ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

Date:

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ ಆಯೋಗದ ಹಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಒಕ್ಕೂಟದ ನಾಯಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹವನ್ನು ತೀವ್ರಗೊಳಿಸಿದ್ದಾರೆ.

- Advertisement -

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ‘ಇಂಡಿಯಾ’ ಒಕ್ಕೂಟದ ನೂರಾರು ಸಂಸದರು ದೆಹಲಿ ಪೊಲೀಸರ ಬಿಗಿ ಭದ್ರತೆ, ತಡೆಗೋಡೆಗಳನ್ನು ಲೆಕ್ಕಿಸದೆ, ಪದೇ ಪದೇ ಬಂಧನಕ್ಕೆ ಒಳಗಾದರೂ ಹಿಂಜರಿಯದೆ ನಿರಂತರ ಹೋರಾಟ ಮುಂದುವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ...

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ ಸಾಂಪ್ರದಾಯಿಕ ಟೋಪಿ) ಧರಿಸಿ ನಿಂತಿದ್ದ ಚಿತ್ರವು, ಅವರ ಇಸ್ರೇಲ್ ಪರ ಒಲವಿಗೆ ಅಳಿಸಲಾಗದ ಸಾಕ್ಷಿಯಾಗಿ ಉಳಿದುಕೊಂಡಿದೆ. ಶಾಂತಿ ಪ್ರವಾಸದ ಹೆಸರಿನಲ್ಲಿ...

ಇದನ್ನೂ ಓದಿ: ಮೋಶಾ ಕಟ್ಟಿದ ಪೊಲೀಸ್ ಗೋಡೆ ಕೆಡವಿದ ರಾಹುಲ್ ಗಾಂಧಿ, ಪ್ರತಿಭಟನೆಯನ್ನು ಜೀವಂತವಿರಿಸಿದ್ದು ಹೀಗೆ..

ಆಕಾಶವಾಣಿ ಭವನದ ಬಳಿ ಸುಮಾರು 9 ಗಂಟೆಗಳ ಕಾಲ ಧರಣಿ ನಡೆಸಿ, ಪೊಲೀಸರು ವಶಕ್ಕೆ ಪಡೆದು, ಬಿಡುಗಡೆಯಾದ ನಂತರವೂ ‘ಇಂಡಿಯಾ’ ಒಕ್ಕೂಟದ ಸಂಸದರು ದೆಹಲಿಯ ಜನಪಥ್‌ನಿಂದ ಮೆರವಣಿಗೆ ಹೊರಟು, ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಈ ಬಂಧನ ಮತ್ತು ಎಫ್‌ಐಆರ್‌ಗೆ ಹಿಂಜರಿಯದ ವಿಪಕ್ಷ ನಾಯಕರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಸುಮಾರು 300 ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ಸಿಇಸಿ ಗ್ಯಾನೇಶ್ ಕುಮಾರ್ ಅವರನ್ನು ಭೇಟಿಯಾಗಲು ಬಯಸಿದ್ದೆವು. ಆದರೆ ಆಯೋಗ ಹಾಗೂ ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ನಮ್ಮ ಪಾಲಿಗೆ ಗ್ಯಾನೇಶ್ ಕುಮಾರ್ ಅವರು ಈ ದೇಶದ ಅಧಿಕೃತ ಅಥವಾ ಕಾನೂನುಬದ್ಧ ಮುಖ್ಯ ಚುನಾವಣೆ ಆಯುಕ್ತರಲ್ಲ. ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲೇಬೇಕು” ಎಂದು ಆಗ್ರಹಿಸಿದರು.

ಎಫ್‌ಐಆರ್ ದಾಖಲಾಗಿರುವ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ನನ್ನ ವಿರುದ್ಧ ಈಗಾಗಲೇ 45 ಎಫ್‌ಐಆರ್‌ಗಳು ಇವೆ. ನನ್ನ ಗುರಿ 100 ಎಫ್‌ಐಆರ್ ದಾಟಿಸುವುದು. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕಾಗಿ ಹೋರಾಡುವಾಗ ದಾಖಲಾಗುವ ಪ್ರತಿಯೊಂದು ಎಫ್‌ಐಆರ್ ಕೂಡ ನನಗೆ ಹೆಮ್ಮೆಯ ಪದಕವಿದ್ದಂತೆ” ಎಂದು ಖಾರವಾಗಿ ಹೇಳಿದ್ದಾರೆ.

“ಗ್ಯಾನೇಶ್ ಕುಮಾರ್ ಅವರು ಈ ದೇಶದ ಧರ್ಮಸಮ್ಮತ ಮುಖ್ಯ ಚುನಾವಣೆ ಆಯುಕ್ತರಲ್ಲ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಎಷ್ಟು ಎಫ್‌ಐಆರ್ ಹಾಕಿದರೂ, ನಮ್ಮನ್ನು ಬಂಧಿಸಿದರೂ ನಾವು ಜಂತರ್ ಮಂತರ್ ಬಿಟ್ಟು ಕದಲುವುದಿಲ್ಲ” ಎಂದು ವಿಪಕ್ಷ ನಾಯಕರು ದೆಹಲಿಯಲ್ಲಿ ಹರಿಹಾಯ್ದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೀವಸೃಷ್ಟಿಯ ಶತಮಾನದ ರಹಸ್ಯ ಬಯಲು ಮಾಡಿದ ಕಗನ್, ಸೋಯಿಗೆ ಒಲಿದ ರಸಾಯನಶಾಸ್ತ್ರ ನೊಬೆಲ್

ಜೀವರಸಾಯನಶಾಸ್ತ್ರದ ಶತಮಾನದ ರಹಸ್ಯವೊಂದನ್ನು ಭೇದಿಸಿದ ಫ್ರಾನ್ಸ್‌ನ ವಿಜ್ಞಾನಿ ಹೆನ್ರಿ ಬಿ. ಕಗನ್...

SIR: ಪಶ್ಚಿಮ ಬಂಗಾಳದ ಅವಾಂತರಗಳು

ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರಿನ ಮೇರೆಗೆ...

ಕೊಲ್ಹಾರದ ಕೆನೆ ಮೊಸರು: ಶತಮಾನದ ಇತಿಹಾಸ, ನೂರಾರು ಕುಟುಂಬಗಳ ಜೀವನಾಧಾರ…

ಕೊಲ್ಹಾರದ ಕೆನೆ ಮೊಸರು ಹಲವು ಕುಟುಂಬಗಳಿಗೆ ಜೀವನಾಧಾರ. ತಲೆಮಾರುಗಳಿಂದ ಬಂದಿರುವ ಈ...