ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.
ಪುಣೆಯಲ್ಲಿ ನಡೆದ ‘ಛಾತ್ರೋಂ ಕಿ ಗೊಂಜ್’ ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿನಿಯರಿಗೆ ರಾಹುಲ್ ಗಾಂಧಿ “ಪಿತೃಪ್ರಭುತ್ವವನ್ನು ಧ್ವಂಸ ಮಾಡಿ” ಎಂದು ಹೇಳಿದಾಗ, ಅದು ಕೇವಲ ಒಂದು ಘೋಷಣೆಯಾಗಿರಲಿಲ್ಲ. ಅದು ರಾಜಕೀಯ ಕರೆಯಾಗಿತ್ತು. ಮತ್ತು ಅದರ ನಂತರ ಕೇಳಿಬಂದ ಚಪ್ಪಾಳೆಯು ಕೇವಲ ಪ್ರೇಕ್ಷಕರಲ್ಲಿದ್ದ ಜೆನ್ Z ಮಹಿಳೆಯರಿಂದ ಮಾತ್ರ ಬರಲಿಲ್ಲ. ತಮ್ಮ ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪಿತೃಪ್ರಭುತ್ವದ ವಿರುದ್ಧ ಹೋರಾಡುತ್ತಾ, ಸಂಧಾನ ಮಾಡುತ್ತಾ ತಮ್ಮ ಇಡೀ ಜೀವನವನ್ನು ಕಳೆದ ಜೆನ್ X ಮಹಿಳೆಯರಿಂದಲೂ ಅಷ್ಟೇ ಜೋರಾಗಿ ಬಂದಿತು.
ಈ ಕರೆಯನ್ನು ಪುಣೆಯಲ್ಲಿ ನೀಡಲಾಗಿದೆ ಎಂಬುದೇ ಇತಿಹಾಸ ಪೂರ್ಣ ವೃತ್ತವನ್ನು ಪೂರ್ಣಗೊಳಿಸಿದಂತಿದೆ. 15ನೇ ಶತಮಾನದಲ್ಲಿ, ಇದೇ ನೆಲದಿಂದ ಬಂದ ಜಿಜಾಬಾಯಿ ತನ್ನ ಕಾಲದ ಪಿತೃಪ್ರಭುತ್ವವನ್ನು ಧ್ವಂಸ ಮಾಡಿದರು. ಅವರಿಗೆ ನಿಗದಿಪಡಿಸಿದ ಪಾತ್ರಕ್ಕೆ ಸೀಮಿತರಾಗಲು ನಿರಾಕರಿಸಿದರು, ಮರಾಠಾ ಸಾಮ್ರಾಜ್ಯದ ಹಿಂದಿನ ಶಕ್ತಿ ಮತ್ತು ತಂತ್ರಗಾರರಾದರು. ಪಿತೃಪ್ರಭುತ್ವವನ್ನು ಧ್ವಂಸ ಮಾಡುವುದು ಭಾರತಕ್ಕೆ ಹೊಸದಲ್ಲ, ನಮ್ಮ ಪ್ರತಿರೋಧದ ಇತಿಹಾಸದಲ್ಲಿದೆ ಎಂದು ಅವರು ಸಾಬೀತುಪಡಿಸಿದರು.
ಇಂದು ಪಿತೃಪ್ರಭುತ್ವವನ್ನು ಧ್ವಂಸ ಮಾಡುವುದು ಏಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು, ಪಿತೃಪ್ರಭುತ್ವ ಎಂದರೆ ನಿಜವಾಗಿ ಏನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪಿತೃಪ್ರಭುತ್ವ ಮತ್ತು ಫ್ಯಾಸಿಸಂ (fascism) ಎರಡು ಪ್ರತ್ಯೇಕ ವ್ಯವಸ್ಥೆಗಳಲ್ಲ, ಅವು ಪರಸ್ಪರ ಅವಲಂಬಿತವಾಗಿವೆ. ಅವು ಪರಸ್ಪರ ಶಕ್ತಿಯನ್ನು ಪಡೆದು ಬಲಿಷ್ಠವಾಗಿ ಮತ್ತು ಶಾಶ್ವತವಾಗುತ್ತವೆ. ಪಿತೃಪ್ರಭುತ್ವದ ಸಮಾಜವು ಫ್ಯಾಸಿಸಂಗೆ ಏನು ನೀಡುತ್ತದೆ? ಸಿದ್ಧಪಡಿಸಿದ ಮಾದರಿಯನ್ನು ನೀಡುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ನಿರ್ದಿಷ್ಟ ಪಾತ್ರಗಳು, ಕಟ್ಟುನಿಟ್ಟಾದ ರಚನೆಗಳು, ಶ್ರೇಣೀಕೃತ ನಿಯಂತ್ರಣ, ಪ್ರಶ್ನಾತೀತ ಸಾಮಾಜಿಕ ವ್ಯವಸ್ಥೆ ಮತ್ತು ಒಂದೇ ನೈತಿಕ ಅಧಿಕಾರ, ಇದು ಫ್ಯಾಸಿಸಂ ಬೆಳೆಯಲು ಪರಿಪೂರ್ಣ ಸೂತ್ರವಾಗಿದೆ. ತಂದೆ, ಜಾತಿಯ ಮುಖ್ಯಸ್ಥ ಅಥವಾ ಧಾರ್ಮಿಕ ಮುಖಂಡನನ್ನು ಪಾಲಿಸಲು ಈಗಾಗಲೇ ತರಬೇತಿ ಪಡೆದಿರುವ ಸಮಾಜವು ಸರ್ವಾಧಿಕಾರಿ ನಾಯಕನನ್ನು ಸುಲಭವಾಗಿ ಪಾಲಿಸುತ್ತದೆ. ಮತ್ತು ಈ ಸಾಮಾಜಿಕ ಶ್ರೇಣೀಕರಣವು ಕ್ರೋನಿ ಬಂಡವಾಳಶಾಹಿಯ (crony capitalism) ಆರ್ಥಿಕ ಶಕ್ತಿಯಿಂದ ಬೆಂಬಲಿತವಾದಾಗ, ಅದು ಬಹುತೇಕ ಮುರಿಯಲಾಗದಂತಾಗುತ್ತದೆ. ಕ್ರೋನಿ ಬಂಡವಾಳಶಾಹಿಯು ಪಿತೃಪ್ರಭುತ್ವವನ್ನು ಜಾರಿಗೊಳಿಸುತ್ತದೆ ಏಕೆಂದರೆ ಅದಕ್ಕೆ ಅಗ್ಗದ (cheap) ಕಾರ್ಮಿಕರು, ಮಹಿಳೆಯರ ಪಾವತಿಯಾಗದ (unpaid) ಆರೈಕೆ ಕೆಲಸ ಮತ್ತು ಆರ್ಥಿಕ ಲೂಟಿಯ ವಿರುದ್ದ ಒಗ್ಗೂಡದ ವಿಭಜಿತ ಸಮಾಜ ಬೇಕು.
ಅದಕ್ಕಾಗಿಯೇ 25ನೇ ಡಿಸೆಂಬರ್ 1927 ರಂದು ಬಾಬಾಸಾಹೇಬ್ ಅಂಬೇಡ್ಕರ್ ಮಾಡಿದ ಕ್ರಿಯೆ ಈ ಚರ್ಚೆಗೆ ಇಂದಿಗೂ ಅತ್ಯಂತ ಕೇಂದ್ರವಾಗಿದೆ. ಅವರು ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಟ್ಟಾಗ, ಅವರು ಕೇವಲ ಪುಸ್ತಕವನ್ನು ಸುಡುತ್ತಿರಲಿಲ್ಲ. ಅವರು ಭಾರತದಲ್ಲಿ ಶ್ರೇಣೀಕರಣದ ಮೂಲ (source code) ಸಂಕೇತವನ್ನು ಸುಡುತ್ತಿದ್ದರು. ಮನುಸ್ಮೃತಿಯು ಜಾತಿ ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸಿತು, ಅಸ್ಪೃಶ್ಯತೆಯನ್ನು ಸಾಂಸ್ಥಿಕಗೊಳಿಸಿತು ಮತ್ತು ಮಹಿಳೆಯರ ಸಂಪೂರ್ಣ ಅಧೀನತೆಯನ್ನು ಕ್ರೋಡೀಕರಿಸಿತು.
ಇಂದು, ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ. ನಾವು ಅದನ್ನು ಜಾತಿ ತಾರತಮ್ಯದಲ್ಲಿ, ವರ್ಗ ಶ್ರೇಷ್ಠತೆಯ ಭಾವನೆಯಲ್ಲಿ, ಲಿಂಗ ಹಿಂಸೆಯಲ್ಲಿ, ಪ್ರಾದೇಶಿಕ ಮತ್ತು ಭಾಷಾ ಶ್ರೇಷ್ಠತೆಯಲ್ಲಿ, ಕೆಲವು ಭಾರತೀಯರು ಇತರರಿಗಿಂತ ಹೆಚ್ಚು ಭಾರತೀಯರು ಎಂಬ ಕಲ್ಪನೆಯಲ್ಲಿ ನೋಡುತ್ತೇವೆ.
