ಮುಜಫರ್‌ನಗರ ಕೊಲೆ ಕೇಸ್; ಇಬ್ಬರಿಗೆ ಗಲ್ಲು ಶಿಕ್ಷೆ: ‘ಅಪರೂಪದಲ್ಲೇ ಅಪರೂಪದ ಪ್ರಕರಣ’ ಎಂದ ಕೋರ್ಟ್

Date:

2018ರ ಮುಜಫರ್‌ನಗರದ ರಾಜೇಂದ್ರ ಸೈನಿ ಕೊಲೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಉತ್ತರ ಪ್ರದೇಶದ ಮುಜಫರ್‌ನಗರದ ಫಾಸ್ಟ್‌ ಟ್ರ್ಯಾಕ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಹಾಗೆಯೇ ಈ ಪ್ರಕರಣವನ್ನು ನ್ಯಾಯಾಲಯವು “ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದು ಪರಿಗಣಿಸಿದೆ.

- Advertisement -

ಮುಜಫರ್‌ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ (ಫಾಸ್ಟ್‌ ಟ್ರ್ಯಾಕ್ ಕೋರ್ಟ್-3) ರವಿ ಕುಮಾರ್ ದಿವಾಕರ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ. “ಆರೋಪಿಗಳು ದೇಹವಿಲ್ಲ ಎಂದರೆ ಪ್ರಕರಣ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನಂಬಿರುವಂತಿದೆ. ಆದರೆ ಸತ್ಯವು ಅಂತಿಮವಾಗಿ ಬೆಳಕಿಗೆ ಬರುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಇದನ್ನೂ ಓದಿ: 9 ಪೊಲೀಸರಿಗೆ ಗಲ್ಲು ಶಿಕ್ಷೆ: ಸಾತಾಂಕುಳಂ ತೀರ್ಪು ಕಲಿಸುತ್ತಿರುವ ಪಾಠಗಳೇನು?

ಮುಖ್ಯ ಆರೋಪಿಯಾಗಿದ್ದ ವೀರಸೈನ್ ಎಂಬಾತ ತನ್ನ ಪತ್ನಿಯೊಂದಿಗೆ ರಾಜೇಂದ್ರ ಸೈನಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಲ್ಲಿ 2018ರ ಜೂನ್ 4ರಂದು ಗಜೇಂದ್ರ ಅಲಿಯಾಸ್ ಗೀಲು ಮತ್ತು ರಾಮ್ ಕಿರಣ್ ಅಲಿಯಾಸ್ ಸಾವನ್ ಎಂಬವರ ಜತೆ ಸೇರಿ ರಾಜೇಂದ್ರನ ಹತ್ಯೆ ಮಾಡಿದ್ದಾನೆ.

ಕೊಲೆಯ ಬಳಿಕ ಗುರುತು ಸಿಗದಂತೆ ಮಾಡಲು, ಸಾಕ್ಷ್ಯವನ್ನು ನಾಶಪಡಿಸಲು ಶವವನ್ನು ಮಿರಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಖೇಡಿ ಸಿರಾಯ್ ಗ್ರಾಮದ ಕಾಡಿನಲ್ಲಿ ಸುಟ್ಟುಹಾಕಿದ್ದರು. 2018ರ ಜೂನ್ 5ರಂದು ರಾಜೇಂದ್ರನ ಅರ್ಧ ಸುಟ್ಟ ದೇಹ ಪತ್ತೆಯಾಗಿತ್ತು. ಡಿಎನ್‌ಎ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ಸಾಕ್ಷ್ಯಗಳು ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಈ ಪ್ರಕರಣದ ಮುಖ್ಯ ಸಂಚುಗಾರ ವೀರಸೈನ್ ವಿಚಾರಣೆಯ ಅವಧಿಯಲ್ಲೇ ಈತ ಮೃತಪಟ್ಟಿದ್ದಾನೆ. ಇದೀಗ ಇಬ್ಬರು ಅಪರಾಧಿಗಳಾದ ಗಜೇಂದ್ರ ಮತ್ತು ರಾಮ್ ಕಿರಣ್‌ಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಹಾಗೆಯೇ ಇಬ್ಬರಿಗೂ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ.

ಈ ಪ್ರಕರಣವನ್ನು ನ್ಯಾಯಾಲಯವು “ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದು ಕರೆದಿದ್ದು, ಅಪರಾಧ ಎಸಗುವ ಮುನ್ನ ವ್ಯಕ್ತಿಯಲ್ಲಿ ಕಾನೂನಿನ ಭಯವಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಉರ್ದುವಿಗೆ ಅಧಿಕೃತ ಸ್ಥಾನಮಾನ ಯಾವಾಗ? ತುಳುವಿನ ಬಳಿಕ ಮತ್ತೊಂದು ಭಾಷಾ ಪ್ರಶ್ನೆ

2011ರ ಜನಗಣತಿಯ ಮಾತೃಭಾಷಾ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಉರ್ದುವನ್ನು ಮಾತೃಭಾಷೆ ಎಂದು...

ಚಾಮರಾಜನಗರ: ಅನ್ನಸಂತರ್ಪಣೆಯಲ್ಲಿ ದಲಿತ ಮಕ್ಕಳನ್ನು ಪಂಕ್ತಿಯಿಂದ ಹೊರಹಾಕಿ ಅಮಾನವೀಯತೆ

ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಎಷ್ಟೇ ಕಠಿಣ ಕಾನೂನುಗಳಿದ್ದರೂ, ಗ್ರಾಮೀಣ ಭಾಗದಲ್ಲಿ ಇನ್ನೂ...

ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ: ಶಾಸಕರ ಪುತ್ರಿಗೆ ಕ್ಷಮೆಯಾಚಿಸಲು ಹೈಕೋರ್ಟ್ ಸೂಚನೆ

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ...

ಬೀದರ್ | ವಿದ್ಯುತ್ ಸ್ಪರ್ಶಿಸಿ ವಿಬಿ-ಜಿ ರಾಮ್ ಜಿ ಕಾರ್ಮಿಕ ಮಹಿಳೆ ಸಾವು

ಮನೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ...