ವಯನಾಡ್ ಭೂಕುಸಿತ: ‘ಬೆನ್ನಟ್ಟಿದ ಬೃಹತ್ ಮಣ್ಣಿನ ಅಲೆ’ಯಿಂದ ಪಾರಾದ ದಂಪತಿಯ ರೋಚಕ ಕಥೆ

Date:

ಕೇರಳದ ವಯನಾಡ್ ಜಿಲ್ಲೆಯ ಕಲ್ಲಾಡಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತದ ದುರಂತದಿಂದ ಕಾರ್ಮಿಕ ದಂಪತಿ ಅದೃಷ್ಟವೆಂಬಂತೆ ಬದುಕುಳಿದಿದ್ದಾರೆ. ತಾವು ಎದುರಿಸಿದ ಭೀಕರ ಆಘಾತಕಾರಿ ಕ್ಷಣಗಳನ್ನು ನೆನಪಿಸಿಕೊಂಡಿರುವ ದಂಪತಿ, ‘ತಾವು ಅಪಾಯದಿಂದ ಪಾರಾಗಿ, ಬದುಕಿರುವುದೇ ಒಂದು ಪವಾಡ’ ಎಂದಿದ್ದಾರೆ.

- Advertisement -

ಅಂಕಿ-ಅಂಶಗಳ ಪ್ರಕಾರ, ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಈ ದುರ್ಘಟನೆಯಲ್ಲಿ, ತಮಿಳುನಾಡು ಮೂಲದ ಪಾಲ್‌ರಾಜ್ ಎಂ (47) ಮತ್ತು ಅವರ ಪತ್ನಿ ಕೂಡಮ್ಮಾಳ್ (37) ಪರಾಗಿ ಬದುಕುಳಿದಿದ್ದಾರೆ. ಇವರು ಕಳೆದ ಎರಡು ದಶಕಗಳಿಂದ ವಯನಾಡಿನ ಚಹಾ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಅವರು ಕಲ್ಲಾಡಿ ಗ್ರಾಮದ ಮೀನಾಕ್ಷಿ ಸೇತುವೆಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.

ಆ ಕ್ಷಣವನ್ನು ನೆನಪಿಸಿಕೊಂಡ ಪಾಲ್‌ರಾಜ್, “ಮೊದಲು ಬೆಟ್ಟದ ಒಂದು ಸಣ್ಣ ಭಾಗ ಕುಸಿಯಲು ಪ್ರಾರಂಭಿಸಿತು. ಸೇತುವೆಯ ಆ ಕಡೆಯಿಂದ ಯಾರೋ ಜೋರಾಗಿ ಕೂಗಿ ಎಚ್ಚರಿಸಿದರು. ನಾನು ತಕ್ಷಣ ನನ್ನ ಪತ್ನಿಯ ಕೈ ಹಿಡಿದುಕೊಂಡು ಸೇತುವೆಯ ಇನ್ನೊಂದು ಬದಿಗೆ ಓಡಲು ಯತ್ನಿಸಿದೆ. ಆದರೆ, ನಾವು ಸೇತುವೆಯ ಮೇಲೆ ಕಾಲಿಡುತ್ತಿದ್ದಂತೆ ಬೃಹತ್ ಮಣ್ಣಿನ ಅಲೆಯೊಂದು ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಿರುವುದು ಕಾಣಿಸಿತು,” ಎಂದು ಹೇಳಿದ್ದಾರೆ.

