ʼಕೃಷ್ಣʼ ಹೆಸರೇಕೆ? ಪಠ್ಯಪುಸ್ತಕಗಳ ಕೇಸರೀಕರಣ ಆರೋಪಕ್ಕೆ NCERT ಉತ್ತರ

Date:

ಎನ್‌ಸಿಇಆರ್‌ಟಿ (NCERT) ಮತ್ತು ಸಿಬಿಎಸ್‌ಇ (CBSE) ಪಠ್ಯಪುಸ್ತಕಗಳಲ್ಲಿನ ವಿಷಯಗಳ ಕುರಿತಾಗಿ ಇತ್ತೀಚೆಗೆ ವ್ಯಾಪಕ ಚರ್ಚೆ ಮತ್ತು ಆರೋಪಗಳು ಕೇಳಿಬಂದಿದ್ದವು. ಪಠ್ಯಪುಸ್ತಕಗಳ ಮೂಲಕ ಸೈದ್ಧಾಂತಿಕ ಹೇರಿಕೆ ಮತ್ತು ಕೇಸರೀಕರಣಕ್ಕೆ ಯತ್ನಿಸಲಾಗುತ್ತಿದೆ ಎಂದು ಮಾಜಿ ಸಚಿವರು ಸೇರಿದಂತೆ ಹಲವು ವಲಯಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ NCERT ಈ ಪಠ್ಯದ ಆಯ್ಕೆ ಮತ್ತು ನಾಮಕರಣದ ಕುರಿತಾದ ಎಲ್ಲಾ ಅನುಮಾನಗಳಿಗೆ ಅಧಿಕೃತ ಸ್ಪಷ್ಟನೆ ನೀಡಿದೆ.

- Advertisement -

6ನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿದ್ದರ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ NCERT, “ಈ ಹೆಸರು ಯಾವುದೇ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಭಾರತದ ನದಿಗಳನ್ನು ಗೌರವಿಸುವ ಉದ್ದೇಶದಿಂದ ದೇಶದ ಪ್ರಮುಖ ನದಿಗಳ ಹೆಸರನ್ನು ವಿವಿಧ ಪಠ್ಯಗಳಿಗೆ ಇಡಲಾಗಿದೆ. ಹಿಂದಿಗೆ ‘ಗಂಗಾ’, ಇಂಗ್ಲಿಷ್‌ಗೆ ‘ಕಾವೇರಿ’, ಉರ್ದುವಿಗೆ ‘ಜಮುನಾ’ ಎಂದು ಹೆಸರಿಸಿರುವಂತೆಯೇ, ಕನ್ನಡ ಪಠ್ಯಕ್ಕೆ ಕರ್ನಾಟಕದ ಜೀವನಾಡಿಯಾದ ‘ಕೃಷ್ಣ’ ನದಿಯ ಗೌರವಾರ್ಥವಾಗಿ ಆ ಹೆಸರು ಇಡಲಾಗಿದೆ” ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಪಠ್ಯದಲ್ಲಿ ನಿರ್ದಿಷ್ಟ ಆಹಾರ ಪದ್ಧತಿಯನ್ನು ಹೇರಲಾಗುತ್ತಿದೆ ಎಂಬ ಆರೋಪವನ್ನು NCERT ತಳ್ಳಿಹಾಕಿದೆ. “6ನೇ ತರಗತಿಯ ‘Health is Wealth’ ಅಧ್ಯಾಯವು ಸಂಪೂರ್ಣವಾಗಿ ‘ಸಮತೋಲನ ಆಹಾರ’ (Balanced Diet) ದ ಪರಿಕಲ್ಪನೆಯ ಮೇಲೆ ಸಿದ್ಧವಾಗಿದೆ. ಇದರಲ್ಲಿ ಹಾಲು, ಸೊಪ್ಪು, ತರಕಾರಿ ಮತ್ತು ಹಣ್ಣುಗಳಂತಹ ಪೌಷ್ಟಿಕಾಂಶಯುಕ್ತ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಪಠ್ಯದ 63ನೇ ಪುಟದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಒಳಗೊಂಡಿರುವ ಚಿತ್ರಗಳಿವೆ. ನಾವು ಯಾವುದೇ ಒಂದು ಆಹಾರ ಪದ್ಧತಿಯನ್ನು ಸಮರ್ಥಿಸಿಲ್ಲ ಅಥವಾ ಇನ್ನೊಂದನ್ನು ವಿರೋಧಿಸಿಲ್ಲ. ವಿದ್ಯಾರ್ಥಿಗಳಲ್ಲಿ ಆರೋಗ್ಯದ ಅರಿವು ಮೂಡಿಸುವುದಷ್ಟೇ ನಮ್ಮ ಉದ್ದೇಶ” ಎಂದಿದೆ.

