ರಾಮಮಂದಿರ ದೇಣಿಗೆ ಕಳವು ಪ್ರಕರಣ: ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಕೆ, ಪಟ್ಟಿಯಲ್ಲಿಲ್ಲ ಚಂಪತ್ ರಾಯ್ ಹೆಸರು

Date:

ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ದೇಣಿಗೆ ಹಣ ಹಾಗೂ ಕಾಣಿಕೆಗಳ ಅಕ್ರಮ ದುರುಪಯೋಗ ಮತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಸಮಗ್ರ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ನ್ಯಾಯಾಲಯ ಸಂಕೀರ್ಣದ ಬಳಿ ವಕೀಲರ ನಡುವೆ ತೀವ್ರ ಗೊಂದಲ ಮತ್ತು ಗಲಾಟೆ ವಾತಾವರಣ ಉಂಟಾಗಿದ್ದ ನಡುವೆಯೇ ತನಿಖಾಧಿಕಾರಿಗಳು ಈ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

- Advertisement -

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಿದ ಉತ್ತರ ಪ್ರದೇಶ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೋಷಾರೋಪ ಪಟ್ಟಿಯನ್ನು ವ್ಯಾಪ್ತಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಚಳವಳಿ ನಿಗ್ರಹಕ್ಕೆ ತೋರುವ ಶೌರ್ಯ ರಕ್ಷಣೆಯಲ್ಲೇಕಿಲ್ಲ? ಅಮಿತ್ ಶಾ...

ಯಾವುದೇ ಒಂದು ಆಡಳಿತದ ನಿಜವಾದ ಮಾನದಂಡ ಇರುವುದು ರಾಜಕೀಯ ಭಾಷಣಗಳಲ್ಲಲ್ಲ, ಬದಲಿಗೆ ಆ ಆಡಳಿತದಲ್ಲಿ ಸಾಮಾನ್ಯ ನಾಗರಿಕರು, ವಿಶೇಷವಾಗಿ ಮಹಿಳೆಯರು, ಪಡೆಯುವ ಭದ್ರತೆಯಲ್ಲಿ. ರಾಜಧಾನಿಯಲ್ಲಿ ಸಾಲು ಸಾಲಾಗಿ ಹರಿದ ರಕ್ತ ಮತ್ತು ಈ...

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ಇದನ್ನೂ ಓದಿ: ರಾಮಮಂದಿರ ಲೂಟಿ | ತನಿಖೆ-ಬಂಧನದಿಂದ RSSನ ತಿಮಿಂಗಿಲಗಳು ಪಾರು!

ಸುಪ್ರೀಂ ಕೋರ್ಟ್ ಮತ್ತು ತನಿಖಾ ವರದಿಗಳ ಪ್ರಕಾರ, ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಥವಾ ಇತರ ಉನ್ನತ ಪದಾಧಿಕಾರಿಗಳ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ. ಆದರೆ ಪ್ರಕರಣ ಬೆಳಕಿಗೆ ಬಂದ ಆರಂಭದಲ್ಲೇ ಒತ್ತಡಕ್ಕೆ ಮಣಿದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ನಡುವೆಯೇ ಚಂಪತ್ ರಾಯ್ ಅವರಂತಹ ಆರ್‌ಎಸ್‌ಎಸ್ ಮುಖಂಡರನ್ನು ಕಾಪಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ.

Advertisements

ತನಿಖಾ ತಂಡವು ಸಿಸಿಟಿವಿ ದೃಶ್ಯಾವಳಿಗಳು, ಬ್ಯಾಂಕ್ ವಹಿವಾಟುಗಳು ಹಾಗೂ ನಗದು ಎಣಿಕೆ ಕೊಠಡಿಯ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದು, ಒಟ್ಟು 105 ಅಕ್ರಮ ಅಥವಾ ಕಳವು ಪ್ರಕರಣದ ಘಟನೆಗಳನ್ನು ಗುರುತಿಸಿದೆ. ನಗದು ಎಣಿಕೆ ಕಾರ್ಯದಲ್ಲಿದ್ದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್‌) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೋಷಾರೋಪ ಹೊರಿಸಲಾಗಿದೆ. ಆರೋಪಿಗಳಿಂದ ಸುಮಾರು 80 ಲಕ್ಷ ರೂ. ನಗದನ್ನು ಈಗಾಗಲೇ ಜಪ್ತಿ ಮಾಡಲಾಗಿದೆ.

ದೇಣಿಗೆ ನಿರ್ವಹಣೆಯಲ್ಲಿ ನಿಯಮಗಳ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಆಡಳಿತಾತ್ಮಕ ರಚನೆಯನ್ನು ಬದಲಾಯಿಸಲಾಗಿದ್ದು, ನೂತನ ಸಿಇಒ ಆಗಿ ಜಿತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಎಂಸಿ ಬಂಡಾಯ ಸಂಸದರ ಅನರ್ಹತೆ ಪ್ರಕರಣ: ತ್ವರಿತ ನಿರ್ಧಾರಕ್ಕೆ ಲೋಕಸಭಾ ಸ್ಪೀಕರ್‌ಗೆ ಸುಪ್ರೀಂ ಕಿವಿಮಾತು

ತ್ರಿಪುರಾ ಮೂಲದ 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' (ಎನ್‌ಸಿಪಿಐ -...

ವಿಜಯಪುರ | ಜಿಲ್ಲೆಯ 4 ತಾಲೂಕುಗಳು ತೀವ್ರ ಬರಪೀಡಿತ: ಸಚಿವ ಎಂ.ಬಿ ಪಾಟೀಲ

ಕೇಂದ್ರ ಸರಕಾರದ ಬರ ನಿರ್ವಹಣಾ ಮಾನದಂಡಗಳನ್ನು ಆಧರಿಸಿ ವಿಜಯಪುರ ಜಿಲ್ಲೆಯ ಆಲಮೇಲ,...

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ...