ರಾಮಮಂದಿರ ಲೂಟಿ | ‘ಹಲವು ಬಾರಿ ಕೇಳಿದರೂ ದೇಣಿಗೆಗೆ ರಶೀದಿ ನೀಡಲಿಲ್ಲ’: ಅಯೋಧ್ಯೆ ಉದ್ಯಮಿ ಗಂಭೀರ ಆರೋಪ

Date:

ಅಯೋಧ್ಯೆಯ ರಾಮಮಂದಿರ ನಿಧಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಸ್ಫೋಟಕ ಸತ್ಯಗಳು ಹೊರಬರುತ್ತಿವೆ. 2019ರಲ್ಲಿ ತಾವು ರಾಮಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದ ವಾಷಿಂಗ್ ಮಷೀನ್‌ಗೆ ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಮಂಡಳಿಯಿಂದ ಯಾವುದೇ ರಶೀದಿ ಸಿಕ್ಕಿಲ್ಲ ಎಂದು ಅಯೋಧ್ಯೆಯ ಸ್ಥಳೀಯ ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಅಯೋಧ್ಯೆಯ ಹನುಮಾನ್ ಗಢಿ ದೇವಸ್ಥಾನದ ಬಳಿ ಪ್ರಸಾದ ಹಾಗೂ ಚಿನ್ನದ ಅಂಗಡಿ ಇಟ್ಟುಕೊಂಡಿರುವ ರಾಕೇಶ್ ಕುಮಾರ್ ಗುಪ್ತಾ ಎಂಬುವರು ಈ ಗಂಭೀರ ಆರೋಪ ಮಾಡಿದ್ದಾರೆ. “ರಾಮಮಂದಿರ ಹಣ ಲೂಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಂಟು ಮಂದಿ ಆರೋಪಿಗಳಲ್ಲಿ ಒಬ್ಬನಾದ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಎಂಬಾಯನ ಸಲಹೆಯಂತೆ ನಾನು ದೇಣಿಗೆ ನೀಡಿದ್ದೆ” ಎಂದು ಗುಪ್ತಾ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ಟಿನ್ನು ಯಾದವ್ ನನ್ನ ಮಗಳನ್ನು ಟೆಂಪೋದಲ್ಲಿ ಶಾಲೆಗೆ ಬಿಡುತ್ತಿದ್ದರಿಂದ ಆತ ನನಗೆ ಹಲವು ವರ್ಷಗಳಿಂದ ಪರಿಚಯವಿದ್ದ. ನಾನು ರಾಮಮಂದಿರಕ್ಕೆ ಏನಾದರೂ ಸೇವೆ ಮಾಡಬೇಕು ಎಂದು ಆತನ ಬಳಿ ಕೇಳಿಕೊಂಡಿದ್ದೆ. 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವುದಕ್ಕಿಂತ ಕೆಲವು ತಿಂಗಳುಗಳ ಮುಂಚೆ, ದೇವಸ್ಥಾನದಲ್ಲಿ ಮೂರ್ತಿಗಳ ಅಲಂಕಾರಕ್ಕೆ ಬಳಸುವ ಬಟ್ಟೆಗಳು ಹಾಗೂ ಬೆಡ್‌ಶೀಟ್‌ಗಳನ್ನು ಒಗೆಯಲು ವಾಷಿಂಗ್ ಮಷೀನ್ ಅಗತ್ಯವಿದೆ, ಅದನ್ನು ದೇಣಿಗೆಯಾಗಿ ನೀಡಿ ಎಂದು ಟಿನ್ನು ಯಾದವ್ ನನಗೆ ಸಲಹೆ ನೀಡಿದ್ದ” ಎಂದು ಗುಪ್ತಾ ವಿವರಿಸಿದ್ದಾರೆ.

