ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ವಿರುದ್ಧ WDI ಅರ್ಜಿ: ಜನವಾದಿ ಮಹಿಳಾ ಸಂಘಟನೆ ತೀವ್ರ ಖಂಡನೆ

Date:

ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ವಿರುದ್ಧ ಮಹಿಳಾ ಘೋಷಣೆ ಅಂತಾರಾಷ್ಟ್ರೀಯ ಸಂಸ್ಥೆ – ಭಾರತ (Women’s Declaration International India – WDI India) ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅತ್ಯಂತ ಕಳವಳಕಾರಿ ಅರ್ಜಿಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ತೀವ್ರವಾಗಿ ಖಂಡಿಸಿದೆ.

- Advertisement -

ಜನನದ ಸಮಯದಲ್ಲಿ ನಿರ್ಧಾರವಾಗುವ ಜೈವಿಕ ಲಿಂಗವು ಬದಲಾಯಿಸಲಾಗದ ಗುಣಲಕ್ಷಣವಾಗಿದ್ದು, ದಾಖಲೆಗಳ ಮೂಲಕವಾಗಲಿ ಅಥವಾ ವೈದ್ಯಕೀಯ ಮಧ್ಯಸ್ಥಿಕೆಯ ಮೂಲಕವಾಗಲಿ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಂಬುವ ಸ್ತ್ರೀವಾದಿಗಳ ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು WDI ಹೇಳಿಕೊಂಡಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ರಕ್ಷಣೆಗಳು ಜೈವಿಕ ಮಹಿಳೆಯರ ವಿರುದ್ಧ ತೀವ್ರ ತಾರತಮ್ಯದಿಂದ ಕೂಡಿವೆ ಮತ್ತು ಅವು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಇದನ್ನೂ ಓದಿ: ಉಡುಪಿ‌ | ಜನವಾದಿ ಮಹಿಳಾ ಸಂಘಟನೆ ವತಿಯಿಂದ ಕುಂದಾಪುರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಹಿಳಾ ಹಕ್ಕುಗಳ ಹೆಸರಿನಲ್ಲಿ ಸಲ್ಲಿಸಲಾಗಿರುವ ಈ ಅರ್ಜಿಯು ಈಗಾಗಲೇ ಅಪಾಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ, ಅದರಲ್ಲೂ ವಿಶೇಷವಾಗಿ ಟ್ರಾನ್ಸ್‌ವುಮೆನ್‌ಗಳ (ಜನನದ ವೇಳೆ ಪುರುಷರೆಂದು ಗುರುತಿಸಲ್ಪಟ್ಟಿದ್ದರೂ ಮಹಿಳೆಯಾಗಿ ಗುರುತಿಸಿಕೊಳ್ಳುವ ವ್ಯಕ್ತಿಗಳು) ಹಕ್ಕುಗಳಿಗೆ ದೊಡ್ಡ ಬೆದರಿಕೆಯನ್ನು ಒಡ್ಡಿದೆ. ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ–2026 ಈಗಾಗಲೇ ಜಾರಿಯಾಗಿದ್ದು, ಈ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ ಎಂದು ಜೆಎಂಎಸ್ ಹೇಳಿದೆ.

ಈ ಅರ್ಜಿಯು ಸಂಪೂರ್ಣವಾಗಿ ದಾರಿತಪ್ಪಿಸುವಂತಹದ್ದಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಗುರುತಿಸುವುದರಿಂದ ಸಿಸ್‌ಜೆಂಡರ್ ಮಹಿಳೆಯರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಮತ್ತು ಅವರ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳು ದುರ್ಬಲಗೊಳ್ಳುತ್ತವೆ ಎಂಬ ಸಂಪೂರ್ಣ ಸುಳ್ಳು ನಿರೂಪಣೆಯನ್ನು ಹರಡುತ್ತಿದೆ ಎಂದು ಜೆಎಂಎಸ್ ತಿಳಿಸಿದೆ.

ಜನನದ ಸಮಯದಲ್ಲಿ ಪುರುಷರೆಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಸ್ವಯಂ ಗುರುತಿಸುವಿಕೆಯ ಮೂಲಕವಾಗಲಿ ಅಥವಾ ಲಿಂಗ ದೃಢೀಕರಣ ವೈದ್ಯಕೀಯ ಚಿಕಿತ್ಸೆಯ ಮೂಲಕವಾಗಲಿ ಮಹಿಳೆಯೆಂದು ಕಾನೂನುಬದ್ಧವಾಗಿ ಅಥವಾ ಸಾಮಾಜಿಕವಾಗಿ ಗುರುತಿಸಲು ಸಾಧ್ಯವಿಲ್ಲ ಎಂಬ WDIಯ ನಿಲುವು ಅತ್ಯಂತ ಖಂಡನೀಯ ಮತ್ತು ಸ್ತ್ರೀವಾದಿ ಚಳವಳಿಗೆ ವಿರುದ್ಧವಾದುದಾಗಿದೆ ಎಂದು ಜೆಎಂಎಸ್ ಹೇಳಿದೆ.

ಇದನ್ನೂ ಓದಿ: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಜನವಾದಿ ಮಹಿಳಾ ಸಂಘಟನೆ ಖಂಡನೆ

NALSA ಮತ್ತು ಭಾರತ ಒಕ್ಕೂಟದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ವ್ಯಕ್ತಿಯ ಸ್ವಯಂ ಲಿಂಗ ಗುರುತಿಸುವಿಕೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿದೆ. ಅಲ್ಲದೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಿದೆ. ಆದರೆ, ಈ ಅರ್ಜಿಯು ಲಿಂಗತ್ವ ಅಲ್ಪಸಂಖ್ಯಾತರಿಗೆ ಈಗಾಗಲೇ ಸೀಮಿತವಾಗಿ ಲಭ್ಯವಿರುವ ರಕ್ಷಣೆಯನ್ನೂ ಹಿಂಪಡೆಯಲು ಮತ್ತು ಅವರ ಅಸ್ತಿತ್ವವನ್ನು ಕಾನೂನುಬದ್ಧವಾಗಿ ಹಾಗೂ ಸಾಮಾಜಿಕವಾಗಿ ಅಳಿಸಿಹಾಕಲು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸುತ್ತಿದೆ. ಟ್ರಾನ್ಸ್‌ವುಮೆನ್‌ಗಳನ್ನು ಮಹಿಳೆಯರಿಗಾಗಿ ಇರುವ ಎಲ್ಲಾ ಸ್ಥಳಗಳಿಂದ ಮತ್ತು ಕಾನೂನು ರಕ್ಷಣೆಗಳಿಂದ ಹೊರಗಿಡುವುದು ಅವರನ್ನು ತಾರತಮ್ಯ ಹಾಗೂ ಹಿಂಸಾಚಾರಕ್ಕೆ ಇನ್ನಷ್ಟು ಗುರಿಯಾಗುವಂತೆ ಮಾಡುತ್ತದೆ ಎಂದು ಜೆಎಂಎಸ್ ತಿಳಿಸಿದೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಪರವಾಗಿ ದೃಢವಾಗಿ ನಿಲ್ಲುತ್ತದೆ. ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಗುರುತಿಸುವುದರಿಂದ ಸಿಸ್‌ಜೆಂಡರ್ ಮಹಿಳೆಯರ ಹಕ್ಕುಗಳಿಗೆ ಯಾವುದೇ ರೀತಿಯ ಬೆದರಿಕೆ ಅಥವಾ ಉಲ್ಲಂಘನೆಯಾಗುವುದಿಲ್ಲ ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ. ಟ್ರಾನ್ಸ್‌ವುಮೆನ್‌ಗಳನ್ನು ಹೊರಗಿಡುವುದು ಸ್ತ್ರೀದ್ವೇಷದ ನಿಲುವಾಗಿದ್ದು, ಇದು ಸ್ತ್ರೀವಾದಿ ಚಳವಳಿಯ ಆಶಯಗಳಿಗೆ ವಿರುದ್ಧವಾಗಿದೆ. WDI India ಸಲ್ಲಿಸಿರುವ ಅರ್ಜಿಯು ತಾರತಮ್ಯಪೂರಿತ, ಖಂಡನೀಯ ಹಾಗೂ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಜೆಎಂಎಸ್ ಹೇಳಿದೆ.

WDI India ಅಥವಾ ಅದರ ಅರ್ಜಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಯಾವುದೇ ವ್ಯಕ್ತಿಯೊಂದಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ಈ ಹಿಂದೆ ಕೂಡ ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ–2026 ಅನ್ನು AIDWA ತೀವ್ರವಾಗಿ ಖಂಡಿಸಿದೆ. ಈ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ತನ್ನ ಬೆಂಬಲವನ್ನು ಮುಂದುವರಿಸುತ್ತದೆ ಎಂದು ಜೆಎಂಎಸ್ ಪ್ರಧಾನ ಕಾರ್ಯದರ್ಶಿ ದೇವಿ, ಜೆಎಂಎಸ್ ಅಧ್ಯಕ್ಷೆ ಚಂದ್ರಕುಮಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಲಸವಿಲ್ಲ, ಪರಿಹಾರವೂ ಅಷ್ಟಕ್ಕಷ್ಟೇ: ದೆಹಲಿಯ ವಿಷಪೂರಿತ ಗಾಳಿಗೆ ಬೆಲೆ ತೆರುತ್ತಿರುವ ಕಟ್ಟಡ ಕಾರ್ಮಿಕರು!

ಪ್ರತಿ ಚಳಿಗಾಲದಲ್ಲೂ ದೆಹಲಿಯ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪುತ್ತದೆ. ಇದನ್ನು ನಿಯಂತ್ರಿಸಲು...

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್ ಸೀಟು

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ...

ಕೇಜ್ರೀವಾಲ್, ಪುತ್ರಿಗೆ ಜೀವಬೆದರಿಕೆ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ 7 ಕೋಟಿ ರೂ.ಗೆ ಬೇಡಿಕೆ

ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ...

ಈ ದಿನ ಸಂಪಾದಕೀಯ | ಸಾರ್ವಜನಿಕ ಸಭ್ಯತೆ ಹಿನ್ನೆಲೆಗೆ; ಚಾಕು-ಚೂರಿ ಸಂಸ್ಕೃತಿ ಮುನ್ನೆಲೆಗೆ!

ಸಮಾಜಕ್ಕೆ ಇಂದು ಬೇಕಿರುವುದು ಚಾಕು-ಚೂರಿ ಹಿಡಿಯುವ ಕೈಗಳಲ್ಲ, ಕೈಕುಲುಕಿ ಸಮಸ್ಯೆ ಬಗೆಹರಿಸುವ...