9 ಪೊಲೀಸರಿಗೆ ಗಲ್ಲು ಶಿಕ್ಷೆ: ಸಾತಾಂಕುಳಂ ತೀರ್ಪು ಕಲಿಸುತ್ತಿರುವ ಪಾಠಗಳೇನು?

Date:

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 90 ರಿಂದ 100 ಲಾಕಪ್ ಡೆತ್‌ಗಳು ವರದಿಯಾಗುತ್ತವೆ. ಆದರೆ, ಇದರಲ್ಲಿ ಶಿಕ್ಷೆಗೊಳಗಾಗುವ ಪೊಲೀಸರ ಪ್ರಮಾಣ ಶೇ. 1ಕ್ಕಿಂತ ಕಡಿಮೆ! ಠಾಣೆಗಳಲ್ಲಿ ಇಂದಿಗೂ ನಡೆಯುತ್ತಿರುವ ಮೂರನೇ ಹಂತದ (Third degree) ದೌರ್ಜನ್ಯಗಳಿಗೆ ಕೊನೆಯೆಲ್ಲಿ ಎಂಬ ಪ್ರಶ್ನೆ ನಮ್ಮೆದುರು ಬೆಟ್ಟದಂತಿದೆ. ಸಾಕ್ಷ್ಯಗಳ ನಾಶ ಮತ್ತು ಇಲಾಖೆಯೊಳಗಿನ ಪರಸ್ಪರ ರಕ್ಷಣೆ ಈ ಅನ್ಯಾಯಕ್ಕೆ ಇಂಧನ ಒದಗಿಸುತ್ತಿವೆ

- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪೊಲೀಸ್ ಇಲಾಖೆ ಇರುವುದು ಜನಸಾಮಾನ್ಯರ ರಕ್ಷಣೆಗೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ. ಆದರೆ, ಅದೇ ರಕ್ಷಕರು ತಮ್ಮ ಅಧಿಕಾರದ ಮದದಲ್ಲಿ ಭಕ್ಷಕರಾಗಿ ಬದಲಾದಾಗ ಇಡೀ ವ್ಯವಸ್ಥೆಯ ಮೇಲಿನ ನಂಬಿಕೆಯೇ ಬುಡಮೇಲಾಗುತ್ತದೆ. ತಮಿಳುನಾಡಿನ ಸಾತಾಂಕುಳಂ ಪೊಲೀಸ್ ಠಾಣೆಯಲ್ಲಿ ನಡೆದ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಲಾಕಪ್ ಡೆತ್ ಪ್ರಕರಣದಲ್ಲಿ ಒಟ್ಟು 9 ಪೊಲೀಸರಿಗೆ ಮಧುರೈ ನ್ಯಾಯಾಲಯ ಇತ್ತೀಚಿಗೆ ವಿಧಿಸಿರುವ ಗರಿಷ್ಠ ಶಿಕ್ಷೆಯಾದ ‘ಮರಣದಂಡನೆ’ ಕೇವಲ ಶಿಕ್ಷೆಯಲ್ಲ, ಅದು ಒಳಗೊಳಗೇ ಕೊಳೆಯುತ್ತಿರುವ ನಮ್ಮ ಪೊಲೀಸ್ ವ್ಯವಸ್ಥೆಗೆ ನ್ಯಾಯಾಂಗ ಹಿಡಿದ ಕೈಗನ್ನಡಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕೋವಿಡ್ -19 ಲಾಕ್‌ಡೌನ್ ಎಂಬ ಸಂಕಷ್ಟದ ಕಾಲಘಟ್ಟವನ್ನು ಪೊಲೀಸರು ತಮ್ಮ ದರ್ಪ ಮತ್ತು ದಬ್ಬಾಳಿಕೆಯನ್ನು ಹೇಗೆ ಬಳಸಿಕೊಂಡರು ಎಂಬುದಕ್ಕೆ ಈ ಘಟನೆ ಅತ್ಯಂತ ಕರಾಳ ಉದಾಹರಣೆ. 2020ರ ಜೂನ್‌ 19 ರಂದು ಕೇವಲ 15 ನಿಮಿಷ ಹೆಚ್ಚು ಹೊತ್ತು ಮೊಬೈಲ್ ಅಂಗಡಿ ತೆರೆದಿದ್ದರು ಎಂಬ ಕ್ಷುಲ್ಲಕ ನೆಪವೊಡ್ಡಿ, ಸಾತಾಂಕುಳಂ ಪೊಲೀಸರು ಅಪ್ಪ- ಮಗನನ್ನು ಠಾಣೆಗೆ ಕರೆದೊಯ್ದರು. ಅಲ್ಲಿಂದ ಶುರುವಾದದ್ದು ನಾಗರಿಕ ಸಮಾಜ ಎಂದೆಂದಿಗೂ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯ ಮತ್ತು ಪೊಲೀಸ್‌ ವ್ಯವಸ್ಥೆಯ ಕ್ರೂರ ಮುಖದ ದರ್ಶನ.

