸ್‌ನ್ನು ಕೇಂದ್ರ ಮತ್ತು ಬಲಪಂಥೀಯ ಮತದಾರರಿಂದ ದೂರ ಸರಿಸುತ್ತಿದೆ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಅಸ್ಸಾಂನ ಪ್ರಗತಿಯ ಬಗ್ಗೆ ಮಾತನಾಡಿದ ಸರ್ಮ, “ದಶಕಗಳಿಂದ ರಾಜ್ಯವನ್ನು ಕಾಡುತ್ತಿದ್ದ ಭಯೋತ್ಪಾದನೆ ಈಗ ಮುಕ್ತಿ ಸಿಕ್ಕಿದೆ. ಇಂದು ಅಸ್ಸಾಂನ ಹೊಸ ಪೀಳಿಗೆ ಬಂಡುಕೋರರ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ವೈದ್ಯಕೀಯ ಕಾಲೇಜುಗಳು, ಉತ್ತಮ ರಸ್ತೆಗಳು ಮತ್ತು ಉದ್ಯೋಗದ ಕನಸುಗಳನ್ನು ಕಾಣುತ್ತಿದೆ. ಶಾಂತಿ ಮತ್ತು ಜನರ ಆತ್ಮವಿಶ್ವಾಸವನ್ನು ಮರುಸ್ಥಾಪಿಸಿದ್ದು ಎನ್‌ಡಿಎ ಸರ್ಕಾರದ ಅತಿದೊಡ್ಡ ಸಾಧನೆ. ಜನರು ಆಶಾವಾದಿಗಳಾಗಿದ್ದು, ಅವರ ಆಕಾಂಕ್ಷೆಗಳಿಗೆ ತಕ್ಕಂತೆ ಸಂಪನ್ಮೂಲಗಳನ್ನು ಒದಗಿಸುವುದು ನಮ್ಮ ಮುಂದಿನ ಸವಾಲಾಗಿದೆ. ನಮ್ಮ ಆಡಳಿತದಲ್ಲಿ ಜಾತಿ-ಮತದ ಭೇದವಿಲ್ಲದೆ ‘ಮೆರಿಟ್’ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ನೀಡಲಾಗುತ್ತಿದೆ. ಉದಾಹರಣೆಗೆ, ಅಸ್ಸಾಂನ ವೈದ್ಯಕೀಯ ಸೀಟುಗಳಲ್ಲಿ ಸುಮಾರು 25% ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆಯುತ್ತಿದ್ದಾರೆ, ಇದು ಓಲೈಕೆಗಿಂತ ಸಮಾನತೆಗೆ ಆದ್ಯತೆ ನೀಡಿದ ಫಲ” ಎಂದು ಅವರು ಪ್ರತಿಪಾದಿಸಿದ್ದಾರೆ.

image 52 1

“ಒಂದು ಹಂತದಲ್ಲಿ ಅಸ್ಸಾಂ ತನ್ನ ಅಸ್ಮಿತೆ ಮತ್ತು ದೇವಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿತ್ತು. ಅಂತಹ ಸಮಯದಲ್ಲಿ ಜನರಿಗೆ ರಕ್ಷಣೆ ಮತ್ತು ಆತ್ಮವಿಶ್ವಾಸ ತುಂಬಲು ನಾನು ಧ್ರುವೀಕರಣದ ಶಕ್ತಿಯಾಗಬೇಕಾಯಿತು. ಈಗ ಕಾನೂನು ಸುವ್ಯವಸ್ಥೆ ಸುಧಾರಿಸಿದೆ, ಆದರೆ ನಮ್ಮ ಸಂಸ್ಕೃತಿಗೆ ಧಕ್ಕೆ ಬಂದರೆ ದನಿ ಎತ್ತಲು ನಾನು ಹಿಂಜರಿಯುವುದಿಲ್ಲ” ಎಂದರು. ಅಕ್ರಮ ವಲಸಿಗರ ವಿಚಾರದಲ್ಲಿ ನಾವು ಕಠಿಣ ನಿಲುವು ತಳೆದಿರುವುದನ್ನು ಸಮರ್ಥಿಸಿಕೊಂಡ ಅವರು, ಬುಲ್ಡೋಜರ್ ಬಳಕೆ ಅಕ್ರಮ ಒತ್ತುವರಿ ತೆರವಿಗೆ ಅನಿವಾರ್ಯ ಸಾಧನವಾಗಿದ್ದು, ನಾಗಾಂವ್ ಪ್ರಕರಣದಂತಹ ತಪ್ಪುಗಳು ನಡೆದಾಗ ಪರಿಹಾರವನ್ನೂ ನೀಡಿದ್ದೇವೆ ಎಂದು ಒಪ್ಪಿಕೊಂಡರು. ಅಲ್ಲದೆ, ಎಸ್‌ಐಆರ್ (Special Investigation Report) ಜಾರಿ ಮಾಡುವ ಮೂಲಕ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುತ್ತಿದೆ” ಎಂದಿದ್ದಾರೆ.

“ಅಸ್ಸಾಂನಲ್ಲಿ ಧ್ರುವೀಕರಣ ಅನಿವಾರ್ಯವಾಗಿತ್ತು” ಎಂಬ ಸರ್ಮ ಅವರ ಹೇಳಿಕೆ, ಸಮಾಜದಲ್ಲಿನ ಬಿರುಕುಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಬಲಪಡಿಸುತ್ತದೆ. ಇದು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅಸುರಕ್ಷತೆಯ ಭಾವನೆಯನ್ನು ಹೆಚ್ಚಿಸಿದೆ ಎಂಬುದು ಹಲವರ ಅಭಿಪ್ರಾಯ.

ಮನೆಗಳನ್ನು ನೆಲಸಮ ಮಾಡುವ ಕ್ರಮವನ್ನು ‘ನ್ಯಾಯ’ ಎಂದು ಕರೆಯುವುದು ಕಾನೂನಿನ ಆಡಳಿತಕ್ಕೆ ವಿರುದ್ಧವಾಗಿದೆ ಎಂದು ಅನೇಕರು ವಾದಿಸುತ್ತಾರೆ. ನ್ಯಾಯಾಲಯದ ತೀರ್ಪಿಗೂ ಮುನ್ನವೇ ಇಂತಹ ಕ್ರಮ ಕೈಗೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬ ದೂರುಗಳೂ ಕೇಳಿಬರುತ್ತಿವೆ.

ಶರ್ಮಾ ಅವರ ‘ವಲಸಿಗರ ಗುರುತಿಸುವಿಕೆ’ಯ ದೃಷ್ಟಿಕೋನವು ಅಸ್ಸಾಂನ ಜನರ ದಶಕಗಳ ಹೋರಾಟವನ್ನು ಧಾರ್ಮಿಕ ಚೌಕಟ್ಟಿನಲ್ಲಿ ನೋಡುವುದರಿಂದ, ಇದು ಸ್ಥಳೀಯರ ನಿಜವಾದ ಸಮಸ್ಯೆಗಳಿಗಿಂತ ರಾಜಕೀಯ ಒಲವನ್ನು ಹೆಚ್ಚಿಸುವ ಉದ್ದೇಶವನ್ನೇ ಹೊಂದಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಇದನ್ನೂ ಓದಿ: ಅಯೋಧ್ಯೆ ದೇಣಿಗೆ ಹಗರಣ: ಇಂದು ಟ್ರಸ್ಟ್‌ನ ನಿರ್ಣಾಯಕ ಸಭೆ; ಸದಸ್ಯರ ನಡುವೆ ಮೊದಲ ಬಾರಿಗೆ ಚುನಾವಣೆ ಸಾಧ್ಯತೆ

ಬಂಧನ ಕೇಂದ್ರಗಳು ಎಷ್ಟೇ ಕಡಿಮೆ ಜನರಿರಲಿ, ಅವುಗಳ ಇರುವಿಕೆಯೇ ಮಾನವ ಹಕ್ಕುಗಳ ದೃಷ್ಟಿಯಿಂದ ದೊಡ್ಡ ವಿವಾದವಾಗಿದೆ. ಇದನ್ನು ‘ಸಮರ್ಥಿಸಿಕೊಳ್ಳುವುದು’ ಮತ್ತು ಈಗಿನ ತಂತ್ರವನ್ನು ಸರಿ ಎಂದು ಬಿಂಬಿಸುವುದು ನೈತಿಕವಾಗಿ ಪ್ರಶ್ನಾರ್ಹವಾಗಿದೆ.

ಶರ್ಮಾ ಅವರು ತಮ್ಮ ಆಡಳಿತವನ್ನು ಪ್ರತಿಭೆ ಆಧಾರಿತ ಎಂದು ಹೇಳುತ್ತಲೇ, ಮತ್ತೊಂದೆಡೆ ಧರ್ಮದ ಆಧಾರದ ಮೇಲೆ ಧ್ರುವೀಕರಣ ಮಾಡಿದ್ದನ್ನು ಒಪ್ಪಿಕೊಳ್ಳುವುದು ಒಂದು ದೊಡ್ಡ ರಾಜಕೀಯ ವಿರೋಧಾಭಾಸವಾಗಿದೆ. ಒಂದು ಕಡೆ ಸಮಾನತೆಯ ಮಾತು, ಇನ್ನೊಂದು ಕಡೆ ನಿರ್ದಿಷ್ಟ ಸಮುದಾಯದ ಮೇಲಿನ ತೀವ್ರ ನಿಗಾ – ಈ ಎರಡೂ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಅವರ ರಾಜಕೀಯ ಉದ್ದೇಶಗಳನ್ನು ಬಹಿರಂಗಗೊಳಿಸುತ್ತದೆ.

ಹಿಮಂತ ಬಿಸ್ವ ಶರ್ಮಾ ಅವರ ಈ ಮಾತುಗಳು, ಅವರು ರಾಜಕೀಯವನ್ನು ಕೇವಲ ಆಡಳಿತವಾಗಿ ನೋಡದೆ, ಒಂದು ಸಿದ್ಧಾಂತವನ್ನು ಸಮಾಜದ ಆಳಕ್ಕಿಳಿಸುವ ‘ಮಿಷನ್’ ಆಗಿ ನೋಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅವರ ಈ ಧೋರಣೆಯು ಅಭಿವೃದ್ಧಿಯನ್ನ ಎಷ್ಟರ ಮಟ್ಟಿಗೆ ಸಾಧಿಸಬಹುದು ಎನ್ನುವುದಕ್ಕಿಂತ, ಅದು ಸಾಮಾಜಿಕ ಸಾಮರಸ್ಯದ ಬೇರುಗಳನ್ನು ಕಿತ್ತು ಕೋಮು ಧೃವೀಕರಣದ ಮೇಲೆ ರಾಜಕೀಯ ನಡೆಸುವ ಹುನ್ನಾರದಂತೆ ಭಾಸವಾಗುತ್ತದೆ. ಬಿಜೆಪಿಯ ಭಾರತವನ್ನು ಕೇಸರೀಕರಣ ಮಾಡುವ, ಅಲ್ಪಸಂಖ್ಯಾತರು ದೀನ ದಲಿತರನ್ನು ಕಡೆಗಣಿಸುವ ಉದ್ದೇಶವನ್ನು ಸರ್ಮ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...