ವರದಕ್ಷಿಣೆ ಕಿರುಕುಳ: 3 ವರ್ಷಗಳಲ್ಲಿ 3 ಮದುವೆಯಾಗಿದ್ದವನ ಬಂಧನ

Date:

ಮೂರು ವರ್ಷಗಳಲ್ಲಿ ಮೂವರು ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯನ್ನು ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಬಂಧಿಸಿರುವ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಜಿಲ್ಲೆಯ ಪಿಂಟು ಬರ್ನ್‌ವಾಲ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಆತ, ತನ್ನ ಮೊದಲ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡದೆಯೇ, ಮೂರನೆ ವಿವಾಹವಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಇದನ್ನು ಓದಿದ್ದೀರಾ? ವರದಕ್ಷಿಣೆ ಕಿರುಕುಳ | ಮಗು ಕೊಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಆತ್ಮಹತ್ಯೆ

ಮೊದಲ ಮತ್ತು 2ನೇ ಪತ್ನಿಯರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪಿಂಟು ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಿಂಟುನನ್ನು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆದಾಗ್ಯೂ, ತನ್ನ ವಿರುದ್ಧದ ಆರೋಪಗಳನ್ನು ಪಿಂಟು ನಿರಾಕರಿಸಿದ್ದಾರೆ. ಮೂವರು ಪತ್ನಿಯರಲ್ಲಿ ಯಾರೊಬ್ಬರಿಂದಲೂ ಒಂದು ರೂಪಾಯಿಯನ್ನೂ ಪಡೆದಿಲ್ಲವೆಂದು ಆತ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತಾವು ಮೂವರು ಮಹಿಳೆಯರನ್ನು ಮದುವೆಯಾಗಿರುವುದಾಗಿ ಪಿಂಟು ಒಪ್ಪಿಕೊಂಡಿದ್ದಾರೆ. ಕೆಲವು ಸಂದರ್ಭಗಳ ಕಾರಣದಿಂದಾಗಿ, ತಾನು ಮೂರು ಮದುವೆಯಾಗುವ ಪರಿಸ್ಥಿತಿ ಬಂದಿತು. ತನ್ನ ಮನೆಯ ಪರಿಸ್ಥಿತಿ ಹದಗೆಟ್ಟಿದ್ದ ಕಾರಣ, ತನ್ನ ಹಿಂದಿನ ಇಬ್ಬರು ಪತ್ನಿಯರೊಂದಿಗೆ ಜೀವನ ಮುಂದುವರಿಸಲು ಅಸಾಧ್ಯವಾಗಿತ್ತು. ಅವರಿಬ್ಬರೂ ತನ್ನ 60 ವರ್ಷದ ತಾಯಿಗೆ ಅಡುಗೆ ಮಾಡಿಕೊಡುತ್ತಿರಲಿಲ್ಲ. ತನ್ನ ತಾಯಿಯೇ ಅವರಿಗೆ ಅಡುಗೆ ಮಾಡಿಕೊಡಬೇಕಿತ್ತು ಎಂದು ಪಿಂಟು ಹೇಳಿರುವುದಾಗಿ ವರದಿಯಾಗಿದೆ.

ಇದನ್ನು ಓದಿದ್ದೀರಾ? ಬೆಂಗಳೂರು | ಪತ್ನಿಗೆ ಐಎಎಸ್‌ ಅಧಿಕಾರಿಯಿಂದ ವರದಕ್ಷಿಣೆ ಕಿರುಕುಳ; ದೂರು ದಾಖಲು

“ನನ್ನ ಮೊದಲ ಪತ್ನಿ ಖುಷ್ಬೂ, ನನ್ನನ್ನು ಮತ್ತು ನನ್ನ ತಾಯಿಯನ್ನು ಚಾಕುವಿನಿಂದ ಕೊಲ್ಲಲು ಯತ್ನಿಸಿದ್ದರು. ಇ ಬಗ್ಗೆ ನಮ್ಮ ಗ್ರಾಮಸ್ಥರಿಗೂ ತಿಳಿದಿದೆ. ಆಕೆಗೂ-ನನಗೂ 10 ವರ್ಷ ವಯಸ್ಸಿನ ಅಂತರವಿತ್ತು. ನಮ್ಮಿಬ್ಬರ ನಡುವೆ ಯಾವುದೇ ದೈಹಿಕ ಸಂಬಂಧ ಇರಲಿಲ್ಲ. ಆಕೆ ನನ್ನ ಮೇಲೆ ಮಾಡಿರುವ ಅತ್ಯಾಚಾರ ಆರೋಪಗಳು ಸುಳ್ಳು” ಎಂದು ಪಿಂಟು ಹೇಳಿಕೊಂಡಿದ್ದಾರೆ.

ಮೂರನೇ ಮದುವೆಗೆ ತನ್ನ ತಾಯಿಯ ಅನಾರೋಗ್ಯ ಪ್ರಮುಖ ಕಾರಣವೆಂದು ಆತ ಹೇಳಿಕೊಂಡಿದ್ದಾರೆ. “ವಯಸ್ಸಾದ ತಾಯಿಗೆ ಅಸ್ವಸ್ಥತೆ, ಹೃದಯ ಕಾಯಿಲೆ ಹಾಗೂ ಮಧುಮೇಹ ಬಾಧಿಸುತ್ತಿದ್ದವು. ಅವರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ನನಗೆ ಅಡುಗೆ ಮಾಡಲು ಸಹ ಯಾರೂ ನೆರವಾಗಲಿಲ್ಲ. ಹೀಗಾಗಿ, ನಾನು 3ನೇ ಮದುವೆಯಾಗಬೇಕಾಯಿತು” ಎಂದು ಆತ ಹೇಳಿಕೊಂಡಿದ್ದಾರೆ.