ಠಾಣೆಯೊಳಗೆ ಇಬ್ಬರನ್ನೂ ವಿವಸ್ತ್ರಗೊಳಿಸಿ, ಕೈಕಾಲು ಕಟ್ಟಿಹಾಕಿ ಲಾಠಿಯಿಂದ ಮನಬಂದಂತೆ ಥಳಿಸಲಾಯಿತು. ತಂದೆ-ಮಗನ ಗುದದ್ವಾರಕ್ಕೆ ಲಾಠಿ ತುರುಕಿ, ದೇಹದ ಮೇಲೆ 18ಕ್ಕೂ ಹೆಚ್ಚು ಗಂಭೀರ ಗಾಯಗಳಾಗುವಂತೆ ಚಿತ್ರಹಿಂಸೆ ನೀಡಿ ಕೊಂದದ್ದು ಕೇವಲ ಕರ್ತವ್ಯಲೋಪವಲ್ಲ. ಇದು ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲಿ ದಶಕಗಳಿಂದಲೂ ಆಳವಾಗಿ ಬೇರೂರಿರುವ ಮತ್ತು ವ್ಯವಸ್ಥಿತವಾಗಿ ರೂಢಿಸಿಕೊಂಡು ಬಂದಿರುವ ‘ವಸಾಹತುಶಾಹಿ’ ಕ್ರೌರ್ಯದ ಮನಸ್ಥಿತಿಯ ಸ್ಪಷ್ಟ ದ್ಯೋತಕವಾಗಿದೆ.

ಸಾಮಾನ್ಯವಾಗಿ ಲಾಕಪ್ ಡೆತ್ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆ, ಇಲಾಖೆಯೊಳಗಿನ ಒಳೊಪ್ಪಂದಗಳು ಹಾಗೂ ರಾಜಕೀಯ ಒತ್ತಡಗಳಿಂದಾಗಿ ಆರೋಪಿಗಳು ಸುಲಭವಾಗಿ ಪಾರಾಗುವುದೇ ಹೆಚ್ಚು. ಆದರೆ ಸಾತಾಂಕುಳಂ ಪ್ರಕರಣ ವಿಭಿನ್ನವಾಗಿ ನಿಲ್ಲಲು ಕಾರಣ ನಾಗರಿಕ ಸಮಾಜದ ಎಚ್ಚರ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣ ಸಿಬಿಐ ಮೆಟ್ಟಿಲೇರಿತು. ಕೇವಲ 90 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿ 105 ಸಾಕ್ಷಿಗಳ ತ್ವರಿತ ವಿಚಾರಣೆ ನಡೆದಿದ್ದರಿಂದಲೇ ಈ ಐತಿಹಾಸಿಕ ತೀರ್ಪು ಹೊರಬರಲು ಸಾಧ್ಯವಾಯಿತು. ಇದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ.