ನಮ್ಮ ಶ್ರೇಷ್ಠ ಸಮಾಜ ಸುಧಾರಕರು ಮತ್ತು ನಾಯಕರು ಇದನ್ನು ಅರ್ಥಮಾಡಿಕೊಂಡಿದ್ದರು. ಜ್ಯೋತಿರಾವ್ ಪುಲೆ, ಪೆರಿಯಾರ್, ಪಿ.ಎನ್. ರಾಜಭೋಜ್, ನೆಹರು, ರಾಮ್ ಮನೋಹರ್ ಲೋಹಿಯಾ ಅವರೆಲ್ಲರೂ ಹಿಂದುಳಿದ ಮನುಸ್ಮೃತಿಯನ್ನು ಬಲವಾಗಿ ವಿರೋಧಿಸಿದರು, ಅದು ಆಳವಾದ ಸಾಮಾಜಿಕ ಅಸಮಾನತೆ ಮತ್ತು ಶಾಶ್ವತ ವಿಭಜನೆಯನ್ನು ಉತ್ತೇಜಿಸುತ್ತದೆ ಎಂದು ಅವರಿಗೆ ತಿಳಿದಿತ್ತು. ನಂತರ, ಕಾನ್ನಿ ರಾಮ್ ಅವರು ‘ಮನುವಾದಿ vs ಮೂಲನಿವಾಸಿ’ ಎಂಬ ತಮ್ಮ ಪ್ರಬಲ ಸೂತ್ರದೊಂದಿಗೆ ಇಡೀ ರಾಜಕೀಯ ನಿರೂಪಣೆಯನ್ನು ಮರುರೂಪಿಸಿದರು. ಅದು ಕೇವಲ ಘೋಷಣೆಯಾಗಿರಲಿಲ್ಲ, ಅದು ಬಹುಜನರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು, ಮೂಲನಿವಾಸಿಗಳನ್ನು ಒಗ್ಗೂಡಿಸಿ ಮನುವಾದಿ ಪ್ರಾಬಲ್ಯದಿಂದ ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳಲು ವಿನ್ಯಾಸಗೊಳಿಸಲಾದ ರಾಜಕೀಯ ತಂತ್ರವಾಗಿತ್ತು.
ಹಲವು ದಶಕಗಳ ಪ್ರಗತಿಯ ನಂತರ, ನಾವು ಹಿಮ್ಮುಖವನ್ನು ನೋಡುತ್ತಿದ್ದೇವೆ. ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರವನ್ನು ಆಕ್ರಮಿಸಿಕೊಂಡಿರುವುದರಿಂದ, ಅಂಬೇಡ್ಕರ್ ಅವರು ಹೋರಾಡಿದ ಸಾಮಾಜಿಕ ಶ್ರೇಣೀಕರಣವು ಮತ್ತೆ ಹೆಚ್ಚು ಗೋಚರವಾಗಿ ಆಕಾರ ಪಡೆಯುತ್ತಿದೆ. ಅದಕ್ಕಾಗಿಯೇ ಮನುಸ್ಮೃತಿಯ ಮನಸ್ಥಿತಿಯ ವಿರುದ್ಧ ರಾಹುಲ್ ಗಾಂಧಿಯವರ ಪ್ರಬಲ ಮತ್ತು ಸ್ಥಿರವಾದ ಧ್ವನಿಯು ಆಡಳಿತಾರೂಢ ವ್ಯವಸ್ಥೆ ಮತ್ತು ಅದರ ಸೈದ್ದಾಂತಿಕ ಸಹವರ್ತಿಗಳಿಗೆ ಹಿಡಿಸಿಲ್ಲ. ಏಕೆಂದರೆ ಅದು ನೇರವಾಗಿ ಅವರ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಅವರ ನೈತಿಕ ಅಧಿಕಾರವನ್ನು ಪ್ರಶ್ನಿಸುತ್ತದೆ ಮತ್ತು ವಿಭಜನೆಯ ಮೇಲೆ ಕಟ್ಟಿರುವ ಅವರ ಸಂಪೂರ್ಣ ಚುನಾವಣಾ ನಿರೂಪಣೆಗೆ ಅಡಚಣೆಯಾಗುತ್ತಿದೆ.
ಅನೇಕ ವರ್ಷಗಳಿಂದ, ಸಿದ್ದಾಂತವನ್ನು ಲೆಕ್ಕಿಸದೆ ರಾಜಕೀಯ ಪಕ್ಷಗಳು ಮೃದು-ಹಿಂದುತ್ವ ಅಳವಡಿಸಿಕೊಂಡಿವೆ, ಅದನ್ನು ಎದುರಿಸಿದರೆ ಮತಗಳನ್ನು ಕಳೆದುಕೊಳ್ಳುತ್ತೇವೆ ಎಂದು ಹೆದರಿ. ಇಂದು, ಅವುಗಳಲ್ಲಿ ಹಲವು ಸನ್ನಿಹಿತ ಅಪಾಯವನ್ನು ಅರಿತುಕೊಳ್ಳುತ್ತಿವೆ. ಮನುಸ್ಮೃತಿಯ ಮನಸ್ಥಿತಿಯು ನಿಧಾನವಾಗಿ ಆದರೆ ಬಲವಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ನಾಶ ಮಾಡುತ್ತಾ, ಕೆಲವೇ ಜನರು ಮನಸ್ಸು, ಜನಸಮೂಹ ಮತ್ತು ಹಣವನ್ನು (mind, mass, money) ಸಲೀಸಾಗಿ ವಶಪಡಿಸಿಕೊಳ್ಳಲು ಸಹಾಯ ಮಾಡುವ ವ್ಯವಸ್ಥೆಗಳನ್ನು ಮತ್ತೆ ಬಲಪಡಿಸುತ್ತಿದೆ.
ಇಂದು ಪಿತೃಪ್ರಭುತ್ವದ ಬಗ್ಗೆ ಅತ್ಯಂತ ಅಪಾಯಕಾರಿ ವಿಷಯವೆಂದರೆ ಅದು ಇನ್ನು ಮುಂದೆ ಕೇವಲ ಪುರುಷ Vs ಮಹಿಳೆಯ ಬಗ್ಗೆ ಅಲ್ಲ. ಅದರ ಹೊಸ ಅವತಾರದಲ್ಲಿ, ಪಿತೃಪ್ರಭುತ್ವವು ಸ್ವತಃ ಲಿಂಗ ತಟಸ್ಥವಾಗಿದೆ. ಎಲ್ಲವನ್ನೂ ನಿರ್ದೇಶಿಸುವ ಅದೃಶ್ಯ ಚೌಕಟ್ಟಾಗಿದೆ, ಸಾಮಾಜಿಕ ವ್ಯವಸ್ಥೆ, ನಾವು ಯಾವ ನೈತಿಕತೆಯನ್ನು ಅನುಸರಿಸಬೇಕು, ನಾವು ಯಾವ ಬಣ್ಣವನ್ನು ಧರಿಸಬೇಕು, ನಾವು ಯಾವ ಆಹಾರವನ್ನು ತಿನ್ನಬೇಕು, ನಾವು ಯಾವ ಭಾಷೆಯನ್ನು ಮಾತನಾಡಬೇಕು. ಇದೇ ಅದೃಶ್ಯ ಚೌಕಟ್ಟು ದ್ವೇಷವನ್ನು ಹರಡಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ವಿರುದ್ಧ ಹಿಂಸೆಯನ್ನು ಪ್ರೇರೇಪಿಸುತ್ತದೆ, ಅಂತಿಮವಾಗಿ 100 ವರ್ಷಗಳ ಹಿಂದೆ ಬಾಬಾಸಾಹೇಬ್ ಸುಟ್ಟ ಮನುಸ್ಮೃತಿಯ ಉದ್ದೇಶಗಳನ್ನು ಸಾಮಾನ್ಯಗೊಳಿಸುತ್ತದೆ.
ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಪಿತೃಪ್ರಭುತ್ವವನ್ನು ಧ್ವಂಸ ಮಾಡುವುದು ಖಂಡಿತವಾಗಿಯೂ ಪುರುಷರನ್ನು ಅಥವಾ ನಮ್ಮ ಸಮಾಜವನ್ನು ದ್ವೇಷಿಸುವುದು ಅಲ್ಲ. ಪಿತೃಪ್ರಭುತ್ವವನ್ನು ಧ್ವಂಸ ಮಾಡುವುದು ಅನ್ಯಾಯ, ಬಡತನ, ಹಿಂಸೆ, ಅಸಮಾನತೆ ಮತ್ತು ತಾರತಮ್ಯವನ್ನು ಸಾಮಾನ್ಯಗೊಳಿಸುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸುವುದು, ಮತ್ತು ನಾವು ಅದನ್ನು ನಿರಂತರ ಪ್ರತಿರೋಧದ ಮೂಲಕ, ಶಿಕ್ಷಣದ ಮೂಲಕ, ನಮ್ಮ ಹಕ್ಕುಗಳನ್ನು ಎತ್ತಿಹಿಡಿಯುವ ಮೂಲಕ, ವೈಯಕ್ತಿಕವಾಗಿ ಮತ್ತು ಪ್ರಗತಿಪರ ಸಮಾಜವಾಗಿ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಜೀವಿಸುವ ಮೂಲಕ ಪ್ರಶ್ನಿಸುತ್ತೇವೆ.
ಬಂಡಾಯದ ಒಂದು ರೂಪವಾಗಿ ತಂಪನ್ನು (coolness) ಆಯ್ಕೆ ಮಾಡಿದ ಕಪುಸಿನೊ (capuchino) ಪೀಳಿಗೆಯಿಂದ ಹಿಡಿದು, ಈಗ ಪ್ರತಿರೋಧದ ಒಂದು ರೂಪವಾಗಿ ಸ್ವಾಸ್ಥ್ಯ(wellness) ಮತ್ತು ಮಾನಸಿಕ ಆರೋಗ್ಯವನ್ನು (mental health) ಆಯ್ಕೆ ಮಾಡಿಕೊಂಡಿರುವ ಮಚ್ಚಾ(matcha) ಪೀಳಿಗೆಯವರೆಗೆ, ಮಹಿಳೆಯರು ಬಹಳ ಸಮಯದಿಂದ ಪಿತೃಪ್ರಭುತ್ವದ ವಿವಿಧ ಚೌಕಟ್ಟುಗಳು (frames), ಆದೇಶಗಳು, ಸ್ಥಳಗಳು ಮತ್ತು ಬಣ್ಣಗಳ ವಿರುದ್ಧ ಹೋರಾಡಿದ್ದಾರೆ. ರಾಹುಲ್ ಗಾಂಧಿ ಮಾಡಿರುವುದು ಮುಖ್ಯವಾಗಿದೆ. ಅವರು ಈ ಎರಡು ಪೀಳಿಗೆಯ ಮಹಿಳೆಯರೊಂದಿಗೆ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ಪಿತೃಪ್ರಭುತ್ವದ ಚರ್ಚೆಯನ್ನು ಡ್ರಾಯಿಂಗ್ ರೂಮ್‌ಗಳು ಮತ್ತು ಸೆಮಿನಾರ್‌ಳಿಂದ ರಾಜಕೀಯ ನಿರೂಪಣೆಯ ಕೇಂದ್ರಕ್ಕೆ ತರುವ ಮೂಲಕ, ಅವರು ಬಹಳ ಸಮಯದಿಂದ ಅನೇಕ ರಾಜಕೀಯ ನಾಯಕರು ದೂರ ಸರಿದಿದ್ದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದರು, “ಇತಿಹಾಸವನ್ನು ಮರೆಯುವವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ”. ಪ್ರಪಂಚದಾದ್ಯಂತದ ಫ್ಯಾಸಿಸ್ಟ್ ಸರ್ಕಾರಗಳು ಹಿಂದುಳಿದ ಸಾಮಾಜಿಕ ವ್ಯವಸ್ಥೆ ಮತ್ತು ಕ್ರೋನಿ ಬಂಡವಾಳಶಾಹಿಯಿಂದ ತಮ್ಮ ಶಕ್ತಿಯನ್ನು ಪಡೆದಿವೆ ಎಂದು ಇತಿಹಾಸವು ನಮಗೆ ಸ್ಪಷ್ಟವಾಗಿ ಹೇಳುತ್ತದೆ, ಒಂದನ್ನು ಬಳಸಿ ಇನ್ನೊಂದನ್ನು ಬಲಪಡಿಸಿದರು. ಒಂದು ರಾಷ್ಟ್ರವಾಗಿ, ನಮಗೆ ಆಯ್ಕೆ ಇದೆ. ನಾವು ಇತಿಹಾಸದ ನೋವಿನ ಕಲಿಕೆಯ ರೇಖೆಯನ್ನು (learning curve) ಬಿಟ್ಟುಬಿಡಬಹುದು, ಅಥವಾ ನಾವು ಅದನ್ನು ಪುನರಾವರ್ತಿಸಬಹುದು. ಅದನ್ನು ಬಿಟ್ಟುಬಿಡಲು, ನಾವು ಪ್ರತಿರೋಧಿಸಬೇಕು, ಫ್ಯಾಸಿಸಂ ಅನ್ನು ಪ್ರತಿರೋಧಿಸುವ ಮೊದಲ ಹೆಜ್ಜೆ ಅದಕ್ಕೆ ಶಕ್ತಿ ನೀಡುವ ಪಿತೃಪ್ರಭುತ್ವವನ್ನು ಧ್ವಂಸ ಮಾಡುವುದು.



