ಸೋಮವಾರ ‘ಸಂಸತ್ ಚಲೋ’ ಪ್ರತಿಭಟನೆ ನಡೆಯಿತು. ಈ ವೇಳೆ, ವಿದ್ಯಾರ್ಥಿ-ಯುವಜನರ ಮೇಲೆ ಪೊಲೀಸರ ಕ್ರೂರ ಲಾಠಿಚಾರ್ಜ್ ಮತ್ತು ದೌರ್ಜನ್ಯ ಎಸಗಿದ್ದರು. ಈ ನಡುವೆಯೂ ರೆಸ್ಟೋರೆಂಟ್‌ನಲ್ಲಿ ಸಿಜೆಪಿ ವಕ್ತಾರ ವಿಜೇತಾ ದಹಿಯಾ ಅವರು ರೆಸ್ಟೋರೆಂಟ್‌ನಲ್ಲಿ ಬರ್ಗರ್ ಸೇವಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ, ದಹಿಯಾ ಅವರನ್ನು ವಕ್ತಾರ ಹುದ್ದೆಯಿಂದ ಸಿಜೆಪಿ ವಜಾಗೊಳಿಸಿದೆ.
ವಕ್ತಾರ ಹುದ್ದೆಯಿಂದ ವಜಾಗೊಳಿಸಿ ಹೇಳಿಕೆ ನೀಡಿರುವ ಸಿಜೆಪಿ, “ನಮ್ಮ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕ್ರೂರ ಪೊಲೀಸ್ ದೌರ್ಜನ್ಯ ಎದುರಿಸುತ್ತಿರುವಾಗ, ವಕ್ತಾರ ವಿಜೇತಾ ದಹಿಯಾ ಅವರು ಬರ್ಗರ್ ತಿಂದ ಈ ನಡೆ ಅತ್ಯಂತ ಸಂವೇದನಾರಹಿತವಾದುದು. ಇದು ನಮ್ಮ ಪಕ್ಷದ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಆದ್ದರಿಂದ ಅವರನ್ನು ವಕ್ತಾರ ಹುದ್ದೆಯಿಂದ ಮತ್ತು ಎಲ್ಲ ಅಧಿಕೃತ ಜವಾಬ್ದಾರಿಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ” ಎಂದು ಪ್ರಕಟಿಸಿದೆ.
ತಮ್ಮ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ದಹಿಯಾ, “ನನಗೆ ತೀವ್ರ ಹಸಿವಾಗಿದ್ದರಿಂದ ಬರ್ಗರ್ ತಿಂದೆ. ಪ್ರತಿಭಟನಾಕಾರರಂತೆಯೇ ನಾನೂ ಕೂಡ ಕಳೆದ ಎರಡು ರಾತ್ರಿಗಳಿಂದ ನಿದ್ದೆ ಮಾಡಿಲ್ಲ ಎಂಬುದನ್ನು ಯಾರೂ ಗಮನಿಸುತ್ತಿಲ್ಲ. ಪ್ರತಿಭಟನೆ ಮಾಡುವುದೇ ನನ್ನ ಕೆಲಸ ಎಂಬಂತೆ ನನ್ನನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದೀರಿ,” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.




