ಪೆಲೆಟ್‌ ಗನ್‌ ಪ್ರಕರಣ: ಧರಣಿ ಕೈಬಿಡಲ್ಲ ಎಂದು ರಾಹುಲ್‌ ಪಟ್ಟು; ಕೊನೆಗೂ ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸ್‌

Date:

ಜುಲೈ 20ರಂದು ಸಂಸತ್ ಭವನದ ಕಡೆಗೆ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊನೆಗೂ ಎಫ್‌ಐಆರ್ ದಾಖಲಿಸಿದ್ದಾರೆ. ಸಂತ್ರಸ್ತ ಯುವಕನೊಂದಿಗೆ ದೆಹಲಿ ಪೊಲೀಸ್ ಠಾಣೆಯ ಹೊರಗೆ ಧರಣಿ ಕುಳಿತಿದ್ದ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಫ್‌ಐಆರ್ ದಾಖಲಿಸುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

- Advertisement -

​”ನೀವು ಎಫ್‌ಐಆರ್ ದಾಖಲಿಸದಿದ್ದರೆ 30 ದಿನಗಳಾಗಲಿ ಅಥವಾ ಆರು ತಿಂಗಳೇ ಆಗಲಿ ಪೊಲೀಸ್ ಠಾಣೆಯ ಹೊರಗೆ ನಾನು ಧರಣಿ ಕೂರುತ್ತೇನೆ,” ಎಂದು ರಾಹುಲ್ ಗಾಂಧಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಸಂತ್ರಸ್ತನ ವೈದ್ಯಕೀಯ ವರದಿ ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಸಹ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

​ಧರಣಿ ನಿರತರಾಗಿದ್ದಾಗಲೇ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಜುಲೈ 20ರಂದು ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಮೇಲೆ ಪೊಲೀಸರು ಪೆಲೆಟ್ ಗನ್‌ನಿಂದ ದಾಳಿ ಮಾಡಿದ್ದಾರೆ. ಈ ಭೀಕರ ದಾಳಿಯಿಂದಾಗಿ ಸಾಹಿಲ್‌ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

​ಆದರೆ, ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿರುವುದನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಗಲಭೆ-ನಿಯಂತ್ರಣ ವಿಭಾಗವಾದ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು (RAF) ನಿಯೋಜಿಸಲಾಗಿತ್ತು. ಈ ಪಡೆಯು ಶಾಕ್ ಬ್ಯಾಟನ್‌ಗಳು ಮತ್ತು ಪೆಲೆಟ್ ಗನ್‌ಗಳನ್ನು ಹೊಂದಿರುತ್ತದೆ. ಆದರೆ ಈ ಪ್ರತಿಭಟನೆ ವೇಳೆ ಅವುಗಳ ಬಳಕೆಯ ಬಗ್ಗೆ ಸಿಆರ್‌ಪಿಎಫ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದೆ.

​ಪೆಲೆಟ್ ಗನ್‌ಗಳನ್ನು ಮೊದಲ ಬಾರಿಗೆ 2010ರಲ್ಲಿ ಕಾಶ್ಮೀರದ ಪ್ರತಿಭಟನಾಕಾರರ ವಿರುದ್ಧ ಬಳಸಲಾಗಿತ್ತು. ಒಂದು ಪೆಲೆಟ್ ಗನ್ ಕಾರ್ಟ್ರಿಡ್ಜ್‌ನಲ್ಲಿ 600ರವರೆಗೆ ಲೋಹ ಅಥವಾ ರಬ್ಬರ್ ಗುಂಡುಗಳಿರುತ್ತವೆ. ಇವು ಸೆಕೆಂಡಿಗೆ 1,000 ಅಡಿ ವೇಗದಲ್ಲಿ ಸಿಡಿಯುತ್ತವೆ ಮತ್ತು ಒಮ್ಮೆಗೆ ವ್ಯಾಪಕವಾಗಿ ಹರಡಿಕೊಳ್ಳುವುದರಿಂದ ಗಂಭೀರ ಗಾಯಗಳಾಗುವ ಅಪಾಯವಿರುತ್ತದೆ. ನಿಯಮಾವಳಿಗಳ (SOP) ಪ್ರಕಾರ, ಕನಿಷ್ಠ 500 ಅಡಿ ಅಂತರದಿಂದ ಮತ್ತು ಯಾವಾಗಲೂ ಸೊಂಟದ ಕೆಳಭಾಗಕ್ಕೆ ಮಾತ್ರ ಗುರಿಯಿಟ್ಟು ಈ ಗನ್ ಬಳಸಬೇಕಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿ ದಾಳಿ, ಬ್ರಿಮ್ಸ್‌ಗೆ ದಾಖಲು

ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ,...

ಫಾರ್ಮ್‌-7 ವಿವಾದ | ಆರೋಪಿಗಳ ರಕ್ಷಣೆಗೆ ನಿಂತರೇ ಎಚ್‌ಡಿಕೆ?

ರಾಜ್ಯದಲ್ಲಿ ಸದ್ಯ ಭಾರೀ ಗದ್ದಲ ಎಬ್ಬಿಸಿರುವ SIR ಮತ್ತು ದಂಡು ದಂಡಾಗಿ...