ಪರ್ವತದಷ್ಟು ಹಗರಣ, ಸಾಸಿವೆಯಷ್ಟು ದಂಡ: ₹1.48 ಕೋಟಿಗೆ ಅದಾನಿ ಸಮೂಹದ ಅಕ್ರಮಗಳಿಗೆ ಸೆಬಿ ‘ಕ್ಲೀನ್ ಚಿಟ್’

Date:

ಅದಾನಿ ಸಮೂಹದ ಬೃಹತ್ ಆರ್ಥಿಕ ಅವ್ಯವಹಾರಗಳ ಆರೋಪಗಳೆದುರು ಭಾರತದ ಷೇರುಪೇಟೆ ನಿಯಂತ್ರಕ ಮಂಡಳಿ (ಸೆಬಿ) ಸಂಪೂರ್ಣ ಮಂಡಿಯೂರಿದಂತಿದೆ. ಗೌತಮ್ ಅದಾನಿ ಸೇರಿ 14 ವ್ಯಕ್ತಿಗಳು ಹಾಗೂ 4 ಕಂಪನಿಗಳ ವಿರುದ್ಧವಿದ್ದ ಕನಿಷ್ಠ ಸಾರ್ವಜನಿಕ ಷೇರುಪಾಲುದಾರಿಕೆ (ಎಂಪಿಎಸ್) ಉಲ್ಲಂಘನೆಯಂತಹ ಗಂಭೀರ ಆರೋಪಗಳನ್ನು ಸೆಬಿ ಕೇವಲ ₹1.48 ಕೋಟಿಗಳ (₹1,48,20,000) ‘ಚಿಲ್ಲರೆ’ ಮೊತ್ತಕ್ಕೆ ಇತ್ಯರ್ಥಪಡಿಸಿದೆ. ಆಗಸ್ಟ್ 26ರಂದೇ ಗುಟ್ಟಾಗಿ ನಡೆದಿದ್ದ ಈ ವಹಿವಾಟಿಗೆ ಸೆಪ್ಟೆಂಬರ್ 28ರಂದು ಅಧಿಕೃತ ಮುದ್ರೆ ಒತ್ತಲಾಗಿದೆ.

- Advertisement -

​ಷೇರುಪೇಟೆ ನಿಯಮಗಳ ಪ್ರಕಾರ ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ಕನಿಷ್ಠ ಶೇ 25ರಷ್ಟು ಷೇರುಗಳು ಪ್ರವರ್ತಕರು ಮತ್ತು ಅವರ ಗುಂಪಿನ ಹೊರಗಿನ ಸಾರ್ವಜನಿಕರ ಬಳಿ ಇರಬೇಕು (ಎಂಪಿಎಸ್). ಆದರೆ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪವರ್, ಅದಾನಿ ಪೋರ್ಟ್ಸ್ ಹಾಗೂ ಅದಾನಿ ಎನರ್ಜಿ ಸೊಲ್ಯೂಷನ್ಸ್ ಕಂಪನಿಗಳು ಕೃತಕವಾಗಿ ಷೇರು ಬೆಲೆ ಏರಿಸಲು ಬೇನಾಮಿ ಕಂಪನಿಗಳ ಮೂಲಕ ತಾವೇ ಷೇರುಗಳನ್ನು ಖರೀದಿಸಿ ಈ ನಿಯಮವನ್ನು ಗಾಳಿಗೆ ತೂರಿವೆ ಎಂಬ ಗಂಭೀರ ಆರೋಪವಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