ಪಿಂಟು ವಿರುದ್ಧ ದೂರು ದಾಖಲಿಸಿರುವ ಮೊದಲ ಪತ್ನಿ ಖುಷ್ಬೂ, “ನಾವು 2022ರ ಡಿಸೆಂಬರ್ 2ರಂದು ಗೌರಿ ಶಂಕರ್ ಲೌಂಜ್‌ನಲ್ಲಿ ವಿವಾಹವಾದೆವು. ಡಿಸೆಂಬರ್ 3 ರಂದು ನಾನು ಅವರ ಮನೆಗೆ ಹೋಗಿದ್ದೆ. ಆತ ನನಗೆ ಕಿರುಕುಳ ನೀಡಲು ಆರಂಭಿಸಿದ್ದರಿಂದ, ನನ್ನ ತಂದೆ ಅವರಿಗೆ 3 ಲಕ್ಷ ರೂ.ಗಳನ್ನು ಕೊಟ್ಟರು. ಜೊತೆಗೆ 20 ಗ್ರಾಂ ಚಿನ್ನದ ಸರ, 15 ಗ್ರಾಂ ಉಂಗುರ, ಇತರ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೊಟ್ಟಿದ್ದಾರೆ. ಆದರೂ, ಆತ ನನಗೆ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದರು. ಕಡೆಗೊಂದು ದಿನ ನನ್ನನ್ನು ಮನೆಯಿಂದ ಹೊರಗೆ ಹಾಕಿದರು” ಎಂದು ಆರೋಪಿಸಿದ್ದಾರೆ. ಅವರು ಹೇಳಿದರು.

“ಆದರೆ, ನನಗೆ ವಿಚ್ಛೇದನ ನೀಡದೆಯೇ, ಪಿಂಟು 2024ರ ಏಪ್ರಿಲ್ 18ರಂದು ಎರಡನೇ ಮದುವೆಯಾದರು. ಎರಡನೇ ಹೆಂಡತಿಗೆ 10 ತಿಂಗಳ ಮಗುವಿದೆ. ಆಕೆ ಗರ್ಭಿಣಿಯಾಗಿದ್ದಾಗಲೇ, ಆತ ಮೂರನೇ ವಿವಾಹವಾಗಿದ್ದಾನೆ. ಮೂರನೇ ಪತ್ನಿಗೆ ಒಂದು ತಿಂಗಳ ಮಗುವಿದೆ” ಎಂದು ಖುಷ್ಬೂ ಹೇಳಿದ್ದಾರೆ.

“ಎರಡನೇ ಪತ್ನಿ ಗುಡಿಯಾ ಕುಮಾರಿ ಅವರ ಬಗ್ಗೆ ವಿಚಾರಿಸಿದಾಗ, ಆಕೆಗೂ ಪಿಂಟು ಮತ್ತು ಆತನ ತಾಯಿ ಚಿಂತ್ರಹಿಂಸೆ ನೀಡಿ, ಹೊರಹಾಕಿದ್ದಾರೆ. ಅವರು ಪದೇ ಪದೇ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.

ಗುಡಿಯಾ ಕುಮಾರಿ ಕೂಡ ದೂರು ದಾಖಲಿಸಿದ್ದು, “ನಾನು ಪಿಂಟು ಅವರ ಎರಡನೇ ಹೆಂಡತಿ. ನನ್ನನ್ನು ಮದುವೆಯಾದ ನಂತರ, ಅವರು ನನಗೆ ಹೇಳದೆಯೇ, ವಿಚ್ಛೇದನವನ್ನೂ ನೀಡದೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ. ನನಗೂ ಚಿತ್ರಹಿಂಸೆ ನೀಡಿದ್ದಾರೆ. ಹಣದ ಆಸೆಯಿಂದ ಆತ ಪದೇ ಪದೇ ಮದುವೆಯಾಗಿದ್ದಾನೆ. ಅವನು ಅನೇಕ ಹುಡುಗಿಯರ ಜೀವನವನ್ನು ಹಾಳು ಮಾಡಿದ್ದಾನೆ. ಅವನು ಇನ್ನೂ ಎಷ್ಟು ಹುಡುಗಿಯರಿಗೆ ತೊಂದರೆ ಕೊಡುತ್ತಾನೆ?” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೇಶವ್ಯಾಪಿ ಪ್ರತಿಭಟನೆ; ಹೈದರಾಬಾದ್‌ನಲ್ಲಿ ‘ಸಿಜೆಪಿ’ ಮಹತ್ವದ ಸಭೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನದ ನಿರ್ಣಯ ಅಂಗೀಕಾರ; ಸದನದಲ್ಲಿ ಬಿಜೆಪಿ ಗದ್ದಲ

ಜಮ್ಮು-ಕಾಶ್ಮೀರಕ್ಕೆ ತುರ್ತಾಗಿ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು...

ಅಕ್ಟೋಬರ್ 8ರೊಳಗೆ ಪಶ್ಚಿಮ ಬಂಗಾಳ ಶಾಸಕರ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ, ರಿತಬ್ರತಾ...

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...