“ಅದೇ ಸಮಯದಲ್ಲಿ ಮಣ್ಣಿನ ರಭಸಕ್ಕೆ ಸಿಲುಕಿದ ಟ್ಯಾಂಕರ್ ಲಾರಿಯೊಂದು ನಮ್ಮಡೆಗೆ ತೇಲುತ್ತಾ ಬಂದಿತು. ನಾವು ಮಣ್ಣಿನ ಅವಶೇಷಗಳ ನಡುವೆ ಬಿದ್ದೆವು. ಭಾರಿ ತೂಕದ ಆ ವಾಹನ ನಮ್ಮ ಕಡೆಗೇ ಕೊಚ್ಚಿ ಬರುತ್ತಿತ್ತು. ನನ್ನ ಪತ್ನಿ ಲಾರಿಯ ಹಿಂಬದಿಯ ಚಕ್ರಗಳ ಅಡಿಗೆ ಸಿಲುಕುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾದರು,” ಎಂದು ಅವರು ವಿವರಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಹತ್ತಿರದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದಂಪತಿ ಭೂಕುಸಿತದಿಂದ ತಪ್ಪಿಸಿಕೊಳ್ಳುವ ದೃಶ್ಯ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮಣ್ಣಿನ ಭಾರಿ ಒತ್ತಡದ ನಡುವೆಯೂ ಪಾಲ್‌ರಾಜ್ ಅವರು ತಮ್ಮ ಪತ್ನಿ ಕೂಡಮ್ಮಾಳ್ ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ಕಾಣಿಸುತ್ತದೆ. ಮಣ್ಣಿನ ರಭಸಕ್ಕೆ ದಂಪತಿ ಒಂದು ಕ್ಷಣ ಪರಸ್ಪರ ದೂರವಾದರೂ, ತಕ್ಷಣವೇ ಚೇತರಿಸಿಕೊಂಡ ಪಾಲ್‌ರಾಜ್ ಪತ್ನಿಯನ್ನು ಎಬ್ಬಿಸಿ ಮತ್ತೆ ಕೈಹಿಡಿದು ಸುರಕ್ಷಿತ ಸ್ಥಳದ ಕಡೆಗೆ ಓಡುತ್ತಾರೆ.

“ನಾವು ಸುರಂಗ ನಿರ್ಮಾಣ ಹಂತದ ಬಳಿಯೇ ಇರುವ ಎಸ್ಟೇಟ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದೆವು. ಮಂಗಳವಾರ ಮುಂಜಾನೆಯಿಂದಲೇ ಭಾರಿ ಮಳೆ ಇತ್ತು. ತೋಟಕ್ಕೆ ರಜೆ ಇದ್ದ ಕಾರಣ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿ, ಮೇಪ್ಪಾಡಿ ಪಟ್ಟಣದ ಬ್ಯಾಂಕ್‌ಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದೆವು. ನಾವು ಬರುವಷ್ಟರಲ್ಲಿ ಬೆಳಗ್ಗೆ 11 ಗಂಟೆಯ ಬಸ್ ಹೊರಟುಹೋಗಿತ್ತು. ಮುಂದಿನ ಬಸ್ ಅಥವಾ ಟ್ಯಾಕ್ಸಿಗಾಗಿ ಕಾಯುತ್ತಿದ್ದಾಗ ಈ ದುರಂತ ಸಂಭವಿಸಿತು. ಕೇವಲ ದೇವರ ದಯೆಯಿಂದ ನಾವು ಬದುಕುಳಿದಿದ್ದೇವೆ,” ಎಂದು ಪಾಲ್‌ರಾಜ್ ಹೇಳಿದ್ದಾರೆ.

ಈ ಘಟನೆಯು ದಂಪತಿಯನ್ನು ತೀವ್ರ ಆತಂಕಕ್ಕೆ ದೂಡಿದ್ದು, ವಯನಾಡು ಬಿಟ್ಟು ಬೇರೆಡೆಗೆ ವಲಸೆ ಹೋಗುವಂತೆ ಮಾಡಿದೆ. “ಈ ವರ್ಷದ ಆರಂಭದಲ್ಲಿ ಸುರಂಗದ ಕೆಲಸ ಪ್ರಾರಂಭವಾದಾಗ ನಮ್ಮದೊಂದು ಪ್ರಸಿದ್ಧ ಪ್ರದೇಶವಾಗುತ್ತಿದೆ ಎಂದು ನಾವು ಖುಷಿಪಟ್ಟಿದ್ದೆವು. ಆದರೆ ಈಗ ಅದು ದುಸ್ವಪ್ನವಾಗಿ ಕಾಡುತ್ತಿದೆ. ನಮ್ಮ ಮಗ ಮತ್ತು ಮಗಳು ಈ ಜಾಗವನ್ನು ಬಿಟ್ಟು ಬೇರೆ ಕಡೆ ಹೋಗೋಣ ಎಂದು ಹಠ ಹಿಡಿಯುತ್ತಿದ್ದಾರೆ,” ಎಂದು ಪಾಲ್‌ರಾಜ್ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...