​ಈ ಇತ್ಯರ್ಥ ಪ್ರಕ್ರಿಯೆಯ ಷರತ್ತುಗಳು ಅದಾನಿ ಸಮೂಹಕ್ಕೆ ಕಾನೂನಿನಿಂದ ನುಣುಚಿಕೊಳ್ಳಲು ರಾಜಮಾರ್ಗ ಕಲ್ಪಿಸಿಕೊಟ್ಟಿವೆ. “ಆರೋಪಗಳನ್ನು ಒಪ್ಪಿಕೊಳ್ಳದೆ ಅಥವಾ ನಿರಾಕರಿಸದೆ” ಕೇವಲ ದಂಡ ಪಾವತಿಸಿ ಪಾರಾಗಲು ಸೆಬಿ ಅವಕಾಶ ನೀಡಿದೆ. ನಾಲ್ಕು ಕಂಪನಿಗಳು ಮತ್ತು ನಿರ್ದೇಶಕರ ಗುಂಪುಗಳಿಗೆ ತಲಾ ಕೇವಲ ₹37.05 ಲಕ್ಷ ನಿಗದಿಪಡಿಸಲಾಗಿದೆ. ಅಚ್ಚರಿಯೆಂದರೆ, ಈ ಮೊತ್ತ ಕಂಪನಿ ಮತ್ತು ವ್ಯಕ್ತಿಗಳ ನಡುವೆ ಹೇಗೆ ಪಾವತಿಯಾಗಿದೆ ಎಂಬ ಕನಿಷ್ಠ ಪಾರದರ್ಶಕತೆಯನ್ನೂ ಸೆಬಿ ಕಾಯ್ದುಕೊಂಡಿಲ್ಲ.

​ಇನ್ನು, ಸೆಪ್ಟೆಂಬರ್ 28ರಂದೇ ಹೊರಡಿಸಲಾದ 81 ಪುಟಗಳ ಪ್ರತ್ಯೇಕ ಅಂತಿಮ ಆದೇಶವಂತೂ ಸೆಬಿಯ ತನಿಖಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ವಿದೇಶಿ ಹೂಡಿಕೆ ನಿಧಿಗಳ (ಎಫ್‌ಪಿಐ) ಮೇಲೆ ವಿನೋದ್ ಅದಾನಿ ಹಿಡಿತ ಹೊಂದಿದ್ದರು ಎಂಬುದನ್ನು ಸಾಬೀತುಪಡಿಸಲು ‘ಸಾಕ್ಷ್ಯಗಳಿಲ್ಲ’ ಎಂದು ಸೆಬಿ ಕೈತೊಳೆದುಕೊಂಡಿದೆ. ಕೇವಲ ವ್ಯಾಪಾರ ಅಥವಾ ಆರ್ಥಿಕ ಸಂಬಂಧವಿದ್ದ ಮಾತ್ರಕ್ಕೆ ‘ನಿಯಂತ್ರಣ’ ಸಾಬೀತಾಗುವುದಿಲ್ಲ ಎಂಬ ಕುಂಟುನೆಪವೊಡ್ಡಿ ವಿನೋದ್ ಅದಾನಿ ಹಾಗೂ ಇತರರನ್ನು ಎಂಪಿಎಸ್ ಉಲ್ಲಂಘನೆ ಆರೋಪಗಳಿಂದ ಸೆಬಿ ರಕ್ಷಿಸಿದೆ.

Advertisements

​ಈ ಅಕ್ರಮದ ಬೃಹತ್ ಸ್ವರೂಪವನ್ನು ಗಮನಿಸಿದರೆ ಸೆಬಿಯ ₹1.48 ಕೋಟಿಯ ದಂಡ ಕೇವಲ ಕಡಲಿಗೆ ಕಾಸಿನ ಮಜ್ಜಿಗೆಯಂತಿದೆ. 2023ರಲ್ಲಿ ‘ಒಸಿಸಿಆರ್‌ಪಿ’ ಬಿಡುಗಡೆ ಮಾಡಿದ್ದ ಬ್ಯಾಂಕ್ ದಾಖಲೆಗಳ ಪ್ರಕಾರ, ವಿನೋದ್ ಅದಾನಿ ಅವರ ಆಪ್ತರಾದ ಯುಎಇಯ ನಾಸರ್ ಅಲಿ ಶಬಾನ್ ಅಹ್ಲಿ ಮತ್ತು ತೈವಾನ್‌ನ ಚಾಂಗ್ ಚುಂಗ್-ಲಿಂಗ್ ಅವರು ಮಾರಿಷಸ್‌ನ ಶೆಲ್ ಕಂಪನಿಗಳ ಮೂಲಕ ಅದಾನಿ ಷೇರುಗಳಲ್ಲಿ ಮಾಡಿದ್ದ ರಹಸ್ಯ ಹೂಡಿಕೆಯ ಮೊತ್ತ ಬರೋಬ್ಬರಿ 3 ಬಿಲಿಯನ್ ಡಾಲರ್! ಅಂದರೆ, ಇಂದಿನ ವಿನಿಮಯ ದರದ ಪ್ರಕಾರ ಇದು ಭಾರತೀಯ ಲೆಕ್ಕಾಚಾರದಲ್ಲಿ ಅಂದಾಜು 25,200 ಕೋಟಿ ರೂಪಾಯಿಗಳಿಗೂ ಅಧಿಕ ಬೃಹತ್ ಮೊತ್ತವಾಗುತ್ತದೆ. ಇಷ್ಟು ದೊಡ್ಡ ಮಟ್ಟದ ಕಪ್ಪುಹಣವನ್ನು ಬಳಸಿ ಕೃತಕವಾಗಿ ಷೇರು ಬೆಲೆ ಏರಿಸಿದ ಹಾಗೂ ಎಂಪಿಎಸ್ ನಿಯಮ ಉಲ್ಲಂಘಿಸಿದ ಗಂಭೀರ ಆರೋಪವನ್ನು ದೇಶದ ಉನ್ನತ ತನಿಖಾ ಸಂಸ್ಥೆಯೊಂದು ಕೇವಲ ಒಂದೂವರೆ ಕೋಟಿ ರೂಪಾಯಿ ದಂಡದಲ್ಲಿ ಮುಚ್ಚಿಹಾಕಿರುವುದು ವಿಪರ್ಯಾಸ.

​ಅದಾನಿ ಪರವಾಗಿ ಇಷ್ಟೊಂದು ಬೃಹತ್ (₹25,200 ಕೋಟಿ) ಹೂಡಿಕೆ ಮಾಡಿದರೆನ್ನಲಾದ ಇದೇ ಅಹ್ಲಿ ಮತ್ತು ಚಾಂಗ್ ಅವರು ಸೆಬಿ ತನಿಖೆಯ ವೇಳೆ ಕನಿಷ್ಠ ಮತ್ತು ಸರಿಯಾದ ಮಾಹಿತಿಯನ್ನೂ ನೀಡದೆ ನಿರ್ಲಕ್ಷ್ಯ ಮೆರೆದಿದ್ದರು. ಆದರೆ, ಸೆಬಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಕೇವಲ ತಲಾ ₹20 ಲಕ್ಷ ದಂಡ ವಿಧಿಸಿ ಕೈಬಿಟ್ಟಿದೆ. ಇದು ತನಿಖಾ ಸಂಸ್ಥೆಯ ಅಸಹಾಯಕತೆಯನ್ನೋ ಅಥವಾ ಪ್ರಭಾವಿಗಳ ಮುಂದಿನ ಶರಣಾಗತಿಯನ್ನೋ ಸ್ಪಷ್ಟವಾಗಿ ತೋರುತ್ತಿದೆ.

​ ಹಿಂಡನ್‌ಬರ್ಗ್ ವರದಿಗೂ ಮುನ್ನವೇ (2020) ದಾಖಲಾಗಿದ್ದ ದೂರುಗಳ ವಿಚಾರದಲ್ಲಿ ಸೆಬಿ ನಡೆದುಕೊಂಡ ರೀತಿ ರಿಟೇಲ್ ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿಗಳಿಗೂ ಮೀರಿದ ರಹಸ್ಯ ಹೂಡಿಕೆ ಮತ್ತು ಎಂಪಿಎಸ್ ಉಲ್ಲಂಘನೆಯ ಆರೋಪಗಳನ್ನು ಅತ್ಯಲ್ಪ ಮೊತ್ತದ ದಂಡದೊಂದಿಗೆ ಇತ್ಯರ್ಥಪಡಿಸಿರುವುದು, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಭಾವಿ ಕಾರ್ಪೊರೇಟ್ ಕುಳಗಳು ಯಾವುದೇ ಕಾನೂನಿನ ಕುಣಿಕೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದೆ.

