ಅದಾನಿ ಪೋರ್ಟ್ಸ್‌ಗೆ ಗೋಪಾಲ್‌ಪುರ ಬಂದರು ಮಾರಾಟ; ಎಸ್‌ಪಿ ಗ್ರೂಪ್‌ ಘೋಷಣೆ

Date:

ಒಡಿಶಾದಲ್ಲಿ ನಿರ್ಮಾಣ ಹಂತದಲ್ಲಿರವು ಬ್ರೌನ್‌ಫೀಲ್ಡ್ ಗೋಪಾಲ್‌ಪುರ ಬಂದರನ್ನು ಅದಾನಿ ಪೋರ್ಟ್ಸ್ ಮತ್ತು ಎಸ್‌ಇ‍ಝಡ್ ಲಿಮಿಟೆಡ್‌ಗೆ 3,350 ಕೋಟಿ ರೂ.ಗಳಿಗೆ ಮಾರಾಟ ಮಾಡುವುದಾಗಿ ಶಾಪೂರ್ಜಿ ಪಲ್ಲೊಂಜಿ (ಎಸ್‌ಪಿ) ಗ್ರೂಪ್ ಘೋಷಿಸಿದೆ.

ಎಸ್‌ಪಿ ಗ್ರೂಪ್‌ – ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್ ಹಾಗೂ ಇಂಧನ ಕಂಪನಿಗಳ ಸಮೂಹವಾಗಿದ್ದು, 2017ರಲ್ಲಿ ಗೋಪಾಲ್‌ಪುರ ಬಂದರನ್ನು ಸ್ವಾಧೀನಪಡಿಸಿಕೊಂಡಿತ್ತು. ಸದ್ಯ, ಈ ಬಂದರು ವರ್ಷಕ್ಕೆ 20 ಮಿಲಿಯನ್ (2 ಕೋಟಿ) ಟನ್‌ಗಳಷ್ಟು ಸರಕನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಬಂದರಿನಲ್ಲಿ ಗ್ರೀನ್‌ಫೀಲ್ಡ್ ಎಲ್‌ಎನ್‌ಜಿ ರಿಗ್ಯಾಸಿಫಿಕೇಶನ್ ಟರ್ಮಿನಲ್‌ ನಿರ್ಮಾಣಕ್ಕಾಗಿ ಪೆಟ್ರೋನೆಟ್ ಎಲ್‌ಎನ್‌ಜಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ, ಬಂದರಿಗೆ ಅಗತ್ಯವಿರುವ ಹಣವನ್ನು ಒದಗಿಸಲು ಗೋಪಾಲ್‌ಪುರ ಬಂದರನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ತನ್ನ ಹೇಳಿಕೆಯನ್ನು ಎಸ್‌ಪಿ ಗ್ರೂಪ್ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗೋಪಾಲ್‌ಪುರ ಬಂದರಿನ ಮಾರಾಟವು ಕಳೆದ ಕೆಲವು ತಿಂಗಳುಗಳಲ್ಲಿ ಎಸ್‌ಪಿ ಗ್ರೂಪ್‌ ಮಾರಾಟ ಮಾಡುತ್ತಿರುವ 2ನೇ ಬಂದರಾಗಿದೆ. ಈ ಗ್ರೂಪ್‌, ಇದಕ್ಕೂ ಮೊದಲು ಮಹಾರಾಷ್ಟ್ರದ ಧರ್ಮತಾರ್ ಬಂದರನ್ನು ಜೆಎಸ್‌ಡಬ್ಲ್ಯೂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ 710 ಕೋಟಿ ರೂ,ಗಳಿಗೆ ಮಾರಾಟ ಮಾಡಿತ್ತು.

2015ರಲ್ಲಿ ಧರ್ಮತಾರ್ ಬಂದರನ್ನು ಎಸ್‌ಪಿ ಗ್ರೂಪ್‌ ಖರೀದಿಸಿತ್ತು. ಆಗ ಬಂದರಿನ ಸಾಮರ್ಥ್ಯ ವರ್ಷಕ್ಕೆ 10 ಲಕ್ಷ ಟನ್‌ನಷ್ಟು ಸಕರು ನಿರ್ವಹಿಸುವ ಸಾಮರ್ಥವನ್ನು ಹೊಂದಿತ್ತು. ಆರ್ಥಿಕ ವರ್ಷ 2024ರ ವೇಳೆ, ಅದರ ಸಾಮರ್ಥ್ಯವನ್ನು 50 ಲಕ್ಷ ಟನ್‌ಗೆ ವೃದ್ಧಿಸಿತ್ತು. ನಂತರ, ಅದನ್ನು ಗ್ರೂಪ್ ಮಾರಾಟ ಮಾಡಿತು.

ಎಸ್‌ಪಿ ಗ್ರೂಪ್ ಸುಮಾರು 20,000 ಕೋಟಿ ಸಾಲವನ್ನು ಹೊಂದಿದ್ದು, ಸಾಲದ ಹೊರೆಯನ್ನು ಕಡಿಮೆ ಮಾಡಲು ಬಂದರನ್ನು ಮಾರಾಟ ಮಾಡುತ್ತಿರುವುದಾಗಿ ಎಸ್‌ಪಿ ಗ್ರೂಪ್‌ನ ವಕ್ತಾರರು ಹೇಳಿರುವುದಾಗಿ ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣದಲ್ಲಿ ಬಿಜೆಪಿ ವಿರೋಧಿ ಅಲೆ | ಬಿಜೆಪಿಗೆಷ್ಟು ನಷ್ಟ – ಕಾಂಗ್ರೆಸ್‌ಗೆ ಎಷ್ಟು ಲಾಭ?

ಹರಿಯಾಣದ ಎಲ್ಲ 10 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಮತದಾನ ಮುಗಿದಿದೆ....

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ಅವಘಡ: ಇಬ್ಬರು ಪೊಲೀಸರು ಸೇರಿ ಐವರು ಅಧಿಕಾರಿಗಳ ಅಮಾನತು

ಸುಮಾರು 25ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ರಾಜ್‌ಕೋಟ್ ಗೇಮ್‌ ಝೋನ್‌...

ರೆಮಲ್ ಚಂಡಮಾರುತಕ್ಕೆ ಕೋಲ್ಕತ್ತಾದಲ್ಲಿ ಓರ್ವ ಬಲಿ, ಬಂಗಾಳದಲ್ಲಿ ಭಾರೀ ಹಾನಿ

ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಭಾರೀ ಹಾನಿ ಉಂಟು ಮಾಡಿದ್ದು, ಚಂಡಮಾರುತದಿಂದ...

ತೆಲಂಗಾಣ | ಮಳೆ ಅನಾಹುತಕ್ಕೆ ಭಾನುವಾರ 12 ಮಂದಿ ಬಲಿ

ದಕ್ಷಿಣ ಭಾರತದ ನಾನಾ ಭಾಗಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಹೆಚ್ಚಾಗಿದೆ. ಭಾನುವಾರವೂ...