“ಇದೊಂದು ಅಪರೂಪದಲ್ಲಿ ಅತಿ ಅಪರೂಪದ ಕೃತ್ಯ. ರಕ್ಷಕರೇ ಭಕ್ಷಕರಾಗಿದ್ದಾರೆ” ಎಂದು ನ್ಯಾಯಾಧೀಶರಾದ ಜಿ. ಮುತ್ತುಕುಮಾರನ್ ಅವರು ಉಚ್ಚರಿಸಿದ ಮಾತುಗಳು ಅತ್ಯಂತ ಅಮೂಲ್ಯವಾದವು. ಇಂತಹ ಘೋರ ಕೃತ್ಯವೆಸಗಿದವರಿಗೆ ಜೀವಾವಧಿ ಶಿಕ್ಷೆ ನೀಡಿದರೆ ಅದು ಕಾನೂನಿನ ಬಗ್ಗೆ ಭಯ ಹುಟ್ಟಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಒಂಬತ್ತು ಅಪರಾಧಿಗಳನ್ನು ನೇಣುಗಂಬಕ್ಕೇರಿಸುವ ಜೊತೆಗೆ ಸಂತ್ರಸ್ತ ಕುಟುಂಬಕ್ಕೆ 1.40 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದು, ಅಧಿಕಾರದ ಅಮಲಿನಲ್ಲಿರುವ ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಗೂ ನಡುಕ ಹುಟ್ಟಿಸುವಂತಿದೆ.

ಇದನ್ನು ಓದಿದ್ದೀರಾ? ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್

ಆದರೆ, ಪೊಲೀಸ್ ಕಸ್ಟಡಿಯಲ್ಲಿನ ಸಾವುಗಳು ಭಾರತಕ್ಕೆ ಹೊಸದೇನಲ್ಲ. ಇದು ಕೇವಲ ಸಾತಾಂಕುಳಂಗೆ ಸೀಮಿತವಾದ ಪಿಡುಗಲ್ಲ. 2021ರಲ್ಲಿ ಉತ್ತರ ಪ್ರದೇಶದ ಕಾಸಗಂಜ್‌ನಲ್ಲಿ 22 ವರ್ಷದ ಮೊಹಮ್ಮದ್ ಅಲ್ತಾಫ್ ಎಂಬ ಯುವಕನನ್ನು ವಿಚಾರಣೆಗೆಂದು ಕರೆದೊಯ್ದು, ಆತ ಶೌಚಾಲಯದ ಕೇವಲ 2 ಅಡಿ ಎತ್ತರದ ಪೈಪ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಕಟ್ಟುಕಥೆ ಕಟ್ಟಿದ್ದರು. ಅದು ಲಾಕಪ್ ಡೆತ್ ಎಂಬುದನ್ನು ಮರೆಮಾಚುವ ಅತ್ಯಂತ ಅಮಾನವೀಯ ಯತ್ನವಾಗಿತ್ತು ಮತ್ತು ಇಡೀ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಅದೇ ರೀತಿ 2022ರಲ್ಲಿ ಚೆನ್ನೈನ ಸೆಕ್ರೆಟರಿಯೇಟ್ ಕಾಲೋನಿ ಠಾಣೆಯಲ್ಲಿ ವಿಘ್ನೇಶ್ ಎಂಬ ದಲಿತ ಯುವಕನನ್ನು ಕಳ್ಳತನದ ಶಂಕೆಯ ಮೇಲೆ ಬಂಧಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ವಿಘ್ನೇಶ್ ದೇಹದ ಮೇಲೆ ಬರೋಬ್ಬರಿ 13 ಗಾಯಗಳಿದ್ದವು, ನಂತರ ಆ ಪ್ರಕರಣದಲ್ಲಿ ತೀವ್ರ ಹೋರಾಟದ ಫಲವಾಗಿ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಾಯಿತು. ಇನ್ನು 2019ರ ಡಿಸೆಂಬರ್‌ನಲ್ಲಿ ಹೈದರಾಬಾದ್‌ನ ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ ಕೊಂದಾಗ ಸಮಾಜ ಸಂಭ್ರಮಿಸಿತ್ತು, ಆದರೆ ಅದು ಕೂಡ ಕಾನೂನುಬಾಹಿರ ಹತ್ಯೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ಆಯೋಗವೇ ಸ್ಪಷ್ಟಪಡಿಸಿತು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 90 ರಿಂದ 100 ಲಾಕಪ್ ಡೆತ್‌ಗಳು ವರದಿಯಾಗುತ್ತವೆ. ಆದರೆ, ಇದರಲ್ಲಿ ಶಿಕ್ಷೆಗೊಳಗಾಗುವ ಪೊಲೀಸರ ಪ್ರಮಾಣ ಶೇ. 1ಕ್ಕಿಂತ ಕಡಿಮೆ! ಠಾಣೆಗಳಲ್ಲಿ ಇಂದಿಗೂ ನಡೆಯುತ್ತಿರುವ ಮೂರನೇ ಹಂತದ (Third-degree) ದೌರ್ಜನ್ಯಗಳಿಗೆ ಕೊನೆಯೆಲ್ಲಿ ಎಂಬ ಪ್ರಶ್ನೆ ನಮ್ಮೆದುರು ಬೆಟ್ಟದಂತಿದೆ. ಸಾಕ್ಷ್ಯಗಳ ನಾಶ ಮತ್ತು ಇಲಾಖೆಯೊಳಗಿನ ಪರಸ್ಪರ ರಕ್ಷಣೆ ಈ ಅನ್ಯಾಯಕ್ಕೆ ಇಂಧನ ಒದಗಿಸುತ್ತಿವೆ.