ಎಂಪಿಎಸ್ (MPS) ಅಥವಾ ‘ಕನಿಷ್ಠ ಸಾರ್ವಜನಿಕ ಷೇರುಪಾಲುದಾರಿಕೆ’ (Minimum Public Shareholding) ಎಂದರೆ, ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ (Listed) ಯಾವುದೇ ಕಂಪನಿಯ ಒಟ್ಟು ಷೇರುಗಳಲ್ಲಿ ಕನಿಷ್ಠ ಶೇ 25ರಷ್ಟನ್ನು ಪ್ರವರ್ತಕರ (Promoters) ಗುಂಪಿನಿಂದ ಹೊರಗಿರುವ ಸಾಮಾನ್ಯ ಸಾರ್ವಜನಿಕರು ಅಥವಾ ಇತರ ಹೂಡಿಕೆದಾರರು ಕಡ್ಡಾಯವಾಗಿ ಹೊಂದಿರಬೇಕು ಎಂಬ ಸೆಬಿ (SEBI) ನಿಯಮವಾಗಿದೆ. ಇದರರ್ಥ, ಕಂಪನಿಯ ಮಾಲೀಕರು ಗರಿಷ್ಠ ಶೇ 75ರಷ್ಟು ಷೇರುಗಳನ್ನು ಮಾತ್ರ ತಮ್ಮ ಬಳಿ ಇಟ್ಟುಕೊಳ್ಳಬಹುದು.

ಷೇರುಗಳ ಬೆಲೆಯನ್ನು ಕೃತಕವಾಗಿ ಏರಿಳಿತ ಮಾಡುವುದನ್ನು (Price manipulation) ತಡೆಯಲು, ಮಾರುಕಟ್ಟೆಯಲ್ಲಿ ಷೇರುಗಳ ಲಭ್ಯತೆಯನ್ನು (Liquidity) ಕಾಯ್ದುಕೊಳ್ಳಲು ಮತ್ತು ರಿಟೇಲ್ ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ಅದಾನಿ ಪ್ರಕರಣದಲ್ಲಿ, ವಿದೇಶಿ ಶೆಲ್ ಕಂಪನಿಗಳ (ಬೇನಾಮಿ) ಮೂಲಕ ಪ್ರವರ್ತಕರೇ ಈ ಶೇ 25ರಷ್ಟು ಸಾರ್ವಜನಿಕ ಷೇರುಗಳನ್ನು ಪರೋಕ್ಷವಾಗಿ ಖರೀದಿಸಿ ಈ ಕಡ್ಡಾಯ ನಿಯಮವನ್ನು ಉಲ್ಲಂಘಿಸಿದ್ದಾರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...

ಪ್ರಚೋದನಕಾರಿ ಭಾಷಣದಿಂದ ಹಲ್ಲೆಯವರೆಗೆ: ಪರ್ವೇಶ್ ವರ್ಮಾ ಎಂಬ ಪರಮ ದುರಹಂಕಾರಿಯ ಕತೆ

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ಆದರೆ, ದೆಹಲಿಯ ಲೋಕೋಪಯೋಗಿ ಸಚಿವ ಪರ್ವೇಶ್...

ಬಾಗಲಕೋಟೆ | ಸರ್ಕಾರಿ ನೌಕರರ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನ

ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಗಮನಾರ್ಹ ಸೇವೆ...

ರಾಜ್ಯದಲ್ಲಿ SIR ಭೌತಿಕ ವಿಚಾರಣೆ ಸ್ಥಗಿತ: ಬಿಎಲ್ಒಗಳಿಂದ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹ

ಹಿಂದಿನ ದತ್ತಾಂಶ ಲಭ್ಯವಿಲ್ಲದ ಹಾಗೂ ಮಾಹಿತಿಯಲ್ಲಿ ಹೊಂದಾಣಿಕೆಯಾಗದ ಕಾರಣಕ್ಕೆ ನೋಟಿಸ್ ಸ್ವೀಕರಿಸಿರುವ...