ಭವಿಷ್ಯದಲ್ಲಿ ಬಡತನವೇ ಇರಲ್ಲ ಎಂದ ಟೆಸ್ಲಾ ಸಿಇಒ; AIನಿಂದಾಗುವ ನಿರುದ್ಯೋಗ ಬಿಕ್ಕಟ್ಟಿಗೆ ಮಸ್ಕ್‌ ಕೊಟ್ಟ ಮಾಸ್ಟರ್‌ ಪ್ಲ್ಯಾನ್‌ ಏನು ಗೊತ್ತೇ?

Date:

ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಜಾಗತಿಕವಾಗಿ ಈಗಾಗಲೇ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಉದ್ಯೋಗ ನಷ್ಟ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕದ ನಡುವೆ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ‘ಸಾರ್ವತ್ರಿಕ ಅಧಿಕ ಆದಾಯ’ (Universal High Income) ನೀಡುವ ವಿಶಿಷ್ಟ ಪರಿಹಾರವೊಂದನ್ನು ಕಂಡುಕೊಟ್ಟಿದ್ದಾರೆ. ಭವಿಷ್ಯದಲ್ಲಿ ಜಗತ್ತಿನಲ್ಲಿ ಬಡತನವೇ ಇರಲ್ಲ ಎಂದಿದ್ದಾರೆ. ಹಲವರು ಇದನ್ನು ನಿರುದ್ಯೋಗ ಬಿಕ್ಕಟ್ಟಿಗೆ ಮಾಸ್ಟರ್‌ ಪ್ಲ್ಯಾನ್‌ ಎಂದೇ ಬಣ್ಣಿಸುತ್ತಿದ್ದಾರೆ.

- Advertisement -

ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ‘X’ ನಲ್ಲಿ ಹೀಗೊಂದು ಪೋಸ್ಟ್ ಮಾಡಿದ್ದು, AI ಮತ್ತು ಆಟೊಮೇಷನ್ ಕಾರಣದಿಂದ ಉಂಟಾಗುವ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಫೆಡರಲ್ ಸರ್ಕಾರಗಳು ಜನರಿಗೆ ನೇರವಾಗಿ ಚೆಕ್ ಮೂಲಕ ಹಣ ಪಾವತಿಸುವ ‘ಸಾರ್ವತ್ರಿಕ ಅಧಿಕ ಆದಾಯ’ ಯೋಜನೆ ಜಾರಿಗೊಳಿಸಬೇಕು. ನಿರುದ್ಯೋಗಕ್ಕೆ ಇದು ಅತ್ಯುತ್ತಮ ಮಾರ್ಗ ಎಂದು ವಾದಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

ಸಾಮಾನ್ಯವಾಗಿ ಸರ್ಕಾರ ಹಣವನ್ನು ಹೆಚ್ಚು ಹಂಚಿದರೆ ಹಣದುಬ್ಬರ (Inflation) ಹೆಚ್ಚಾಗುತ್ತದೆ ಎಂಬ ವಾದವಿದೆ. ಆದರೆ, ಮಸ್ಕ್ ಇದನ್ನು ನಿರಾಕರಿಸಿದ್ದಾರೆ. “AI ಮತ್ತು ರೊಬೊಟಿಕ್ಸ್ ವ್ಯವಸ್ಥೆಯು ಮಾರುಕಟ್ಟೆಯಲ್ಲಿ ಹಣದ ಪೂರೈಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಈ ಯೋಜನೆಯಿಂದ ಹಣದುಬ್ಬರ ಉಂಟಾಗುವುದಿಲ್ಲ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಹೂಡಿಕೆದಾರ ರೇ ಡಾಲಿಯೊ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಸ್ಕ್, “ಭವಿಷ್ಯದಲ್ಲಿ ಜಗತ್ತಿನಲ್ಲಿ ಬಡತನವೇ ಇರುವುದಿಲ್ಲ, ಹಾಗಾಗಿ ಹಣ ಉಳಿಸುವ ಅಗತ್ಯವೂ ಇರುವುದಿಲ್ಲ. ಎಲ್ಲರಿಗೂ ಸಾರ್ವತ್ರಿಕ ಅಧಿಕ ಆದಾಯ ಸಿಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.

ಮಸ್ಕ್ ಅವರ ಈ ವಿಭಿನ್ನ ಆಲೋಚನೆಗೆ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸರ್ಕಾರದ ಹಣದ ಮೇಲೆ ಅವಲಂಬಿತರಾದರೆ, ಅದು ಅಧಿಕಾರಿಗಳಿಗೆ ಜನರ ಜೀವನದ ಮೇಲೆ ಹೆಚ್ಚಿನ ನಿಯಂತ್ರಣ ನೀಡುತ್ತದೆ. ನಮ್ಮ ಸರ್ಕಾರಗಳು ಈಗಾಗಲೇ ಅಧಿಕಾರ ದಾಹ ಹೊಂದಿದ್ದು, ಅವುಗಳನ್ನು ನಂಬಲು ಸಾಧ್ಯವಿಲ್ಲ ಎಂದು ಹಲವರು ವಾದಿಸಿದ್ದಾರೆ.

ಇದನ್ನೂ ಓದಿ: ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್: ಸೋಲಾರ್ ಟೆಂಡರ್ ಅಕ್ರಮ ಆರೋಪದ ದೂರು ವಜಾಗೊಳಿಸಿದ CCI

ಹಣವೊಂದೇ ಎಲ್ಲವನ್ನೂ ಪರಿಹರಿಸುವುದಿಲ್ಲ. “ಬಹಳಷ್ಟು ಜನರು ಕೆಲಸಕ್ಕೆ ಹೋಗುವುದು ತಮಗೆ ಸಮಾಜದಲ್ಲಿ ಒಂದು ಬೆಲೆ ಇದೆ ಎನ್ನುವ ಭಾವನೆಗಾಗಿ. ಕೆಲಸವಿಲ್ಲದೆ ಕೇವಲ ಹಣ ನೀಡುವುದರಿಂದ ಮನುಷ್ಯನ ಜೀವನದ ಉದ್ದೇಶವೇ ಇಲ್ಲದಂತಾಗುತ್ತದೆ” ಎಂದು ಬಳಕೆದಾರರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂಪತ್ತಿನ ಮರುಹಂಚಿಕೆ ಅಗತ್ಯವಿರಬಹುದು, ಆದರೆ ಅದರ ನಿಯಂತ್ರಣ ಕೇವಲ ಬಿಲಿಯನೇರ್‌ಗಳು ಅಥವಾ ರಾಜಕಾರಣಿಗಳ ಕೈಯಲ್ಲಿರಬಾರದು. ಅದು ಸಮುದಾಯಗಳಿಗೆ ನೇರವಾಗಿ ಹಂಚಿಕೆಯಾಗುವಂತಹ ಪಾರದರ್ಶಕ ವ್ಯವಸ್ಥೆ ಬೇಕು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಒಟ್ಟಿನಲ್ಲಿ ಮಸ್ಕ್ ಅವರು ಭವಿಷ್ಯದ ಎಐ ಪ್ರಪಂಚದಲ್ಲಿ ಹಣಕಾಸಿನ ಭದ್ರತೆಗೆ ದಾರಿ ತೋರಿಸಿದ್ದಾರಾದರೂ, ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಹೇಗೆ ಮತ್ತು ಅದರ ಸಾಮಾಜಿಕ ಪರಿಣಾಮಗಳೇನು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದ ಮೂಲಕ ಆಕ್ರೋಶ ಹೊರಹಾಕಿ: ಕಾಂಗ್ರೆಸ್ ಕರೆ

ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ, ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಸಾಮಾನ್ಯ...

ಮೋದಿ ಸರ್ಕಾರದಿಂದ ‘ಮತ ಕಳ್ಳತನ’ದ ನಂತರ ‘ಹಕ್ಕುಗಳ ಕಳ್ಳತನ’ ಶುರು: ರಾಹುಲ್ ಗಾಂಧಿ ಆಕ್ರೋಶ

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು; ರೂ.264.61 ಲಕ್ಷ ಪರಿಹಾರ ಬಾಕಿ!

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ...