‘ನನ್ನ ಮಿತ್ರ ದ್ರೋಹಿ’: ಸಂಸತ್‌ನಲ್ಲಿ ಮಾಜಿ ಆಪ್ತನಿಗೆ ಕುಟುಕಿದ ರಾಹುಲ್ ಗಾಂಧಿ

Date:

ಸಂಸತ್ ಭವನದ ಆವರಣದಲ್ಲಿ ಬುಧವಾರ ಅಮಾನತುಗೊಂಡ ಸಂಸದರ ಪ್ರತಿಭಟನೆಯ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ನಡುವೆ ಸ್ವಾರಸ್ಯಕರ ಹಾಗೂ ತುಸು ಖಾರವಾದ ವಾಗ್ವಾದ ನಡೆದ ಘಟನೆ ವರದಿಯಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ತಮ್ಮ ಹಳೆಯ ಒಡನಾಡಿ ಬಿಟ್ಟು ಅವರನ್ನು ರಾಹುಲ್ ಗಾಂಧಿ, “ನನ್ನ ಮಿತ್ರ ದ್ರೋಹಿ” ಎಂದು ಸಂಬೋಧಿಸುವ ಮೂಲಕ ಕುಟುಕಿದ್ದಾರೆ.

- Advertisement -

ಸಂಸತ್ತಿನ ಕಲಾಪದಿಂದ ಅಮಾನತುಗೊಂಡಿರುವ ವಿಪಕ್ಷಗಳ ಸಂಸದರು ಸಂಸತ್ ಭವನದ ‘ಮಕರ ದ್ವಾರ’ದ ಬಳಿ ಧರಣಿ ಕುಳಿತಿದ್ದರು. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಅದೇ ಮಾರ್ಗವಾಗಿ ಸಂಸತ್ತನ್ನು ಪ್ರವೇಶಿಸುತ್ತಿದ್ದ ಕೇಂದ್ರ ಸಚಿವ ರವನೀತ್ ಬಿಟ್ಟು, ಪ್ರತಿಭಟನಾ ನಿರತ ಸಂಸದರನ್ನು ನೋಡಿ, “ಇವರೇನೋ ಯುದ್ಧ ಗೆದ್ದು ಬಂದವರಂತೆ ಕುಳಿತಿದ್ದಾರಲ್ಲ,” ಎಂದು ವ್ಯಂಗ್ಯವಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬಿಟ್ಟು ಅವರ ವ್ಯಂಗ್ಯಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪಕ್ಕದಲ್ಲಿದ್ದ ಸಂಸದರನ್ನು ಉದ್ದೇಶಿಸಿ, “ನೋಡಿ, ಇಲ್ಲೊಬ್ಬ ದ್ರೋಹಿ ನಡೆದುಕೊಂಡು ಹೋಗುತ್ತಿದ್ದಾನೆ, ಅವರ ನಡಿಗೆಯ ವೇಗವನ್ನು ಗಮನಿಸಿ,” ಎಂದು ಚಟಾಕಿ ಹಾರಿಸಿದರು. ಅಷ್ಟೇ ಅಲ್ಲದೆ, ಬಿಟ್ಟು ಅವರತ್ತ ಸ್ನೇಹದಿಂದ ಕೈ ಚಾಚುತ್ತಾ, “ನನ್ನ ಮಿತ್ರ ದ್ರೋಹಿ” ಎಂದು ಹಸ್ತಲಾಘವಕ್ಕೆ ಮುಂದಾದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!

​ಆದರೆ, ರಾಹುಲ್ ನೀಡಿದ ಹಸ್ತಲಾಘವವನ್ನು ಸ್ವೀಕರಿಸಲು ನಿರಾಕರಿಸಿದ ರವನೀತ್ ಬಿಟ್ಟು, “ಕಾಂಗ್ರೆಸ್ ಪಕ್ಷ ದೇಶವನ್ನೇ ಮಾರಾಟ ಮಾಡಿದೆ,” ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಸಂಸದರು, “ಬಿಜೆಪಿಯೇ ದೇಶವನ್ನು ಮಾರಾಟ ಮಾಡುತ್ತಿದೆ,” ಎಂದು ಘೋಷಣೆ ಕೂಗಿದರು. ವಾತಾವರಣ ಬಿಸಿಯಾಗುತ್ತಿದ್ದಂತೆ ರವನೀತ್ ಬಿಟ್ಟು ಅಲ್ಲಿಂದ ನಿರ್ಗಮಿಸಿದರು.

Ravneet Bittu

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ಬಿಯಾಂತ್ ಸಿಂಗ್ ಅವರ ಮೊಮ್ಮಗನಾಗಿರುವ ರವನೀತ್ ಸಿಂಗ್ ಬಿಟ್ಟು, ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದರು. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿದ್ದ ಅವರು, ಲೂಧಿಯಾನದಿಂದ ಕಾಂಗ್ರೆಸ್ ಸಂಸದರಾಗಿದ್ದರು.

​ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಿಟ್ಟು, ಲುಧಿಯಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ವಿರುದ್ಧ ಸೋಲು ಕಂಡಿದ್ದರು. ಚುನಾವಣೆಯಲ್ಲಿ ಸೋತರೂ, ಬಿಜೆಪಿ ಹೈಕಮಾಂಡ್ ಅವರನ್ನು ಮೋದಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ರೈಲ್ವೆ ಮತ್ತು ಆಹಾರ ಸಂಸ್ಕರಣಾ ಖಾತೆಗಳ ರಾಜ್ಯ ಸಚಿವ ಸ್ಥಾನವನ್ನು ನೀಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...