ದೆಹಲಿ ಸ್ಫೋಟ ದುರಂತ: ಮುಗಿಲು ಮುಟ್ಟಿದ ಮೃತರ ಕುಟುಂಬಗಳ ರೋದನ

Date:

ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಮೃತಪಟ್ಟವರು ತಮ್ಮ ಕುಟುಂಬಗಳಿಗೆ ಆಧಾರಸ್ತಂಭರಾಗಿದ್ದರು. ಈ ದುರ್ಘಟನೆಯಿಂದ ಹಲವಾರು ಮನೆಗಳಲ್ಲಿ ದುಃಖ ಮಡುಗಟ್ಟಿದೆ. ಮೃತರ ಪೈಕಿ ಯುವಕರು, ಟ್ಯಾಕ್ಸಿ ಚಾಲಕರು, ಕಂಡಕ್ಟರ್‌ ಸೇರಿದ್ದಾರೆ.

- Advertisement -

ಮೃತರ ಪೈಕಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಜಿಂಝಾನಾ ಪಟ್ಟಣದ 18 ವರ್ಷದ ನೌಮನ್‌ ಅನ್ಸಾರಿ ಎಂಬ ಯುವಕರೊಬ್ಬರು ಸೇರಿದ್ದಾರೆ. ಅನ್ಸಾರಿ ಕುಟುಂಬದ ಆಧಾರ ಸ್ತಂಭವಾಗಿದ್ದ. ತನ್ನ ಅಂಗಡಿಗೆ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಸೋದರ ಸಂಬಂಧಿ ಅಮನ್‌ ಜೊತೆ ದೆಹಲಿಗೆ ಆಗಮಿಸಿದ್ದರು. ಸ್ಫೋಟದ ಸ್ಥಳದಲ್ಲೇ ಮೃತಪಟ್ಟರು. ಅಮನ್‌ ಗಂಭೀರವಾಗಿ ಗಾಯಗೊಂಡಿದ್ದು, ಲೋಕನಾಯಕ್‌ ಜೈ ಪ್ರಕಾಶ್‌ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಮತ್ತೊಬ್ಬ ಸಂತ್ರಸ್ತ ಪಂಕಜ್ ಸಾಹ್ನಿ (22), ಮೂರು ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ, ಅವರು ಓಡಿಸುತ್ತಿದ್ದ ವ್ಯಾಗನಾರ್ ಕಾರು ಸಂಪೂರ್ಣ ಹಾನಿಗೊಳಗಾಗಿದೆ ಎಂದು ಸಂಬಂಧಿಕ ರಾಮದೇವ್ ಕಣ್ಣೀರಿನೊಂದಿಗೆ ವಿವರಿಸಿದರು. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಡಿಟಿಸಿ ಕಂಡಕ್ಟರ್ ಅಶೋಕ್ ಕುಮಾರ್ (34) ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಶವಾಗಾರದ ಬಳಿ ಕಾಯುತ್ತಿರುವ ಸಂಬಂಧಿಕರ ದೃಶ್ಯಗಳು ಹೃದಯ ವಿದ್ರಾವಕವಾಗಿವೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸುಧಾರಣೆಯಾಗಬೇಕಾದದ್ದು ಜೈಲುಗಳೋ, ರಾಜ್ಯ ಸರ್ಕಾರವೋ?

ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮ್ ಪ್ರತಾಪ್, ಬಿಹಾರ ಮೂಲದವರು ಮತ್ತು ರಸ್ತೆಬದಿ ತಿನಿಸು ಅಂಗಡಿಯ ಮಾಲೀಕರು. ಅವರು ಘಟನೆಯನ್ನು ನೆನಪಿಸಿಕೊಳ್ಳುತ್ತಾ, “ರಸ್ತೆಯುದ್ದಕ್ಕೂ ರಕ್ತದ ಕಲೆಗಳು, ಮೃತದೇಹಗಳು, ಸುರಿಯುತ್ತಿದ್ದ ರಕ್ತ… ನಾವು ಸಾವನ್ನು ಅತಿ ಹತ್ತಿರದಿಂದ ಅನುಭವಿಸಿದ್ದೇವೆ” ಎಂದು ನಡುಗುತ್ತಾ ಹೇಳಿದರು. ಅವರ ಬಲಗೈಗೆ ಗಂಭೀರ ಗಾಯವಾಗಿದ್ದು, ಸ್ಫೋಟದ ನಂತರ ಹೊಗೆ ಮತ್ತು ಕಿರುಚಾಟಗಳ ನಡುವೆ ಏನೂ ಕೇಳಿಸದ ಸ್ಥಿತಿಯಲ್ಲಿದ್ದೆವು ಎಂದರು.

