ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ಕನಿಷ್ಠ ಏಳರಿಂದ ಎಂಟು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದಾನೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಹಲ್ಲೆ ಸಂಬಂಧ ಸ್ವಾತಿ ಮಲಿವಾಲ್ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಸ್ವಾತಿ ದೂರಿನಲ್ಲಿ ವಿವರಿಸಿದ್ದಾರೆ.
“ಕೇಜ್ರಿವಾಲ್ ಅವರ ವೈಯಕ್ತಿಕ ಸಹಾಯಕ ಬಿಭವ್ ಕುಮಾರ್ ನನಗೆ 7-8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನಾನು ಎಷ್ಟೇ ಮನವಿ ಮಾಡಿಕೊಂಡರೂ ಪದೇ ಪದೇ ನನ್ನ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದಿದ್ದಾನೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
BIG BREAKING: 🔥🔥🔥
Footage of CM Kejriwal’s residence is released.
Drama by #SwatiMaliwal is exposed.
She can be heard saying “AAJ TAMASHA HOGA”
Also she can be seen seating comfortably on Sofa and threatening the Security personnels inside CM’s residence.
Security was… pic.twitter.com/YZodHPoZ5N
— Mahua Moitra Fans (@MahuaMoitraFans) May 17, 2024
ಘಟನೆಯು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ನಡುವೆಯೇ ಸಿಎಂ ನಿವಾಸದಲ್ಲಿ ಭದ್ರತಾ ಸಿಬ್ಬಂದಿ, ಬಿಭವ್ ಕುಮಾರ್ ಹಾಗೂ ಸ್ವಾತಿ ಮಲಿವಾಲ್ ನಡುವೆ ನಡೆದಿದ್ದ ತೀವ್ರ ವಾಗ್ವಾದವನ್ನು ತೋರಿಸುವ ಹೊಸ ವೀಡಿಯೋವೊಂದು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಇದನ್ನು ಐಎಎನ್‌ಎಸ್ ಸುದ್ದಿಸಂಸ್ಥೆ ಕೂಡ ಪ್ರಕಟಿಸಿದ್ದು, ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದೆ.

ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿರುವ 52 ಸೆಕೆಂಡ್‌ನ ವಿಡಿಯೋ ಕ್ಲಿಪ್‌ನಲ್ಲಿ ಭದ್ರತಾ ಸಿಬ್ಬಂದಿಗಳು ಮಲಿವಾಲ್ ಅವರನ್ನು ಆವರಣದಿಂದ ತೊರೆಯುವಂತೆ ಮನವಿ ಮಾಡುತ್ತಿರುವುದು ಕಾಣಬಹುದು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಲಿವಾಲ್, “ತೇರಿ ಭಿ ನೌಕ್ರಿ ಖಾವೂಂಗಿ… ಯೇ ಗಾಂಜಾ ಸಾಲಾ(ನಿನ್ನ ಕೆಲಸ ಸಹ ಹೋಗಬಹುದು, ಎ ಗಾಂಜಾ ಸಾಲಾ)” ಎಂದು ಹೇಳುವುದನ್ನು ಕೇಳಬಹುದು.
I didnot tweet anything about this matter because i wanted to know the truth but this video has opened the eyes of everyone.
No way does #SwatiMaliwal look victim here, she is the one instigating, abusing and threatening. Her voice tone proves same. pic.twitter.com/uaafZJSM9y
— Mehraj Malik AAP (@MehrajMalikAAP) May 17, 2024
ಈ ವಿಡಿಯೋ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಬಂದ ಸಂಸದೆಯನ್ನು ಭದ್ರತಾ ಸಿಬ್ಬಂದಿ ತಡೆಯುತ್ತಾರೆ. ಹೀಗಾಗಿ ಅಲ್ಲಿಗೆ ಬಂದ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್, “ನೀವು ಈಗ ಭೇಟಿ ಮಾಡಲು ಸಾಧ್ಯವಿಲ್ಲ. ನೀವು ಇಲ್ಲಿಂದ ಹೊರಡಿ” ಎಂದು ಸ್ವಾತಿ ಮಲಿವಾಲ್ ಗೆ ಸೂಚಿಸುತ್ತಾರೆ.
Screengrabs from the viral video purportedly showing AAP Rajya Sabha MP Swati Maliwal at the residence of Delhi CM Arvind Kejriwal on 13th May. We cannot confirm the authenticity of the video.
Delhi Police say that the video has come to their knowledge but it is yet to be… pic.twitter.com/iOiycVT4jD
— ANI (@ANI) May 17, 2024
“ಈ ವೇಳೆ, ಇಲ್ಲ ನಾನು ಇಲ್ಲಿಯೇ ಇರುತ್ತೇನೆ. ನೀವು ನನ್ನ ಮೇಲೆ ದಬ್ಬಾಳಿಕೆ ನಡೆಸಿದರೆ, ನನ್ನನ್ನು ಮುಟ್ಟಿದರೆ ನಾನು ಪೊಲೀಸರಿಗೆ ಕರೆ ಮಾಡಬೇಕಾಗುತ್ತದೆ” ಎಂದು ಸ್ವಾತಿ ಹೇಳುತ್ತಾರೆ. “ಮುಂದೆ ನಿಮ್ಮ ಕೆಲಸ ಸಹ ಹೋಗಬಹುದು ಎಂದು ಎಚ್ಚರಿಸುತ್ತಾರೆ.
Bhibhav Kumar if you are reading this then connect with us urgently. Do not let the system use you as a Bali Ka Bakra. Break your silence, Speak the truth and tell the world about the tandav Swati Maliwal did inside the CM House. Its time to expose her.#Justice4SwatiMaliwal XXX pic.twitter.com/vL1RwqbTWb
— NCMIndia Council For Men Affairs (@NCMIndiaa) May 16, 2024
ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಾತಿ ಅವರು, ಬಿಭವ್‌ಗೆ ‘ಗಾಂಜಾ ಸಾಲಾ’ ಎಂದು ಸ್ವಾತಿ ಮಲಿವಾಲ್ ಕರೆದಿರುವಲ್ಲಿಗೆ ವಿಡಿಯೋ ಕಟ್ ಆಗುತ್ತದೆ. ಇದಾದ ನಂತರ ಹಲ್ಲೆ ನಡೆದಿರಬಹುದು ಎಂದು ವರದಿಯಾಗಿದೆ.
“ಬಿಭವ್ ಎಂಟು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ನನ್ನ ಎದೆಗೆ ಕಾಲಿನಿಂದ ಒದ್ದಿದ್ದಾರೆ” ಎಂದು ಆರೋಪಿಸಿದ್ದು ಈ ಸಂಬಂಧ ಬಿಭವ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ವಿಚಾರಣೆ ಹಾಜರಾಗುವಂತೆ ಮಹಿಳಾ ಆಯೋಗ ಕೂಡ ನೋಟಿಸ್ ನೀಡಿತ್ತು. ಆದರೆ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ.
Analysing the #SwatiMaliwal case through this video:
If this video was recorded before the alleged assault, there’s no way she could have been assaulted the way she has written in the FIR after this, in presence of so many security staff including a female staff.
If this video… pic.twitter.com/RNnmzYkC04
— Deepika Narayan Bhardwaj (@DeepikaBhardwaj) May 17, 2024

A shameful report and a carefully manipulated video. Sanjay Singh, the party spokesperson has already admitted that she was assaulted. The medical examination results confirm the same.