ಮಹಾರಾಷ್ಟ್ರದಲ್ಲಿ ಕಠಿಣ ಮತಾಂತರ ವಿರೋಧಿ ಕಾಯಿದೆ; ಚರ್ಚ್‌ಗಳಲ್ಲಿ ಪ್ರಾರ್ಥನೆಗೂ ʼಸ್ವಯಂ ಘೋಷಣೆʼ ಕಡ್ಡಾಯ

Date:

ಬಲವಂತದ ಮತಾಂತರಕ್ಕೆ ಕಠಿಣ ಕಾನೂನು ಕ್ರಮ ವಿಧಿಸುವ ಮಹಾರಾಷ್ಟ್ರದ ಮತಾಂತರ ನಿಷೇಧ ಕಾಯ್ದೆ ಆಗಸ್ಟ್ 28ರಿಂದ ಜಾರಿಗೆ ಬರಲಿದ್ದು, ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪ್ರದೇಶದ ಚರ್ಚ್‌ಗಳು ಹಾಗೂ ಪ್ರಾರ್ಥನಾ ಸಭೆಗಳಲ್ಲಿ ಹೊಸ ರೀತಿಯ ಮುನ್ನೆಚ್ಚರಿಕಾ ಕ್ರಮ ಆರಂಭವಾಗಿದೆ.

- Advertisement -

ಮುಂಬೈ, ಮೀರಾ-ಭಾಯಂದರ್, ವಸಾಯಿ-ವಿರಾರ್, ಪಾಲ್ಘರ್ ಹಾಗೂ ಥಾಣೆ ಪ್ರದೇಶಗಳ ಹಲವು ಪ್ರಾರ್ಥನಾ ಕೇಂದ್ರಗಳಲ್ಲಿ ಸಭೆಗೆ ಬರುವವರಿಂದ ‘ಸ್ವಯಂ ಘೋಷಣೆ’ ಪತ್ರ ಭರ್ತಿ ಮಾಡಿಸಿಕೊಳ್ಳಲಾಗುತ್ತಿದೆ. ತಾವು ಯಾವುದೇ ಒತ್ತಡ, ಆಮಿಷ, ಪ್ರಲೋಭನೆ, ಬೆದರಿಕೆ ಅಥವಾ ಬಲವಂತವಿಲ್ಲದೆ ಸ್ವಯಂ ಇಚ್ಛೆಯಿಂದ ಪ್ರಾರ್ಥನಾ ಸಭೆಗೆ ಹಾಜರಾಗುತ್ತಿರುವುದಾಗಿ ಘೋಷಿಸುವ ಈ ಪತ್ರಕ್ಕೆ ಪಾಸ್‌ಪೋರ್ಟ್‌ ಗಾತ್ರದ ಫೋಟೊ ಹಾಗೂ ಆಧಾರ್ ಅಥವಾ ಪ್ಯಾನ್‌ ಸಂಖ್ಯೆಯನ್ನೂ ಕೇಳಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕಳೆದ ಕೆಲವು ತಿಂಗಳಲ್ಲಿ ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸಿದ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚರ್ಚ್‌ ಆಡಳಿತ ಮಂಡಳಿಗಳು ಹೇಳಿವೆ. ಏಪ್ರಿಲ್‌ನಿಂದ ಜುಲೈವರೆಗೆ ನಡೆದ ಐದು ಘಟನೆಗಳಿಗೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಎಫ್‌ಐಆರ್‌ಗಳು ದಾಖಲಾಗಿದ್ದು, ಈ ಪೈಕಿ 7 ಪ್ರಕರಣಗಳು ಪ್ರಾರ್ಥನಾ ಸಭೆ ಆಯೋಜಕರು ಮತ್ತು ಭಾಗವಹಿಸಿದವರ ವಿರುದ್ಧ ದಾಖಲಾಗಿವೆ. ಎರಡು ಎಫ್‌ಐಆರ್‌ಗಳು ಬಜರಂಗದಳದ ಸದಸ್ಯರ ವಿರುದ್ಧ ದಾಖಲಾಗಿವೆ.

ವಸಾಯಿ ಪೂರ್ವದಲ್ಲಿ ಏಪ್ರಿಲ್ 12ರಂದು ನಡೆದ ಪ್ರಾರ್ಥನಾ ಸಭೆಗೆ ಬಜರಂಗದಳದ ಸದಸ್ಯರು ಸೇರಿದಂತೆ ಕೆಲವರು ಪ್ರವೇಶಿಸಿ ಮತಾಂತರದ ಆರೋಪ ಮಾಡಿದ್ದ ಘಟನೆ ಬಳಿಕ ಅಚೋಳೆ ಪೊಲೀಸ್ ಠಾಣೆಯಲ್ಲಿ ಐದು ಎಫ್‌ಐಆರ್‌ಗಳು ದಾಖಲಾಗಿದ್ದವು. ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಸ್ವಯಂ ಘೋಷಣೆ ಪತ್ರವನ್ನು ‘ವಿಮೆ’ಯಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಚರ್ಚ್‌ ಆಯೋಜಕರು ಹೇಳಿದ್ದಾರೆ.

ವಿರಾರ್‌ನ ನ್ಯೂ ಹೋಪ್ ಚರ್ಚ್‌ನ ಪಾಸ್ಟರ್ ಸ್ಟೀವನ್ ರೊಜಾರಿಯೊ ಅವರು ಇತ್ತೀಚೆಗೆ ಭಾನುವಾರದ ಪ್ರಾರ್ಥನಾ ಸಭೆಯಲ್ಲಿ ಭಕ್ತರಿಗೆ ಈ ಪತ್ರಗಳನ್ನು ವಿತರಿಸಿದ್ದಾರೆ. ಭವಿಷ್ಯದಲ್ಲಿ ಯಾರಾದರೂ ಬಲವಂತವಾಗಿ ಪ್ರಾರ್ಥನಾ ಸಭೆಗೆ ಕರೆತರಲಾಗಿದೆ ಎಂದು ಆರೋಪಿಸಿದರೆ, ಸಭೆಗೆ ಬಂದವರು ಸ್ವಯಂಪ್ರೇರಣೆಯಿಂದ ಬಂದಿದ್ದಾರೆ ಎಂಬುದಕ್ಕೆ ಈ ಪತ್ರವನ್ನು ಸಾಕ್ಷಿಯಾಗಿ ತೋರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಕ್ರಿಶ್ಚಿಯನ್ ಡೆವಲಪ್‌ಮೆಂಟ್ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷ ದೇವದನ್ ತ್ರಿಭುವನ್, ಜನರನ್ನು ಪ್ರಶ್ನಿಸುವುದು, ಬೆದರಿಸುವುದು ಹಾಗೂ ಪ್ರಾರ್ಥನಾ ಸಭೆಗಳಿಗೆ ಅಡ್ಡಿಪಡಿಸುವ ಘಟನೆಗಳ ಹಿನ್ನೆಲೆಯಲ್ಲಿ ಈ ಘೋಷಣೆ ಪತ್ರಗಳನ್ನು ಭದ್ರತಾ ಕ್ರಮವಾಗಿ ಬಳಸಲಾಗುತ್ತಿದೆ ಎಂದಿದ್ದಾರೆ. ಇವು ಸರ್ಕಾರದ ದಾಖಲೆಗಳಲ್ಲ, ವ್ಯಕ್ತಿಗಳು ಸಹಿ ಮಾಡಿ ಪಾಸ್ಟರ್ ಬಳಿ ಇಟ್ಟುಕೊಳ್ಳುವ ಸರಳ ಘೋಷಣೆ ಪತ್ರಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಬಜರಂಗದಳವು ಕಾನೂನು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದೆ. ಪ್ರಾರ್ಥನಾ ಸಭೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ತಿಳಿಸುತ್ತೇವೆ ಎಂದು ಸಂಘಟನೆಯ ಕೊಂಕಣ ವಿಭಾಗದ ಸಹ ಸಂಚಾಲಕ ಗೌತಮ್ ರವೇರಿಯಾ ಹೇಳಿದ್ದಾರೆ. ಕೆಲವು ಪ್ರಾರ್ಥನಾ ಗುಂಪುಗಳು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ನೆರವು ನೀಡಿ ಬಳಿಕ ಮತಾಂತರಕ್ಕೆ ಪ್ರೋತ್ಸಾಹಿಸುತ್ತವೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಆದರೆ, ಮೀರಾ-ಭಾಯಂದರ್-ವಸಾಯಿ-ವಿರಾರ್ ಪೊಲೀಸ್ ಆಯುಕ್ತ ನಿಕೇತ್ ಕೌಶಿಕ್, ಕಳೆದ ಕೆಲವು ತಿಂಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದ ಒಂದು ಸ್ಥಳೀಯ ಘಟನೆ ನಡೆದಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದನ್ನು ನಿರಂತರ ನಡೆಯುತ್ತಿರುವ ಬೆಳವಣಿಗೆ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಾರ್ಥನಾ ಸಭೆಗಳಿಗೆ ಬರುವವರಿಂದ ಇಂತಹ ಒಪ್ಪಿಗೆ ಪತ್ರಗಳನ್ನು ಪಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ಲ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದು 25 ವರ್ಷದ ಯುವಕ ಸಾವು