ಅದೇ ರೀತಿ, ಟ್ಯಾಂಕರ್ ಮಾಲೀಕ ವಿಜೇಂದರ್ ಯಾದವ್ ಕೂಡ ಭಯಾನಕ ದೃಶ್ಯಗಳನ್ನು ವಿವರಿಸಿದರು. “ಸ್ಫೋಟದ ಆಘಾತಕ್ಕೆ ನೆಲಕ್ಕೆ ಬಿದ್ದೆ, ಮೇಲೆದ್ದಾಗ ಬಟ್ಟೆಗಳು ರಕ್ತಮಯವಾಗಿದ್ದವು. ರಸ್ತೆಯಲ್ಲಿ ಗಾಜಿನ ಚೂರುಗಳು ಮತ್ತು ಮೃತದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿದ್ದವು. ನಾನು ಬದುಕುಳಿದದ್ದೇ ಪವಾಡ” ಎಂದು ಹೇಳಿದರು. ಬಿಹಾರದವರಾದ ಅವರು ಎರಡು ದಶಕಗಳಿಂದ ನೀರು ಸರಬರಾಜು ವ್ಯವಹಾರದಲ್ಲಿದ್ದು, ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಕಾರು ರಾಜಧಾನಿ ಪ್ರವೇಶಿಸಿದ್ದು ಹೇಗೆ? ಮತ್ತೊಮ್ಮೆ ಬಯಲಾದ ಕೇಂದ್ರದ ಭದ್ರತಾ ವೈಫಲ್ಯ

ಈ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಭದ್ರತಾ ಮತ್ತು ಗುಪ್ತಚರ ವ್ಯವಸ್ಥೆಯ ಗಂಭೀರ ವೈಫಲ್ಯಗಳು ಬೆಳಕಿಗೆ ಬಂದಿವೆ. ಫರೀದಾಬಾದ್‌ನಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರವೂ, ಶಂಕಿತನು 2,900 ಕೆ.ಜಿ ಸ್ಫೋಟಕಗಳೊಂದಿಗೆ ಕಾರನ್ನು ದೆಹಲಿಯ ಮಧ್ಯಭಾಗಕ್ಕೆ ತಂದು ಮೂರು ಗಂಟೆಗಳ ಕಾಲ ಪಾರ್ಕ್ ಮಾಡಿಟ್ಟಿದ್ದು ಹೇಗೆ? ಇದು ‘ವೈಟ್ ಕಾಲರ್ ಭಯೋತ್ಪಾದಕ ಜಾಲ’ದ ಚಟುವಟಿಕೆಗಳನ್ನು ತಡೆಯಲು ಸರ್ಕಾರದ ಗುಪ್ತಚರ ವಿಭಾಗದ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ರಾಜಧಾನಿಯ ಭದ್ರತಾ ಕ್ರಮಗಳು ದುರ್ಬಲವಾಗಿದ್ದು, ಸಾರ್ವಜನಿಕರ ಜೀವಗಳನ್ನು ಅಪಾಯಕ್ಕೆ ತಳ್ಳಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸರ್ಕಾರ ಈ ವೈಫಲ್ಯಕ್ಕೆ ಉತ್ತರ ನೀಡಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ದಿನಗಳ ಬ್ಯಾಂಕ್ ಮುಷ್ಕರ ವಾಪಸ್: ವಾರಕ್ಕೆ 5 ದಿನ ಕೆಲಸದ ಪರಿಶೀಲನೆಗೆ ಸಮಿತಿ

ಸಾರ್ವಜನಿಕ ವಲಯದ ಬ್ಯಾಂಕ್‌ ನೌಕರರ ಒಕ್ಕೂಟವು (ಯುಎಫ್‌ಬಿಯು) ಸೋಮವಾರದಿಂದ ಹಮ್ಮಿಕೊಂಡಿದ್ದ ಮೂರು...

2017ರಲ್ಲಿ ಚುನಾವಣಾ ಆಯೋಗವನ್ನು ನಂಬಿದ್ದೆವು, ಆದರೆ 2022ರಲ್ಲಿ ಎಸ್‌ಪಿ ಮತಗಳನ್ನು ಇಸಿ ಅಳಿಸಿದೆ: ಅಖಿಲೇಶ್ ಆರೋಪ

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲಿಗರ...

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿಗೆ ‘ಅಲ್ಲಾಹ್ ಮೇಲಕ್ಕೆ ಟಿಕೆಟ್ ಕಾಯ್ದಿರಿಸಲಿ’ – ಹುಮಾಯೂನ್ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳದ ರೇಜಿನಗರ ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಾಗ್ದಾಳಿಗಳು ತೀವ್ರ ಸ್ವರೂಪ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...