“ನಾನು ಅಯೋಧ್ಯೆಯ ಎಲ್‌ಜಿ ಏಜೆನ್ಸಿಗೆ ಹೋಗಿ ದೊಡ್ಡ ಗಾತ್ರದ ವಾಷಿಂಗ್ ಮಷೀನ್ ಖರೀದಿಸಿದೆ. ಅದರ ಮೇಲೆ ನನ್ನ ಪೂರ್ವಜರ ಹೆಸರನ್ನು ಬರೆಸಿ, ದೇವಸ್ಥಾನದ ಆವರಣದಲ್ಲಿದ್ದ ಮಾನಸ್ ಟ್ರಸ್ಟ್‌ನ ಕಚೇರಿಗೆ ತಲುಪಿಸಿದೆ. ಆಗ ಟ್ರಸ್ಟಿ ಆಗಿದ್ದ ಅನಿಲ್ ಮಿಶ್ರಾ ಅವರ ಸಮ್ಮುಖದಲ್ಲೇ ಅದನ್ನು ಹಸ್ತಾಂತರಿಸಿದ್ದೆ” ಎಂದು ಗುಪ್ತಾ ಹೇಳಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಟ್ರಸ್ಟಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನಿಲ್ ಮಿಶ್ರಾ, ಸದ್ಯ ನಿಧಿ ದುರುಪಯೋಗ ಪ್ರಕರಣದಲ್ಲಿ ವಿಶೇಷ ತನಿಖಾ ದಳದ (SIT) ವಿಚಾರಣೆ ಎದುರಿಸುತ್ತಿದ್ದಾರೆ.

“ಮಷೀನ್ ನೀಡಿದ ಬಳಿಕ ರಶೀದಿ ಕೊಡುವಂತೆ ಟಿನ್ನು ಯಾದವ್‌ಗೆ ಹಲವು ಬಾರಿ ನೆನಪಿಸಿದೆ. ಆದರೆ ಆತ ರಶೀದಿ ನೀಡಲೇ ಇಲ್ಲ. ಸುಸ್ತಾಗಿ ನಾನು ಸುಮ್ಮನಾದೆ. ಈಗ ಎಸ್‌ಐಟಿ ಮುಂದೆ ಹಾಜರಾಗಿ ನನ್ನ ಹೇಳಿಕೆ ದಾಖಲಿಸಲು ಬಯಸುತ್ತೇನೆ” ಎಂದು ಗುಪ್ತಾ ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, “ಅದೇ ವರ್ಷ (2019) ನಮ್ಮ ತಾಯಿ ಬಾಲರಾಮನ ಮೂರ್ತಿಗೆ ದೃಷ್ಟಿಯಾಗಬಾರದು ಎಂದು ಮನೆಯಲ್ಲೇ ಸಿದ್ಧಪಡಿಸಿದ್ದ ಕಾಡಿಗೆಯನ್ನು ಹಚ್ಚಲು ಬಯಸಿದ್ದರು. ಇದನ್ನು ಸುಮಾರು 1,000 ದಿಂದ 1,500 ರೂಪಾಯಿ ಮೌಲ್ಯದ ಬೆಳ್ಳಿಯ ‘ಕಜ್ರೋಟಾ’ದಲ್ಲಿ (ಕಾಡಿಗೆ ಇಡುವ ಪಾತ್ರೆ) ತುಂಬಿ ಟಿನ್ನು ಯಾದವ್ ಕೈಗೆ ಕೊಟ್ಟಿದ್ದರು. ಆದರೆ, ಆತ ಆ ಬೆಳ್ಳಿಯ ಪಾತ್ರೆಯನ್ನೂ ಮರಳಿ ನೀಡದೆ ವಂಚಿಸಿದ್ದಾನೆ” ಎಂದು ಉದ್ಯಮಿ ಗುಪ್ತಾ ಆಕ್ರೋಶ ಹೊರಹಾಕಿದ್ದಾರೆ.

1992 ರ ಬಾಬರಿ ಮಸೀದಿ ಧ್ವಂಸದ ಕರಸೇವೆಯಲ್ಲೂ ಭಾಗಿಯಾಗಿದ್ದ ತಮಗೆ, ರಾಮನ ಹೆಸರಿನಲ್ಲಿ ನಡೆದಿರುವ ಈ ನಿಧಿ ದುರುಪಯೋಗ ಭಾರಿ ಬೇಸರ ತರಿಸಿದೆ ಎಂದು ಗುಪ್ತಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...