ಆಗಸ್ಟ್ 28ರಿಂದ ಜಾರಿಗೆ ಬರಲಿರುವ ಹೊಸ ಕಾನೂನು ಬಲವಂತ, ವಂಚನೆ, ಬೆದರಿಕೆ, ತಪ್ಪು ಮಾಹಿತಿ, ಆಮಿಷ ಅಥವಾ ಅನಗತ್ಯ ಪ್ರಭಾವದ ಮೂಲಕ ನಡೆಯುವ ಧಾರ್ಮಿಕ ಮತಾಂತರವನ್ನು ಅಪರಾಧವೆಂದು ಪರಿಗಣಿಸುತ್ತದೆ. ಮದುವೆ ಅಥವಾ ಮದುವೆಯ ಭರವಸೆಗೆ ಸಂಬಂಧಿಸಿದ ಮತಾಂತರಗಳಿಗೂ ಕಾನೂನು ಅನ್ವಯವಾಗಲಿದೆ. ಅಪ್ರಾಪ್ತರು, ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡದವರು ಅಥವಾ ಮಾನಸಿಕ ಅಸ್ವಸ್ಥರನ್ನು ಒಳಗೊಂಡ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಕಾನೂನು ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಭೆಗಳ ಮೇಲೆ ಅಡ್ಡಿಪಡಿಸುವ ಘಟನೆಗಳು ಹೆಚ್ಚಾಗಬಹುದು ಎಂಬ ಆತಂಕ ಚರ್ಚ್‌ ಮುಖಂಡರಲ್ಲಿ ವ್ಯಕ್ತವಾಗಿದೆ. ಬಾಂಬೆ ಆರ್ಚ್‌ಡಯಾಸಿಸ್‌ನ ವಕ್ತಾರ ಫಾದರ್ ನಿಗೆಲ್ ಬ್ಯಾರೆಟ್, ಪ್ರಸ್ತುತ ಪರಿಸ್ಥಿತಿಯಲ್ಲಿ ಜನರು ಸ್ವಯಂಪ್ರೇರಣೆಯಿಂದ ಪ್ರಾರ್ಥನೆಗೆ ಬರುತ್ತಿದ್ದಾರೆ ಎಂಬುದನ್ನು ದಾಖಲಿಸುವುದು ಸೂಕ್ತ ಮುನ್ನೆಚ್ಚರಿಕಾ ಕ್ರಮವಾಗಿದೆ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...