ಮಂಡಳಿಯು ತನ್ನ ಪ್ರಕಟಣೆಯಲ್ಲಿ, ಹೊಸ ಪಠ್ಯಪುಸ್ತಕಗಳು ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಮತ್ತು ಎನ್‌ಸಿಎಫ್-ಎಸ್‌ಇ (NCF-SE 2023) ಮಾರ್ಗಸೂಚಿಗಳಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಹೇಳಿದೆ. ಸ್ಥಳೀಯ ಸಂಸ್ಕೃತಿ ಮತ್ತು ಜ್ಞಾನಕ್ಕೆ ಒತ್ತು ನೀಡುವುದೇ ಈ ಬದಲಾವಣೆಗಳ ಮುಖ್ಯ ಉದ್ದೇಶವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ತಾವು ಬದ್ಧರಾಗಿದ್ದು, ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕರಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುವುದಾಗಿ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಚನ್ನರಾಯಪಟ್ಟಣ ಚಳವಳಿಯಿಂದ ಬಿಡದಿ ರೈತರು ಕಲಿಯಬೇಕಾದ ಪಾಠಗಳೇನು?

ಎನ್‍ಸಿಇಆರ್‍ಟಿ ಕನ್ನಡ ಪಠ್ಯ ಪುಸ್ತಕದಲ್ಲಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ ವೈವಿಧ್ಯತೆ ಪ್ರತಿಬಿಂಬಿಸುವ ಪಾಠಗಳಿಲ್ಲ. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು, ಹಳೆಯ ಮೈಸೂರು ಭಾಗದ ಜಾನಪದ, ಸಾಹಿತ್ಯ, ಬದುಕು ಕಾಣೆಯಾಗಿದೆ. 6ನೇ ತರಗತಿ ಮಗುವಿನ ಕುತೂಹಲ, ವಯೋಮಾನಕ್ಕೆ ತಕ್ಕ ಚಟುವಟಿಕೆ, ಪಠ್ಯ, ಚಿತ್ರ, ಕಥೆಗಳಿಲ್ಲ. ನಿರೂಪಣೆ ನೀರಸವಾಗಿದ್ದು ಉಪದೇಶದ ಧಾಟಿಯಿದೆ. ಕರ್ನಾಟಕದ ಅಸ್ಮಿತೆ ಅಡಗಿರುವುದು ಪಂಪ, ಕುವೆಂಪು, ಶಿವರಾಮ ಕಾರಂತ, ಬಸವಣ್ಣ ಅವರ ವೈಚಾರಿಕತೆಯಲ್ಲಿ. ಆದರೆ ಎನ್‍ಸಿಇಆರ್‍ಟಿ 6ನೇ ತರಗತಿ ಪಠ್ಯ ಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಸಿದೆ. ಸ್ಥಳೀಯ ವೈಚಾರಿಕತೆ, ಸಾಂಸ್ಕೃತಿಕತೆಯನ್ನು ಬದಿಗೊತ್ತಿ, ದೇವರು-ಧರ್ಮದ ರಾಜಕೀಯಕ್ಕೆ ಎನ್‍ಸಿಇಆರ್ಟಿ ಮುಂದಾಗಿರುವುದು ಖಂಡನೀಯ.   ಪುಸ್ತಕದ ಹೆಸರು ‘ಕೃಷ್ಣ’ ಎಂದು ಏಕೆ ಎಂದು ಎನ್‍ಸಿಇಆರ್‍ಟಿ ಲಿಖಿತ ಉತ್ತರ ನೀಡಬೇಕು. ಕರ್ನಾಟಕದಲ್ಲಿ ಪಠ್ಯ ರಚನೆ ಹಾಗೂ ಎಲ್ಲಾ ಶೈಕ್ಷಣಿಕ ಕೆಲಸಗಳಿಗೆ ಶೈಕ್ಷಣಿಕ ಪ್ರಾಧಿಕಾರವಾಗಿರುವ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯನ್ನು ಈ ಕಾರ್ಯದಲ್ಲಿ ಏಕೆ ತೊಡಗಿಸಿಕೊಂಡಿಲ್ಲವೆಂಬುದಕ್ಕೆ ಕಾರಣ ನೀಡಬೇಕು. ʼಸಮತೋಲನ ಆಹಾರ’ ಪಾಠದಲ್ಲಿ ಮೊಟ್ಟೆ, ಮೀನು, ಮಾಂಸದ ಚಿತ್ರ-ಉಲ್ಲೇಖ ಸೇರಿಸಿ ಮರುಮುದ್ರಣ ಮಾಡಬೇಕು. ಪುಸ್ತಕದ ಹೆಸರು ಬದಲಿಸಿ ಕನ್ನಡದ ಅಸ್ಮಿತೆಗೆ ಸರಿ ಹೊಂದುವ ಹೆಸರಿಡಬೇಕು ಎಂದು ನಿನ್ನೆ ಶಿಕ್ಷಣ ತಜ್ಞ ಪಿ ವಿ ನಿರಂಜನಾರಾಧ್ಯ ಆಗ್ರಹಿಸಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...