ಈ ವ್ಯವಸ್ಥೆ ಬದಲಾಗಬೇಕಾದರೆ, ಸುಪ್ರೀಂ ಕೋರ್ಟ್ ಎಷ್ಟೋ ವರ್ಷಗಳ ಹಿಂದೆಯೇ ಸೂಚಿಸಿರುವ ‘ಪೊಲೀಸ್ ಸುಧಾರಣೆಗಳು’ ಮತ್ತು ಡಿ.ಕೆ. ಬಸು ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿದ ಸುಪ್ರೀಂ ಕೋರ್ಟ್ ಆದೇಶ ಇಂದಿಗೂ ಅನೇಕ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ತನಿಖೆ ಮತ್ತು ಕಾನೂನು ಸುವ್ಯವಸ್ಥೆ ವಿಭಾಗಗಳನ್ನು ಪ್ರತ್ಯೇಕಿಸುವ ಮಹತ್ವದ ಕೆಲಸವೂ ಮರೀಚಿಕೆಯಾಗಿಯೇ ಉಳಿದಿದೆ.

ಸಾತಾಂಕುಳಂ ತೀರ್ಪು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ತಾತ್ಕಾಲಿಕ ಜಯ ತಂದುಕೊಟ್ಟಿರಬಹುದು. ಆದರೆ, ಪ್ರಜಾಪ್ರಭುತ್ವದ ನಿಜವಾದ ಗೆಲುವು ಇರುವುದು ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವ ‘ಸಾಂಸ್ಥಿಕ ಸುಧಾರಣೆ’ ಯಲ್ಲಿ ಮಾತ್ರ. ಪೊಲೀಸ್ ಇಲಾಖೆ ಆಳುವವರ ಕೈಗೊಂಬೆಯಾಗದೆ, ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು ನಿಜವಾದ ಅರ್ಥದಲ್ಲಿ ‘ಜನಸ್ನೇಹಿ’ ಆಗುವವರೆಗೂ ಜಯರಾಜ್-ಬೆನ್ನಿಕ್ಸ್ ಹಾಗೂ ವಿಘ್ನೇಶ್ ಅಂಥವರ ಆಕ್ರಂದನಗಳು ವ್ಯವಸ್ಥೆಯನ್ನು ಅಣಕಿಸುತ್ತಲೇ ಇರುತ್ತವೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...