ನಿಯಮಗಿರಿ ಗಣಿಗಾರಿಕೆ ಪುನರಾರಂಭದ ಕುಮ್ಮಕ್ಕು: ಜಲಮೂಲ, ಅಸ್ತಿತ್ವ ರಕ್ಷಣೆಗೆ ಸಿಡಿದೆದ್ದ ಪರಿಸರ ಪ್ರೇಮಿಗಳು!

Date:

ಒಡಿಶಾದ ರಾಯಗಡ ಮತ್ತು ಕಾಲಾಹಾಂಡಿ ಜಿಲ್ಲೆಗಳ ಗಡಿಭಾಗದಲ್ಲಿರುವ ಪ್ರಸಿದ್ಧ ನಿಯಮಗಿರಿ ಬೆಟ್ಟ ಶ್ರೇಣಿಯಲ್ಲಿ ಬಾಕ್ಸೈಟ್ ಗಣಿಗಾರಿಕೆಯನ್ನು ಮತ್ತೆ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಈ ಬೆಳವಣಿಗೆಗಳ ವಿರುದ್ಧ ಪರಿಸರವಾದಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಸ್ಥಳೀಯ ಡೊಂಗ್ರಿಯಾ ಕೊಂಡ ಆದಿವಾಸಿ ಸಂಘಟನೆಗಳು ಸಿಡಿದೆದ್ದಿದೆ. ಈ ಗಣಿಗಾರಿಕೆಯನ್ನು ಪುನರಾರಂಭಿಸುವುದರ ವಿರುದ್ಧವಾಗಿ ತೀವ್ರ ಎಚ್ಚರಿಕೆ ನೀಡಿವೆ.

- Advertisement -

ಇತ್ತೀಚೆಗೆ ವೇದಾಂತ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಗರ್‌ವಾಲ್ ಅವರು ‘ನಿಯಮಗಿರಿ ಗಣಿ ಯೋಜನೆಯನ್ನು ಮತ್ತೆ ತೆರೆಯಬೇಕು, ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ‘ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್ಸ್’ (NAPM) ಹಾಗೂ ‘ನಿಯಮಗಿರಿ ಸುರಕ್ಷಾ ಸಮಿತಿ’ಯಂತಹ ಪ್ರಮುಖ ಸಂಘಟನೆಗಳು ಈ ಯತ್ನವನ್ನು ಖಂಡಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಸುಮಾರು 13 ವರ್ಷಗಳ ಹಿಂದೆ 2013ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಮತ್ತು ಗ್ರಾಮಸಭೆಗಳ ಸರ್ವಾನುಮತದ ನಿರ್ಧಾರದಂತೆ ಇಲ್ಲಿನ ಗಣಿಗಾರಿಕೆ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮತ್ತೆ ಕಾರ್ಪೊರೇಟ್ ಕಂಪನಿಗಳ ಪರವಾಗಿ ಗಣಿ ಪ್ರಕ್ರಿಯೆ ಪುನರಾರಂಭಿಸಲು ಯತ್ನಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಅಷ್ಟು ಮಾತ್ರವಲ್ಲದೆ ಹೋರಾಟಗಾರರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗುತ್ತಿದೆ. ಈ ಚಳವಳಿಯನ್ನು ಹತೋಟಿಗೆ ತರಲು ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೋರಾಟಗಾರ ನರೇಂದ್ರ ಮೊಹಂತಿ ದೂರಿದ್ದಾರೆ.

ಇದನ್ನೂ ಓದಿ: ‘ನಗರ ನಕ್ಸಲ್’ ದಂಪತಿಗಳ ದುರಂತಗಾಥೆ ಮತ್ತು ಫ್ರಾಕ್ಚರ್‍ಡ್ ಫ್ರೀಡಂ

ನಿಯಮಗಿರಿ ಗಣಿಗಾರಿಕೆ ವಿರುದ್ಧ ಹೋರಾಟದ ಹಾದಿ

2013ರಲ್ಲಿ ನಿಯಮಗಿರಿ ಬೆಟ್ಟಗಳಲ್ಲಿ ಪ್ರಸ್ತಾಪಿತ ಬಾಕ್ಸೈಟ್ ಗಣಿಗಾರಿಕೆ ಯೋಜನೆಯು ನಿಂತಿದ್ದು ದೇಶದ ಪರಿಸರ ಮತ್ತು ಆದಿವಾಸಿ ಹಕ್ಕುಗಳ ಚಳವಳಿಯ ಇತಿಹಾಸದಲ್ಲೇ ಅತ್ಯಂತ ಐತಿಹಾಸಿಕ ಜಯ. ವೇದಾಂತ ಕಂಪನಿ ಮತ್ತು ಒಡಿಶಾ ಗಣಿ ಅಭಿವೃದ್ಧಿ ನಿಗಮ (OMC) ಜಂಟಿಯಾಗಿ ನಿಯಮಗಿರಿಯಲ್ಲಿ ಗಣಿಗಾರಿಕೆ ನಡೆಸಲು ಮುಂದಾಗಿದ್ದವು. ಆದರೆ ಇದನ್ನು ಪ್ರಶ್ನಿಸಿ ಸ್ಥಳೀಯ ಆದಿವಾಸಿಗಳು ಹಾಗೂ ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.

‘ಅರಣ್ಯ ಹಕ್ಕುಗಳ ಕಾಯ್ದೆ-2006’ (Forest Rights Act) ಮತ್ತು ನಿಯಮಗಿರಿಯ ಪವಿತ್ರ ಸಂಸ್ಕೃತಿಯನ್ನು ಆಧರಿಸಿ, ಗಣಿಗಾರಿಕೆ ನಡೆಸಬೇಕೋ ಬೇಡವೋ ಎಂಬುದನ್ನು ಅಲ್ಲಿನ ಸ್ಥಳೀಯ ಆದಿವಾಸಿಗಳೇ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಹಾಗೆಯೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸ್ಥಳೀಯ ಗ್ರಾಮಸಭೆಗಳಿಗೆ ನೀಡಲಾಯಿತು.

ಈ ನಿರ್ದೇಶನದಂತೆ ರಾಯಗಡ ಮತ್ತು ಕಾಲಾಹಾಂಡಿ ಜಿಲ್ಲೆಗಳ ನಿಯಮಗಿರಿ ಪ್ರದೇಶದಲ್ಲಿ 12 ನಿಯೋಜಿತ ಆದಿವಾಸಿ ಹಳ್ಳಿಗಳಲ್ಲಿ (ಗ್ರಾಮಸಭೆಗಳಲ್ಲಿ) ಮತದಾನ ನಡೆಸಲಾಯಿತು. ‘ಡೊಂಗ್ರಿಯಾ ಕೊಂಡ’ ಮತ್ತು ‘ಕುಟಿಯಾ ಕೊಂಡ’ ಆದಿವಾಸಿ ಸಮುದಾಯಗಳು ತಮ್ಮ ಕುಲದೇವರಾದ ‘ನಿಯಮ್ ರಾಜ’ ವಾಸಿಸುವ ಪವಿತ್ರ ಬೆಟ್ಟವನ್ನು ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲವೆಂದು ಒಮ್ಮತದಿಂದ ಘೋಷಿಸಿದರು. ಸತತವಾಗಿ ನಡೆದ ಎಲ್ಲಾ 12 ಗ್ರಾಮಸಭೆಗಳಲ್ಲೂ ಗಣಿಗಾರಿಕೆಯ ವಿರುದ್ಧವಾಗಿ ನಿರ್ಣಯ ಅನುಮೋದಿಸಲಾಯಿತು.

ಆದಿವಾಸಿಗಳ ನಂಬಿಕೆ ಮೀರಿದ ಪರಿಸರ ನಾಶ

ಇಲ್ಲಿ ಆದಿವಾಸಿ ಸಮುದಾಯಗಳ ಕುಲದೇವರು ಇರುವ ಪವಿತ್ರ ಬೆಟ್ಟಗಳು ಎಂಬ ನಂಬಿಕೆಯನ್ನು ಮೀರಿದ ಪರಿಸರ ನಾಶದ ಆತಂಕವಿದೆ. ನಿಯಮಗಿರಿಯ ಬಾಕ್ಸೈಟ್ ಬೆಟ್ಟಗಳು ಪ್ರಕೃತಿಯ ದೈತ್ಯ ಪರಿಸರ ಹೊಂದಿವೆ. ಇವು ಮಳೆಯ ನೀರನ್ನು ಇಂಗಿಸಿಕೊಂಡು ವರ್ಷಪೂರ್ತಿ ಸಾವಿರಾರು ಸಣ್ಣ ತೋಟ, ತೊರೆಗಳನ್ನು ಪೋಷಿಸುತ್ತವೆ. ಆದರೆ ಈ ಗಣಿಗಾರಿಕೆಯಿಂದ ಒಡಿಶಾದ ಪ್ರಮುಖ ನದಿಗಳಾದ ವಂಶಧಾರಾ ಮತ್ತು ನಾಗಾವಳಿ ನದಿಗಳಿಗೆ ಹರಿಯುವ ನೀರು ಬತ್ತಿಹೋಗಲಿದ್ದು, ಇಡೀ ಪ್ರದೇಶದ ಕುಡಿಯುವ ನೀರು ಮತ್ತು ಕೃಷಿ ವ್ಯವಸ್ಥೆ ಕುಸಿಯಲಿದೆ.

ಉತ್ಖನನದ ಹೆಸರಿನಲ್ಲಿ ಬೆಟ್ಟಗಳನ್ನು ಸ್ಫೋಟಿಸುವುದರಿಂದ ದಟ್ಟವಾದ ಅರಣ್ಯಗಳು ಮತ್ತು ಅಲ್ಲಿನ ಅಪರೂಪದ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನ ನಾಶವಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಮೂಲ ನಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವ, ಕಾರ್ಪೋರೇಟ್ ದೊರೆಗಳಿಗೆ ಲಾಭ ಮಾಡಿಕೊಡುವ ಕುಮ್ಮಕ್ಕು ಕೂಡಾ ಇದು. ಈ ವಿಚಾರದಲ್ಲಿ ಈಗಾಗಲೇ ಇಲ್ಲಿನ ನಿವಾಸಿಗಳು ಮತ್ತು ಪೊಲೀಸರ ನಡುವೆ ತಿಕ್ಕಾಟಗಳು ನಡೆದಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೀವ ಉಳಿಸುವ ಔಷಧಿಗಳ ಹೆಸರಿನಲ್ಲಿ ‘ಹಗಲು ದರೋಡೆ’: ಕೇಂದ್ರಕ್ಕೆ ಸುಪ್ರೀಂ ಚಾಟಿ

ಕ್ಯಾನ್ಸರ್ ಸೇರಿದಂತೆ ಅತ್ಯಗತ್ಯ ಔಷಧಿಗಳ ಸಗಟು ದರ (ಚಿಲ್ಲರೆ ವ್ಯಾಪಾರಿಗಳಿಗೆ ನೀಡುವ...

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದಿಂದ 2025-26ನೇ ಸಾಲಿನಲ್ಲಿ 1,970 ಮಂದಿಗೆ...

ಮರದ ಕೊಂಬೆ ಬಿದ್ದು ವ್ಯಕ್ತಿಗೆ ಶಾಶ್ವತ ಅಂಗವೈಕಲ್ಯ; ₹2.77 ಕೋಟಿ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಗುಲ್ಮೋಹರ್‌ ಮರದ ಕೊಂಬೆ...

Instagram ʼರೀಮಿಕ್ಸ್ʼ ಫೀಚರ್‌ಗೆ ತಕರಾರು; ಕಾಪಿರೈಟ್‌ ದುರ್ಬಳಕೆ ಸಾಧ್ಯತೆ ಎಂದ ದೆಹಲಿ ಹೈಕೋರ್ಟ್‌

Instagram ನಲ್ಲಿರುವ ಕೆಲವು ಫೀಚರ್‌ಗಳನ್ನು ಬಳಸಿಕೊಂಡು ಮೂಲ ಕಂಟೆಂಟ್‌ಗಳ ಕಾಪಿರೈಟ್ ಉಲ್ಲಂಘನೆ...